ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಆಕ್ರೋಶಗೊಂಡ ಬೆಕ್ಕಿನ ಕಾರಣಕ್ಕೆ ವಿಮಾನವೊಂದು ಹಾರಾಟವನ್ನು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ವರದಿಯಾಗಿದೆ. ಈ ವಿಲಕ್ಷಣ ಘಟನೆ ನಡೆದಿರುವುದು ಸುಡಾನ್‌ನಲ್ಲಿ.

ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಸುಡಾನ್‌ನ ರಾಜಧಾನಿಯಾದ ಖಾರ್ಟೂಮ್‌ನಿಂದ ಕತಾರ್‌ನ ರಾಜಧಾನಿಯಾದ ದೋಹಾದತ್ತ ಚಲಿಸುತ್ತಿದ್ದ ವಿಮಾನವು ಬೆಕ್ಕು ಪೈಲಟ್ ಮೇಲೆ ದಾಳಿ ಮಾಡಿದ ಕಾರಣಕ್ಕೆ ಮತ್ತೆ ಖಾರ್ಟೂಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಈ ಘಟನೆ ನಡೆದಾಗ ಬೆಕ್ಕು ವಿಮಾನದ ಕಾಕ್‌ಪಿಟ್'ನಲ್ಲಿತ್ತು ಎಂದು ತಿಳಿದು ಬಂದಿದೆ.

ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಕಾಕ್‌ಪಿಟ್'ನಲ್ಲಿ ಬೆಕ್ಕು ಸೇರಿಕೊಂಡಿರುವುದನ್ನು ಪೈಲಟ್‌ ಗಮನಿಸಿಲ್ಲ. ವಿಮಾನವು ಟೇಕಾಫ್ ಆದ ಅರ್ಧ ಘಂಟೆಯಲ್ಲಿ ಬೆಕ್ಕು ವಿಮಾನವನ್ನು ಚಾಲನೆ ಮಾಡುತ್ತಿದ್ದ ಪೈಲಟ್‌ ಮೇಲೆ ದಾಳಿ ಮಾಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಪರಿಸ್ಥಿತಿಯ ಗಂಭೀರತೆ ಅರಿತ ಪೈಲಟ್ ಬೆಕ್ಕನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಬೆಕ್ಕು ಮತ್ತಷ್ಟು ಆಕ್ರೋಶಗೊಂಡು ಪೈಲಟ್ ಮೇಲೆ ಮತ್ತೆ ದಾಳಿ ಮಾಡಿದೆ. ಈ ಘಟನೆಯಲ್ಲಿ ವಿಮಾನದ ಪೈಲಟ್ ಗಾಯಗೊಂಡಿದ್ದಾರೆ.

ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಪೈಲಟ್‌ ಬೆಕ್ಕನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ ಮತ್ತೆ ವಿಮಾನವನ್ನು ಖಾರ್ಟೂಮ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ್ದಾರೆ. ಈ ಬೆಕ್ಕು ಕಾಕ್‌ಪಿಟ್'ನೊಳಕ್ಕೆ ಹೇಗೆ ಪ್ರವೇಶಿಸಿತು ಎಂಬುದು ತಿಳಿದು ಬಂದಿಲ್ಲ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಖಾರ್ಟೂಮ್ ವಿಮಾನ ನಿಲ್ದಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಬಗ್ಗೆ ಗಂಭೀರ ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ಬೆಕ್ಕು ಸದ್ಯಕ್ಕೆ ಪೊಲೀಸರ ವಶದಲ್ಲಿದೆ.

ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಆಕ್ರೋಶಗೊಂಡ ಬೆಕ್ಕು ಪೈಲಟ್ ಮೇಲೆ ದಾಳಿ ಮಾಡಿ ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡುವಂತೆ ಮಾಡಿದ ಘಟನೆ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಆತಂಕವನ್ನುಂಟು ಮಾಡಿತ್ತು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಕೆಲವು ನೆಟಿಜನ್‌ಗಳು ಈ ಘಟನೆಯನ್ನು ಬೆಕ್ಕಿನಿಂದ ತುರ್ತು ಲ್ಯಾಂಡಿಂಗ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ವಿಮಾನ ನಿಲುಗಡೆ ಮಾಡುವಾಗ ಅಥವಾ ವಿಮಾನವನ್ನು ಸ್ವಚ್ಛಗೊಳಿಸುವಾಗ ಬೆಕ್ಕು ವಿಮಾನದೊಳಕ್ಕೆ ಪ್ರವೇಶಿಸಿರಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಬೆಕ್ಕಿನ ಕಾರಣಕ್ಕೆ ತುರ್ತು ಭೂ ಸ್ಪರ್ಶ ಮಾಡಿದ ಅಂತರ್ ರಾಷ್ಟ್ರೀಯ ವಿಮಾನ

ಘಟನೆಯ ಹಿಂದಿನ ರಾತ್ರಿ ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆ ವೇಳೆ ಬೆಕ್ಕು ವಿಮಾನದೊಳಗೆ ಪ್ರವೇಶಿಸಿರಬಹುದೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಿಖರವಾದ ಕಾರಣವಿನ್ನೂ ತಿಳಿದು ಬಂದಿಲ್ಲ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Flight makes emergency landing after cat attacks pilot. Read in Kannada.
Story first published: Friday, March 5, 2021, 20:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X