ಆಕಾಶದಲ್ಲೇ ಓಡಾಡಬಹುದು.. ಹಾರುವ ಕಾರುಗಳು ಬಂದ್ರೆ ಹೇಗಿರುತ್ತೆ, ಲಾಭಗಳೇನು?

ಹಿಂದೂಗಳ ಪವಿತ್ರ ಗ್ರಂಥ ರಾಮಾಯಣದಲ್ಲಿ 'ಪುಷ್ಪಕ ವಿಮಾನ'ದ ಉಲೇಖವಿದೆ. ಇದರ ಆಧಾರದ ಮೇಲೆ ಭಾರತೀಯರಲ್ಲಿ ವಿಮಾನದ ಪರಿಕಲ್ಪನೆ ಬಹಳ ಹಿಂದಿನಿಂದಲೇ ಇತ್ತೆಂದು ಸುಲಭವಾಗಿ ಹೇಳಬಹುದು. ಈ ಆಧುನಿಕ ಕಾಲಘಟ್ಟದಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಜನರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹೊತ್ತೊಯ್ಯುತ್ತಿವೆ. ಸದ್ಯ, ಜಗತ್ತು ತಂತ್ರಜ್ಞಾನದಲ್ಲಿ ಬಹಳ ಮುಂದಿದ್ದು, ಹಾರುವ ಕಾರುಗಳನ್ನು (Flying Cars) ಅಭಿವೃದ್ಧಿಪಡಿಸುವತ್ತ ದಾಪುಗಾಲು ಹಾಕುತ್ತಿದೆ. ಅದಕ್ಕೆ ಭಾರತವೂ ಕೂಡ ಹೊರತಾಗಿಲ್ಲ.

ದೇಶದಲ್ಲಿ ಇವೋಟಲ್ (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ & ಲ್ಯಾಂಡಿಂಗ್) ಶೈಲಿಯ ಏರ್‌ಕ್ರಾಫ್ಟ್ ಅಂದರೆ ಹಾರುವ ಕಾರುಗಳು ತಯಾರಿಕೆಗೆ ಹಲವು ಕಂಪನಿಗಳು ಶ್ರಮಿಸುತ್ತಿವೆ. ಮೊದಲಿಗೆ ವಾಣಿಜ್ಯ ಸಂಚಾರಕ್ಕೆ ನೆರವಾಗಲು 'ಟ್ಯಾಕ್ಸಿ' ರೂಪದಲ್ಲಿ ಹೊರತರಲು ಹಣಿಯಾಗುತ್ತಿವೆ. ಆ ಬಳಿಕ ಮುಂದಿನ 10 ರಿಂದ 15 ವರ್ಷ ಖಾಸಗಿ ಬಳಕೆಗೂ ಮಾರಾಟಕ್ಕೆ ತರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

Flying Cars Under Developing In India What Are The benefits

ಭಾರತದಲ್ಲಿ ಇವೋಟಲ್ (eVTOL) ಏರ್‌ಕ್ರಾಫ್ಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೈದರಾಬಾದ್‌ ಮೂಲದ ಮಾರುತ್ ಡ್ರೋನ್ಸ್, ಗುಂಟೂರಿಗೆ ಸೇರಿರುವ ನಾಟ್ಸ್ ಏವಿಯೇಷನ್, ಮ್ಯಾಗ್ನಮ್ ವಿಂಗ್ಸ್ ಹಾಗೂ ಮೊಹಾಲಿಯ ನಲ್ವಾ ಏರೋ ಕಂಪನಿಗಳು ಹೆಚ್ಚು ಕಾರ್ಯಪ್ರವೃತವಾಗಿವೆ. ಅದು ಮಾತ್ರವಲ್ಲದೆ, ಬೆಂಗಳೂರಿನ 'ಸರಳಾ ಏವಿಯೇಷನ್' ಒಂದು ಹೆಜ್ಜೆ ಮುಂದೆ ಹೋಗಿದೆ. ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ 'ಶೂನ್ಯಾ' ಹೆಸರಿನ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿನ್ನು ಪ್ರದರ್ಶಿಸಿತ್ತು.

ಈ 'ಶೂನ್ಯಾ' ಏರ್ ಟ್ಯಾಕ್ಸಿ 6 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಇದು 680 ಕೆಜಿವರೆಗೆ ಲೋಡ್‌ನ್ನು ಸಾಗಿಸಬಲ್ಲದು. ಹತ್ತಿರದ ಪ್ರಯಾಣಕ್ಕೆ ಉಪಯುಕ್ತವಾಗಿದೆ. 20 ರಿಂದ 30 ಕಿಲೋಮೀಟರ್‌ವರೆಗೆ ಸುಲಭವಾಗಿ ಕ್ರಮಿಸಬಲ್ಲದು.

Flying Cars Under Developing In India What Are The benefits

ಭಾರತದಲ್ಲಿ ಇಂಡಿಗೋ ಮಾತೃಸಂಸ್ಥೆ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ & ಅಮೆರಿಕದ ಆರ್ಚರ್ ಏವಿಯೇಷನ್ ​ಜಂಟಿಯಾಗಿ​ 2026ರಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ (Electric Air Taxi) ಸೇವೆ ಪ್ರಾರಂಭಿಸುವುದಕ್ಕೆ ಯೋಜಿಸಿವೆ. ಈ ಏರ್ ಟ್ಯಾಕ್ಸಿಗಳು ಪುಟ್ಟ ಹೆಲಿಕಾಪ್ಟರ್‌ನಂತೆ ಇರಲಿದ್ದು, ಪೈಲಟ್ ಸೇರಿ 5 ಮಂದಿ ಓಡಾಟ ಮಾಡಬಹುದು. ಇವು ಕಡಿಮೆ ಶಬ್ದ ಮಾಲಿನ್ಯ ಉಂಟು ಮಾಡಲಿದ್ದು, ಗರಿಷ್ಠ ಸುರಕ್ಷತೆಯನ್ನು ಒದಗಿಸಲಿದೆ.

ಅತಿದೊಡ್ಡ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿ, ತನ್ನ ಮಾತೃಸಂಸ್ಥೆಯಾದ 'ಸುಜುಕಿ'ಯೊಂದಿಗೆ ಎಲೆಕ್ಟ್ರಿಕ್ ಏರ್ ಕಾಪ್ಟರ್‌ನ್ನು (ಹಾರುವ ಕಾರು) ತಯಾರಿಸಲು ಮುಂದಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈ ಏರ್ ಕಾಪ್ಟರ್‌ಗಳು ಡ್ರೋನ್‌ಗಳಿಗಿಂತ ದೊಡ್ಡದಾಗಿರದ್ದು, ಹೆಲಿಕಾಪ್ಟರ್‌ಗಿಂತ ಚಿಕ್ಕದಾಗಿರಲಿವೆ. ಪೈಲಟ್ ಸೇರಿ ಮೂವರು ಸಂಚರಿಸಬಹುದು ಎನ್ನಲಾಗಿದೆ.

Flying Cars Under Developing In India What Are The benefits

ಹಾರುವ ಕಾರುಗಳ ಬಂದರೆ ಏನೆಲ್ಲ ಪ್ರಯೋಜನಗಳಿವೆ:

ಸಂಚಾರ ದಟ್ಟಣೆ ಇರುವುದಿಲ್ಲ: ಬೆಂಗಳೂರು, ನವದೆಹಲಿ ಹಾಗೂ ಮುಂಬೈ ನಗರದಲ್ಲಿ ಸಂಚಾರ ದಟ್ಟಣೆ ಎಂಬುದು ಬಹುದೊಡ್ಡ ಸಮಸ್ಯೆಯಾಗಿದೆ. ಹಾರುವ ಕಾರುಗಳ ಸಂಚಾರಕ್ಕೆ ವಾಯುಮಾರ್ಗ ಬಳಕೆ ಮಾಡುವುದರಿಂದ ಯಾವುದೇ ಸಂಚಾರ ದಟ್ಟಣೆಯಿಲ್ಲದೆ ಸುಲಭವಾಗಿ ಗಮ್ಯ ಸ್ಥಾನವನ್ನು ತಲುಪಬಹುದು. ಇದರಿಂದ ಪ್ರಯಾಣದ ಸಮಯವು ಉಳಿತಾಯವಾಗುತ್ತದೆ.

ಕಡಿಮೆ ವಾಯುಮಾಲಿನ್ಯ: ಇವೋಟಲ್ ಅಂದರೆ ಹಾರುವ ಕಾರುಗಳು ಬಹುತೇಕ ಎಲೆಕ್ಟ್ರಿಕ್ ಚಾಲಿತವಾಗಿರಲಿದೆ. ಇಂಗಾಲದ ಹೊರಸೂಸುವಿಕೆ ಇಲ್ಲದಿರುವುದರಿಂದ ಗಾಳಿಯ ಗುಣಮಟ್ಟ ಸುಧಾರಿಸುತ್ತದೆ. ಈ ಮೂಲಕ ವಾಯುಮಾಲಿನ್ಯ ಪ್ರಮಾಣವು ಕಡಿಮೆಯಾಗಲಿದೆ. ಜೊತೆಗೆ ಪ್ರಕೃತಿಯ ರುದ್ರ ರಮಣೀಯ ದೃಶ್ಯವನ್ನು ಸವಿಯಬಹುದು.

ತುರ್ತು ಸೇವೆಗಳು ಮತ್ತಷ್ಟು ಸರಾಗ: ವಾಹನಗಳು ಅಪಘಾತ ಅಥವಾ ವಿಪತ್ತು ಉಂಟಾದ ಸಂದರ್ಭದಲ್ಲಿ ರಸ್ತೆ ಮುಖಾಂತರ ಸಂತ್ರಸ್ತರನ್ನು ತಲುಪುವುದು ತುಂಬಾ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಇವೋಟಲ್ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳು ಸಾಕಷ್ಟು ಪ್ರಯೋಜನಕಾರಿಯಾಗಿವೆ ರಕ್ಷಣಾ ಕಾರ್ಯಕ್ಕೆ ವೇಗ ದೊರೆಯಲಿದ್ದು, ಹಲವು ಜೀವಗಳನ್ನು ಉಳಿಸಬಹುದು.

ಒಟ್ಟಾರೆಯಾಗಿ ಇವೋಟಲ್ (ಹಾರುವ ಕಾರುಗಳು) ಸಂಬಂಧ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಇವುಗಳ ಕಾರ್ಯಾಚರಣೆ ಆರಂಭವಾದ ಮೇಲೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿಯಾಗಲಿದೆ. ಜನ ಸಾಮಾನ್ಯರು ಕೂಡ ಎತೇಚ್ಚವಾಗಿ ಬಳಕೆ ಮಾಡಿದರೂ ಯಾವುದೇ ರೀತಿಯಲ್ಲಿ ಅಚ್ಚರಿಪಡುವ ಅಗತ್ಯವಿಲ್ಲ.

More from DriveSpark

Article Published On: Wednesday, September 10, 2025, 14:12 [IST]
English summary
Flying cars under developing in india what are the benefits
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+