ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಜನಪ್ರಿಯ ಆಹಾರ ವಿತರಣಾ ಕಂಪನಿಯಾದ ಸ್ವಿಗ್ಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆ ಪಾಲುದಾರಿಕೆ ಮಾಡಿ ಕೊಂಡಿರುವುದಾಗಿ ಇಂದು ಅಧಿಕೃತವಾಗಿ ಘೋಷಿಸಿದೆ. ಕಂಪನಿಯು ತನ್ನ ವಿತರಣಾ ಸೇವೆಯಲ್ಲಿ ಪರೀಕ್ಷಾರ್ಥವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಆರಂಭಿಸಿರುವುದಾಗಿ ತಿಳಿಸಿದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಇದರ ನಂತರ ಸ್ವಿಗ್ಗಿ ರಿಲಯನ್ಸ್ ಜೊತೆಗಿನ ಮೈತ್ರಿಯನ್ನು ಘೋಷಿಸಿತು. ಎರಡು ಕಂಪನಿಗಳ ನಡುವಿನ ಪಾಲುದಾರಿಕೆಯು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜ್ಡ್ ಬ್ಯಾಟರಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ರಿಲಯನ್ಸ್ ಕಂಪನಿಯು ಸ್ವಿಗ್ಗಿ ವಿತರಣಾ ಸೇವೆಯಲ್ಲಿ ಬಳಸಲಾಗುವ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಬ್ಯಾಟರಿಗಳನ್ನು ಪೂರೈಸಲಿದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಸ್ವಿಗ್ಗಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಮೂಲಕ ದಿನಕ್ಕೆ 8 ಲಕ್ಷ ಕಿ.ಮೀ ಚಲಿಸುವ ಗುರಿಯನ್ನು ಹೊಂದಿದೆ. 2025 ರ ವೇಳೆಗೆ ಈ ಗುರಿಯನ್ನು ತಲುಪಲಾಗುವುದು ಎಂದು ಸ್ವಿಗ್ಗಿ ಕಂಪನಿ ಹೇಳಿದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಇದರ ಜೊತೆಗೆ ಸ್ವಿಗ್ಗಿ ಕಂಪನಿಯು ರಿಲಯನ್ಸ್ ಜೊತೆಗೆ ಮಾತ್ರವಲ್ಲದೇ ಮತ್ತೊಂದು ಕಂಪನಿಯೊಂದಿಗೂ ಮೈತ್ರಿ ಆರಂಭಿಸಿದೆ ಎಂದು ವರದಿಯಾಗಿದೆ. ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಹೀರೋ ಎಲೆಕ್ಟ್ರೋ ಜೊತೆಗೆ ಸ್ವಿಗ್ಗಿ ಮೈತ್ರಿ ಮಾಡಿಕೊಂಡಿದೆ. ಕಂಪನಿಗೆ ಅಗತ್ಯವಾದ ಎಲೆಕ್ಟ್ರಿಕ್ ವಾಹನಗಳನ್ನು ಪಡೆಯಲು ಈ ಮೈತ್ರಿ ಮಾಡಿ ಕೊಳ್ಳಲಾಗಿದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಈಗ ಪರೀಕ್ಷಿಸಲ್ಪಡುತ್ತಿರುವ ಎಲೆಕ್ಟ್ರಿಕ್ ವಾಹನ ಅಪ್ಲಿಕೇಶನ್ ಅನ್ನು ಬೆಂಗಳೂರು, ನವದೆಹಲಿ ಹಾಗೂ ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್ ಚಾಲಿತ ವಾಹನಗಳಿಗಿಂತ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿವೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಈ ಕಾರಣಕ್ಕಾಗಿ ಸ್ವಿಗ್ಗಿ ತಮ್ಮ ವಿತರಣಾ ಪಾಲುದಾರರಿಗಾಗಿ ಎಲೆಕ್ಟ್ರಿಕ್ ವಾಹನವನ್ನು ಶಿಫಾರಸು ಮಾಡಿದೆ. ಇವುಗಳನ್ನು ಬಳಸಲು ಕೇವಲ 40% ನಷ್ಟು ವೆಚ್ಚವಾಗುತ್ತದೆ. ಟೆಸ್ಟ್ ರನ್ ಆಧರಿಸಿ ಸ್ವಿಗ್ಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪರೀಕ್ಷಿಸಲು ಮುಂದಾಗಿದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಇದು ಕಂಪನಿಗೆ ಭಾರೀ ಲಾಭ ತಂದು ಕೊಡುವುದರ ಜೊತೆಗೆ ದೇಶದಲ್ಲಿ ವಾಯು ಮಾಲಿನ್ಯ ಸಮಸ್ಯೆಯನ್ನು ಕಡಿಮೆ ಮಾಡಲಿದೆ. ಪ್ರಪಂಚದ ಎಲ್ಲಾ ದೇಶಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಇದು ಪ್ರಮುಖ ಕಾರಣವಾಗಿದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಭಾರತದಲ್ಲಿ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಹೆಚ್ಚು ಸಬ್ಸಿಡಿ, ನೋಂದಣಿ ಶುಲ್ಕ ರದ್ದು ಮುಂತಾದ ವಿವಿಧ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಸ್ವಿಗ್ಗಿಯ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್ ಕಾಂತ್, ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಪರಿವರ್ತನೆಗೊಳ್ಳುವುದನ್ನು ಭಾರತೀಯ ಉದ್ಯಮವು ಬೆಂಬಲಿಸಬೇಕು.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಬಳಸುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಇನ್ನು ಸ್ವಿಗ್ಗಿ ಕಂಪನಿಯ ಸಿಇಒ ಶ್ರೀ ಹರ್ಷ ಮಜೆಟ್ಟಿ ಮಾತನಾಡಿ, ಸ್ವಿಗ್ಗಿ ವಿತರಣಾ ವಿಭಾಗವು ಪ್ರತಿದಿನ ಲಕ್ಷಾಂತರ ಆರ್ಡರ್‌ಗಳನ್ನು ಪಡೆಯುತ್ತದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಪ್ರತಿ ವಿತರಣಾ ಪಾಲುದಾರರು ದಿನಕ್ಕೆ ಸರಾಸರಿ 80 ಕಿ.ಮೀ ನಿಂದ 100 ಕಿ.ಮೀಗಳವರೆಗೆ ಪ್ರಯಾಣಿಸುತ್ತಾರೆ. ಜೊತೆಗೆ ಇದು ವಿತರಣಾ ಪಾಲುದಾರರಿಗೆ ಹೆಚ್ಚುವರಿ ಲಾಭವನ್ನು ನೀಡುತ್ತದೆ ಎಂದು ಹೇಳಿದರು.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಎಲೆಕ್ಟ್ರಿಕ್ ವಾಹನ ಬಳಕೆಯು ಪರಿಸರದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ನಮ್ಮ ಪ್ರಯಾಣವನ್ನು ಹೆಚ್ಚು ಸಮರ್ಥನೀಯವಾಗಿಸಲು ಸಹಾಯ ಮಾಡುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಎಲೆಕ್ಟ್ರಿಕ್ ವಾಹನ ಬಳಕೆಯು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಕೇವಲ ಸೆಲ್ ಫೋನ್ ಪ್ರೊಸೆಸರ್ ಮೇಲೆ ಕೇಂದ್ರೀಕರಿಸಿದ ಸ್ವಿಗ್ಗಿ ಮನೆಬಾಗಿಲಿಗೆ ಆಹಾರವನ್ನು ತಲುಪಿಸುತ್ತಿದೆ ಎಂದು ಹೇಳಿದರು. ಸ್ವಿಗ್ಗಿ ಕಂಪನಿಯು ತನ್ನ ಡೆಲಿವರಿ ಸೇವೆಯಲ್ಲಿ ಪರಿಸರ ಕಾಳಜಿಯೊಂದಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಫುಡ್ ಡೆಲಿವರಿಗಾಗಿ ರಿಲಯನ್ಸ್ ಬಿಪಿ ಮೊಬಿಲಿಟಿ ಜೊತೆಗೆ ಕೈ ಜೋಡಿಸಿದ ಸ್ವಿಗ್ಗಿ

ಕಂಪನಿಯ ಈ ಕ್ರಮವು ಸ್ವಿಗ್ಗಿ ಜೊತೆ ವಿತರಣಾ ಪಾಲುದಾರರಾಗಿ ಕೆಲಸ ಮಾಡುವವರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಸದ್ಯಕ್ಕೆ ಬಹುತೇಕ ವಿತರಣಾ ಪಾಲುದಾರರು ತಮ್ಮ ಪೆಟ್ರೋಲ್ ದ್ವಿ ಚಕ್ರ ವಾಹನಗಳ ಮೂಲಕ ಆಹಾರ ವಿತರಣೆ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಅವರು ಸಾಕಷ್ಟು ಹಣವನ್ನು ಉಳಿಸುತ್ತಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯು ಪೆಟ್ರೋಲ್ ಬೆಲೆ ಏರಿಕೆಯಿಂದ ಪಾರಾಗಲು ನೆರವಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಸ್ವಿಗ್ಗಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮುಂದಾಗಿದೆ.

Most Read Articles

Kannada
English summary
Food delivery company swiggy joins with reliance bp mobility details
Story first published: Saturday, August 7, 2021, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X