ರಾತ್ರಿ ವಾಹನ ಚಲಾಯಿಸುವವರಿಗೆ.. ಈ ಸಲಹೆಗಳು ಖಂಡಿತ ಉಪಯೋಗವಾಗುತ್ತವೆ!

ವಿಶ್ವದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವು ಒಂದು. ರಸ್ತೆ ಅಪಘಾತಕ್ಕೆ ಹಲವು ಕಾರಣಗಳಿವೆ. ಇವುಗಳಲ್ಲಿ ರಾತ್ರಿ ಚಾಲನೆ ಮಾಡುವುದು ಸಹ ಪ್ರಮುಖವಾಗಿದೆ. ರಾತ್ರಿ ವಾಹನ ಚಲಾಯಿಸುವಾಗ ಅನುಸರಿಸಬೇಕಾದ ಕೆಲವು ಉಪಯುಕ್ತವಾದ ಸಲಹೆಗಳು ಇಲ್ಲಿದೆ. ಅದರ ಬಗ್ಗೆ ತಿಳಿಯೋಣ.

ವಾಸ್ತವವಾಗಿ, ನಿದ್ರೆ ಮಾಡುವ ಸಮಯದಲ್ಲಿ (ರಾತ್ರಿ) ಚಾಲನೆ ಮಾಡುವುದು ತುಂಬಾ ಅಪಾಯಕಾರಿ. ಈ ರೀತಿಯ ಡ್ರೈವ್ ಚಾಲಕನಿಗೆ ಮಾತ್ರವಲ್ಲದೆ ವಾಹನದಲ್ಲಿರುವ ಇತರ ಪ್ರಯಾಣಿಕರಿಗೂ ತುಂಬಾ ಅಪಾಯಕಾರಿ. ಅಲ್ಲದೆ, ನಿದ್ದೆಗೆಟ್ಟು ಇತರೆ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಂಭವವಿರುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್‌ನ 2005ರ ಸ್ಲೀಪ್ ಇನ್ ಅಮೇರಿಕ ಸಮೀಕ್ಷೆಯ ಪ್ರಕಾರ, 60% ವಯಸ್ಕ ಚಾಲಕರು, ಕಳೆದ ವರ್ಷದಲ್ಲಿ ನಿದ್ರೆಯ ಮಂಪರಿನಲ್ಲಿ (ತೂಕಡಿಕೆ) ವಾಹನ ಚಲಾಯಿಸುತ್ತಿದ್ದಾರೆಂದು ವರದಿ ಹೇಳಿದೆ.

ರಾತ್ರಿ ವಾಹನ ಚಲಾಯಿಸುವವರಿಗೆ.. ಈ ಸಲಹೆಗಳು ಖಂಡಿತ ಉಪಯೋಗವಾಗುತ್ತವೆ!

ಆ ಸಮೀಕ್ಷೆಯ ಪ್ರಕಾರ, ಪ್ರತಿ 25 ವಯಸ್ಕರಲ್ಲಿ ಒಬ್ಬರು ಚಾಲನೆ ಮಾಡುವಾಗ ನಿದ್ರಿಸುತ್ತಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ ಪ್ರಕಾರ, 2017 ರಲ್ಲಿ 91,000 ಅಪಘಾತಗಳಿಗೆ ನಿದ್ರೆಯ ಮಂಪರು ಕಾರಣವಾಗಿದೆ. ಇದರ ಪರಿಣಾಮವಾಗಿ 50,000 ಮಂದಿಗೆ ಗಂಭೀರ ರೂಪದ ಗಾಯಗಳಾಗಿದ್ದು, ಸುಮಾರು 800 ಸಾವುಗಳು ಸಂಭವಿಸಿವೆ. ವಾಸ್ತವವಾಗಿ, ನಿದ್ರೆಯ ಚಾಲನೆಯಿಂದ ಉಂಟಾಗುವ ಹಾನಿಯನ್ನು ಊಹಿಸುವುದು ಬಲು ಕಷ್ಟವೆಂದು ಹೇಳಬಹುದು.

ಹಗಲಿನಲ್ಲಿ ನಿದ್ರೆ:
ನೀವು ರಾತ್ರಿಯ ವೇಳೆ ವಾಹನವನ್ನು ಓಡಿಸಲು ಯೋಜಿಸಿದರೆ, ಹಗಲಿನಲ್ಲಿ ಮಲಗಬೇಕು. ಈ ರೀತಿಯಾಗಿ ನಿದ್ದೆ ಮಾಡುವುದರಿಂದ ರಾತ್ರಿ ವಾಹನ ಚಾಲನೆ ಮಾಡುವಾಗ ಎಚ್ಚರದಿಂದಿರಲು ಸಾಧ್ಯವಾಗುತ್ತದೆ. ನಿದ್ರೆ ಬಂದರೆ ದೇಹ ಖಂಡಿತ ವಿಶ್ರಾಂತಿಯನ್ನು ಬಯಸುತ್ತದೆ. ಆದ್ದರಿಂದ ರಾತ್ರಿಯಲ್ಲಿ ನಿದ್ರೆ ಬರದಂತೆ ಅಲರ್ಟ್ ಇರಲು ಹಗಲಿನಲ್ಲಿ ಮಲಗಿಕೊಳ್ಳಿ. ಅಲ್ಲದೆ, ರಾತ್ರಿ ವೇಳೆ ಸುಸ್ತು ಎನಿಸಿದರೆ ಸ್ವಲ್ಪ ಹೊತ್ತು ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯುವುದು ಒಳ್ಳೆಯದು.

ಮದ್ಯ ಸೇವಿಸಿ ವಾಹನ ಚಾಲನೆ ಮಾಡಬೇಡಿ:
ವಾಸ್ತವವಾಗಿ, ವಾಹನ ಚಾಲನೆ ಮಾಡುವಾಗ ಮದ್ಯ ಸೇವಿಸಬಾರದು. ಈ ರೀತಿ ಮಾಡಿ, ವಾಹನ ಚಲಾಯಿಸುವುದರಿಂದ ಗಂಭೀರ ಅಪಘಾತಗಳು ಸಂಭವಿಸುತ್ತವೆ. ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ಹೆಚ್ಚಿನ ರಸ್ತೆ ಅಪಘಾತಗಳಿಗೆ ಡ್ರಂಕ್ ಅಂಡ್ ಡ್ರೈವ್ ಕೇಸ್ ಕಾರಣವಾಗಿವೆ. ಆದ್ದರಿಂದ ವಾಹನ ಚಾಲನೆ ಮಾಡುವಾಗ ಮದ್ಯಪಾನ ಮಾಡಬೇಡಿ. ಆ ರೀತಿ ಮಾಡಿ ವಾಹನ ಚಲಾಯಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ.

ಮ್ಯೂಸಿಕ್ ಕೇಳಬೇಡಿ:
ರಾತ್ರಿಯಲ್ಲಿ ಚಾಲನೆ ಮಾಡುವಾಗ ರಸ್ತೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಹಾಗಾಗಿ, ವಾಹನ ಚಲಾಯಿಸುವಾಗ ತುಂಬಾ ಜಾಗರೂಕರಾಗಿರಿ. ಯಾವುದೇ ಸಂದರ್ಭದಲ್ಲಿಯೂ ವಿಚಲಿತರಾಗಬೇಡಿ. ನಿಮ್ಮ ಮೊಬೈಲ್ ಅನ್ನು ಪದೇ ಪದೇ ನೋಡಬೇಡಿ. ಏರುದ್ವನಿಯಲ್ಲಿ ಮ್ಯೂಸಿಕ್ ಪ್ಲೇ ಮಾಡಬೇಡಿ. ನೀವು ಮ್ಯೂಸಿಕ್ ಕೇಳಬೇಕೆಂದು ಕೊಂಡರೆ, ಸ್ಮಾರ್ಟ್ ಹಾಡುಗಳನ್ನು ಕೇಳುವುದು ಉತ್ತಮ. ಅಂತಹ ಹಾಡುಗಳನ್ನು ಮುಂಚಿತವಾಗಿ ಆಯ್ಕೆ ಮಾಡಿ. ಇವು ಖಂಡಿತವಾಗಿಯೂ ನಿದ್ರೆಯಿಂದ ಕೊಂಚ ಪರಿಹಾರವನ್ನು ನೀಡುತ್ತವೆ.

ಸೀಮಿತ ವೇಗದಲ್ಲಿ ಚಾಲನೆ:
ರಾತ್ರಿಯಲ್ಲಿ ರಸ್ತೆಗಳು ಖಾಲಿಯಾಗಿರುವುದರಿಂದ ಅತಿಯಾದ ವೇಗದಲ್ಲಿ ಚಾಲನೆ ಮಾಡಬೇಡಿ. ಸಹಜವಾಗಿ, ನೀವು ಸೀಮಿತ ವೇಗದಲ್ಲಿ ವಾಹನವನ್ನು ಓಡಿಸಬೇಕು. ರಾತ್ರಿ ವೇಳೆ ರಸ್ತೆಗಳು ಸ್ಪಷ್ಟವಾಗಿರುವುದಿಲ್ಲ. ಎದುರುಗಡೆಯಿಂದ ಸಾಕಷ್ಟು ವಾಹನಗಳು ಬರುವುದರಿಂದ ಅವುಗಳ ಲೈಟ್‌ಗಳಿಂದ ಸರಿಯಾಗಿ ವಾಹನಗಳನ್ನು ಓಡಿಸಲು ಸಾಧ್ಯವಾಗುವುದಿಲ್ಲ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾತ್ರಿ ವೇಳೆ ವಾಹನ ಚಲಾಯಿಸಬೇಕು. ಸೀಮಿತ ವೇಗದಲ್ಲಿ ವಾಹನ ಚಲಾಯಿಸಿದಾಗ ಅಪಘಾತಗಳು ಸಂಭವಿಸುವುದಿಲ್ಲ ಎಂದು ಹೇಳಬಹುದು.

ವಾಹನದ ಲೈಟ್ಸ್ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ:
ರಾತ್ರಿ ವೇಳೆ ಪ್ರಯಾಣಿಸುವಾಗ ವಾಹನದ ಎಲ್ಲಾ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ.. ಇಲ್ಲವೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ವಾಹನಗಳಲ್ಲಿನ ಎಲ್ಲಾ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿಕೊಂಡ ನಂತರ, ಪ್ರಯಾಣವನ್ನು ಪ್ರಾರಂಭಿಸಬಹುದು. ಇಲ್ಲದಿದ್ದರೆ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಿಮ್ಮ ಪ್ರಯಾಣವನ್ನು ಮುಂದೂಡುವುದು ಉತ್ತಮ. ಈ ಮೇಲಿನ ಉಪಯುಕ್ತ ಸಲಹೆಗಳನ್ನು ಪಾಲಿಸುವ ಮೂಲಕ ರಾತ್ರಿ ಪ್ರಯಾಣದಲ್ಲಿ ನಿಮ್ಮ ಸುರಕ್ಷತೆಗೆ ಹೆಚ್ಚು ಗಮನಕೊಡಿ.

Article Published On: Tuesday, January 3, 2023, 14:25 [IST]
English summary
For those who drive at night these tips will definitely useful
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+