ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

Endeavour, ಫೋರ್ಡ್‌ ಕಂಪನಿಯ ಅತ್ಯಂತ ದುಬಾರಿ ಕಾರು ಮಾದರಿಗಳಲ್ಲಿ ಒಂದಾಗಿದೆ. Endeavour ಎಸ್‌ಯುವಿ ಮಾದರಿಯ ಕಾರ್ ಆಗಿದೆ. ಈ ಕಾರಿನ ಮಾದರಿಯನ್ನು ಕತ್ತೆಯೊಂದು ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಸಂಚಲನ ಮೂಡಿಸಿದೆ. Endeavour ಕಾರಿನ ಮಾಲೀಕರೇ ಈ ರೀತಿ ಮಾಡಿದ್ದಾರೆ ಎಂಬುದು ಗಮನಾರ್ಹ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

ಈ Endeavour ಕಾರಿನ ಮಾಲೀಕರು ಸಾರ್ವಜನಿಕರ ಗಮನ ಸೆಳೆಯುವ ಸಲುವಾಗಿ ಈ ರೀತಿ ಮಾಡಿದ್ದಾರೆ. ತಮಗೆ ಕಾರ್ ಅನ್ನು ಮಾರಾಟ ಮಾಡಿದ ಡೀಲರ್ ವಿರುದ್ಧ ಹಾಗೂ Ford ಕಂಪನಿಯ ವಿರುದ್ಧ ಪ್ರತಿಭಟನೆ ನಡೆಸಲು ಈ ಕಾರಿನ ಮಾಲೀಕರು ಈ ರೀತಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಜಸ್ಥಾನದ ಜೈಪುರ ಮೂಲದ ಅರ್ಜುನ್ ಮೀನಾ ಎಂಬುವವರೇ ಈ ರೀತಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನ ಸೆಳೆದವರು.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

ಅವರು ತಮ್ಮ ಮನೆಯಿಂದ Ford ಶೋರೂಂವರೆಗೂ ಫೋರ್ಡ್ ಎಂಡೀವರ್ ಕಾರನ್ನು ತನ್ನ ಕತ್ತೆಯಿಂದ ಎಳೆಸಿದ್ದಾರೆ. ಈ ಕಾರನ್ನು ಅರ್ಜುನ್ ಮೀನಾ 2016 ರಲ್ಲಿ ಜೈಪುರದ ಕೆಎಸ್ Ford ಎಂಬ ಕಾರ್ ಡೀಲರ್ ನಿಂದ ಖರೀದಿಸಿದ್ದರು. ಕಾರು ಖರೀದಿಸಿದ ದಿನದಿಂದ ಇದುವರೆಗೂ ಕಾರಿನಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

ನಿರ್ದಿಷ್ಟವಾಗಿ ಹೇಳುವುದಾದರೆ ಅವರು ಖರೀದಿಸಿದ್ದ Endeavour ಕಾರಿನ ಗೇರ್ ಬಾಕ್ಸ್ ನಲ್ಲಿ ಹಲವು ಸಮಸ್ಯೆಗಳು ಕಂಡು ಬಂದಿವೆ. ಈ ಸಮಸ್ಯೆಯ ಬಗ್ಗೆ ಅವರು ತಮಗೆ ಕಾರ್ ಅನ್ನುಮಾರಾಟ ಮಾಡಿದ್ದ ಡೀಲರ್ ಬಗ್ಗೆ ಹಲವು ಬಾರಿ ತಿಳಿಸಿದ್ದಾರೆ. ಆದರೆ ಡೀಲರ್ ನಿಂದಾಗಲಿ ಅಥವಾ ಕಂಪನಿಯವರಿಂದಾಗಲಿ ಇದುವರೆಗೂ ಈ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲಿಲ್ಲವೆಂದು ಅರ್ಜುನ್ ಮೀನಾ ಆರೋಪಿಸಿದ್ದಾರೆ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

ಈ ಬಗ್ಗೆ ಡೀಲರ್ ಬಳಿ ಪ್ರತಿ ಬಾರಿ ದೂರು ನೀಡಿದಾಗಲೂ ಯಾವುದಾದರೂ ಒಂದು ಸಬೂಬು ಹೇಳಿ ಕಳುಹಿಸುತ್ತಾರೆ. ಕಳೆದ ಐದು ವರ್ಷಗಳಿಂದ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳುತ್ತಿದ್ದಾರೆಯೇ ಹೊರತು ಸಮಸ್ಯೆಯನ್ನು ಬಗೆ ಹರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಅರ್ಜುನ್ ಮೀನಾ ತಿಳಿಸಿದ್ದಾರೆ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

ತಾವು ಖರೀದಿಸಿದ್ದ Ford Endeavour ಕಾರಿನಲ್ಲಿ ಹೆಚ್ಚು ಸಮಯವನ್ನು Ford ಡೀಲರ್‌ಶಿಪ್‌ಗಳು ಹಾಗೂ ಅವರ ಸರ್ವೀಸ್ ಸೆಂಟರ್ ನಲ್ಲಿ ಕಳೆದಿರುವುದಾಗಿಅರ್ಜುನ್ ಮೀನಾ ತಿಳಿಸಿದ್ದಾರೆ. ಆದರೂ ತಮ್ಮ ಸಮಸ್ಯೆಗೆ ಪರಿಹಾರ ಸಿಗಲೇ ಇಲ್ಲವೆಂದು ಅರ್ಜುನ್ ಮೀನಾ ಹೇಳುತ್ತಾರೆ. ಗೇರ್ ಬಾಕ್ಸ್ ಸಮಸ್ಯೆಯಿಂದಾಗಿ ತಮ್ಮ ಕಾರು ಹಲವು ಬಾರಿ ರಸ್ತೆಯಲ್ಲಿ ಕೆಟ್ಟು ನಿಂತಿತ್ತು ಎಂದು ಅವರು ಹೇಳಿದ್ದಾರೆ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಸೆಳೆಯುವ ಸಲುವಾಗಿ ಕತ್ತೆಯ ಮೂಲಕ ತಮ್ಮ ದುಬಾರಿ ಕಾರನ್ನು ಎಳೆದುಕೊಂಡು Ford ಶೋರೂಂವರೆಗೂ ಮೆರವಣಿಗೆಯಲ್ಲಿಸಾಗಿದ್ದಾರೆ. ಈ ಮೆರವಣಿಗೆಯಲ್ಲಿ ಸಾಗುವಾಗ ಡ್ರಮ್ ಅನ್ನು ಸಹ ಬಾರಿಸಲಾಗುತ್ತಿತ್ತು. ಆಗಸ್ಟ್ 14 ರಿಂದ ಏಳು ದಿನಗಳವರೆಗೆ ಪ್ರತಿ ದಿನ ಈ ರೀತಿ ಪ್ರತಿಭಟನೆ ನಡೆಸುವುದಾಗಿ ಅರ್ಜುನ್ ಮೀನಾ ತಿಳಿಸಿದ್ದಾರೆ. ಏಳನೇ ದಿನ ಈ ಕಾರಿಗೆ ಬೆಂಕಿ ಇಡುವುದಾಗಿ ಅವರು ತಿಳಿಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಕತ್ತೆಯನ್ನು ಮುಂದಕ್ಕೆ ಎಳೆಯುತ್ತಿದ್ದರೆ, ಮತ್ತೊಬ್ಬ ವ್ಯಕ್ತಿ ಡ್ರಮ್ ಬಾರಿಸುತ್ತಿರುವುದನ್ನು ಕಾಣಬಹುದು. ಭಾರತದಲ್ಲಿ ಕಾರು ಮಾಲೀಕರು ಈ ರೀತಿ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕತ್ತೆಗಳ ಮೂಲಕ ವಾಹನಗಳನ್ನು ಎಳೆದು ಶೋರೂಂಗಳ ವಿರುದ್ಧ ಹಾಗೂ ಕಾರು ತಯಾರಕ ಕಂಪನಿಗಳ ವಿರುದ್ಧ ಕಾರು ಮಾಲೀಕರು ಪ್ರತಿಭಟನೆ ನಡೆಸಿದ್ದ ಹಲವಾರು ಘಟನೆಗಳು ಈ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ನಡೆದಿವೆ ಎಂಬುದು ಗಮನಾರ್ಹ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

MG Motor, Skoda ಹಾಗೂ Jaguar ಕಂಪನಿಗಳ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ ಕಾರು ಮಾಲೀಕರು ಈ ಹಿಂದೆ ಇದೇ ರೀತಿಯ ಸಮಸ್ಯೆಗಳನ್ನು ಅನುಭವಿಸಿದ್ದ ಕಾರಣ ಕತ್ತೆಗಳ ಮೂಲಕ ಕಾರುಗಳನ್ನು ಎಳೆಸಿ ಪ್ರತಿಭಟನೆ ನಡೆಸಿದ್ದರು ಎಂಬುದು ಗಮನಾರ್ಹ. ಈಗ ಈ ಸಾಲಿಗೆ ಫೋರ್ಡ್ ಎಂಡೀವರ್ ಕಾರಿನ ಮಾಲೀಕರು ಸಹ ಸೇರ್ಪಡೆಯಾಗಿದ್ದಾರೆ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

2021 ರ ಹೊಸ Ford Endeavour ಕಾರಿನ ಆರಂಭಿಕ ಬೆಲೆ ರೂ. 33,81,600 ಗಳಾಗಿದೆ. ಇನ್ನು ಈ ಕಾರಿನ ಟಾಪ್ ಎಂಡ್ ಮಾದರಿಯ ಬೆಲೆ ರೂ. 36,26,600 ಗಳಾಗಿದೆ. ಈ ಕಾರ್ ಅನ್ನು ಒಟ್ಟು ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಟಿಟಾನಿಯಂ ಪ್ಲಸ್ 4x2 ಎಟಿ ಮಾದರಿಯ ಬೆಲೆ ರೂ. 33,81,600 ಗಳಾಗಿದೆ.

ಇನ್ನು 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಟಿಟಾನಿಯಂ ಪ್ಲಸ್ 4x4 ಎಟಿ ಮಾದರಿಯ ಬೆಲೆ ರೂ. 35,61,600 ಗಳಾಗಿದೆ. 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ Endeavour ಸ್ಪೋರ್ಟ್ 4X4 ಎಟಿ ಮಾದರಿಯ ಬೆಲೆ ರೂ. 36,26,600 ಗಳಾಗಿದೆ. ಅರ್ಜುನ್ ಮೀನಾರವರು ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರ್ ಅನ್ನು ಎಳೆಸಿ ಪ್ರತಿಭಟನೆ ನಡೆಸಿರುವ ಘಟನೆ ರಾಜಸ್ಥಾನದ ಜನರ ಗಮನವನ್ನು ಮಾತ್ರವಲ್ಲದೇ ದೇಶದ ಜನರ ಗಮನವನ್ನು ತನ್ನತ್ತ ಸೆಳೆದಿದೆ.

ಕತ್ತೆಯ ಮೂಲಕ ದುಬಾರಿ ಬೆಲೆಯ ಐಷಾರಾಮಿ ಕಾರು ಎಳೆಸಿ ಪ್ರತಿಭಟನೆ ನಡೆಸಿದ ಕಾರು ಮಾಲೀಕ

ಕಾರುಗಳ ಬಗ್ಗೆ ದೂರುಗಳು ಕೇಳಿ ಬಂದರೆ ಸಂಬಂಧಿಸಿದ ಶೋರೂಂಗಳು ಅಥವಾ ಕಂಪನಿಗಳು ತಕ್ಷಣವೇ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಬೇಕಾದ ಕಾನೂನಿನ ಅಗತ್ಯವಿದೆ. ಭಾರತದಲ್ಲಿ ಈ ರೀತಿಯ ಕಾನೂನುಗಳಿದ್ದರೂ ಅದನ್ನು ಕಾನೂನುಬದ್ಧವಾಗಿ ಈಡೇರಿಸಲು ಹಲವು ತಿಂಗಳುಗಳು, ಕೆಲವೊಮ್ಮೆ ಹಲವು ವರ್ಷಗಳೇ ಬೇಕಾಗುತ್ತವೆ. ಇದರ ನಡುವೆಯೂ ಕೆಲವು ಗ್ರಾಹಕರು ಈ ರೀತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುವುದು ಗಮನಾರ್ಹ.

Most Read Articles

Kannada
English summary
Ford endeavour car owner uses donkey to pull his car to protest against dealer video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X