ಕಾರಿನಲ್ಲಿ ಸ್ಯಾನಿಟೈಜ್ ಮಾಡಬೇಕಾದ ಪ್ರಮುಖ ಬಿಡಿಭಾಗಗಳಿವು
ಪ್ರಪಂಚದಾದ್ಯಂತ ದಿನದಿಂದ ದಿನಕ್ಕೆ ಕರೋನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೂ ಪ್ರಪಂಚದಲ್ಲಿ 79 ಲಕ್ಷಕ್ಕೂ ಹೆಚ್ಚು ಜನರು ಈ ಮಹಾಮಾರಿ ಸೋಂಕಿಗೆ ಒಳಗಾಗಿದ್ದಾರೆ. ಭಾರತದಲ್ಲಿಯೂ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಇದುವರೆಗೂ 3.5 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ.

ಲಾಕ್‌ಡೌನ್ ಕಾರಣಕ್ಕೆ ಆರ್ಥಿಕ ವ್ಯವಸ್ಥೆಯು ಕುಸಿದ ಕಾರಣಕ್ಕೆ ಸರ್ಕಾರವು ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಲಾಕ್‌ಡೌನ್‌ನಿಂದ ವಿನಾಯಿತಿ ದೊರೆತ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಿಂದ ಹೊರಬರುತ್ತಿದ್ದು, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಬಳಕೆ ಹೆಚ್ಚಾಗಿದೆ.

ವಾಹನಗಳ ಬಳಕೆ ಹೆಚ್ಚಾದಂತೆಲ್ಲಾ ಕಾರುಗಳು ಅನೇಕ ಜನರ ಸಂಪರ್ಕಕ್ಕೆ ಬರುತ್ತವೆ. ಇದರಿಂದಾಗಿ ಕಾರುಗಳಿಗೂ ಸೋಂಕು ತಗುಲುವ ಸಾಧ್ಯತೆಗಳಿವೆ. ಈ ಸಮಸ್ಯೆಯನ್ನು ಪರಿಹರಿಸಲು ಇರುವ ಏಕೈಕ ಮಾರ್ಗವೆಂದರೆ ಕಾರು ಬಳಸುವಾಗ, ಅವುಗಳನ್ನು ಆಗಾಗ ಸ್ವಚ್ವಗೊಳಿಸುವುದು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಆದರೆ ಸಾಕಷ್ಟು ಜನರಿಗೆ ತಮ್ಮ ಕಾರಿನ ಯಾವ ಭಾಗಗಳನ್ನು ಸ್ವಚ್ವಗೊಳಿಸಬೇಕು, ಹೇಗೆ ಸ್ವಚ್ವಗೊಳಿಸಬೇಕು ಎಂಬುದರ ಅರಿವಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಖ್ಯಾತ ಕಾರು ತಯಾರಕ ಕಂಪನಿಯಾದ ಫೋರ್ಡ್ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ.

ಈ ವೀಡಿಯೊದಲ್ಲಿ ಕಾರನ್ನು ಹೇಗೆ ಸ್ವಚ್ವಗೊಳಿಸಬೇಕು ಹಾಗೂ ಯಾವ ಭಾಗಗಳನ್ನು ಸ್ವಚ್ವಗೊಳಿಸಬೇಕು ಎಂಬುದನ್ನು ಹೇಳಲಾಗಿದೆ. ಸ್ಪ್ರೇ ಬಳಸಿ ಕಾರ್ ಅನ್ನು ಸ್ವಚ್ವಗೊಳಿಸುತ್ತಿದ್ದರೆ, ಅದನ್ನು ನೇರವಾಗಿ ಕಾರಿನ ಮೇಲ್ಮೈಯಲ್ಲಿ ಇಡಬೇಡಿ ಎಂದು ವೀಡಿಯೊದಲ್ಲಿ ಹೇಳಲಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!
ಕಾರುಗಳನ್ನು ಸ್ವಚ್ವಗೊಳಿಸುವ ಮುನ್ನ ಮೈಕ್ರೋ ಫೈಬರ್ ಟವೆಲ್‌ನಿಂದ ಸಿಂಪಡಿಸಿ ನಂತರ ಮೇಲ್ಮೈಯನ್ನು ಒರೆಸಬೇಕು. ಇದಲ್ಲದೆ, ಕಾರಿನ ಫ್ಯಾಬ್ರಿಕ್ ಸೀಟ್ ಹಾಗೂ ಹೆಡ್‌ಲೈನರ್‌ನಲ್ಲಿರುವ ಧೂಳನ್ನು ತೆಗೆಯಲು ಹೂವರ್ ಅನ್ನು ಬಳಸಬೇಕು. ಕಾರಿನ ಡೋರ್ ಹ್ಯಾಂಡಲ್‌ಗಳನ್ನು ಶಾಂಪೂನಿಂದ ನಿರಂತರವಾಗಿ ಒರೆಸುತ್ತಿರಬೇಕು.

ಕೀ ಫೋಬ್, ಡೋರ್ ಹ್ಯಾಂಡಲ್, ಇಂಟಿರಿಯರ್ ಡೋರ್ ಹ್ಯಾಂಡಲ್ ಲಾಕ್, ಬಟನ್, ಇಂಟಿರಿಯರ್ ಡೋರ್ ರಿಲೀಸ್, ಸೀಟ್‌ಬೆಲ್ಟ್, ಸೀಟ್‌ಬೆಲ್ಟ್ ಬಕಲ್, ಪುಶ್ ಬಟನ್, ಪುಶ್ ಟು ಸ್ಟಾರ್ಟ್ ಬಟನ್, ರಿವ್ಯೂ ಮಿರರ್, ಸೈಡ್ ಮಿರರ್ ಬಟನ್, ಹೆಚ್‌ವಿಎಸ್‌ಸಿ ಬಟನ್, ಗೇರ್ ಸೆಲೆಕ್ಟರ್, ಸ್ಟೀಯರಿಂಗ್ ವ್ಹೀಲ್‌ಗಳನ್ನು ಸ್ಯಾನಿಟೈಜ್ ಮಾಡುತ್ತಿರಬೇಕು ಎಂದು ಹೇಳಲಾಗಿದೆ.


Click it and Unblock the Notifications