ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಮಸ್ಟಾಂಗ್ ಕಾರು ಫೋರ್ಡ್ ಕಂಪನಿಯ ಜನಪ್ರಿಯ ಸೂಪರ್ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ಭಾರತದಲ್ಲಿ ಕೆಲವೇ ಕೆಲವು ಜನರು ಬಳಸುತ್ತಾರೆ. ಈ ಕಾರನ್ನು ಬಳಸುತ್ತಿರುವ ವ್ಯಕ್ತಿಯೊಬ್ಬರು ಕಾರಿನಲ್ಲಿ ಸ್ಟಂಟ್ ಮಾಡಲು ಯತ್ನಿಸಿದಾಗ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ.

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಅದೃಷ್ಟವಶಾತ್ ಕಾರು ಅಪಘಾತದಿಂದ ಪಾರಾಗಿದೆ. ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಿಎಸ್ 12 ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ಈ ವೀಡಿಯೊವನ್ನು ಅಪ್ ಲೋಡ್ ಮಾಡಿದೆ.

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಸೂಪರ್ ಕಾರುಗಳು ಸೂಪರ್ ಫಾಸ್ಟ್ ಹಾಗೂ ಹೆಚ್ಚಿನ ದಕ್ಷತೆಗೆ ಹೆಸರುವಾಸಿಯಾಗಿರುತ್ತವೆ. ಅದರಂತೆ ಫೋರ್ಡ್ ಮಸ್ಟಾಂಗ್ ಸಹ ವೇಗವಾಗಿ ಚಲಿಸುತ್ತದೆ. ಮಸ್ಟಾಂಗ್ ಕಾರು ಗಂಟೆಗೆ 299 ಕಿ.ಮೀ ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಸಾಮಾನ್ಯ ರಸ್ತೆಗಳಲ್ಲಿ ಈ ಸ್ಪೋರ್ಟ್ಸ್ ಕಾರನ್ನು ಚಾಲನೆ ಮಾಡುವುದು ಸುಲಭದ ಕೆಲಸವಲ್ಲ. ಈ ಕಾರು ಸಾಮಾನ್ಯ ಕಾರುಗಳಿಗಿಂತ ಹಲವು ಪಟ್ಟು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವುದರಿಂದ ಯಾವುದೇ ಪೂರ್ವ ಅನುಭವವಿಲ್ಲದ ಜನರು ಈ ಕಾರನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ.

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಈ ಕಾರಣಕ್ಕಾಗಿಯೇ ಮಸ್ಟಾಂಗ್‌ನಂತಹ ಕಾರ್ ಅನ್ನು ಮೊದಲ ಬಾರಿಗೆ ಚಾಲನೆ ಮಾಡುವವರಿಗೆ ಸ್ವಲ್ಪ ತೊಂದರೆ ಎದುರಾಗುತ್ತದೆ. ಈಗಾಗಲೇ ಮಸ್ಟಾಂಗ್ ಕಾರ್ ಅನ್ನು ಚಾಲನೆ ಮಾಡಿರುವವರಿಗೆ ಈ ಕಾರ್ ಅನ್ನು ಚಾಲನೆ ಮಾಡಲು ಯಾವುದೇ ತೊಂದರೆಯಾಗುವುದಿಲ್ಲ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಚಾಲನಾ ಕೌಶಲ್ಯ ಹೊಂದಿರುವವರು ಈ ಕಾರು ಅಪಘಾತಕ್ಕೀಡಾಗುವುದನ್ನು ತಪ್ಪಿಸಬಹುದು. ಈ ವೀಡಿಯೊದಲ್ಲಿ ಇದನ್ನು ಗಮನಿಸಬಹುದು. ಈ ಕಾರಿನ ಚಾಲಕ ಕಾರ್ ಅನ್ನು ಕಂಟ್ರೋಲ್ ಮಾಡಿ ಅಪಘಾತವಾಗುವುದನ್ನು ತಪ್ಪಿಸಿದ್ದಾನೆ.

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಕಾರ್ ಅನ್ನು ಕಂಟ್ರೋಲ್ ಮಾಡಿ ಅಪಘಾತವಾಗುವುದನ್ನು ತಪ್ಪಿಸಿದ ಚಾಲಕನನ್ನು ಕೆಲವರು ಪ್ರಶಂಸಿಸಿದ್ದಾರೆ. ಇನ್ನೂ ಕೆಲವರು ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡಿದ ಕಾರಣ ಆತನನ್ನು ನಿಂದಿಸುತ್ತಿದ್ದಾರೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿ ಸ್ಟಂಟ್ ಮಾಡಿದರೆ ಅಂತಹ ವಾಹನಗಳಿಗೆ ಸಂಚಾರ ಪೊಲೀಸರು ಗರಿಷ್ಠ ಪ್ರಮಾಣದ ದಂಡ ವಿಧಿಸುತ್ತಾರೆ. ಈ ಕಾರಿನ ಮಾಲೀಕನಿಗೂ ಪೊಲೀಸರು ದಂಡ ವಿಧಿಸುವ ಸಾಧ್ಯತೆಗಳಿವೆ.

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಈ ಕಾರಿನಲ್ಲಿ ಸ್ಟಂಟ್ ಮಾಡಿರುವುದು ಮಾತ್ರವಲ್ಲದೇ, ಕಾನೂನು ಬಾಹಿರವಾಗಿ ಮಾಡಿಫೈ ಸಹ ಮಾಡಲಾಗಿದೆ. ಇದರಿಂದ ಈ ಕಾರು ಮಾಲೀಕನಿಗೆ ಭಾರೀ ಪ್ರಮಾಣದ ದಂಡ ವಿಧಿಸುವುದು ಖಚಿತ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಈ ಕಾರು ಮಾಲೀಕನಿಗೆ ಇದುವರೆಗೂ ದಂಡ ವಿಧಿಸಿಲ್ಲವೆಂದು ವರದಿಗಳಾಗಿವೆ. ಫೋರ್ಡ್ ಮಸ್ಟಾಂಗ್ ಸೂಪರ್ ಕಾರಿನಲ್ಲಿ 5.0 ಲೀಟರ್ ವಿ 8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಅಪಘಾತವಾಗುವುದನ್ನು ತಪ್ಪಿಸಿದ ಫೋರ್ಡ್ ಮಸ್ಟಾಂಗ್ ಕಾರು ಚಾಲಕ

ಈ ಎಂಜಿನ್ 363 ಬಿಹೆಚ್‌ಪಿ ಪವರ್ ಹಾಗೂ 515 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

Most Read Articles

Kannada
English summary
Ford Mustang driver avoids accident while doing stunt. Read in Kannada.
Story first published: Tuesday, June 8, 2021, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X