ರಾಂಗ್ ಸೈಡಿನಲ್ಲಿ ನುಗ್ಗಿ ಮಿನಿ ಟ್ರಕ್ಕಿಗೆ ಗುದ್ದಿದ ಫೋರ್ಡ್ ಮಸ್ಟಾಂಗ್

ಫೋರ್ಡ್ ಮಸ್ಟಾಂಗ್ ಭಾರತದಲ್ಲಿರುವ ಜನಪ್ರಿಯ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ಮಸ್ಟಾಂಗ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. 2 ಡೋರ್ ಹೊಂದಿರುವ ಏಕೈಕ ಮಾದರಿಯನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ.

ರಾಂಗ್ ಸೈಡಿನಲ್ಲಿ ನುಗ್ಗಿ ಮಿನಿ ಟ್ರಕ್ಕಿಗೆ ಗುದ್ದಿದ ಫೋರ್ಡ್ ಮಸ್ಟಾಂಗ್

ಫೋರ್ಡ್ ಮಸ್ಟಾಂಗ್ ಭಾರತದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಫೋರ್ಡ್ ಮಸ್ಟಾಂಗ್ ಈ ಸೆಗ್‍‍ಮೆಂಟಿನಲ್ಲಿರುವ ಜನಪ್ರಿಯ ಕಾರ್ ಆಗಿದೆ. ಇತ್ತೀಚಿಗೆ ಫೋರ್ಡ್ ಮಸ್ಟಾಂಗ್ ಕಾರಿಗೆ ಅಪಘಾತ ಸಂಭವಿಸಿತ್ತು. ಆದರೆ ಈ ಕಾರಿನಲ್ಲಿದ್ದವರು ಯಾವುದೇ ಪ್ರಾಣಾಪಾಯವಾಗದಂತೆ ಪಾರಾಗಿದ್ದಾರೆ.

ರಾಂಗ್ ಸೈಡಿನಲ್ಲಿ ನುಗ್ಗಿ ಮಿನಿ ಟ್ರಕ್ಕಿಗೆ ಗುದ್ದಿದ ಫೋರ್ಡ್ ಮಸ್ಟಾಂಗ್

ಭಾರತದ ರಸ್ತೆಗಳಲ್ಲಿ ಹೇಗೆ ವಾಹನ ಚಾಲನೆ ಮಾಡಬಾರದು ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಕೇರಳದಲ್ಲಿ ಸಂಭವಿಸಿದ ಈ ಅಪಘಾತದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಂಗ್ ಸೈಡಿನಲ್ಲಿ ನುಗ್ಗಿ ಮಿನಿ ಟ್ರಕ್ಕಿಗೆ ಗುದ್ದಿದ ಫೋರ್ಡ್ ಮಸ್ಟಾಂಗ್

ಕೇರಳದಲ್ಲಿರುವ ಬಹುತೇಕ ರಸ್ತೆಗಳಲ್ಲಿ ಡಿವೈಡರ್‍‍ಗಳನ್ನು ಅಳವಡಿಸಿಲ್ಲ. ಎಲ್ಲಾ ರಸ್ತೆಗಳು ಸಿಂಗಲ್ ಲೇನ್‍‍ಗಳಾಗಿವೆ. ಈ ಅಪಘಾತದ ದೃಶ್ಯವು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೊದಲ್ಲಿ ಟ್ರಕ್ ಅನ್ನು ರಿವರ್ಸ್ ತೆಗೆಯುತ್ತಿರುವುದನ್ನು ಕಾಣಬಹುದು.

ರಾಂಗ್ ಸೈಡಿನಲ್ಲಿ ನುಗ್ಗಿ ಮಿನಿ ಟ್ರಕ್ಕಿಗೆ ಗುದ್ದಿದ ಫೋರ್ಡ್ ಮಸ್ಟಾಂಗ್

ಇದನ್ನು ಗಮನಿಸುವ ಸ್ವಿಫ್ಟ್ ಕಾರಿನ ಚಾಲಕ ಕಾರ್ ಅನ್ನು ನಿಲ್ಲಿಸುತ್ತಾನೆ. ಸ್ವಿಫ್ಟ್ ಕಾರಿನ ಹಿಂದೆ ಬರುವ ಮತ್ತೊಂದು ಕಾರು ಚಾಲಕ ಸಹ ಕಾರ್ ಅನ್ನು ನಿಲ್ಲಿಸುತ್ತಾನೆ. ಆದರೆ ಈ ಎರಡು ಕಾರುಗಳ ಹಿಂದೆ ಅತಿ ವೇಗದಲ್ಲಿ ಬರುವ ಫೋರ್ಡ್ ಮಸ್ಟಾಂಗ್ ಕಾರಿನ ಚಾಲಕನಿಗೆ ತಕ್ಷಣಕ್ಕೆ ಕಾರ್ ಅನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.

ರಾಂಗ್ ಸೈಡಿನಲ್ಲಿ ನುಗ್ಗಿ ಮಿನಿ ಟ್ರಕ್ಕಿಗೆ ಗುದ್ದಿದ ಫೋರ್ಡ್ ಮಸ್ಟಾಂಗ್

ಈ ಕಾರಣಕ್ಕೆ ತನ್ನ ಕಾರ್ ಅನ್ನು ಎದುರು ರಸ್ತೆಗೆ ತಿರುಗಿಸಿದ್ದಾನೆ. ಎದುರು ರಸ್ತೆಯಲ್ಲಿ ಬರುತ್ತಿದ್ದ ಮಿನಿ ಟ್ರಕ್‍‍ಗೆ ಗುದ್ದಿದ್ದಾನೆ. ಫೋರ್ಡ್ ಮಸ್ಟಾಂಗ್ ಹಾಗೂ ಮಿನಿ ಟ್ರಕ್ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿಧಾನಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣಕ್ಕೆ ಈ ಅಪಘಾತ ಸಂಭವಿಸಿದೆ.

ರಾಂಗ್ ಸೈಡಿನಲ್ಲಿ ನುಗ್ಗಿ ಮಿನಿ ಟ್ರಕ್ಕಿಗೆ ಗುದ್ದಿದ ಫೋರ್ಡ್ ಮಸ್ಟಾಂಗ್

ಆದರೆ ಹೆಚ್ಚಿನ ಸುರಕ್ಷತಾ ಫೀಚರ್‍‍ಗಳಿಂದ ತಯಾರಾಗಿರುವ ಕಾರಣಕ್ಕೆ ಫೋರ್ಡ್ ಮಸ್ಟಾಂಗ್ ಕಾರಿನ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ. ಭಾರತದಲ್ಲಿ ಸಂಭವಿಸುವ ಅಪಘಾತಗಳಿಗೆ ಅತಿ ವೇಗವೂ ಸಹ ಕಾರಣ.

ಅತಿ ವೇಗದಲ್ಲಿ ಚಲಿಸುತ್ತಿದ್ದರೆ ವಾಹನವನ್ನು ನಿಧಾನಗೊಳಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಭಾರತದ ರಸ್ತೆಗಳಲ್ಲಿ ಯಾವಾಗ ಏನು ಅಡ್ಡ ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ವಾಹನಗಳೇ ಅಡ್ಡಾದಿಡ್ಡಿಯಾಗಿ ನುಗ್ಗುತ್ತವೆ.

ರಾಂಗ್ ಸೈಡಿನಲ್ಲಿ ನುಗ್ಗಿ ಮಿನಿ ಟ್ರಕ್ಕಿಗೆ ಗುದ್ದಿದ ಫೋರ್ಡ್ ಮಸ್ಟಾಂಗ್

ಹಸುಗಳು, ನಾಯಿಗಳು ಮತ್ತಿತರ ಪ್ರಾಣಿಗಳು ಯಾವಾಗ ಬೇಕಾದರೂ ಅಡ್ಡ ಬರಬಹುದು. ಅತಿ ವೇಗದಲ್ಲಿ ಚಲಿಸುವುದು ಮೃತ್ಯುವಿಗೆ ಆಹ್ವಾನ ನೀಡಿದಂತೆ. ಆದ ಕಾರಣ ವಾಹನಗಳನ್ನು ನಿಯಂತ್ರಣಕ್ಕೆ ಸಿಗುವಂತೆ ನಿಧಾನಗತಿಯಲ್ಲಿ ಚಲಾಯಿಸುವುದು ಒಳ್ಳೆಯದು.

Article Published On: Tuesday, March 10, 2020, 12:06 [IST]
English summary
Ford Mustang and mini truck accident. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+