ಸ್ಕೂಟರ್‌ಗೆ ಅಡ್ಡ ಬಂದ ಕಾಡಾನೆಗೆ ಅಂಕಲ್ ಅವಾಜ್...ಬೆದರಿ ಕಾಡಿಗೆ ಓಡಿದ ಒಂಟಿ ಸಲಗ

ಭಾರತದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಳು ಏರುಗತಿಯನ್ನು ಕಂಡಿದ್ದರೂ, ಅದೇ ಬೆಳವಣಿಗೆಗಳು ನಾಡಿನಿಂದ ದೂರವಿರುವ ದಟ್ಟ ಕಾಡುಗಳಲ್ಲಿ ವಾಸಿಸುವ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನವನ್ನು ಅಡ್ಡಿಪಡಿಸಿವೆ.

ಈ ಕಾರಣದಿಂದಾಗಿ ಕಾಡು ಪ್ರಾಣಿಗಳು ಕೆಲವೊಮ್ಮೆ ಸಂಚರಿಸಬೇಕಾದರೆ ಹೆದ್ದಾರಿಗಳು ಸಿಗುತ್ತವೆ. ಈ ವೇಳೆ ದಾರಿಯಲ್ಲಿ ಬರುವ ವಾಹನ ಸವಾರರ ಮೇಲೆ ಆನೆಗಳು ದಾಳಿ ಮಾಡಿದ ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಆದರೆ ಇಲ್ಲೊಂದು ಕಾಡಾನೆ ವ್ಯಕ್ತಿಯೊಬ್ಬನ ಅವಾಜ್‌ಗೆ ಬೆದರಿ ಕಾಡಿಗೆ ಹಿಂತಿರುಗಿದೆ. ಕೇರಳ ಮೂಲದ ಮಾತೃಭೂಮಿ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ಆನೆಯನ್ನು ಗದರಿಸಿದ ವ್ಯಕ್ತಿ ಅರಣ್ಯ ಸಿಬ್ಬಂದಿಯೆಂದು ತಿಳಿದುಬಂದಿದೆ.

ಇದರಲ್ಲಿ ಅರಣ್ಯ ಸಿಬ್ಬಂದಿಯಿಂದ ಗದರಿಸಿದ ನಂತರ ಕಾಡಾನೆ ರಾಜ್ಯ ಹೆದ್ದಾರಿಯಿಂದ ಹಿಂದೆ ಸರಿಯುವುದನ್ನು ನಾವು ನೋಡಬಹುದು. ಇಲ್ಲಿ ಗಮನಿಸಬೇಕಾಗಿರುವುದು ಆತನ ಧೈರ್ಯ ತುಂಬಾ ಹತ್ತಿರದಲ್ಲಿ ಆನೆಯೊಂದಿಗೆ ಮಾತಾನಡುವುದನ್ನು ಕಾಣಬಹುದು. ತುಸು ಎಚ್ಚರಿಕೆ ತಪ್ಪಿದರೂ ಆತನ ಜೀವಕ್ಕೆ ಗ್ಯಾರೆಂಟಿ ಇರುವುದಿಲ್ಲ.

ವಿಡಿಯೋ ಬಗ್ಗೆ ವಿವರಿಸುವುದಾದರೆ, ಅರಣ್ಯ ಸಿಬ್ಬಂದಿಯೊಬ್ಬರು ತನ್ನ ಸ್ಕೂಟರ್‌ನಲ್ಲಿ ಕುಳಿತಿರುವಾಗ, ಆರಂಭದಲ್ಲಿ ಅತ್ಯಂತ ಅಪಾಯಕಾರಿ ಎಂದು ತೋರುತ್ತಿದ್ದ ಕಾಡಾನೆಯನ್ನು ಗದರಿಸುತ್ತಿರುವುದನ್ನು ಕಾಣಬಹುದು. ಆದರೆ, ಅರಣ್ಯ ಸಿಬ್ಬಂದಿಗೆ ಮುಖಾಮುಖಿಯಾದ ನಂತರ ಆನೆ ಮನಸ್ಸು ಬದಲಾಯಿಸಿಕೊಂಡು ರಸ್ತೆಯತ್ತ ಬಾರದೆ ಮತ್ತೆ ಕಾಡಿನ ದಟ್ಟ ಪೊದೆಯೊಳಗೆ ಹೋಗಿದೆ.

ಅರಣ್ಯ ಸಿಬ್ಬಂದಿ ಮತ್ತು ಆನೆಯ ನಡುವಿನ ಸಂಪೂರ್ಣ 'ಸಂವಾದ' ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಪ್ರದೇಶದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಅವರಿಗೆ ತಲುಪಿದ್ದು, ಅವರು ಇಂತಹ ಕ್ರಮವನ್ನು ಪುನರಾವರ್ತಿಸದಂತೆ ಅರಣ್ಯ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಡಿಎಫ್‌ಒ ಪ್ರಕಾರ, ಅರಣ್ಯ ಸಿಬ್ಬಂದಿ ಇಂತಹ ಸಂದರ್ಭಗಳನ್ನು ನಿರ್ವಹಿಸುವ ಅನುಭವವನ್ನು ಹೊಂದಿರುತ್ತಾರೆ. ಈ ವಿಡಿಯೋ ಅನೇಕರನ್ನು ಪ್ರಚೋದಿಸಬಹುದು, ಸಾರ್ವಜನಿಕರು ಕೂಡ ವಿಡಿಯೋವನ್ನು ನೋಡಿ ಆನೆಗಳು ಎದುರಾದಾಗ ಹೀಗೆಯೇ ವರ್ತಿಸಬಹುದು. ಇದು ಭವಿಷ್ಯದಲ್ಲಿ ಸಂಭವನೀಯ ಅಪಘಾತವನ್ನು ಉಂಟುಮಾಡಬಹುದು ಎಂದರು.

ಈ ಭಾಗದ ಭೌಗೋಳಿಕತೆ, ವನ್ಯಜೀವಿ ಮತ್ತು ಸಸ್ಯವರ್ಗದ ಬಗ್ಗೆ ಚೆನ್ನಾಗಿ ತಿಳಿದಿರುವ ಅರಣ್ಯ ಸಿಬ್ಬಂದಿ ತಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ನಾವು ವೀಡಿಯೊದಲ್ಲಿ ನೋಡಬಹುದು. ಅವರು ಈ ಪ್ರದೇಶದ ಎಲ್ಲಾ ಕಾಡಾನೆಗಳನ್ನು ತಿಳಿದಿದ್ದಾರೆ. ಮನುಷ್ಯರ ಬಗ್ಗೆ ಅವುಗಳ ಪ್ರವೃತ್ತಿಯನ್ನು ಚೆನ್ನಾಗಿ ತಿಳಿದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ, ಹಲವಾರು ರಾಜ್ಯ ಹೆದ್ದಾರಿಗಳು ದಟ್ಟವಾದ ಕಾಡುಗಳ ಮೂಲಕ ಹಾದು ಹೋಗುತ್ತವೆ, ಇದು ಆ ಪ್ರದೇಶಗಳಲ್ಲಿ ವಾಸಿಸುವ ವನ್ಯಜೀವಿಗಳ ಮಾರ್ಗದಲ್ಲಿ ಬರುತ್ತದೆ. ಹಲವು ಸಂದರ್ಭಗಳಲ್ಲಿ ಈ ಕಾಡುಪ್ರಾಣಿಗಳು ವಾಹನ ಸವಾರರ ದಾರಿಗೆ ಅರಿವಿಲ್ಲದೇ ಅಡ್ಡ ಬರುತ್ತಿದ್ದು, ಇದರಿಂದ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿವೆ.

ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ತುಂಬಾ ಕಷ್ಟ ಏಕೆಂದರೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವಾಗ ಹೆದ್ದಾರಿಗಳಲ್ಲಿ ವನ್ಯಜೀವಿಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಹಾಗಾಗಿ ಅವುಗಳಿಗೆ ಕಿರಿಕಿರಿಯಾಗದಂತೆ ನೋಡಿಕೊಂಡು ಅವು ರಸ್ತೆಯನ್ನು ಬಿಟ್ಟು ಹೊರಟ ಮೇಲೆ ನಾವು ನಮ್ಮ ಪ್ರಯಾಣ ಮುಂದುವರಿಸುವುದು ಉತ್ತಮ.

Most Read Articles

Kannada
English summary
Forest officer scolds wild elephant goes back into the forest
Story first published: Saturday, November 12, 2022, 18:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X