ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಎಸ್ ಯಡಿಯೂರಪ್ಪ ಅವರು ರಾಜಕೀಯ ಜಂಜಾಟವನ್ನೆಲ್ಲಾ ಬಿಟ್ಟು ಕುಟುಂಬಸ್ಥರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಇತ್ತೀಚೆಗೆ ವಿದೇಶ ಪ್ರವಾಸ ಮುಗಿಸಿ ರಾಜ್ಯಕ್ಕೆ ವಾಪಸ್ಸಾಗಿರುವ ಬಿ.ಎಸ್.ಯಡಿಯೂರಪ್ಪ ಅವರು Toyota Vellfire ಕಾರನ್ನು ಖರೀದಿ ಮಾಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತಮ್ಮ ಕುಟುಂಬಸ್ಥರೊಂದಿಗೆ ಮಾಲ್ಡೀವ್ಸ್​ಗೆ ಪ್ರವಾಸಕ್ಕೆ ತೆರೆಳಿದ್ದರು. ನಂತರ ಇವರು ಸೋಮವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಾಸಾಗಿದ್ದರು, ಈ ವೇಳೆ ಅವರು ಹೊಸ Toyota Vellfire ಕಾರಿನಲ್ಲೇ ಏರ್​ಪೋರ್ಟ್​​ನಿಂದ ಕಾವೇರಿ ನಿವಾಸಕ್ಕೆ ಆಗಮಿಸಿದ್ದರು. ಈ ಹೊಸ Toyota Vellfire ಎಂಪಿವಿಯು ಮಾದರಿಯು ಬಳಿ ಬಣ್ಣದಿಂದ ಕೂಡಿದ್ದು, ಇದು KA -05- ND - 4545 ನೊಂದಣಿ ಸಂಖ್ಯೆಯನ್ನು ಹೊಂದಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಈಗಿನಿಂದಲೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಇನ್ನೊಂದು ತಿಂಗಳಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಿತ್ತಿದ್ದಾರೆ. ರಾಜ್ಯದ ತುಂಬ ಪ್ರವಾಸ ಮಾಡಲೆಂದು Toyota Vellfire ಕಾರನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಇಷ್ಟು ದಿನ ಸರ್ಕಾರ ಅಧಿಕೃಕ ಕಾರನ್ನು ಯಡಿಯೂರಪ್ಪ ಅವರು ಬಳಕೆ ಮಾಡುತ್ತಿದ್ದರು. ಇದಕ್ಕೂ ಮುನ್ನ ಪುತ್ರ ವಿಜಯೇಂದ್ರ ಅವರ ಕಾರನ್ನು ಬಳಕೆ ಮಾಡುತ್ತಿದ್ದರು. 2018ರ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಯಡಿಯೂರಪ್ಪ ಅವರ ಬಳಿ ಯಾವುದೇ ಸ್ವಂತ ಕಾರುಗಳಿಲ್ಲ ಎಂದು ತಿಳಿಸಲಾಗಿತ್ತು.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಅದರಂತೆ ಬಿಎಸ್ ಯಡಿಯೂರಪ್ಪ ಅವರು ಖರೀದಿಸಿದ ಮೊದಲ ಕಾರು Toyota Vellfire ಆಗಿದೆ, ಈ ಕಾರಿನ ಆನ್ ರೋಡ್ ಬೆಲೆಯು ಅಂದಾಜು ಸುಮಾರು ರೂ,1 ಕೋಟಿ ಆಗಿದೆ. ಇವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೆಷತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

Toyota Vellfire ಬಗ್ಗೆ ಹೇಳುವುದಾದರೆ, ಇದರಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ, ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ Toyota ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಪ್ರೀಮಿಯಂ ಕಾರು Vellfire ಆಗಿದೆ. ಐಷಾರಾಮಿ Toyota Vellfire ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುವ ಮಾದರಿಯಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಈ Toyota Vellfire ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿಗೆ ಪೈಪೋಟಿ ನೀಡುತ್ತದೆ. ಐಷಾರಾಮಿ ಟೊಯೊಟಾ ವೆಲ್‌ಫೈರ್ ಮಾದರಿಯು ಎಕ್ಸಿಕ್ಯುಟಿವ್ ಲೌಂಜ್ ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿದೆ. Vellfire ಎಂಪಿವಿ ಕಾರು ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಮೇಲೆ ಅಭಿವೃದ್ದಿಗೊಂಡಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಈ Vellfire ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ. ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಈ ಐಷಾರಾಮಿ ಎಂಪಿವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಇದರೊಂದಿಗೆ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳುನ್ನು ಒಳಗೊಂಡಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರು ಖರೀದಿಸಿದ ಐಷಾರಾಮಿ Toyota Vellfire ಕಾರಿನ ವಿಶೇಷತೆಗಳಿವು

ಸುರಕ್ಷತೆಗಾಗಿ ಈ ಐಷಾರಾಮಿ Vellfire ಕಾರಿನಲ್ಲಿ 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ. ಇದರ ಜೊತೆಗೆ ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಎ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೀಗೆ ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿದೆ.

Most Read Articles

Kannada
English summary
Former cm bs yediyurappa buy new toyota vellfire price specs details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X