ಅಪಘಾತಕ್ಕೀಡಾದ ಮೊಹಮ್ಮದ್ ಅಜರುದ್ದೀನ್ ಕಾರು

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಸಂಸದ ಮೊಹಮ್ಮದ್ ಅಜರುದ್ದೀನ್ ಅವರ ಕಾರು ರಾಜಸ್ಥಾನದಲ್ಲಿ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಅಜರುದ್ದೀನ್ ಹಾಗೂ ಅವರ ಕುಟುಂಬ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ಮೊಹಮ್ಮದ್ ಅಜರುದ್ದೀನ್ ಕಾರು

ಅಜರುದ್ದೀನ್ ಚಲಿಸುತ್ತಿದ್ದ ಕಾರು ರಾಜಸ್ಥಾನದ ಸುರ್ವಾಲ್ ಮೂಲಕ ಹಾದುಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅವರಿದ್ದ ಕಾರಿನ ಒಂದು ಚಕ್ರವು ಹೊರಬಂದ ಕಾರಣ ಚಾಲಕ ನಿಯಂತ್ರಣ ತಪ್ಪಿ ಹೆದ್ದಾರಿಯ ಬಳಿಯಿದ್ದ ಸಣ್ಣ ಢಾಬಾಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಲ್ಲಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುವ 40 ವರ್ಷದ ವ್ಯಕ್ತಿಯೊಬ್ಬನಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಅಪಘಾತಕ್ಕೀಡಾದ ಮೊಹಮ್ಮದ್ ಅಜರುದ್ದೀನ್ ಕಾರು

ಕಾರಿನಲ್ಲಿ ಅಜರುದ್ದೀನ್ ಜೊತೆಯಿದ್ದ ಇಬ್ಬರು ಸುರಕ್ಷಿತವಾಗಿದ್ದು, ಸಣ್ಣ ಚಿಕಿತ್ಸೆ ಪಡೆದ ನಂತರ ಇಬ್ಬರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡಿದ್ದ ಢಾಬಾದಲ್ಲಿ ಕೆಲಸ ಮಾಡುವವರನ್ನು ಸಹ ಪ್ರಥಮ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಪಘಾತಕ್ಕೀಡಾದ ಮೊಹಮ್ಮದ್ ಅಜರುದ್ದೀನ್ ಕಾರು

ಮೊಹಮ್ಮದ್ ಅಜರುದ್ದೀನ್ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಕಾಲ ಕಳೆಯಲು ತಮ್ಮ ಕುಟುಂಬದೊಂದಿಗೆ ಬಂದಿದ್ದರು. ವರದಿಯ ಪ್ರಕಾರ ಅವರನ್ನು ಮತ್ತೊಂದು ಕಾರಿನಲ್ಲಿ ಹೋಟೆಲ್‌ಗೆ ಕರೆದೊಯ್ಯಲಾಯಿತು.

ಅಪಘಾತಕ್ಕೀಡಾದ ಮೊಹಮ್ಮದ್ ಅಜರುದ್ದೀನ್ ಕಾರು

ಕಾರು ಚಾಲನೆ ಮಾಡುವಾಗ ಕಾರಿನ ಚಕ್ರವು ಹೊರ ಬಂದರೆ ಕಾರಿನೊಳಗಿರುವವರ ಪ್ರಾಣಕ್ಕೆ ಅಪಾಯವಾಗುವುದು ಖಚಿತ. ಈ ಘಟನೆಯಲ್ಲಿ ಕಾರಿನ ಚಕ್ರವನ್ನು ಸರಿಯಾಗಿ ಬಿಗಿಗೊಳಿಸದೆ ಇರುವುದು ಕಂಡು ಬಂದಿದೆ. ಇದರ ಜೊತೆಗೆ ಕಾರಿನಲ್ಲಿ ಬೇರೆ ದೋಷಗಳಿರುವ ಸಾಧ್ಯತೆಗಳಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಪಘಾತಕ್ಕೀಡಾದ ಮೊಹಮ್ಮದ್ ಅಜರುದ್ದೀನ್ ಕಾರು

ಕಾರನ್ನು ಸರ್ವೀಸ್'ಗೆ ನೀಡಿದಾಗ ಹಲವು ಬಾರಿ ಚಕ್ರಗಳನ್ನು ಸರಿಯಾಗಿ ಜೋಡಿಸುವುದನ್ನು ಮರೆತುಬಿಡುತ್ತಾರೆ. ಇದರಿಂದಾಗಿ ಕಾರಿನ ಚಕ್ರಗಳು ನಿಧಾನವಾಗಿ ಕಾರಿನಿಂದ ಹೊರಬರುತ್ತವೆ. ಅಜರುದ್ದೀನ್ ಅವರ ಕಾರಿನಲ್ಲೂ ಇದೇ ರೀತಿ ಸಂಭವಿಸಿರುವ ಸಾಧ್ಯತೆಗಳಿವೆ.

ಅಪಘಾತಕ್ಕೀಡಾದ ಮೊಹಮ್ಮದ್ ಅಜರುದ್ದೀನ್ ಕಾರು

ಈ ಕಾರಣಕ್ಕೆ ಕಾರನ್ನು ಸರ್ವೀಸ್ ಗೆ ನೀಡಿ ವಾಪಸ್ ಪಡೆಯುವಾಗ ಬದಲಿಸಲಾದ ಬಿಡಿಭಾಗಗಳ ಬಗ್ಗೆ ಸರ್ವೀಸ್ ಮಾಡಿರುವ ವ್ಯಕ್ತಿಯಿಂದ ಮಾಹಿತಿಯನ್ನು ಪಡೆಯುವುದು ಒಳ್ಳೆಯದು. ಕಾರನ್ನು ಪಡೆದ ನಂತರ ಅದನ್ನು ಸರಿಯಾಗಿ ಪರೀಕ್ಷಿಸಿ ಇದರಿಂದ ಏನಾದರೂ ದೋಷವಿದ್ದಲ್ಲಿ ಸರಿಪಡಿಸಿ ಕೊಳ್ಳಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಪಘಾತಕ್ಕೀಡಾದ ಮೊಹಮ್ಮದ್ ಅಜರುದ್ದೀನ್ ಕಾರು

ಈ ರೀತಿಯ ಘಟನೆಗಳು ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಕಾರು ಹಳೆಯದಾಗುತ್ತಿದ್ದಂತೆ ಅದರಲ್ಲಿರುವ ಬಿಡಿಭಾಗಗಳು ಹಾಗೂ ಸ್ಕ್ರೂಗಳು ಸಡಿಲಗೊಳ್ಳುತ್ತವೆ. ಇದರಿಂದ ಕಾರಿನಿಂದ ಶಬ್ದ ಬರುತ್ತದೆ. ವಾಹನವನ್ನು ಸರಿಯಾಗಿ ಪರೀಕ್ಷಿಸಿ ತೆಗೆದುಕೊಂಡರೆ ಈ ಸಮಸ್ಯೆಯನ್ನು ಮುಂಚಿತವಾಗಿ ಬಗೆಹರಿಸಿಕೊಳ್ಳಬಹುದು.

Most Read Articles

Kannada
English summary
Former cricketer Mohammad Azharuddin car crashed in Rajasthan. Read in Kannada.
Story first published: Friday, January 1, 2021, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X