ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಕೆಲವು ಕ್ರೀಡಾಪಟುಗಳು ಐಷಾರಾಮಿ ಜೀವನ ನಡೆಸುತ್ತಾರೆ. ಇನ್ನೂ ಕೆಲವು ಕ್ರೀಡಾಪಟುಗಳು ಉದ್ಯಮಿಗಳಿಗಿಂತ ಹೆಚ್ಚು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ.

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಕ್ರಿಶ್ಚಿಯಾನೊ ರೊನಾಲ್ಡೊ ತಮ್ಮ ಸ್ವಂತ ಬಳಕೆಗಾಗಿ ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಕ್ರಿಕೆಟಿಗರು ಖಾಸಗಿ ಜೆಟ್ ಗಳನ್ನು ಹೊಂದದೇ ಹೋದರೂ ಐಷಾರಾಮಿ ಕಾರುಗಳನ್ನಂತೂ ಹೊಂದಿರುತ್ತಾರೆ. ಈಗ ಮಾಜಿ ಕ್ರಿಕೆಟಿಗರೊಬ್ಬರು ಹೊಸ ಕಾರು ಖರೀದಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಯಾವ ಕಾರು ಖರೀದಿಸಿದರೆ ಒಳ್ಳೆಯದು ಎಂದು ಅಭಿಮಾನಿಗಳನ್ನು ಕೇಳಿದ್ದಾರೆ.

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕಾರು ಖರೀದಿ ಬಗ್ಗೆ ಅಭಿಮಾನಿಗಳಿಂದ ಶಿಫಾರಸು ಕೇಳಿದ್ದರು. ಕೆಲವರು ಹ್ಯುಂಡೈನ ಪ್ರೀಮಿಯಂ ಎಸ್‌ಯುವಿ ಟಕ್ಸನ್ ಖರೀದಿಸುವಂತೆ ಶಿಫಾರಸು ಮಾಡಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಈ ಕಾರಣಕ್ಕೆ ಹ್ಯುಂಡೈ ಟಕ್ಸನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಪರೀಕ್ಷಿಸಲು ಶೋಯೆಬ್ ಅಖ್ತರ್ ಇಡೀ ದಿನ ಆ ಎಸ್‌ಯುವಿಯಲ್ಲಿ ಪ್ರಯಾಣಿಸಿದ್ದಾರೆ. ಶೋಯೆಬ್ ಅಖ್ತರ್ ಟಕ್ಸನ್ ಎಸ್‌ಯುವಿಯಲ್ಲಿ ಸಂಚರಿಸುತ್ತಿರುವ ವೀಡಿಯೊವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ತನ್ನ ವಾಹನಗಳನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡುತ್ತದೆ. ಹ್ಯುಂಡೈ ಕಂಪನಿಯು ಪಾಕಿಸ್ತಾನದಲ್ಲಿಯೂ ಕೆಲವು ಕಾರುಗಳನ್ನು ಮಾರಾಟ ಮಾಡುತ್ತದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಜೀಪ್ ಕಂಪಾಸ್‌ನಂತಹ ಐಷಾರಾಮಿ ಎಸ್‌ಯುವಿಗಳಿಗೆ ಪೈಪೋಟಿ ನೀಡಲು ಈ ಎಸ್‌ಯುವಿಯನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸಲಾಗಿದೆ. ಪಾಕಿಸ್ತಾನದಲ್ಲಿಯೂ ಟಕ್ಸನ್ ಎಸ್‌ಯುವಿ ಕೆಲವು ಐಷಾರಾಮಿ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಹ್ಯುಂಡೈ ಟಕ್ಸನ್ ಪ್ರೀಮಿಯಂ ಎಸ್‌ಯುವಿಯು ತನ್ನ ಲುಕ್ ನಿಂದ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಟಕ್ಸನ್ ನಲ್ಲಿರುವ ಎಲ್‌ಇಡಿ ಹೆಡ್‌ಲ್ಯಾಂಪ್‌, ಡಿಆರ್‌ಎಲ್ ಎಲೆಕ್ಟ್ರಿಕ್ ಲ್ಯಾಂಪ್, ವೈಡ್ ಗ್ರಿಲ್ ಗಳು ಈ ಎಸ್‌ಯುವಿಗೆ ಅಗ್ರೇಸಿವ್ ಲುಕ್ ನೀಡುತ್ತವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಈ ಎಸ್‌ಯುವಿಯ ಇಂಟಿರಿಯರ್ ನಲ್ಲಿ ಪನೋರಾಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಪಾಯಿಂಟ್, ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಟಕ್ಸನ್ ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ಎಂಜಿನ್ 149 ಬಿಹೆಚ್ ಪಿ ಪವರ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 182 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಡೀಸೆಲ್ ಎಂಜಿನ್ ನೊಂದಿಗೆ 8-ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದ್ದರೆ, ಪೆಟ್ರೋಲ್ ಎಂಜಿನ್ ನೊಂದಿಗೆ 6-ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಜೋಡಿಸಲಾಗಿದೆ. ಈ ಎಲ್ಲಾ ಫೀಚರ್ ಗಳು ತಮ್ಮನ್ನು ಹೆಚ್ಚು ಆಕರ್ಷಿಸಿವೆ ಎಂದು ಈ ವೀಡಿಯೊದಲ್ಲಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಕಾರು ಖರೀದಿಗೂ ಮುನ್ನ ಇಡೀ ದಿನ ಕಾರಿನಲ್ಲೇ ಕಳೆದ ಮಾಜಿ ಕ್ರಿಕೆಟಿಗ

ಈ ಎಸ್‌ಯುವಿಯಲ್ಲಿ ಹೆಚ್‌ಡಿಆರ್‌ಎಸಿ, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ ಬಟನ್ ಕಂಟ್ರೋಲ್ ಡ್ರೈವರ್ ಸೀಟ್ ಸೇರಿದಂತೆ ಇನ್ನಿತರ ಫೀಚರ್ ಗಳಿವೆ.

Most Read Articles

Kannada
English summary
Former Pakistan fast bowler Shoaib Akhtar spent a day in Hyundai Tucson. Read in Kannada.
Story first published: Friday, October 9, 2020, 17:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X