ಜಯಲಲಿತಾ ಐಷಾರಾಮಿ ಕಾರು ಅಕ್ರಮ ಸಂಪತ್ತೇ?
ಅಕ್ರಮ ಆಸ್ತಿ ಗಳಿಕೆ ಸಂಬಂಧ ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರನ್ನು ನಿರ್ದೋಷಿ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ (ಮೇ 11, 2015) ಮಹತ್ವದ ತೀರ್ಪು ಪ್ರಕಟಿಸಿತ್ತು. ಇದರೊಂದಿಗೆ ಅಧೀನ ನ್ಯಾಯಾಲಯ ಜಯಾ ವಿರುದ್ಧ ನೀಡಿದ್ದ ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ 100 ಕೋಟಿ ರು.ಗಳ ದಂಡ ರದ್ದಾಗಿತ್ತು.
ಯಡಿಯೂರಪ್ಪ ಮತ್ತು ಅವರ ಲ್ಯಾಂಡ್ ಕ್ರೂಸರ್ ಪ್ರಾಡೊ
19 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇಂತಹದೊಂದು ಬೆಳವಣಿಗೆ ಕಂಡುಬಂದಿದ್ದು, ಜಯಲಲಿತಾ ಸೇರಿದಂತೆ ಇತರ ಮೂವರು ಅಪರಾಧಿಗಳನ್ನು ದೋಷ ಮುಕ್ತಗೊಳಿಸಿದೆ. ಈ ನಡುವೆ ಜಯಲಲಿತಾ ಅವರು ತಮ್ಮ ಅಧಿಕೃತ ಪ್ರವಾಸಗಳಿಗಾಗಿ ರಾಜಕಾರಣಿಗಳ ನೆಚ್ಚಿನ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರನ್ನು ಬಳಕೆ ಮಾಡುತ್ತಿರುವುದು ಇಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ದುಬಾರಿ ಕ್ರೀಡಾ ಬಳಕೆಯ ಕಾರು ಟೊಯೊಟಾ ಲ್ಯಾಂಡ್ ಕ್ರೂಸರ್ ಜಯಲಲಿತಾ ಅಕ್ರಮ ಸಂಪತ್ತಿನ ಭಾಗವಾಗಿದೆಯೇ ಎಂಬುದು ಸಾಮಾನ್ಯ ಜನರಲ್ಲಿ ಮೂಡುತ್ತಿರುವ ಪ್ರಶ್ನೆಯಾಗಿದೆ. ನ್ಯಾಯಾಲಯ ವಿಚಾರಣೆಯ ವೇಳೆಯಲ್ಲಿ ಕೋರ್ಟ್ ಗೆ ತೆರಳಲು ಜಯಲಲಿತಾ ಇದೇ ಕಾರನ್ನು ಬಳಕೆ ಮಾಡುತ್ತಿದ್ದರು.

ಟೊಯೊಟಾದ ಜನಪ್ರಿಯ ಹಾಗೂ ದುಬಾರಿ ಮಾದರಿಗಳಲ್ಲಿ ಒಂದಾಗಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ ಪ್ರಥಮ ನೋಟದಲ್ಲೇ ದೊಡ್ಡಸ್ತಿಕೆಯ ಸಂಕೇತವಾಗಿದೆ.

ಇನ್ನು ಇದರಲ್ಲಿ ಜಯಲಲಿತಾ ಅವರ ಭದ್ರತೆಗೆ ಗರಿಷ್ಠ ಆದ್ಯತೆ ಕೊಡಲಾಗಿದ್ದು, ಹೈಟೆಕ್ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ.

ಆಫ್ ರೋಡ್ ಸವಾರಿಗೂ ಸೂಕ್ತವಾಗಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ, ಸ್ಯಾಟಲೈಟ್ ನೇವಿಗೇಷನ್, ಕೀಲೆಸ್ ಎಂಟ್ರಿ, ಎಂಜಿನ್ ಇಂಮೊಬಿಲೈಝರ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಹಾಗೂ ಕ್ರೂಸ್ ಕಂಟ್ರೋಲ್ ಮುಂತಾದ ವ್ಯವಸ್ಥೆಗಳನ್ನು ಹೊಂದಿದೆ.

ಅಂತೆಯೇ ಮನರಂಜನೆಗಾಗಿ ಸ್ಪೀಕರ್, ಸಿಡಿ ಪ್ಲೇಯರ್, ಯುಎಸ್ ಬಿ ಪೋರ್ಡ್, ಐಪ್ಯಾಡ್ ಪ್ಲಸ್, ಬ್ಲೂಟೂತ್ ಕನೆಕ್ಟಿವಿಟಿ ಮುಂತಾದ ಸೇವೆಗಳಿವೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ವಾಹನ ಸ್ಥಿರತೆ ನಿಯಂತ್ರಣ, ಆಕ್ಟಿವ್ ಟ್ರಾಕ್ಷನ್ ಕಂಟ್ರೋಲ್, ಬಹು ಭೂಪ್ರದೇಶದ ಆ್ಯಂಟಿ ಸ್ಕಿಡ್ ಬ್ರೇಕಿಂಗ್, ಎಲೆಕ್ಟ್ರಾನಿಕ್ ಬ್ರೋಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಬ್ರೇಕ್ ಅಸಿಸ್ಟ್ ಹಾಗೂ ಆರು ಏರ್ ಬ್ಯಾಗ್ ಗಳ ಸೇವೆಯಿರಲಿದೆ.

ಇದು ನಗರದ ರಸ್ತೆಗಳಲ್ಲಿ, ದುರ್ಗಮ ಮತ್ತು ಒರಟು ಭೂಪ್ರದೇಶದಲ್ಲಿಯೂ ಬಳಸಲು ಯೋಗ್ಯವಾಗಿದೆ. ಇದು ಒಂದು ಕೋಟಿ ರು.ಗಳಷ್ಟು ಬೆಲೆಬಾಳುತ್ತಿದೆ.

ಹಲವು ಬಣ್ಣಗಳಲ್ಲಿ ಲಭ್ಯವಿರುವ ಟೊಯೊಟೊ ಲ್ಯಾಂಡ್ ಕ್ರೂಸರ್ ಪ್ರಾಡೊ ಕಾರು ಫೈವ್ ಡೋರ್ (ಜಿಎಕ್ಸ್, ಜಿಎಕ್ಸ್‌ಎಲ್, ವಿಎಕ್ಸ್, ಕಕಡು) ಹಾಗೂ ತ್ರಿ ಡೋರ್ (ಎಕ್ಸ್ ಹಾಗೂ ಝಡ್‌ಆರ್) ವೆರೆಯಂಟ್‌ಗಳಲ್ಲಿ ಮಾರಾಟವಾಗುತ್ತಿದೆ.

ಲ್ಯಾಂಡ್ ಕ್ರೂಷರ್ ಕಾರಿನ ಎರಡೂ ಬದಿಯಲ್ಲೂ ಸೈಡ್ ಸ್ಟೆಪ್ ಇವೆ. ಇದರಿಂದ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಭದ್ರತೆ ಒದಗಿಸಲು ನೆರವಾಗಲಿದೆ. ಅಲ್ಲದೆ ಕಾರಿನೊಳಗೂ ವಿಶಾಲ ಸ್ಥಳಾವಕಾಶವಿದೆ

ಈ ಹಿಂದೆ ದೇಶದ ಸರ್ವೋಚ್ಛ ನ್ಯಾಯಾಲಯ ಸುಪ್ರಿಂ ಕೋರ್ಟ್ ಸಲಹೆಯಂತೆ ಕಾವೇರಿ ನೀರು ಹಂಚಿಕೆ ವಿವಾದ ಕುರಿತು ಕರ್ನಾಟಕದ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆ ಮಾತುಕತೆಗಾಗಿ ಬಂದಿಳಿದ್ದ ಜಯಲಲಿತಾ ಅವರು ರಾಜ್ಯ ಸರಕಾರದ ಯಾವುದೇ ಸೇವೆ ಸ್ವೀಕರಿಸಿರಲಿಲ್ಲ. ಅಲ್ಲದೆ ತಮ್ಮ ಅಧಿಕೃತ ಲ್ಯಾಂಡ್ ಕ್ರೂಸರ್ ಕಾರಿನಲ್ಲೇ ಪಯಣ ಬೆಳೆಸಿದ್ದರು. ತದಾ ಬಳಿಕ ಅಕ್ರಮ ಅಸ್ತಿ ಗಳಿಕೆ ಸಂಬಂಧ ನ್ಯಾಯಾಲಯಕ್ಕೆ ಭೇಟಿ ಕೊಡುವಾಗದಲೂ ಇದೇ ಕಾರಿನಲ್ಲಿ ಸಂಚಾರ ಮಾಡುವ ಮೂಲಕ ಗಮನ ಗಿಟ್ಟಿಸಿಕೊಂಡಿದ್ದರು.

ಅಂದ ಹಾಗೆ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ 2982 ಸಿಸಿ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 170 ಅಶ್ವಶಕ್ತಿ (410 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಒಟ್ಟಿನಲ್ಲಿ ಹೈ ಕೋರ್ಟ್ ತೀರ್ಪು ಈಗ ಜಯ ಪರವಾಗಿದ್ದು, ಸದ್ಯದಲ್ಲೇ ತಮಿಳುನಾಡು ಮುಖ್ಯಮಂತ್ರಿ ಸ್ಥಾನ ಮರಳಿ ಪಡೆಯಲಿದ್ದಾರೆ.


Click it and Unblock the Notifications








