ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

Toyota Fortuner ಭಾರತೀಯರ ನೆಚ್ಚಿನ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ Toyota Fortuner ಆಫ್ ರೋಡ್ ಸಾಮರ್ಥ್ಯವನ್ನೂ ಹೊಂದಿರುವುದು ಅದರ ಜನಪ್ರಿಯತೆಗೆ ಮತ್ತೊಂದು ಕಾರಣವಾಗಿದೆ. ಭಾರತದಲ್ಲಿ ಈ ಆಫ್ ರೋಡ್ ಎಸ್‌ಯುವಿಯು Ford Endeavour, Mahindra Alturas, G4, MG Gloster ಎಸ್‌ಯು‌ವಿಗಳಿಗೆ ಪೈಪೋಟಿ ನೀಡುತ್ತದೆ.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

Toyota Fortuner ಭಾರತದ ಬಲಶಾಲಿ ಎಸ್‌ಯುವಿಗಳಲ್ಲಿ ಒಂದು. ಸಮುದ್ರ ತೀರದಲ್ಲಿ ಜಾಲಿ ಡ್ರೈವ್‌ಗೆ ಹೋಗಿದ್ದ Toyota Fortuner ಎಸ್‌ಯುವಿಯೊಂದು ಉರುಳಿ ಬಿದ್ದ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ವೀಡಿಯೊ ವೈರಲ್ ಆಗಿದೆ.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

ವರದಿಗಳ ಪ್ರಕಾರ ಚಾಲಕ Toyota Fortuner ಎಸ್‌ಯು‌ವಿಯಲ್ಲಿ ಬೀಚ್‌ಗೆ ತೆರಳಿ ಸಾಗರದ ಅಲೆಗಳ ನಡುವೆ ಚಲಿಸುತ್ತಿರುವ ಕಾರಿನ ವೀಡಿಯೊ ಚಿತ್ರೀಕರಣ ಮಾಡಲು ನಿರ್ಧರಿಸಿದ್ದಾನೆ. ಇದನ್ನು ಈ ವೀಡಿಯೊದಲ್ಲಿಯೂ ಗಮನಿಸಬಹುದು. Fortuner ಕಾರಿನ ಚಾಲಕ ಇದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಈ ವೇಳೆ ವಾಹನದ ಎಡಭಾಗಕ್ಕೆ ಅಲೆ ಅಪ್ಪಳಿಸಿದೆ.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

ಇದರಿಂದ Fortuner ಎಸ್‌ಯು‌ವಿ ಮಗುಚಿ ಬಿದ್ದಿದೆ. ಕಾರು ಚಾಲಕ ಕುಶಲತೆಯಿಂದ ಕಾರ್ ಅನ್ನು ಬಲಕ್ಕೆ ತಿರುಗಿಸಲು ಪ್ರಯತ್ನಿಸಿದರೂ ಕಾರನ್ನು ಸಮುದ್ರಕ್ಕೆ ಎಳೆಯಲಾಗುವುದಿಲ್ಲ. ಇದರ ಜೊತೆಗೆ ಈ ಎಸ್‌ಯುವಿಯನ್ನು ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಹೆಚ್ಚು ಗುರುತ್ವಾಕರ್ಷಣೆಯೊಂದಿಗೆ ನಿರ್ಮಿಸಲಾಗಿದೆ. ಹೀಗಾಗಿ ಈ ಎಸ್‌ಯು‌ವಿಯು ಬೌನ್ಸ್ ಆಗುವುದು ತಪ್ಪಿದೆ.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

ಅಲ್ಲದೆ ಈ ಎಸ್‌ಯು‌ವಿಯು ಹೆಚ್ಚು ತೂಕವನ್ನು ಹೊಂದಿರುವುದರಿಂದ ಪಲ್ಟಿಯಾದಾಗ ಬುಡ ಮೇಲಾಗಿ ಉರುಳಿಲ್ಲ. Toyota Fortuner ಎಸ್‌ಯುವಿಯನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ತಿರುಗಿಸುವುದು ಸುಲಭ. ಈ ಘಟನೆಯಲ್ಲಿ ನೀರಿನ ಹೊರತಾಗಿಯೂ ಸಮುದ್ರದ ಅಲೆ ಗೋಡೆಯಂತೆ ವರ್ತಿಸಿದೆ.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

ಈ Toyota Fortuner ಕಾರು ಉರುಳಿ ಬಿದ್ದಿರುವುದರಿಂದ ವಾಹನದ ಚಲನೆಯ ಮೇಲೆ ಪರಿಣಾಮ ಬೀರಿದೆ. Fortuner ಸ್ವಲ್ಪ ವಿಸ್ತಾರವಾಗಿದೆ. ಒಂದು ವೇಳೆ ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಹ್ಯಾಚ್‌ಬ್ಯಾಕ್ ಆಗಿದ್ದರೆ ಪರಿಸ್ಥಿತಿ ಇನ್ನೂ ಭೀಕರವಾಗಿರುತ್ತಿತ್ತು. ಆದ್ದರಿಂದ ನೀವು ಕಾರಿನಲ್ಲಿ ಕಡಲ ತಿರಕ್ಕೆ ಹೋದಾಗ ಅಂಕು ಡೊಂಕಾಗಿ ಕಾರ್ ಅನ್ನು ವೇಗವಾಗಿ ಚಾಲನೆ ಮಾಡದಿರಿ.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

ಆದರೆ ಇದನ್ನು ಅರಿಯದವರು ಈ ರೀತಿ ಮೋಜು ಮಾಡಲು ಪ್ರಯತ್ನಿಸಿ ಅಪಾಯಕ್ಕೆ ಸಿಲುಕುತ್ತಾರೆ. ಆಗ ಬ್ರೇಕ್ ಹಾಕಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅಲೆಗಳು ಪ್ರಬಲವಾಗಿರುವುದರಿಂದ ವಾಹನ ಚಾಲಕರು ಬ್ರೇಕ್ ಹಾಕುವ ಮುನ್ನವೇ ವಾಹನದ ಒಂದು ಬದಿ ಮೇಲಕ್ಕೆ ಎತ್ತಿ ಕೊಂಡಿರುತ್ತದೆ. ವೀಡಿಯೊದಲ್ಲಿರುವ ಈ Fortuner ಮಗುಚಿ ಬಿದ್ದ ನಂತರ ಎಡಗಡೆಯ ಫ್ರಂಟ್ ವಿಂಡೋ ಗ್ಲಾಸ್ ಹಾಗೂ ಮಿರರ್ ಹೊಡೆದು ಹೋಗಿರುವುದನ್ನು ಕಾಣ ಬಹುದು.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

ಈ ರೀತಿ ಕಾರುಗಳಲ್ಲಿ ಸ್ಟಂಟ್ ಮಾಡುವ ಮುನ್ನ ತಮ್ಮ ಕಾರಿನಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಸಪ್ಲೈ ಹಾಗೂ ಸ್ಟೆಬಿಲಿಟಿ ಕಂಟ್ರೋಲ್ ಗಳನ್ನು ಅಳವಡಿಸಲಾಗಿದೆಯೇ ಎಂಬುದನ್ನು ತಿಳಿದು ಕೊಳ್ಳಬೇಕು. ಈ ಫೀಚರ್ ಗಳು ವಾಹನಗಳು ಜಾರಿ ಬೀಳುವುದನ್ನು ತಪ್ಪಿಸುವುದರ ಜೊತೆಗೆ ಸಕಾಲಕ್ಕೆ ಬ್ರೇಕ್ ಹಾಕಲು ನೆರವಾಗಿ ಅಪಘಾತಗಳಾಗದಂತೆ ತಡೆಯಲು ಸಹಾಯ ಮಾಡುತ್ತವೆ.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಕಾರಿರಲಿ ಪ್ರಯಾಣಿಕರು ಸೀಟ್ ಬೆಲ್ಟ್ ಅನ್ನು ಧರಿಸುವುದು ಅತ್ಯಗತ್ಯ. ಇನ್ನು Fortuner ‌ಗೆ ಸಂಬಂಧಿಸಿದಂತೆ ಹೇಳುವುದಾದರೆ Toyota ಕಂಪನಿಯು ಈ ವರ್ಷದ ಆರಂಭದಲ್ಲಿ ಈ ಎಸ್‌ಯುವಿಯನ್ನು ಕೆಲವು ಕಾಸ್ಮೆಟಿಕ್ ಅಂಶ, ಹೆಚ್ಚುವರಿ ಫೀಚರ್ ಹಾಗೂ ಇಂಜಿನ್‌ನೊಂದಿಗೆ ಅಪ್‌ಡೇಟ್ ಮಾಡಿ ಬಿಡುಗಡೆಗೊಳಿಸಿತ್ತು.

ಈ ವೇಳೆ Fortuner ಎಸ್‌ಯು‌ವಿಯ ಹೊಸ Legender ಮಾದರಿಯನ್ನು ಬಿಡುಗಡೆಗೊಳಿಸಲಾಯಿತು. ಇನ್ನು ಹಳೆಯ ಮಾದರಿಯಲ್ಲಿದ್ದ 2.7 ಲೀಟರ್ ಪೆಟ್ರೋಲ್ ಹಾಗೂ 2.8 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. Fortuner ಎಸ್‌ಯು‌ವಿಯು ಈ ಎಂಜಿನ್ ಆಯ್ಕೆಗಳ ಮೂಲಕವೇ ಜನಪ್ರಿಯತೆಯನ್ನು ಪಡೆದಿದೆ.

ಸಮುದ್ರದ ಅಲೆ ಬಡಿದ ಕಾರಣಕ್ಕೆ ಮಗುಚಿ ಬಿದ್ದ ಭಾರೀ ಗಾತ್ರದ ಎಸ್‌ಯು‌ವಿ

ಈ ಎಂಜಿನ್ ಗಳೊಂದಿಗೆ 6 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ. Toyota ಎಸ್‌ಯು‌ವಿಯನ್ನು ರೇರ್ ವ್ಹೀಲ್ ಡ್ರೈವ್ ಅಥವಾ ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಆಯ್ಕೆ ಮಾಡಬಹುದು. ಅಪ್ ಡೇಟ್ ಮಾಡಲಾದ Toyota Fortuner ಎಸ್‌ಯು‌ವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 30.34 ಲಕ್ಷಗಳಿಂದ ರೂ. 38.30 ಲಕ್ಷಗಳಾಗಿದೆ. Toyota ಕಂಪನಿಯ ವಾಹನಗಳು ಬಲಿಷ್ಟತೆಗೆ ಹಾಗೂ ಸುರಕ್ಷತೆಗೆ ಹೆಸರು ವಾಸಿಯಾಗಿವೆ. ಒಂದು ವೇಳೆ ಬೇರೆ ಕಂಪನಿಯ ಸಣ್ಣ ಬಜೆಟ್ ಕಾರುಗಳು ಈ ರೀತಿ ಮಗುಚಿ ಬಿದ್ದಿದ್ದರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆಗಳಿದ್ದವು.

ಚಿತ್ರ ಕೃಪೆ: ಆಫ್ರೋಡ್ ಕ್ಲಬ್ ಪಾಕಿಸ್ತಾನ್

Most Read Articles

Kannada
English summary
Fortuner suv rolls over during drifting on beach video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X