ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್ ತಾಣದಲ್ಲಿ ಫ್ರೀಲಾನ್ಸ್ ಬರಹಗಾರರಿಗೆ ಸುವರ್ಣಾವಕಾಶ...

Written By:

ಬರವಣಿಗೆಯು ಕೆಲವರಿಗೆ ಅಂತರ್ಗತ ಕಲೆಯಾಗಿ ಅರಳಿರುತ್ತದೆ. ಕೆಲವೊಬ್ಬರು ಬರೆದು ಬರೆದೇ ಅಕ್ಷರಲೋಕದಲ್ಲಿ ತಮ್ಮದೊಂದು ಛಾಪನ್ನು ರೂಪಿಸಿಕೊಂಡಿರುತ್ತಾರೆ. ಕೆಲವರು ಬರವಣಿಗೆಯ ತುಡಿತ, ಕಲೆಗಾರಿಕೆ, ಪ್ರತಿಭೆ ಇದ್ದರೂ ಅವಕಾಶವಿಲ್ಲದೇ ಚಡಪಡಿಸುತ್ತಿರುತ್ತಾರೆ.

ಅಂಥ ಪ್ರತಿಭಾವಂತ ಹವ್ಯಾಸಿ, ಫ್ರೀಲಾನ್ಸ್ ಬರಹಗಾರರಿಗೆ ನಿಮ್ಮ ಡ್ರೈವ್ ಸ್ಪಾರ್ಕ್ ಕನ್ನಡ ವೆಬ್ ತಾಣವು ಅತ್ಯುತ್ತಮ ವೇದಿಕೆಯನ್ನು ಕಲ್ಪಿಸುತ್ತಿದೆ. ಹೀಗಾಗಿ ಆಟೋ ಮೊಬೈಲ್ ಜಗತ್ತಿನ ಸುದ್ದಿಸಮಾಚಾರಗಳನ್ನು, ಆಟೋ ಉದ್ಯಮದಲ್ಲಿನ ಆಗುಹೋಗುಗಳನ್ನು ವಿಶ್ವದಾದ್ಯಂತ ಪಸರಿಸಿರುವ ಲಕ್ಷಾಂತರ ಓದುಗರಿಗೆ ತಲುಪಿಸುವುದರ ಜೊತೆಗೆ, ದುಡಿತಕ್ಕೆ ತಕ್ಕ ಪ್ರತಿಫಲ ಪಡೆಯಲು ಕೂಡ ಇದು ಉತ್ತಮ ವೇದಿಕೆಯಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್ ತಾಣದಲ್ಲಿ ಫ್ರೀಲಾನ್ಸ್ ಬರಹಗಾರರಿಗೆ ಸುವರ್ಣಾವಕಾಶ...

ಈಗಾಗಲೇ ಹಲವಾರು ಹವ್ಯಾಸಿ/ವೃತ್ತಿನಿರತ ಪತ್ರಕರ್ತರು ನಮ್ಮ ತಂಡ ಸೇರಿಕೊಂಡಿದ್ದಾರೆ. ನಿಮ್ಮಲ್ಲಿಯೂ ಸುದ್ದಿಯ ಹಸಿವಿದ್ದರೆ, ಆ ಸುದ್ದಿಯನ್ನು ನೆಟ್ಟಿಗರಿಗೆ ತಲುಪಿಸುವ ಹುಮ್ಮಸ್ಸಿದ್ದರೆ ಕೂಡಲೆ ನಮ್ಮ www.lekhaka.com ವೇದಿಕೆಯ ಮೂಲಕ ನಮ್ಮ ತಂಡವನ್ನು ಸೇರಿಕೊಳ್ಳಿ.

ಸುಲಭ ಸುದ್ದಿ ಸಮಾಚಾರ

ನೀವು ಬರೆಯುವ ಆಟೋ ಮೊಬೈಲ್ ಸುದ್ದಿಯು ಓದುಗರು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತಿರಬೇಕು. ಜೊತೆಗೆ ಅರ್ಥಪೂರ್ಣ ವ್ಯಾಖ್ಯಾನಗಳೊಂದಿಗೆ 500ಕ್ಕಿಂತ ಹೆಚ್ಚು ಶಬ್ದಗಳೊಂದಿಗೆ ನಿಮ್ಮ ಲೇಖನಗಳು ಓದುಗರನ್ನು ಸೆಳೆಯುವಂತಿರಬೇಕು.

ನೀವು ಬರೆಯುವ ಲೇಖನಗಳ ಗುಣಮಟ್ಟದಲ್ಲಿ ಮಾತ್ರ ರಾಜೀ ಮಾತೇ ಇಲ್ಲ. ವ್ಯಾಕರಣ ದೋಷ ರಹಿತ, ತಪ್ಪು ಮಾಹಿತಿಗಳಿಲ್ಲದ, ಅನವಶ್ಯಕ ಮಾಹಿತಿ ತುರುಕಿರದ, ಓದುಗರನ್ನು ಸೆಳೆಯುವ, ಅವರಲ್ಲಿ ಉತ್ತಮ ಅಭಿರುಚಿ ಬೆಳೆಸುವ, ಈಗಾಗಲೆ ಪ್ರಕಟವಾಗಿಲ್ಲದ ತಾಜಾ ಸುದ್ದಿಗಳಿಗೆ ಮೊದಲ ಆದ್ಯತೆ.

ಮಾಡಬೇಕಾಗಿರುವುದೇನು? ನಿಬಂಧನೆಗಳೇನು?

* ನಿಮ್ಮಲ್ಲಿ ಅರ್ಹತೆಯಿದ್ದಲ್ಲಿ ಸರಳವಾದ ಮತ್ತು ಸಂಪೂರ್ಣ ಮಾಹಿತಿಗಳಿಂದ ಕೂಡಿದ ನಿಮ್ಮ ಬಯೋಡೇಟಾವನ್ನು ಸಿದ್ಧಪಡಿಸಿಕೊಳ್ಳಿ. ಬಯೋಡೇಟಾ ಇಂಗ್ಲಿಷ್ ನಲ್ಲಿ ಇರಲಿ. ಪತ್ರಕರ್ತರಿಗೆ ಮತ್ತು ಬರವಣಿಗೆಯ ಅನುಭವವಿರುವವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು.

* ಯುವ, ಪ್ರತಿಭಾವಂತ ಲೇಖಕರ ವೇದಿಕೆಯಾಗಿರುವ www.lekhaka.com ವೆಬ್ ತಾಣದಲ್ಲಿ ನೋಂದಾವಣಿ ಮಾಡಿಕೊಳ್ಳಿ. ಅನುಮೋದನೆಗೊಂಡರೆ, ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ.

* ಬರಹಗಳನ್ನು ಲೇಖಕ.ಕಾಂ ಮೂಲಕವೇ ನೀಡತಕ್ಕದ್ದು. ಉತ್ತಮವಾಗಿರುವ ಲೇಖನಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಂತಿಮ ತೀರ್ಮಾನ ಸಂಪಾದಕೀಯ ಮಂಡಳಿಯದ್ದು ಆಗಿರುತ್ತದೆ.

* ಲೇಖನಗಳನ್ನು ಯುನಿಕೋಡ್ ರೂಪದಲ್ಲಿ ಬರೆದಿರಬೇಕು. ಇತರ ಫಾಂಟ್ ಬಳಸಿ ಹಾಕಿರುವ (ಓದಲು ಕಷ್ಟವಾಗುವಂಥ) ಲೇಖನಗಳನ್ನು ತಿರಸ್ಕರಿಸಲಾಗುವುದು.

* ಕಾಪಿರೈಟ್ ಉಲ್ಲಂಘನೆಯಾಗಿರದ, ತಾವಾಗಿಯೇ ಖುದ್ದಾಗಿ ತೆಗೆದಿರುವ ಅಥವಾ ನಂಬಹರ್ಲ ಮೂಲದ ಫೋಟೋ ಮತ್ತು ಆಯಾ ಸುದ್ದಿಯನ್ನು ಹಿಡಿದಿಡುವ ವಿಡಿಯೋಗಳಿಗೆ ಕೂಡ ಪ್ರಾಧಾನ್ಯತೆ ನೀಡಲಾಗುವುದು.

Read more on off beat
English summary
Your Dream Job Awaits — Write About Cars And Bikes For DriveSpark.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark