ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

By Manoj Bk

ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಪಡೆಯುವ ಪ್ರಕ್ರಿಯೆಯಲ್ಲಿ ವಾಹನ ಸವಾರರು ಆರ್‌ಟಿಒ ನಿಯಮ ಹಾಗೂ ಷರತ್ತುಗಳ ಅನ್ವಯವೇ ವಾಹನ ಚಾಲನೆ ಮಾಡಬೇಕು. ಆರ್‌ಟಿಒದ ಎಲ್ಲಾ ನಿಯಮಗಳನ್ನು ಅನುಸರಿಸಿ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಚಾಲನಾ ಪರವಾನಗಿಯನ್ನು ನೀಡಲಾಗುತ್ತದೆ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಚಾಲನಾ ಪರೀಕ್ಷೆಯನ್ನು ನೀಡುವಾಗ ವಾಹನ ಸವಾರರು ಹಲವು ಮುನ್ನೆಚ್ಚರಿಕೆಗಳನ್ನು ತೆಗೆದು ಕೊಳ್ಳುತ್ತಿದ್ದರೂ ಒಂದು ಸಣ್ಣ ತಪ್ಪಿನಿಂದಾಗಿ, ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರಿಗೆ ಚಾಲನಾ ಪರವಾನಗಿ ಲಭ್ಯವಾಗುತ್ತಿಲ್ಲ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ. ಹಾಗಾದರೆ ಚಾಲನಾ ಪರೀಕ್ಷೆಯಲ್ಲಿ ವಾಹನ ಸವಾರರು ಅನುತ್ತೀರ್ಣರಾಗಲು ಕಾರಣವಾದ ತಪ್ಪು ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಇದೇ ಕಾರಣ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ದೇಶಾದ್ಯಂತವಿರುವ ಎಲ್ಲಾ ಆರ್‌ಟಿಒಗಳಲ್ಲಿ ಕೈಗೊಂಡ ಎಲ್ಲಾ ಚಾಲನಾ ಪರವಾನಗಿ ಪ್ರಕ್ರಿಯೆಯ ದಾಖಲೆಯನ್ನು ನಿರ್ವಹಿಸುತ್ತದೆ. ಈ ಚಾಲನಾ ಪರೀಕ್ಷಾ ವರದಿಯನ್ನು ಪರಿಶೀಲಿರುವ ವೇಳೆ ವಾಹನ ಸವಾರರು ಮಾಡುವ ಪ್ರಮುಖ ತಪ್ಪು ಇಲಾಖೆಯ ಗಮನಕ್ಕೆ ಬಂದಿದೆ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಈ ವರದಿ ಅನ್ವಯ ನಾಲ್ಕು ಚಕ್ರ ವಾಹನಗಳ ಪರೀಕ್ಷೆಯ ಸಂದರ್ಭದಲ್ಲಿ ಸುಮಾರು 31% ನಷ್ಟು ಜನರು ವಾಹನವನ್ನು ರಿವರ್ಸ್ ತೆಗೆಯುವಾಗ ತಪ್ಪು ಮಾಡುತ್ತಾರೆ ಎಂಬುದು ಕಂಡು ಬಂದಿದೆ. ಕಾರು ಚಾಲನೆ ಮಾಡುವವರು ಮುಂದಕ್ಕೆ ಚಲಿಸುವಾಗ ಬಲಕ್ಕೆ, ಎಡಕ್ಕೆ ಟರ್ನ್ ಮಾಡುತ್ತಾರೆ. ಆದರೆ ವಾಹನವನ್ನು ರಿವರ್ಸ್ ತೆಗೆಯುವಾಗ ತಪ್ಪು ಮಾಡುತ್ತಾರೆ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಹೀಗೆ ಕಾರ್ ಅನ್ನು ರಿವರ್ಸ್ ತೆಗೆಯುವಾಗ ಸುಮಾರು 31% ನಷ್ಟು ಜನರು ತಪ್ಪು ಮಾಡುತ್ತಿದ್ದಾರೆ ಎಂಬುದು ಕೇಂದ್ರ ಸಾರಿಗೆ ಇಲಾಖೆ ಪರಿಶೀಲಿಸಿದ ಅಂಕಿ ಅಂಶಗಳಿಂದ ಕಂಡು ಬಂದಿದೆ. ಈ ಕಾರಣದಿಂದಾಗಿ ಅವರು ಮೊದಲ ಯತ್ನದಲ್ಲಿಯೇ ಚಾಲನಾ ಪರವಾನಗಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಪರವಾನಗಿ ಪಡೆಯಲು 69% ಅಂಕಗಳು ಅಗತ್ಯ

ಚಾಲನಾ ಪರವಾನಗಿ ಪಡೆಯಲು ಅರ್ಜಿದಾರರು ಕನಿಷ್ಠ 69% ಅಂಕಗಳನ್ನು ಹೊಂದಿರಬೇಕು. ಆಗ ಮಾತ್ರ ಆತ ಮುಂದಿನ ಪರೀಕ್ಷೆಗೆ ಅರ್ಹತೆ ಪಡೆಯುತ್ತಾನೆ.ಅರ್ಜಿದಾರರು ಬಲದಿಂದ ಎಡಕ್ಕೆ, ಲೇನ್ ಡ್ರೈವಿಂಗ್, ಬ್ರೇಕ್ ಟೈಮಿಂಗ್, ಟರ್ನಿಂಗ್ ಸಿಗ್ನಲ್‌, ರಿವರ್ಸಿಂಗ್ ಇತ್ಯಾದಿ ಮೂಲ ಚಾಲನಾ ವಿಧಾನಗಳ ಬಗ್ಗೆ ತಿಳಿದಿರಬೇಕು.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯಲ್ಲಿ ಬದಲಾವಣೆಗಳು

ಕೇಂದ್ರ ಸಾರಿಗೆ ಇಲಾಖೆಯು 2021ರ ಜುಲೈ ತಿಂಗಳಿನಿಂದ ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಚಾಲನಾ ಪರವಾನಗಿ ಪಡೆಯಲು ಚಾಲನಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ವಾಹನಕ್ಕೆ ಸಂಬಂಧಿಸಿದ ಚಾಲನಾ ಪರವಾನಗಿ ಹಾಗೂ ಇತರ ದಾಖಲೆಗಳ ತಿದ್ದುಪಡಿ, ಬದಲಾವಣೆ ಹಾಗೂ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ಪಡೆಯುವಂತೆ ಮಾಡಲಾಗಿದೆ, ಇದರಿಂದ ಈಗ ಅರ್ಜಿದಾರರು ಮನೆಯಲ್ಲಿ ಕುಳಿತೇ ಈ ಎಲ್ಲಾ ಸೇವೆಗಳನ್ನು ಪಡೆಯಬಹುದು.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಪರವಾನಗಿ, ವಿಳಾಸ ಬದಲಾವಣೆ, ರಸ್ತೆ ತೆರಿಗೆ ಪಾವತಿ, ನವೀಕರಣ, ನಕಲಿ ಪರವಾನಗಿ, ಆರ್‌ಸಿ ಸೇರಿದಂತೆ 33 ಸೇವೆಗಳನ್ನು ಇಲಾಖೆಯು ಆನ್‌ಲೈನ್‌ ಮಾಡಿದೆ. ಆನ್‌ಲೈನ್ ವ್ಯವಸ್ಥೆಯ ನಂತರ, ಈಗ ವಾಹನ ಸವಾರರು ಚಾಲನಾ ಪರೀಕ್ಷೆ ಹಾಗೂ ಫಿಟ್‌ನೆಸ್ ಪ್ರಮಾಣ ಪತ್ರ ಪಡೆಯಲು ಮಾತ್ರ ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಆನ್‌ಲೈನ್‌ ಮೂಲಕ ಕಲಿಕಾ ಪರವಾನಗಿ

ಕಲಿಕಾ ಪರವಾನಗಿ ಪಡೆಯಲು ಈಗ ಆರ್‌ಟಿಒಗೆ ಹೋಗುವ ಅಗತ್ಯವಿಲ್ಲ. ಈಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದರ ಜೊತೆಗೆ ಆನ್‌ಲೈನ್ ಪರೀಕ್ಷೆಯನ್ನು ಮನೆಯಿಂದಲೇ ತೆಗೆದು ಕೊಳ್ಳಬಹುದು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಕಲಿಕಾ ಪರವಾನಗಿಯನ್ನು ಮನೆಗೆ ತಲುಪಿಸಲಾಗುತ್ತದೆ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಕಲಿಕಾ ಪರವಾನಗಿಗಾಗಿ ಆನ್‌ಲೈನ್ ಪರೀಕ್ಷೆಯಲ್ಲಿ 15 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇದರಲ್ಲಿ ಒಂಬತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ. ಕಲಿಕಾ ಪರವಾನಗಿ ಪಡೆದ ಒಂದು ತಿಂಗಳ ನಂತರ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ವೈದ್ಯಕೀಯ ಪ್ರಮಾಣಪತ್ರ

ಚಾಲನಾ ಪರವಾನಗಿಗಾಗಿ ವೈದ್ಯಕೀಯ ಪ್ರಮಾಣಪತ್ರವನ್ನು ಆನ್‌ಲೈನ್‌ ಮೂಲಕವೇ ನೀಡುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಆರಂಭಿಸಲಾಗಿದೆ. ಇದರಿಂದ ನಕಲಿ ಪ್ರಮಾಣಪತ್ರಗಳ ಹಾವಳಿಯನ್ನು ತಡೆಗಟ್ಟಬಹುದು.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಚಾಲನಾ ಪರವಾನಗಿಗಾಗಿ ಅಗತ್ಯವಿರುವ ವೈದ್ಯಕೀಯ ಪ್ರಮಾಣಪತ್ರಕ್ಕಾಗಿ ಆನ್‌ಲೈನ್ ಪ್ರಕ್ರಿಯೆಯನ್ನು ಉತ್ತರ ಪ್ರದೇಶದಲ್ಲಿ ಆರಂಭಿಸಲಾಗಿದೆ. ಈ ವೈದ್ಯಕೀಯ ಪ್ರಮಾಣಪತ್ರವನ್ನು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ನೀಡಲಾಗುವುದಿಲ್ಲ.

ಬಹುತೇಕ ಜನರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆಯದಂತೆ ಮಾಡುತ್ತಿದೆ ಈ ಒಂದು ಸಣ್ಣ ತಪ್ಪು

ಇದರಿಂದ ಅರ್ಜಿದಾರರು ವೈದ್ಯಕೀಯ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರತಿ ವೈದ್ಯಕೀಯ ಪ್ರಮಾಣಪತ್ರ ವಿತರಣೆಗೆ ವೈದ್ಯಕೀಯ ಅಧಿಕಾರಿ ಹತ್ತು ರೂಪಾಯಿ ಶುಲ್ಕ ವಿಧಿಸುತ್ತಾರೆ. ಇದಕ್ಕಾಗಿ ವೈದ್ಯಕೀಯ ಅಧಿಕಾರಿಗಳಿಗೆ ಆನ್‌ಲೈನ್ ಲಾಗಿನ್ ಐಡಿಗಳನ್ನು ಸಾರಥಿ ಪೋರ್ಟಲ್‌ನಲ್ಲಿ ನೀಡಲಾಗುತ್ತದೆ. ಅಧಿಕೃತ ವೈದ್ಯರ ಆನ್‌ಲೈನ್ ಪ್ರಮಾಣಪತ್ರಗಳ ಆಧಾರದ ಮೇಲೆ ಮಾತ್ರ ಚಾಲನಾ ಪರವಾನಗಿಯನ್ನು ನೀಡಲಾಗುವುದು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
From one mistake 31 percent applicants are not getting driving license details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X