ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಸಿನಿಮಾ, ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸೆಲೆಬ್ರಿಟಿಗಳಂತೆ ಹಲವು ಉದ್ಯಮಿಗಳು ಕೂಡ ಕಾರು ಕ್ರೇಜ್ ಹೊಂದಿದ್ದಾರೆ. ಉದ್ಯಮಿಗಳು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಆವರು ತಮ್ಮ ಮೆಚ್ಚಿನ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಜನಪ್ರಿಯ ಫ್ಯೂಷನ್ ಜಿಮ್ ಮಾಲೀಕ ಅಮಿತ್ ಸಿಂಗ್ ಜೂನ್ ನಲ್ಲಿ ಅವರು ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್600 ವಿತರಣೆಯನ್ನು ಪಡೆದುಕೊಂಡರು. ಇದೀಗ ಈ ಉದ್ಯಮಿ ಹೊಸ ಪೋರ್ಷೆ 718 ಜಿಟಿ4 ಕಾರನ್ನು ಖರೀದಿಸಿದ್ದಾರೆ. ಈ ಹೊಸ ಐಷಾರಾಮಿ ಸ್ಪೋರ್ಟ್ಸ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.63 ಕೋಟಿಯಾಗಿದೆ. ಜಿಟಿ4 ಸಾಮಾನ್ಯ 718 ಕೇಮನ್‌ನ ಹೆಚ್ಚು ಹಾರ್ಡ್‌ಕೋರ್ ಆವೃತ್ತಿಯಾಗಿದ್ದು, 718 ಸರಣಿಯ ಮೇಲ್ಭಾಗದಲ್ಲಿದೆ.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಈ ಜಿಟಿ4 4.0-ಲೀಟರ್, ಫ್ಲಾಟ್-ಆರು ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 414 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲ್ಲಾ ಪವರ್ ಅನ್ನು ಹಿಂದಿನ ವ್ಹೀಲ್ ಗಳಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ ಪಿಡಿಕೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮೂಲಕ ಕಳುಹಿಸಲಾಗುತ್ತದೆ

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಈ ಐಷಾರಾಮಿ ಸ್ಪೋರ್ಟ್ಸ್ ಕಾರು ಕೇವಲ 4.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು 304 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮಾದರಿಯಲ್ಲಿ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆಯೊಂದಿಗೆ ಸೀಟುಗಳನ್ನು ಪಡೆಯಬಹುದು ಅಥವಾ ನೀವು ಪೂರ್ಣ ಬಕೆಟ್ ಸೀಟುಗಳಿಗೆ ಅಪ್‌ಗ್ರೇಡ್ ಮಾಡಬಹುದು.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಇದು ಮಧ್ಯದಲ್ಲಿ ಟಾಕೋಮೀಟರ್‌ನೊಂದಿಗೆ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ ಮತ್ತು ಸ್ಟೀಯರಿಂಗ್ ವ್ಹೀಲ್ ಎಡಭಾಗದಲ್ಲಿ ಡ್ಯೂಪ್ಲಿಕೆಟ್ ಕೀ ಇದ್ದು ಚಾಲಕ ಎಂಜಿನ್ ಅನ್ನು ಸ್ಟಾರ್ಟ್ ಮಾಡಲು ತಿರುಗಬೇಕು. ಇದು ಲೇ ಮ್ಯಾನ್ಸ್‌ನ ಪೋರ್ಷೆ ರೇಸಿಂಗ್ ಕಾರುಗಳಿಂದ ಸ್ಫೂರ್ತಿ ಪಡೆದಿದೆ.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಇನ್ನು ಅಮಿತ್ ಸಿಂಗ್ ಅವರು ಸ್ಪೋರ್ಟ್ಸ್ ಕಾರುಗಳ ಅಭಿಮಾನಿಯಾಗಿದ್ದಾರೆ. ಅವರ ಬಳಿ ಹಲವಾರು ಐಷಾರಾಮಿ ಸ್ಪೋರ್ಟ್ಸ್ ಕಾರುಗಳಿವೆ. ಇವರು ಹೆಚ್ಚಾಗಿ ಸ್ಪೋರ್ಟ್ಸ್ ಎಸ್‍ಯುವಿ ಮಾದರಿಗಳನ್ನು ಇಷ್ಟಪಡುತ್ತಾರೆ. ಉದ್ಯಮಿ ಅಮಿತ್ ಸಿಂಗ್ ಅವರ ಬಳಿ ಇರುವ ಐಷಾರಾಮಿ ಕಾರುಗಳ ಮಾಹಿತಿ ಇಲ್ಲಿದೆ.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಪೋರ್ಷೆ 718 ಬಾಕ್ಸ್ಟರ್

ಅಮಿತ್ ಅವರು 718 ರ ಕನ್ವರ್ಟಿಬಲ್ ಆವೃತ್ತಿಯನ್ನು ಹೊಂದಿದ್ದು, ಇದನ್ನು ಬಾಕ್ಸ್ಟರ್ ಎಂದು ಕರೆಯಲಾಗುತ್ತದೆ. ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್ ಅನ್ನು ಕೆಂಪು ರೂಫ್ ಮ್ಯಾಟ್ ಕಪ್ಪು ಹೊದಿಕೆಯಲ್ಲಿ ಹೊಂದಿದೆ. ಇರು ಜನಪ್ರಿಯ ಪೋರ್ಷೆ ಕನ್ವರ್ಟಿಬಲ್ ಕಾರು ಆಗಿದೆ.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಮರ್ಸೀಡಿಸ್ ಮೇಬ್ಯಾಕ್ ಜಿಎಲ್‌ಎಸ್ 600

ಈ ಮೇಬ್ಯಾಕ್ ಜಿಎಲ್‌ಎಸ್ 600 ಖರೀದಿಸಬಹುದಾದ ಅತ್ಯಂತ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಯು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಪಡೆಯಲು ಆಯ್ಕೆ ಮಾಡಿದ ಕೆಲವೇ ಜನರಲ್ಲಿ ಅಮಿತ್ ಒಬ್ಬರು. ಈ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.43 ಕೋಟಿಯಾಗಿದೆ.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಈ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9 ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಲ್ಯಾಂಬೂರ್ಗಿನಿ ಉರುಸ್

ಲ್ಯಾಂಬೂರ್ಗಿನಿ ಉರುಸ್ ಎಂಬ ಎಸ್‍ಯುವಿಯ ಕಾರು ಹೊಂದಿದ್ದಾರೆ. ಈ ಸ್ಪೋರ್ಟ್ಸ್ ಎಸ್‍ಯುವಿಯು 4.0ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 641 ಬಿಹೆಚ್‍ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಲ್ಯಾಂಬೂರ್ಗಿನಿ ಉರುಸ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,3.15 ಕೋಟಿಯಾಗಿದೆ,

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಲ್ಯಾಂಬೂರ್ಗಿನಿ ಹುರಾಕಾನ್ ಸ್ಪೈಡರ್

ಅಮಿತ್ ಮತ್ತೊಂದು ಲ್ಯಾಂಬೂರ್ಗಿನಿ ಹುರಾಕಾನ್ ಸ್ಪೈಡರ್ ಕಾರನ್ನು ಹೊಂದಿದ್ದಾರೆ. ಇದು ಕನ್ವರ್ಟಿಬಲ್ ಆಗಿದೆ ಮತ್ತು 718 ಬಾಕ್ಸ್‌ಟರ್‌ನಂತೆಯೇ ಮೇಲಿನ ಕೆಂಪು ಬಣ್ಣವನ್ನು ಸಹ ಹೊಂದಿದೆ. ಈ ಕಾರು 610 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನ ಬೆಲೆಯು ರೂ.4 ಕೋಟಿಯಾಗಿದೆ.

ಮತ್ತೆ ಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ ಜೀಮ್ ಮಾಲೀಕ

ಫೆರಾರಿ 488 ಜಿಟಿಬಿ

ಈ ಐಷಾರಾಮಿ ಫೆರಾರಿ 488 ಜಿಟಿಬಿ ಕಾರು ಅಮಿತ್ ಹೊಂದಿರುವ ಅತ್ಯಂತ ದುಬಾರಿ ವಾಹನಗಳಲ್ಲಿ ಒಂದಾಗಿದೆ. ಭಾರತದಲ್ಲಿ ಇದನ್ನು ಮೊದಲು ಪ್ರಾರಂಭಿಸಿದಾಗ, ಇದರ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ.4.88 ಕೋಟಿ. ಅಮಿತ್ ರಾತ್ರಿಯ ಸಮಯದಲ್ಲಿ ನಗರದ ಸುತ್ತಲೂ ಫೆರಾರಿಯನ್ನು ಬಳಸುತ್ತಾರೆ. ಇದು 3.9-ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 660 ಬಿಹೆಚ್‍ಪಿ ಪವರ್ ಮತ್ತು 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Fusion gym owner amit singh buys porsche 718 cayman details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X