ಕುಖ್ಯಾತ ಗಾಂಗ್‌ಸ್ಟರ್‌ನ ಕಾರು ಕಲೆಕ್ಷನ್‌ಗೆ ಬೆಚ್ಚಿಬಿದ್ದ ಜನತೆ: ರಾಜು ಭಯ್ಯಾ ಬಳಿಯಿರುವ ಕಾರುಗಳು ಒಂದೋ ಎರಡೋ?

ಕುನ್ವಾರ್‌ ರಘುರಾಜ್‌ ಪ್ರತಾಪ್‌ ಸಿಂಗ್‌ ಅಥವಾ ರಾಜಾ ಭಯ್ಯಾ ಎಂದೇ ಹೆಸರುವಾಸಿಯಾಗಿದ್ದ ಗ್ಯಾಂಗ್‌ಸ್ಟರ್‌ ಹೆಸರು ಬಹುತೇಕರಿಗೆ ಗೊತ್ತಿರುತ್ತದೆ. ಸದ್ಯ ಅದೆಲ್ಲವನ್ನು ತೊರೆದು ಉತ್ತರ ಪ್ರದೇಶದ ರಾಜಕೀಯದಲ್ಲಿ ಸಕ್ರೀಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಈ ವ್ಯಕ್ತಿ ಕುಂದಾ ಕ್ಷೇತ್ರದ ಎಂಎಲ್‌ಎ ಆಗಿದ್ದಾರೆ ಎಂದರೆ ನೀವೆಲ್ಲಾ ನಂಬಲೇ ಬೇಕು.

೧೯೯೨ ರಿಂದಲೂ ರಾಜು ಭಯ್ಯಾ ಅಲಿಯಾಸ್‌ ಕುನ್ವಾರ್‌ ರಘುರಾಜ್‌ ಪ್ರತಾಪ್‌ ಸಿಂಗ್ ಕುಂದಾ ಕ್ಷೇತ್ರದ ಎಂಎಲ್‌ಎ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕ್ಷೇತ್ರದ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಇನ್ನು ಇವರ ಬಳಿ ಜನರಂತೆ ವಾಹನಕ್ಕೂ ಯಾವುದೇ ಬರಗಾಲವಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಟಾಪ್‌ ವಾಹನಗಳು ಇವರ ಕಲೆಕ್ಷನ್‌ನಲ್ಲಿ ಇದೆ. ಇಂದಿನ ಈ ಲೇಖನದಲ್ಲಿ ಇವರ ಕಾರು ಕಲೆಕ್ಷನ್‌ ಬಗ್ಗೆ ನೊಡೋಣ.

Gangster Raju Bhaiya Luxury Car Collection Range Rover To Land Cruiser

ಟೊಯೋಟಾ ಲ್ಯಾಂಡ್‌ ಕ್ರೂಸರ್‌: ಲಕ್ಷುರಿ ಕಾರುಗಳ ಬಗ್ಗೆ ಗೊತ್ತಿರುವವರು ಈ ಟೊಯೋಟಾ ಲ್ಯಾಂಡ್‌ ಕ್ರೂಸರ್‌ ಕಾರಿನ ಹೆಸರನ್ನು ಕೇಳಿಯೇ ಇರುತ್ತಾರೆ. ಇದು ಹಲವು ರಾಜಕಾರಣಿಗಳು, ನಟರು ಮತ್ತು ಇತರರು ಸೇರಿದಂತೆ ಹಲವರ ನೆಚ್ಚಿನ ಕಾರುಗಳಲ್ಲಿ ತನ್ನ ಸ್ಥಾನವನ್ನು ಭಧ್ರಪಡಿಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿದೆ.

ಜಪಾನ್‌ನಲ್ಲಿ, ನವೀಕರಣಗೊಂಡ ಟೊಯೊಟಾ ಲ್ಯಾಂಡ್ ಕ್ರೂಸರ್ 70 ಸೀರಿಸ್ ಪ್ರತ್ಯೇಕವಾಗಿ ಐದು-ಡೋರ್ ಎಸ್‍ಯುವಿಯಾಗಿ ನೀಡಲಾಗಿದೆ. ಲ್ಯಾಂಡ್ ಕ್ರೂಸರ್ 70 ಎಸ್‍ಯುವಿ ವಿನ್ಯಾಸದ ವಿಷಯದಲ್ಲಿ, ಹೊರಭಾಗವು ವಿಶಿಷ್ಟವಾದ ಸಿಲೂಯೆಟ್ ಅನ್ನು ನಿರ್ವಹಿಸುತ್ತದೆ. ಪ್ರಸ್ತುತ-ದಿನದ ನವೀಕರಣವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಮೂಲ ವಿನ್ಯಾಸವನ್ನು ಪ್ರತಿಬಿಂಬಿಸುವ ರೌಂಡ್ LED ಹೆಡ್‌ಲೈಟ್‌ಗಳು, ದೊಡ್ಡ ಇಂಡಿಕೇಟರ್ಸ್ ಮತ್ತು ಟೈಲ್‌ಲೈಟ್‌ಗಳಂತಹ ನವೀಕರಿಸಿದ ಸ್ಟೈಲಿಂಗ್ ಅಂಶಗಳನ್ನು ಒಳಗೊಂಡಿದೆ.

Gangster Raju Bhaiya Luxury Car Collection Range Rover To Land Cruiser

ಲ್ಯಾಂಡ್‌ ರೋವರ್ ಡಿಫೆಂಡರ್‌: ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0 ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸುಮಾರು 300 ಬಿ‌ಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 3.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 298 ಬಿಹೆಚ್‌ಪಿ ಪವರ್ ಹಾಗೂ 1500 ಮತ್ತು 2500 ಆರ್‌ಪಿಎಂ ನಡುವೆ 650 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ತೀವ್ರವಾದ ಆಫ್ ರೋಡಿಂಗ್ ಅಡ್ವೆಂಚರ್ ಗಳಿಗಾಗಿ ತ್ವರಿತವಾಗಿ ಭಾರತೀಯ ಮತ್ತು ವಿದೇಶಿ ಚಾಲಕರಲ್ಲಿ ಅಚ್ಚುಮೆಚ್ಚಿನಾಗಿದೆ. ಈ ವರ್ಷದ ಆರಂಭದಲ್ಲಿ, ಬ್ರಿಟಿಷ್ ಐಷಾರಾಮಿ ಕಾರು ತಯಾರಕರು ಮಾದರಿಗೆ ಹೊಸ ಎಂಜಿನ್ ಆಯ್ಕೆಗಳನ್ನು ಸೇರಿಸಿದರು ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ 110 ಈಗ ಐದು ಡೋರುಗಳು ಮತ್ತು 5+2 ಸೀಟ್ ಆಯ್ಕೆಯೊಂದಿಗೆ ಬರುತ್ತಿದೆ.

Gangster Raju Bhaiya Luxury Car Collection Range Rover To Land Cruiser

ಜೀಪ್‌ ರಾಂಗ್ಲರ್‌: ರಾಜಾ ಭಾಯ್‌ ಅವರ ಬಳಿ ಇರುವ ಮತ್ತೊಂದು ಹೆಸರುವಾಸಿ ಕಾರು ಯಾವುದೆಂದರೆ ಅದುವೇ, ಜೀಪ್‌ ರಾಂಗ್ಲರ್ ಎನ್ನುವ ಕಾರು. ಪಕ್ಕಾ ಆಫ್‌ರೋಡ್‌ ಕಾರಾಗಿರುವ ಇದರ ಬೆಲೆ ರೂ.55.15 ಲಕ್ಷಗಳಾದರೆ, ರುಬಿಕಾನ್ ರೂಪಾಂತರದ ಬೆಲೆಯು ರೂ.59.15 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ಜೀಪ್ ರಾಂಗ್ಲರ್ ಎಸ್‍ಯುವಿ 2.0-ಲೀಟರ್, ಫೋರ್ ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 268 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

Gangster Raju Bhaiya Luxury Car Collection Range Rover To Land Cruiser

ಲಾಂಡ್‌ರೋವರ್ ರೇಂಜ್‌ ರೋವರ್‌: ಉತ್ತರ ಪ್ರದೇಶದ ಈ ರಾಜು ಭಯ್ಯಾ ಬಳಿ ಇರುವ ಮತ್ತೊಂದು ಲಕ್ಷುರಿ ಕಾರು ಯಾವುದೆಂದರೆ ಅದುವೇ ಈ ಲಾಂಡ್‌ರೋವರ್ ರೇಂಜ್‌ ರೋವರ್. ೨೦೨೨ ರಲ್ಲಿ ಐದನೇ ಜನರೇಷನ್‌ ಈ ಗಾಡಿ ಲಾಂಚ್‌ ಆಗಿತ್ತು. ಅವರ ಬಳಿ ಇರುವ ನೆಚ್ಚಿನ ಕಾರುಗಳಲ್ಲಿ ಇದು ಮುಂಬಕ್ತಿಯಲ್ಲಿ ಇರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 8, 2024, 15:32 [IST]
English summary
Gangster raju bhaiya luxury car collection range rover to land cruiser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+