ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ಗತಿಮಾನ್ ಎಕ್ಸ್‌ಪ್ರೆಸ್ ರೈಲು ಒಂದು ವರ್ಷದ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದೆ ಎಂದು ವರದಿಯಾಗಿದೆ. ಈ ರೈಲು ದೇಶದ ಪ್ರಮುಖ ರೈಲುಗಳಲ್ಲಿ ಒಂದಾಗಿದೆ. ಜೊತೆಗೆ ಅತಿ ವೇಗದ ರೈಲು ಕೂಡ ಹೌದು.

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ಕರೋನಾ ವೈರಸ್ ಕಾರಣದಿಂದಾಗಿ ಕಳೆದ ವರ್ಷ ದೇಶಾದ್ಯಂತ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೆಲವು ರೈಲುಗಳ ಸಂಚಾರ ಇನ್ನೂ ಆರಂಭವಾಗಿಲ್ಲ. ಕರೋನಾ ಸಂಕಷ್ಟದ ನಡುವೆಯೂ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಗತಿಮಾನ್ ಎಕ್ಸ್‌ಪ್ರೆಸ್ ರೈಲಿನ ಸಂಚಾರನ್ನು ಪುನರಾರಂಭಿಸಿದೆ.

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ಗತಿಮಾನ್ ಎಕ್ಸ್‌ಪ್ರೆಸ್ ರೈಲು ಸೇವೆಯು ಇಂದಿನಿಂದ ಪುನರಾರಂಭವಾಗಲಿದ್ದು, ಜೂನ್ 30ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಇಲಾಖೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದರ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ದೇಶದ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಿಗೆ ಜನರನ್ನು ಆಕರ್ಷಿಸುವ ಸಲುವಾಗಿ ರೈಲ್ವೆ ಇಲಾಖೆಯು ಗತಿಮಾನ್ ರೈಲು ಸಂಚಾರವನ್ನು ಪುನರಾರಂಭಿಸಿದೆ. ಈ ಲೇಖನದಲ್ಲಿ ಗತಿಮಾನ್ ಎಕ್ಸ್ ಪ್ರೆಸ್ 12050 ಹಾಗೂ ಗತಿಮಾನ್ ಎಕ್ಸ್ ಪ್ರೆಸ್ 12049 ಹೆಸರಿನಲ್ಲಿ ಚಲಿಸುವ ರೈಲುಗಳ ಬಗೆಗಿನ ಮಾಹಿತಿಯನ್ನು ನೋಡೋಣ.

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ರೈಲು ಸಮಯಗಳು:

ಗತಿಮಾನ್ ರೈಲು ವಾರದಲ್ಲಿ ಆರು ದಿನ ಚಲಿಸುತ್ತದೆ. ಈ ರೈಲು ಹಜರತ್ ನಿಜಾಮುದ್ದೀನ್ (ಎನ್‌ ಝಡ್‌ಎಂ) ರೈಲ್ವೆ ನಿಲ್ದಾಣದಿಂದ ಝಾನ್ಸಿ ಜಂಕ್ಷನ್‌ವರೆಗೆ ಸಂಚರಿಸುತ್ತದೆ. ಈ ಮಾರ್ಗದ ಒಟ್ಟು ಉದ್ದ 403 ಕಿ.ಮೀಗಳಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ರೈಲು ಎರಡು ನಿಲ್ದಾಣಗಳ ನಡುವೆ ಆಗ್ರಾ, ಗ್ವಾಲಿಯರ್‌ಗಳು ಬರುತ್ತವೆ. ಈ ರೈಲು ಬೆಳಿಗ್ಗೆ 8.10 ಕ್ಕೆ ನಿಜಾಮುದ್ದೀನ್‌ನಿಂದ ಹೊರಟು ಬೆಳಿಗ್ಗೆ 09.50ಕ್ಕೆ ಆಗ್ರಾ, ಬೆಳಿಗ್ಗೆ 11.13ಕ್ಕೆ ಗ್ವಾಲಿಯರ್ ತಲುಪಿ ಕೊನೆಗೆ ಮಧ್ಯಾಹ್ನ 12.35ಕ್ಕೆ ಝಾನ್ಸಿ ನಿಲ್ದಾಣವನ್ನು ತಲುಪಲಿದೆ. ಗತಿಮಾನ್ ರೈಲು ನಾಲ್ಕೂವರೆ ಗಂಟೆಗಳಲ್ಲಿ 403 ಕಿ.ಮೀ ದೂರವನ್ನು ಸಂಚರಿಸುತ್ತದೆ.

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ರೈಲಿನ ವಿಶೇಷ ಲಕ್ಷಣಗಳು:

ಗತಿಮಾನ್ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದರಿಂದಾಗಿ ಈ ರೈಲು ದೇಶದ ಅತಿ ವೇಗದ ರೈಲುಗಳಲ್ಲಿ ಒಂದಾಗಿದೆ. ಈ ರೈಲುಕೆಲವು ಸ್ಥಳಗಳಲ್ಲಿ ಮಾತ್ರ 130 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ಆಗ್ರಾ-ಝಾನ್ಸಿ ಜಂಕ್ಷನ್ ಸ್ವಲ್ಪ ದುರ್ಬಲವಾಗಿರುವ ಕಾರಣಕ್ಕೆ ಗತಿಮಾನ್ ರೈಲು ಈ ಮಾರ್ಗದಲ್ಲಿ 130 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ರೈಲು ಹೆಚ್ಚು ಸುರಕ್ಷಿತವೆಂದು ಪ್ರಮಾಣೀಕರಿಸಲ್ಪಟ್ಟಿದೆ.

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ಈ ಪ್ರಮಾಣಪತ್ರವನ್ನು 2014ರ ಅಕ್ಟೋಬರ್‌ ತಿಂಗಳಿನಲ್ಲಿ ನೀಡಲಾಗಿದೆ. ಈ ಮೊದಲು ಈ ರೈಲು ಹಜರತ್ ನಿಜಾಮುದ್ದೀನ್‌ನಿಂದ ಆಗ್ರಾವರೆಗೆ ಮಾತ್ರ ಸಂಚರಿಸುತ್ತಿತ್ತು. 2018ರಲ್ಲಿ ಈ ಮಾರ್ಗವನ್ನು ಗ್ವಾಲಿಯರ್‌ವರೆಗೆ ವಿಸ್ತರಿಸಲಾಯಿತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮತ್ತೆ ಕಾರ್ಯಾಚರಣೆ ಆರಂಭಿಸಿದ ಗತಿಮಾನ್ ಎಕ್ಸ್‌ಪ್ರೆಸ್ ರೈಲು

ನಂತರದ ದಿನಗಳಲ್ಲಿ ಈ ಸೇವೆಯನ್ನು ಝಾನ್ಸಿವರೆಗೆ ವಿಸ್ತರಿಸಲಾಯಿತು. ಈ ರೈಲು ಹೆಚ್ಚು ಆರಾಮದಾಯಕ ಸೀಟುಗಳನ್ನು ಹೊಂದಿದ್ದು, ಮಹಿಳೆಯರಿಂದ ಸ್ವಾಗತ ನೀಡುವಂತಹ ವಿಶೇಷ ಫೀಚರ್'ಗಳನ್ನು ಹೊಂದಿದೆ. ಈಗ ಒಂದು ವರ್ಷದ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಿದೆ.

Most Read Articles

Kannada
English summary
Gatiman Express train operations restarted. Read in Kannada.
Story first published: Thursday, April 1, 2021, 21:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X