ರಸ್ತೆಯಲ್ಲಿ ಕಾಣಿಸಿಕೊಂಡ ಆಗರ್ಭ ಶ್ರೀಮಂತ ಗೌತಮ್ ಅದಾನಿರ BMW ಕಾರು: ಈಗೆಲ್ಲ ಇದ್ಯಾ, ಬೆಲೆ ಗೊತ್ತಾ?

ಗೌತಮ್ ಅದಾನಿ ದೇಶದ ಪ್ರಖ್ಯಾತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂಡೆನ್‌ಬರ್ಗ್ ವರದಿ ಬಳಿಕ, ಅವರು ಭಾರೀ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಬೇರೆ ಉದ್ಯಮಿಗಳಂತೆ ಅದಾನಿಯು ಸಾಕಷ್ಟು ಕಾರಿನ ಕ್ರೇಜ್ ಹೊಂದಿದ್ದು, ಇತ್ತೀಚೆಗೆ ಅವರ ಒಡೆತನದ 'ಬಿಎಂಡಬ್ಲ್ಯೂ 730 LD DPE ಸಿಗ್ನೇಚರ್' ಮುಂಬೈ ರಸ್ತೆಯಲ್ಲಿ ಕಾಣಿಸಿಕೊಂಡಿದೆ.

ಈ ವಿಡಿಯೋವನ್ನು 'CS 12 Vlogs' ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಳ್ಳಲಾಗಿದ್ದು, ಮುಂಬೈನ ಟ್ರಾಫಿಕ್ ಸಿಗ್ನಲ್‌ನಲ್ಲಿ ಭದ್ರತಾ ವಾಹನ ಕಪ್ಪು ಬಣ್ಣದ ಟೊಯೋಟಾ ಫಾರ್ಚುನರ್ ನೊಂದಿಗೆ ಬಿಎಂಡಬ್ಲ್ಯೂ 730 LD DPE ಸಿಗ್ನೇಚರ್ ಸೆಡಾನ್ ಹೋಗುತ್ತಿರುವುದನ್ನು ಕಾಣಬಹುದು. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾರಿನಲ್ಲಿ ಅದಾನಿ ಪ್ರಯಾಣಿಸುತ್ತಿರಲಿಲ್ಲ ಎಂಬುದು ಗೊತ್ತಾಗುತ್ತದೆ. ಅವರ ಆಪ್ತ ಸಿಬ್ಬಂದಿಯಷ್ಟೇ ತೆರಳುತ್ತಿದ್ದರು.

ರಸ್ತೆಯಲ್ಲಿ ಕಾಣಿಸಿಕೊಂಡ ಆಗರ್ಭ ಶ್ರೀಮಂತ ಗೌತಮ್ ಅದಾನಿರ BMW ಕಾರು: ಈಗೆಲ್ಲ ಇದ್ಯಾ.. ಬೆಲೆ ಕೇಳಿದ್ರೆ ಶಾಕ್ ಆಗುತ್ತೆ?

ಬಿಎಂಡಬ್ಲ್ಯೂ 730 LD DPE ಸಿಗ್ನೇಚರ್ ಹೊರಭಾಗದಲ್ಲಿ ಸ್ಪೋರ್ಟಿ ಲುಕ್ ಹೊಂದಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಜೊತೆಗೆ ಆಕರ್ಷಕ ಗ್ರಿಲ್, ಅಡಾಪ್ಟಿವ್ LED ಹೆಡ್‌ಲೈಟ್ಸ್ ಈ ಕಾರಿನ ವೈಭವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಒಳಭಾಗ ಕ್ಯಾಬಿನ್ ಡಿಸೈನ್ ಗೆ ಮನಸೋಲದವರೇ ಇಲ್ಲ ಎಂದು ಹೇಳಬಹುದು. ಆರಾಮದಾಯಕ ಸೀಟ್, ದೊಡ್ಡದಾದ ಸನ್‌ರೂಫ್, ಐಷಾರಾಮಿ ಕಾರುಗಳು ಹೊಂದಿರಲೇಬೇಕಾದ ವೈಶಿಷ್ಟ್ಯಗಳನ್ನೆಲ್ಲ ಪಡೆದುಕೊಂಡಿದೆ.

ಈ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 3.0 ಲೀಟರ್ 6 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 261.49 bhp ಗರಿಷ್ಠ ಪವರ್ ಹಾಗೂ 620 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 8 ಸ್ವೀಡ್ ಅಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದಿದೆ. 17.66 kmpl ಮೈಲೇಜ್ ನೀಡಲಿದ್ದು, ರೂ.1.42 ಕೋಟಿ ಬೆಲೆಯನ್ನು ಹೊಂದಿದೆ.

ಗೌತಮ್ ಅದಾನಿ ಇತ್ತೀಚೆಗೆ ಸರಿ ಸುಮಾರು ರೂ.4 ಕೋಟಿಯ 'ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ' ಕಾರನ್ನು ಖರೀದಿಸಿದ್ದರು. ಇದು, ಲಾಂಗ್ ವೀಲ್ ಬೇಸ್, ಏಳು ಆಸನ ವ್ಯವಸ್ಥೆಯನ್ನು ಹೊಂದಿದೆ. ಇದರ 3.0 ಲೀಟರ್ ಇನ್‌ಲೈನ್ 6 ಡೀಸೆಲ್ ಎಂಜಿನ್, 346 bhp ಪವರ್ ಹಾಗೂ 700 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದಿದೆ.

ಇದು ಐಷಾರಾಮಿ ಕಾರಾಗಿರುವುದರಿಂದ 11 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಸ್ಯಾಂಟೊರಿನಿ ಬ್ಲಾಕ್, ಫ್ಯೂಜಿ ವೈಟ್, ಸಿಲಿಕಾನ್ ಸಿಲ್ವರ್, ಕಾರ್ಪಾಥಿಯನ್ ಗ್ರೇ, ಪೋರ್ಟೋಫಿನೋ ಬ್ಲೂ, ಈಗರ್ ಗ್ರೇ, ಹಕುಬಾ ಸಿಲ್ವರ್, ಚಾರೆಂಟೆ ಗ್ರೇ ಬಣ್ಣಗಳು ಸೇರಿವೆ. ಪವರ್ ಅಡ್ಜಸ್ಟಬಲ್ ಎಕ್ಸ್ಟೀರಿಯರ್ ರೇರ್ ವ್ಯೂ ಮಿರರ್, ಫಾಗ್ ಲೈಟ್ಸ್, ಫ್ರಂಟ್, ರೇರ್ ಪವರ್ ವಿಂಡೋಸ್ ಜೊತೆಗೆ ಪವರ್ ಸ್ಟೀರಿಂಗ್ ನಂತಹ ವೈಶಿಷ್ಟ್ಯವನ್ನು ಪಡೆದುಕೊಂಡಿದೆ.

ಇದಿಷ್ಟೇ ಅಲ್ಲದೆ, ಗೌತಮ್ ಅದಾನಿ ಟೊಯೋಟಾ ವೆಲ್‌ಫೈರ್, ಆಡಿ ಕ್ಯೂ7, ಫೆರಾರಿ ಕ್ಯಾಲಿಫೋರ್ನಿಯಾ ಮತ್ತು ರೋಲ್ಸ್ ರಾಯ್ಸ್ ಘೋಸ್ಟ್‌ ನಂತಹ ದುಬಾರಿ ಹಾಗೂ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಜೊತೆಗೆ ವಿದೇಶಗಳಿಗೆ ಪ್ರಯಾಣ ಮಾಡಲು ಅತ್ಯಾಧುನಿಕ ಜೆಟ್ ವಿಮಾನವು ಅವರ ಬಳಿಯಿದೆ. ಸದ್ಯ, ಮುಂಬೈ ರಸ್ತೆಯಲ್ಲಿ ಕಾಣಿಸಿಕೊಂಡ ಬಿಎಂಡಬ್ಲ್ಯೂ 730 LD DPE ಸಿಗ್ನೇಚರ್ ಸೆಡಾನ್ ಎಲ್ಲರನ್ನು ಸೆಳೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.

Article Published On: Thursday, May 18, 2023, 10:30 [IST]
English summary
Gautam adani bmw signature spotted mumbai details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+