ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಹಲವು ದೇಶಗಳು ಚಂದ್ರಯಾನ ಯೋಜನೆಯನ್ನು ಹಮ್ಮಿ ಕೊಂಡಿವೆ. ಈಗ ಅಮೆರಿಕಾದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಜನರಲ್ ಮೋಟಾರ್ಸ್ ಶೀಘ್ರದಲ್ಲಿಯೇ ತನ್ನ ರೋವರ್ ಅನ್ನು ಚಂದ್ರನ ಮೇಲೆ ಇಳಿಸಲು ಮುಂದಾಗಿದೆ.

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಇತ್ತೀಚೆಗಷ್ಟೆ ಕಂಪನಿಯು ಪ್ರಮುಖ ರಕ್ಷಣಾ ವಾಹನ ತಯಾರಕ ಕಂಪನಿಯಾದ ಲಾಕ್ಹೀಡ್ ಮಾರ್ಟಿನ್ ಜೊತೆಗೂಡಿ ಮೂನ್ ಮೌಂಟೆಡ್ ಸೆಲ್ಫ್ ಡ್ರೈವ್ ಲೂನಾರ್ ರೋವರ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿತ್ತು. ಇದು ಕಂಪನಿಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ ಎಂದು ಜನರಲ್ ಮೋಟಾರ್ಸ್ ಹೇಳಿದೆ.

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಜನರಲ್ ಮೋಟಾರ್ಸ್ ಬುಧವಾರ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದೆ. ಕಂಪನಿಯು ರೋವರ್ ವಾಹನವನ್ನು ವಿನ್ಯಾಸಗೊಳಿಸುವುದರ ಬಗ್ಗೆ ಹಾಗೂಅಭಿವೃದ್ಧಿಪಡಿಸುವುದರ ಬಗ್ಗೆ ಮಾಹಿತಿ ನೀಡಿದೆ. ಈ ರೋವರ್ ಚಂದ್ರನ ಗಟ್ಟಿಯಾದ ಮೇಲ್ಮೈಯಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಜನರಲ್ ಮೋಟಾರ್ಸ್ ಹೇಳಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಈ ರೋವರ್ ಚಂದ್ರನ ಮೇಲೆ ಈ ಹಿಂದೆ ಚಲಿಸಿದ್ದ ಬೇರೆ ರೋವರ್‌ಗಳಿಗಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಈ ಹಿಂದೆ ಆರಂಭಿಸಲಾದ ಎಲ್ಲಾ ರೋವರ್‌ಗಳಿಗಿಂತ ಈ ರೋವರ್ ಹೆಚ್ಚು ದೂರ ಚಲಿಸಲು ಹಾಗೂ ಹೆಚ್ಚು ಸಮಯವನ್ನು ನಿಭಾಯಿಸಲು ಸಾಧ್ಯವಾಗಲಿದೆ.

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಜನರಲ್ ಮೋಟಾರ್ಸ್ ಮೂನ್ ರೋವರ್ ತಯಾರಿಸುವಲ್ಲಿ ಅನುಭವ ಹೊಂದಿದೆ. ಕಂಪನಿಯು ಈ ಹಿಂದೆ ಅಪೊಲೊ 15, 16 ಹಾಗೂ 17 ಗಳಿಗಾಗಿ ಮೂನ್ ರೋವರ್‌ಗಳನ್ನು ಸಿದ್ಧಪಡಿಸಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಈ ಎಲ್ಲಾ ರೋವರ್‌ಗಳು ಚಂದ್ರನ ಮೇಲೆ ಗರಿಷ್ಠ 7.6 ಕಿ.ಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದ್ದವು. ಈಗ ಕಂಪನಿಯು ಇದಕ್ಕಿಂತ ಹೆಚ್ಚಿನ ಸಾಮರ್ಥ್ಯದ ರೋವರ್‌ಗಳನ್ನು ತಯಾರಿಸುವತ್ತ ಗಮನ ಹರಿಸಿದೆ.

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಕಳೆದ ವರ್ಷ ಹೆಚ್ಚು ಸಾಮರ್ಥ್ಯದ ಮೂನ್ ರೋವರ್‌ಗಳ ಕುರಿತು ವಿಚಾರಗಳನ್ನು ಹಂಚಿಕೊಳ್ಳಲು ಕಂಪನಿಗಳನ್ನು ಆಹ್ವಾನಿಸಿತ್ತು. ನಾಸಾ ತನ್ನ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಅಂಗವಾಗಿ 2024ರಲ್ಲಿ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಕಳುಹಿಸಲು ನಿರ್ಧರಿಸಿದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ತನ್ನ ಯೋಜನೆಯನ್ನು ಸ್ಪಷ್ಟಪಡಿಸಿದ ಜನರಲ್ ಮೋಟಾರ್ಸ್ ಕಂಪನಿಯು, ನಾವು ಲಾಕ್ಹೀಡ್ ಮಾರ್ಟಿನ್ ಕಂಪನಿಯ ಆಳವಾದ ಬಾಹ್ಯಾಕಾಶ ಪರಿಣತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದೇವೆ.

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಅಮೆರಿಕಾದ ಗಗನಯಾತ್ರಿಗಳನ್ನು ಮತ್ತೊಮ್ಮೆ ಚಂದ್ರನ ಮೇಲೆ ಕಳುಹಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದೆ. ಹೆಚ್ಚಿನ ಡ್ರೈವ್ ಶ್ರೇಣಿಯನ್ನು ಹೊಂದಿರುವ ರೋವರ್‌ಗಳು ಗಗನಯಾತ್ರಿಗಳಿಗೆ ಮಾದರಿಗಳನ್ನು ಸಂಗ್ರಹಿಸಲು ನೆರವಾಗುತ್ತದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಚಂದ್ರನ ಮೇಲೆ ಕಾಲಿಡಲಿವೆ ಜನರಲ್ ಮೋಟಾರ್ಸ್ ಕಂಪನಿಯ ರೋವರ್‌ಗಳು

ಈ ರೋವರ್‌ಗಳು ಪರೀಕ್ಷಿಸುವ ಕಾರ್ಯಗಳಿಗೆ ಹೆಚ್ಚಿನ ಸಮಯವನ್ನು ನೀಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ಮೂನ್ ರೋವರ್‌ಗಳು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದ್ದು, ಅಪಾಯದ ಮುನ್ಸೂಚನೆ ಸಾಧನಗಳನ್ನು ಹೊಂದಿರುತ್ತವೆ ಎಂದು ಹೇಳಲಾಗಿದೆ.

Most Read Articles

Kannada
English summary
General Motors rovers to land on moon. Read in Kannada.
Story first published: Friday, May 28, 2021, 13:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X