ಹುಟ್ಟುಹಬ್ಬದ ಹೆಸರಿನಲ್ಲಿ ಕಾರಿನ ಮೇಲೆ ನಿಂತು ಪುಂಡರ ಹುಚ್ಚಾಟ: ಈ ಉಡುಗೊರೆಯನ್ನು ಊಹಿಸಿರಲಿಲ್ಲವೇನೋ?

ಉತ್ತರ ಪ್ರದೇಶದಲ್ಲಿ ನಡು ರಸ್ತೆಯಲ್ಲಿಯೇ ಯುವಕರು ಹುಚ್ಚಾಟ ನಡೆಸುವ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈಗ ಹುಟ್ಟುಹಬ್ಬದ ಹೆಸರಿನಲ್ಲಿ ಮೂವರು ಪುಂಡಾಟ ಮೆರೆದಿದ್ದು, ಕಡೆಗೆ ಪೊಲೀಸರ (police) ಅಥಿತಿಯಾಗಿರುವುದು ಘಟನೆ ಗಾಜಿಯಾಬಾದ್ (Ghaziabad) ನಗರದಲ್ಲಿ ವರದಿಯಾಗಿದೆ.

ಇಲ್ಲಿನ ರಾಜ್‌ನಗರದ ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ ಭಾನುವಾರ ರಾತ್ರಿ ಜನ್ಮದಿನದ ಸಂಭ್ರಮಾಚರಣೆ ವೇಳೆ, ಮೂವರು ಯುವಕರು ಮಹೀಂದ್ರಾ ಬೊಲೆರೊ (Mahindra Bolero) ಮೇಲೆ ನಿಂತುಕೊಂಡು ಹಣದ ನೋಟುಗಳನ್ನು ಎಸೆಯುತ್ತಿದ್ದಾರೆ. ಜೊತೆ ಪಟಾಕಿಯನ್ನು ಸಿಡಿಸುತ್ತಿದ್ದಾರೆ. ಆ ವಿಡಿಯೋವನ್ನು ಅಪಾರ್ಟ್ಮೆಂಟ್ ಮಾಲೀಕರ ಸಂಘ (apartment owners' association) ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದೆ. ಇದು, ಪೊಲೀಸರ ಗಮನಕ್ಕೆ ಬಂದಿದ್ದು, ಅವರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಹುಟ್ಟುಹಬ್ಬದ ಹೆಸರಿನಲ್ಲಿ ಕಾರಿನ ಮೇಲೆ ನಿಂತು ಪುಂಡರ ಹುಚ್ಚಾಟ: ಈ ಉಡುಗೊರೆಯನ್ನು ಊಹಿಸಿರಲಿಲ್ಲವೇನೋ?

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಂದಗ್ರಾಮ್ ಎಸಿಪಿ ರವಿಕುಮಾರ್ ಸಿಂಗ್ ಅವರು, 'ಕೆಲವರು ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂದರ್ಭದಲ್ಲಿ ರೀಲ್ ಮಾಡಿ, ಅವ್ಯಾಚ್ಯ ಪದ ಬಳಸಿ, ಗಲಾಟೆ ಮಾಡುತ್ತಿರುವುದನ್ನು ಆಧರಿಸಿ, ಮೂವರ ವಿರುದ್ಧ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿ, ಕ್ರಮ ಕೈಗೊಳ್ಳಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ' ಎಂದು ಹೇಳಿದ್ದಾರೆ.

ಸುಮಾರು 24 ಸೆಕೆಂಡ್‌ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಮೂವರು ಯುವಕರು ಕಾರಿನ ರೂಫ್ ಮೇಲೆ ನಿಂತು, ಪಟಾಕಿ ಸಿಡಿಸುವಾಗ ಅಪಾರ್ಟ್‌ಮೆಂಟ್‌ ಸಮುಚ್ಚಯದ ಇತರೆ ನಿವಾಸಿಗಳೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು. ಇದರೊಂದಿಗೆ ಫೋಟೋಗಳಿಗೆ ಪೋಸ್ ನೀಡುತ್ತಿದ್ದು, ಅದರಲೊಬ್ಬ ಹಣವನ್ನು ಗಾಳಿಗೆ ತೋರಿದ್ದಾನೆ. ಆ ಪುಂಡರು ಇದೆಲ್ಲ ಮಾಡುವಾಗ ಪೊಲೀಸ್ ವಾಹನವು ಸ್ಥಳದಲ್ಲಿರುವುದನ್ನು ಕಾಣಬಹುದು.

ಹುಟ್ಟುಹಬ್ಬದ ಹೆಸರಿನಲ್ಲಿ ಕಾರಿನ ಮೇಲೆ ನಿಂತು ಪುಂಡರ ಹುಚ್ಚಾಟ: ಈ ಉಡುಗೊರೆಯನ್ನು ಊಹಿಸಿರಲಿಲ್ಲವೇನೋ?

ಈ ವರ್ಷದ ಆರಂಭದಲ್ಲೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ರೈಫಲ್ ಹಿಡಿದುಕೊಂಡು ನಡುರಸ್ತೆಯಲ್ಲೇ ಯುವಕರ ಗುಂಪೊಂದು ಮದ್ಯಪಾನ ಮಾಡುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಗಾಜಿಯಾಬಾದ್‌ನ ಎಲಿವೇಟೆಡ್ ರಸ್ತೆಯಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿತ್ತು. ಇಂದಿರಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕೆಲವೇ ದಿನಗಳ ಹಿಂದೆ, ಚಲಿಸುತ್ತಿರುವ ಕಾರಿನಲ್ಲಿ ಪಟಾಕಿ ಸಿಡಿಸಿದ್ದಾರೆಂಬ ಆರೋಪದ ಮೇಲೆ ಅಪರಿಚಿತ ಯುವಕರ ವಿರುದ್ಧ ಹರಿಯಾಣದ ಗುರುಗ್ರಾಮ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲಿನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ ಒಳಗಿನಿಂದ ಪಟಾಕಿಗಳು ಸಿಡಿದಿವೆ. ಇದರ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು.

ಇವೆಲ್ಲ ಒಂದು ಕಡೆಯಾದರೆ, ಇತ್ತೀಚೆಗೆ ಚಲಿಸುತ್ತಿರುವ ಕಾರು ಅಥವಾ ಬೈಕ್ ಮೇಲೆ ಆಲಿಂಗಿಸಿಕೊಳ್ಳುವುದು, ಇಲ್ಲವೇ ಚುಂಬಿಸುವ ಪ್ರವೃತ್ತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೈದರಾಬಾದ್‌ ನಗರದ ರಸ್ತೆಯೊಂದರಲ್ಲಿ ರಾತ್ರಿವೇಳೆ ಚಲಿಸುತ್ತಿರುವ ಕಿಯಾ ಕಾರಿನ ಮೇಲೆ ಯುವಜೋಡಿ ಕುಳಿತುಕೊಂಡು, ಯಾವುದೇ ಅಳುಕಿಲ್ಲದೇ ಪರಸ್ಪರ ಚುಂಬಿಸಿದ್ದು, ಆ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕೋಶ ವ್ಯಕ್ತವಾಗಿತ್ತು.

ಉತ್ತರ ಪ್ರದೇಶದ ಹಾಪುರದಲ್ಲೂ ಯುವಜೋಡಿಗಳು, ಚಲಿಸುತ್ತಿರುವ ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯೊಬ್ಬರು, ಬೈಕ್ ಫ್ಯುಯೆಲ್ ಟ್ಯಾಂಕ್ ಮೇಲೆ ಕುಳಿತುಕೊಂಡು ಯುವಕನನ್ನು ತಬ್ಬಿಕೊಂಡಿದ್ದರು. ಆತ ಯಾವುದೇ ಭಯವಿಲ್ಲದೆ, ಬೈಕ್‌ ಓಡಿಸುತ್ತಿದ್ದನು. ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಿ, 8000 ರೂಪಾಯಿ ದಂಡ ಕಟ್ಟುವಂತೆ ಪೊಲೀಸರು ಸೂಚಿಸಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 30, 2023, 16:19 [IST]
English summary
Ghaziabad birthday party burst crackers throw currency notes arrested
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+