ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಕಾರಿನ ವಿಂಡೋಗಳ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಯುವಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವೈರಲ್ ಆದ ವೀಡಿಯೊ ಆಧಾರದ ಮೇಲೆ ಕಾರು ಚಾಲನೆ ಮಾಡುತ್ತಿದ್ದವರಿಗೆ ರೂ. 62,000 ದಂಡ ವಿಧಿಸಲಾಗಿದೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಉತ್ತರ ಪ್ರದೇಶದ ಗಾಜಿಯಾಬಾದ್ ನಗರ ಪೊಲೀಸರು ಭಾರೀ ಪ್ರಮಾಣದ ದಂಡ ವಿಧಿಸಿ ಸಾರ್ವಜನಿಕ ರಸ್ತೆಯಲ್ಲಿ ಮಸ್ತಿ ಮಾಡಿದ ಯುವಕರಿಗೆ ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ವಾಹನಗಳ ಮೂಲಕ ಸ್ಟಂಟ್ ಮಾಡುವುದು ಕಾನೂನು ಬಾಹಿರ. ಈ ಯುವಕರು ಕಾರಿನ ವಿಂಡೋ ಮೇಲೆ ಕುಳಿತು ಅಪಾಯಕಾರಿಯಾಗಿ ಪ್ರಯಾಣಿಸಿದ್ದಾರೆ. ಈ ದೃಶ್ಯ ಸ್ಥಳದಲ್ಲಿದ್ದವರಲ್ಲಿ ಭೀತಿಯನ್ನುಂಟು ಮಾಡಿದೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಕಾರಿನ ವಿಂಡೋ ಮೇಲೆ ಯುವಕರು ನೆನೆಯುತ್ತಾ ಸಾಗುತ್ತಿರುವುದನ್ನು ಕಾಣಬಹುದು. ಹೀಗೆ ಸಾರ್ವಜನಿಕ ರಸ್ತೆಯಲ್ಲಿ ಪ್ರಯಾಣಿಸುವುದು ವಾಹನಗಳ ಮೂಲಕ ಸ್ಟಂಟ್ ಮಾಡುವಷ್ಟೆ ಅಪಾಯಕಾರಿಯಾಗಿದೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಈ ರೀತಿಯ ಪ್ರಯಾಣವು ಅವರಿಗೆ ಮಾತ್ರವಲ್ಲದೆ ದಾರಿಯಲ್ಲಿ ಹಾದು ಹೋಗುವ ಇತರ ವಾಹನಗಳಿಗೂ ಅಪಾಯವನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕಾಗಿಯೇ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಯುವಕರಿಗೆ ದಂಡ ವಿಧಿಸಲಾಗಿದೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ವೀಡಿಯೊದಲ್ಲಿ ಕಾಣುವ ಪ್ರಕಾರ ಯುವಕರ ಗುಂಪು ಮೂರು ಕಾರುಗಳಲ್ಲಿ ಈ ರೀತಿ ಮಸ್ತಿ ಮಾಡುತ್ತಾ ಪ್ರಯಾಣಿಸಿದೆ. ಹೀಗೆ ಪ್ರಯಾಣಿಸಿದವರಲ್ಲಿ ಹೆಚ್ಚಿನವರು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಿಳಿದು ಬಂದಿದೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಇದರ ಜೊತೆಗೆ ಇವರಲ್ಲಿ ಕೆಲವರಿಗೆ ಚಾಲನಾ ಪರವಾನಗಿ ಕೂಡ ಇರಲಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಬೇರೆ ವಾಹನ ಸವಾರರು ಈ ರೀತಿಯ ಅಪಾಯಕಾರಿ ಚಾಲನೆಗೆ ಮುಂದಾಗಬಾರದು ಎಂಬ ಕಾರಣಕ್ಕೆ ಗಾಜಿಯಾಬಾದ್ ನಗರ ಪೊಲೀಸರು ಈ ಯುವಕರಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ್ದಾರೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಅಪಾಯಕಾರಿಯಾಗಿ ಚಲಿಸುವುದರ ಜೊತೆಗೆ ಈ ಯುವಕರು ಕಾರುಗಳಲ್ಲಿ ಸೈರನ್ ಅನ್ನು ಸಹ ಬಳಸಿದ್ದಾರೆ. ಈ ವೀಡಿಯೊದಲ್ಲಿ ಯುವಕರು ಪ್ರಯಾಣಿಸುತ್ತಿರುವಕಾರುಗಳಿಂದ ಸೈರನ್ ಶಬ್ದ ಬರುತ್ತಿರುವುದನ್ನು ಕೇಳಬಹುದು.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಆಂಬ್ಯುಲೆನ್ಸ್, ಪೊಲೀಸ್ ವಾಹನಗಳು ಹಾಗೂ ಅಗ್ನಿಶಾಮಕ ವಾಹನಗಳಂತಹ ತುರ್ತು ಸೇವೆ ನೀಡುವ ವಾಹನಗಳಲ್ಲಿ ಮಾತ್ರ ಸೈರನ್ ಬಳಸಬೇಕು ಎಂಬ ನಿಯಮಗಳಿವೆ. ಉನ್ನತ ಅಧಿಕಾರದಲ್ಲಿರುವವರೂ ಸಹ ಸೈರನ್ ಬಳಸುವಂತಿಲ್ಲ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಈ ಯುವಕರು ಮಸ್ತಿ ಮಾಡುತ್ತಾ ರಸ್ತೆಯಲ್ಲಿ ಸಾಗುವ ವೇಳೆ ಇತರ ವಾಹನ ಸವಾರರು ಮುಂದೆ ಸಾಗಲು ಪರದಾಡಿದ್ದಾರೆ. ಈ ಘಟನೆ ಕಳೆದ ಭಾನುವಾರ ನಡೆದಿದೆ. ಈ ಯುವಕರು ಪ್ರಯಾಣಿಸುತ್ತಿದ್ದ ಕಾರಿನ ಪಕ್ಕದಲ್ಲಿ ಹಾದು ಹೋದ ವಾಹನದಲ್ಲಿದ್ದವರು ಘಟನೆಯನ್ನು ರೆಕಾರ್ಡ್ ಮಾಡಿ ವೀಡಿಯೊವನ್ನು ಯೂಟ್ಯೂಬ್'ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಈ ವೀಡಿಯೊವನ್ನು ಹಲವಾರು ಜನರು ಶೇರ್ ಮಾಡಿದ್ದಾರೆ. ಈ ವೀಡಿಯೊ ಗಾಜಿಯಾಬಾದ್ ಪೊಲೀಸರ ಗಮನಕ್ಕೆ ಬಂದ ತಕ್ಷಣ ಯುವಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ವೈರಲ್ ಆದ ವೀಡಿಯೊಗಳ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ.

ಇತ್ತೀಚೆಗಷ್ಟೇ ರಾಯಲ್ ಎನ್ ಫೀಲ್ಡ್ ಬೈಕಿನಲ್ಲಿ ಚಲಿಸುತ್ತಿದ್ದ ಯುವ ದಂಪತಿಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವೀಡಿಯೊ ವೈರಲ್ ಆಗಿತ್ತು. ಈ ವೀಡಿಯೊ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದರು.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಇದರ ಜೊತೆಗೆ ವೈರಲ್ ವೀಡಿಯೊ ಆಧರಿಸಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು ಮಾಲೀಕರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದರು. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚುವ ಸಲುವಾಗಿ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿರುತ್ತದೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಕೆಲವೊಮ್ಮೆ ಈ ಸಿಸಿಟಿವಿಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ಕಾರಣಕ್ಕೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೂ ಯಾರೂ ಕೇಳುವುದಿಲ್ಲವೆಂಬ ಭಂಡ ಧೈರ್ಯದಿಂದ ಕೆಲವು ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಆದರೆ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಘಟನೆಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಾರೆ.

ಸುರಿಯುವ ಮಳೆಯಲ್ಲಿ ಅಪಾಯಕಾರಿಯಾಗಿ ಪ್ರಯಾಣಿಸಿದವರಿಗೆ ಬಿತ್ತು ಭಾರೀ ದಂಡ

ಇವು ವೈರಲ್ ಆಗಿ ಸಂಬಂಧಪಟ್ಟ ಪೊಲೀಸರನ್ನು ತಲುಪುತ್ತವೆ. ಇವುಗಳ ಆಧಾರದ ಮೇಲೆ ಪೊಲೀಸರು ವಾಹನ ಮಾಲೀಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಾರೆ. 2019ರಲ್ಲಿ ಜಾರಿಗೆ ಬಂದ ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಕುಡಿದು ವಾಹನ ಚಾಲನೆ ಮಾಡುವವರಿಗೆ ರೂ. 10,000 ಗಳ ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ರೂ. 1,000 ಗಳ ದಂಡ ವಿಧಿಸಲಾಗುತ್ತದೆ. ಈ ವೀಡಿಯೊದಲ್ಲಿ ಮೋಜು ಮಸ್ತಿ ಮಾಡುತ್ತಾ ಕಾರಿನಲ್ಲಿ ಪ್ರಯಾಣಿಸಿದವರಿಗೂ ಸಹ ಹೊಸ ಮೋಟಾರು ವಾಹನ ಕಾಯ್ದೆಯನ್ವಯವೇ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.

ಗಮನಿಸಿ: ಮೊದಲ ಐದು ಚಿತ್ರಗಳನ್ನು ಹೊರತು ಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Ghaziabad police imposes rs 62000 fine on youths for driving dangerously in rain video details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X