ನೀರಲ್ಲೂ ತೇಲುವ ಸರ್ವತೋಮುಖ ಶಕ್ತಿಯ ರಕ್ಷಣಾ ವಾಹನ
ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ. ಪರಿಸರ ನಾಶದಿಂದಲೇ ಪ್ರಕೃತಿ ವಿಕೋಪವುಂಟಾಗುತ್ತದೆ.
ಭೂಮಿಯ ಅಸಮತೋಲನದಿಂದಾಗಿ ಪ್ರಕೃತಿ ವಿಕೋಪ ಉಂಟಾಗುತ್ತದೆ. ಹಾಗಾಗಿ ಪರಿಸರ ವಿಕೋಪ ಹಾಗೂ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಪೂರಕವಾದ ಪರಿಕರಗಳನ್ನು ಕಂಡುಹಿಡಿಯಬೇಕಾಗಿದೆ.
ಈ ನಿಟ್ಟಿನಲ್ಲಿ ರಕ್ಷಣಾ ವಾಹನಗಳು ಅತ್ಯಾಧುನಿಕ ತಂತ್ರಗಾರಿಕೆಗಳನ್ನು ಒಳಗೊಂಡಿರಬೇಕಾಗಿರುವುದು ಅತಿ ಅಗತ್ಯವಾಗಿದೆ. ಯಾವುದೇ ಒಂದು ಪ್ರದೇಶದಲ್ಲಿ ಮಣ್ಣು ಕುಸಿತ ಅಥವಾ ಬಿರುಗಾಳಿ ಉಂಟಾದ್ದಲ್ಲಿ ಅಲ್ಲವೆ ನೆರೆ ಹಾವಳಿಯಾದ್ದಲ್ಲಿ ರಕ್ಷಣಾ ವಾಹನಗಳ ಕೆಲಸವು ಹೆಚ್ಚುತ್ತವೆ.
ನಮ್ಮ ದೇಶವು ಇಂತಹ ರಕ್ಷಣಾ ವಾಹನಗಳ ಕೊರತೆ ಎದುರಿಸುತ್ತಿರಬಹುದು. ಆದರೆ ಎಲ್ಲ ರೀತಿಯ ಪ್ರಕೃತಿ ವಿಕೋಪಗಳನ್ನು ಎದುರಿಸಲು ರೊಮನಿಯಾದಲ್ಲೊಂದು ಟ್ರಕ್ ಸಿದ್ಧಗೊಂಡಿದೆ. ಇದು ನೆರೆ ಹಾವಳಿ ಸೇರಿದಂತೆ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಮರ್ಥವಾಗಿ ಕಾರ್ಯಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದೇ ಇದರ ವಿಶೇಷತೆಯಾಗಿದೆ.

ಘೇ-ಒ ಮೋಟಾರ್ಸ್
ಘೇ-ಒ ಮೋಟಾರ್ಸ್‌ನಿಂದ (Ghe-O Motors) ತಯಾರುಗೊಂಡಿರುವ ನೂತನ ರಕ್ಷಣಾ ವಾಹನ ಘೇ-ಒ ರೆಸ್ಕ್ಯೂ ಆಗಿದೆ. ಇದು ಎಲ್ಲ ಭೂಪ್ರದೇಶ ಹಾಗೂ ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿದೆ.

ಟ್ರಕ್ ತಲಹದಿಯಲ್ಲಿ ರೆಸ್ಕ್ಯೂ ರಕ್ಷಣಾ ವಾಹನವನ್ನು ತಯಾರಿಸಲಾಗಿದೆ. ಹಾಗೆಯೇ ಪ್ರಕೃತಿ ವಿಕೋಪವನ್ನು ಎದುರಿಸಬಲ್ಲ ವಿನ್ಯಾಸವನ್ನು ಕಲ್ಪಿಸಿಕೊಡಲಾಗಿದೆ.

ರೆಸ್ಕ್ಯೂ ರಕ್ಷಣಾ ವಾಹನ 5.2 ಮೀಟರ್ ಉದ್ದ, 2.7 ಮೀಟರ್ ಅಗಲ, 2.39 ಮೀಟರ್ ಎತ್ತರ ಹೊಂದಿದ್ದು, 3.2 ಟನ್ ಭಾರವನ್ನು ಹೊಂದಿದೆ.

ಇದರ ನೇರ ದಿಟ್ಟವಾದ ವಿನ್ಯಾಸವು ಇತರ ರಕ್ಷಣಾ ವಾಹನಗಳಿಗಿಂತ ವಿಭಿನ್ನವಾಗಿಸುತ್ತದೆ. ಹಾಗೆಯೇ ಚಾಲಕ, ಸಹ ಚಾಲಕ ಸೇರಿದಂತೆ 11 ಮಂದಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ 340ರಿಂದ 500 ಅಶ್ವಶಕ್ತಿ ಉತ್ಪಾದಿಸುವ ಪೆಟ್ರೋಲ್ ಹಾಗೂ 218ರಿಂದ 304 ಅಶ್ವಶಕ್ತಿ ಉತ್ಪಾದಿಸಲು ಸಾಮರ್ಥ್ಯವುಳ್ಳ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಜತೆಗೆ ಇದರ ವಿದ್ಯುತ್ ವ್ಯವಸ್ಥೆಗಳನ್ನು ಸಂರಕ್ಷಿಸಲು ಐಚ್ಛಿಕ ವಿದ್ಯುತ್ಕಾಂತೀಯ ಮತ್ತು ನೀರು ಸಂರಕ್ಷಣೆಗಳನ್ನು ಆಳವಡಿಸಲಾಗಿರುತ್ತದೆ.

ಹಾಗೊಂದು ಬೆಂಕಿ ಆಕಸ್ಮಿಕ ಸಂಭವಿಸಿದ್ದಲ್ಲಿ 620 ಲೀಟರ್ ನೀರು ತುಂಬಿಸಬಲ್ಲ ಇದರ ನೀರಿನ ಟ್ಯಾಂಕ್ ಸಹಕಾರಿ ನೆರವಾಗಲಿದೆ. ಹಾಗೆಯೇ ಇದರ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಚಕ್ರಗಳು ಎಲ್ಲ ಭೂಪ್ರದೇಶಕ್ಕೂ ಹೊಂದಿಕೆಯಾಗುವ ರೀತಿಯಲ್ಲಿ ರಚಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ನೆರವಿಗಾಗಿಯೂ ಇದನ್ನು ಬಳಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ಕ್ಲಿಕ್ಕಿಸಿ...


Click it and Unblock the Notifications