ಇದು ಬರಿ ಸಾದಾ ಸೈಕಲ್ ಅಲ್ಲ; ಕೊಡೆಯಾಗಿ ಮಡಚಬಹುದು

By Nagaraja

ಈ ಹಿಂದೆಯೇ ಹಲವು ವಿಧದ ವರ್ಣೀಯ ಮಡಚುವ ಸೈಕಲ್ ಬಗ್ಗೆ ವರದಿ ಮಾಡಿರುತ್ತೇವೆ. ಇವೆಲ್ಲವೂ ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಇಂದಿನ ಈ ಲೇಖನದಲ್ಲಿ ಮಗದೊಂದು ಆಕರ್ಷಕ ಸೈಕಲ್ ಪರಿಚಯಿಸಲಿದ್ದೇವೆ.

ಕಾರು ವಿಮಾ ಖರೀದಿಗೆ ಉಪಯುಕ್ತ ಸಲಹೆಗಳು

ಇದು ಬರಿ ಸಾದಾ ಸೈಕಲ್ ಅಲ್ಲ. ನಿಮಗೆ ಅನುಕೂಲವಾಗುವ ರೀತಿಯಲ್ಲಿ ಕೊಡೆಯ ತರಹನೇ ಮಡಚಿಕೊಂಡು ಎಲ್ಲಿಗೆ ಬೇಕಾದರೂ ಹೊತ್ತುಕೊಂಡು ಹೋಗಬಹುದಾಗಿದೆ. ಇಟಲಿಯ ವಿನ್ಯಾಸಗಾರ ಜಿಯಾನ್‌ಲುಕಾ ಸಾದಾ (Gianluca Sada) ಎಂಬವರು ಇದನ್ನು ತಯಾರಿಸಿದ್ದಾರೆ.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

ಸೈಕಲ್‌ಗಳು ಮೂಲೆಗುಂಪಾಗುತ್ತಿರುವ ಇಂದಿನ ಈ ಕಾಲಘಟ್ಟದಲ್ಲಿ ಈ ರೀತಿಯೊಂದು ವಿಶಿಷ್ಟ ವಿನ್ಯಾಸಿತ ಸೈಕಲ್ ನಿಜಕ್ಕೂ ವಾಹನ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

ಸಾಮಾನ್ಯವಾಗಿ ಮಡಚುವ ಸೈಕಲ್‌ಗಳನ್ನು ತನ್ನದೇ ಆದ ಇತಿಮಿತಿಗಳನ್ನು ಹೊಂದಿರುತ್ತದೆ. ಆದರೆ ಇವೆಲ್ಲಕ್ಕಿಂತಲೂ ಭಿನ್ನವಾಗಿರುವ ಸಾದಾ ಸೈಕಲ್, ಸಂಪೂರ್ಣ ಚಾಲನಾ ಅನುಭವ ಪ್ರದಾನ ಮಾಡುತ್ತದೆ.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

ಇದು ಪೂರ್ಣ ಗಾತ್ರದ 26 ಇಂಚುಗಳ ಹಬ್‌ಲೆಸ್ ಚಕ್ರಗಳನ್ನು ಪಡೆದುಕೊಂಡಿದ್ದು, ಸಾಮಾನ್ಯ ಸೈಕಲ್ ಯಾತ್ರೆಗಿಂತಲೂ ಹೆಚ್ಚಿನ ಆರಾಮದಾಯಕ ಪಯಣ ಖಾತ್ರಿಪಡಿಸುತ್ತದೆ.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

ಈ ಮೊದಲೇ ತಿಳಿಸಿರುವಂತೆಯೇ ಕೊಡೆಯ ರೂಪದಲ್ಲಿ ಮಡಚುವಾಗ, ಚಕ್ರಗಳನ್ನು ಬೇರ್ಪಡಿಸಬೇಕಾಗುತ್ತದೆ. ಅಂದರೆ ಪೂರ್ಣ ಗಾತ್ರದ ಚಕ್ರಗಳು ಇದರ ಭಾಗವಾಗಿರುವುದಿಲ್ಲ.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

ಆದರೂ ತಮ್ಮ ವಾರಂತ್ಯದ ಪಯಣಗಳಲ್ಲಿ ಇದನ್ನು ಆರಾಮದಾಯಕವಾಗಿ ಹೆಗಲ ಮೇಲೆ ಹೊತ್ಯೊಯ್ಯಬಹುದಾಗಿದೆ ಎಂದು ವಿನ್ಯಾಸಗಾರ ಅಭಿಪ್ರಾಯಪಡುತ್ತಾರೆ.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

2008ನೇ ಇಸವಿಯಿಂದಲೇ ಸಾದಾ ಸೈಕಲ್‌ನ ಅಭಿವೃದ್ಧಿಯಲ್ಲಿ ವಿನ್ಯಾಸಗಾರ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಅಂತೆಯೇ ಮೂರು ವರ್ಷಗಳ ಹಿಂದೆ ನಿರ್ಮಾಣ ಸಿದ್ಧ ಸೈಕಲ್‌ನ ಮೊದಲ ಮಾದರಿ ರೂಪಿಸುವಲ್ಲಿ ಯಶಸ್ವಿ ಕಂಡಿದ್ದರು.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

ಇದನ್ನು ಲಗ್ಗೇಜ್ ಬ್ಯಾಗ್ ಅಥವಾ ನಿಮ್ಮ ವಾಹನಗಳಲ್ಲಿ ಸುಲಭವಾಗಿ ಹೊತ್ತೊಯ್ಯಬಹುದಾಗಿದೆ. ಈ ನಿಟ್ಟಿನಲ್ಲಿ ಆಕರ್ಷಕ ವೀಡಿಯೋವನ್ನು ನಿಮ್ಮ ಜೊತೆ ಹಂಚಿಕೊಳ್ಳಲಾಗಿದೆ.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

ಮಡಚುವ ವೇಳೆ ಯಾವುದೇ ಗೊಂದಲಗಳು ಎದುರಾಗುವುದಿಲ್ಲ. ಹಾಗೆಯೇ ಸಣ್ಣ ರೂಪಕ್ಕೆ ಬಂದು ಬಿಡುತ್ತದೆ.

ಕೊಡೆಯ ರೀತಿಯಲ್ಲಿ ಮಡಚಬಹುದಾದ ಸೈಕಲ್

ವಿನ್ಯಾಸಗಾರರೇ ಹೇಳುವ ಪ್ರಕಾರ, ಇದು ಅತ್ಯಂತ ಚೊಕ್ಕದಾದ ಮಡಚುವ ಸೈಕಲ್ ಆಗಿದ್ದು, ಪ್ರಾಯೋಜಕರು ಸಿಕ್ಕಿದ್ದಲ್ಲಿ ನಿರ್ಮಾಣ ಸಿದ್ಧ ಸೈಕಲ್ ರೂಪಿಸುವುದಾಗಿ ತಿಳಿಸುತ್ತಾರೆ.

More from DriveSpark

Article Published On: Thursday, May 8, 2014, 12:30 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+