ಕೇವಲ 20 ಸಾವಿರ ಬೆಲೆ: ಚಾರ್ಜ್ ಮಾಡಿ ಓಡಿಸಬಹುದು: ಅಗ್ಗ ಬೆಲೆಯ ಆಧುನಿಕ ಇ-ಸೈಕಲ್!
ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ಬ್ರ್ಯಾಂಡ್ ಆಗಿರುವ ಇಮೊಟೊರಾಡ್, ಯುವ ಸವಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ನವೀನ ಸಸ್ಪೆನ್ಷನ್ - ಸಜ್ಜಿತ 'ಡೋಪ್ ಇ-ಸೈಕಲ್' ಅನ್ನು ಬಿಡುಗಡೆ ಮಾಡಿದೆ. ಸುರಕ್ಷತೆ, ಸೌಕರ್ಯದ ಮೇಲೆ ಕೇಂದ್ರೀಕರಿಸಿ ಮಕ್ಕಳಿಗಾಗಿ ವಿಶೇಷವಾಗಿ ಡೋಪ್ ಇ-ಸೈಕಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ರೂ. 19,999 ಬೆಲೆಯಲ್ಲಿ ಈ ಸೈಕಲ್ ಖರೀದಿಗೆ ಲಭ್ಯವಿದೆ. ಮಕ್ಕಳಿಗೆ ಅಗ್ಗದ ಬೆಲೆಯಲ್ಲಿ ಆಧುನಿಕ ಸೈಕಲ್ ಖರೀದಿಸಲು ಬಯಸುವ ಹೆಚ್ಚಿನ ಕುಟುಂಬಗಳಿಗೆ ಇದು ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿದೆ. ಡೋಪ್ ಇ-ಸೈಕಲ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೊಸ ಇ-ಸೈಕಲ್ 80 ಎಂಎಂ ಟ್ರಾವೆಲ್ ಸಸ್ಪೆನ್ಷನ್ ಫೋರ್ಕ್‌ನೊಂದಿಗೆ ವಿವಿಧ ಭೂಪ್ರದೇಶಗಳಲ್ಲಿ ಸುಗಮ ಸವಾರಿಯನ್ನು ಒದಗಿಸುತ್ತದೆ. ಇದರ ಸ್ವಯಂ ಕಟ್ - ಆಫ್ ಇ - ಬ್ರೇಕ್‌ಗಳು ತುರ್ತು ಸಂದರ್ಭಗಳಲ್ಲಿ ಸೈಕಲ್ ಸ್ವಯಂಚಾಲಿತವಾಗಿ ನಿಲ್ಲುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸುತ್ತವೆ. ಈ ಬ್ರೇಕ್‌ಗಳ ಮೂಲಕ ಯುವ ಸವಾರರು ಯಾವಾಗಲೂ ನಿಯಂತ್ರಣದಲ್ಲಿರುತ್ತಾರೆ ಎಂದು ಖಚಿತಪಡಿಸುತ್ತದೆ.

ಹೆಚ್ಚುವರಿಯಾಗಿ, ಇ-ಸೈಕಲ್‌ನ 36V 250W ರಿಯರ್ ಹಬ್ ಮೋಟಾರ್ ಸವಾರರಿಗೆ ಸಹಾಯ ಮಾಡಲು ಪರಿಪೂರ್ಣ ಪ್ರಮಾಣದ ಪವರ್ ಒದಗಿಸುತ್ತದೆ. ದೂರದ ಪ್ರಯಾಣ ಮತ್ತು ಸವಾಲಿನ ಇಳಿಜಾರುಗಳಲ್ಲಿ ಸುಲಭವಾಗಿ ಓಡಿಸಲು ಸಹಾಯ ಮಾಡುತ್ತದೆ. ಇದು ಕೇವಲ ಪರ್ಫಾಮೆನ್ಸ್ ಮಾತ್ರವಲ್ಲದೆ ಸೌಕರ್ಯಕ್ಕಾಗಿಯು ವಿನ್ಯಾಸಗೊಳಿಸಲಾಗಿದ್ದು, ಇದರ ಹೈ-ಟೆನ್ಸೈಲ್ ಸ್ಟೀಲ್ ಫ್ರೇಮ್ ಮತ್ತು 24 ಇಂಚಿನ ನೈಲಾನ್ ಟೈರ್‌ಗಳು ಸ್ಥಿರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ.
ಇದರ ಸಿಂಗಲ್ - ಸ್ಪೀಡ್ ಡ್ರೈವ್‌ಟ್ರೇನ್ ಸವಾರರಿಗೆ ಸರಳತೆಯನ್ನು ಖಚಿತಪಡಿಸುತ್ತದೆ. ಯಾವುದೇ ಸಂಕೀರ್ಣ ಗೇರ್‌ಗಳು ಅಥವಾ ಶಿಫ್ಟಿಂಗ್ ಇಲ್ಲದೆ ಪ್ರತಿ ಬಾರಿಯೂ ಸುಲಭ, ಮೋಜಿನ ಸವಾರಿ ನೀಡುತ್ತದೆ. ಹೊಸ ಇ-ಸೈಕಲ್‌ನಲ್ಲಿ ಅನಗತ್ಯ ತೂಕವನ್ನು ಸೇರಿಸದೆಯೇ ಹೆಚ್ಚಿನ ಪವರ್ ನೀಡಲು ಅಲ್ಯೂಮಿನಿಯಂ ಅಲಾಯ್ ರಿಮ್ ಗಳನ್ನು ಒದಗಿಸಲಾಗಿದೆ.

ವಿಶೇಷತೆಗಳು
ಯುವ ಸವಾರರಿಗಾಗಿ ನಿರ್ಮಾಣ ಮಾಡಲಾದ ಇ-ಸೈಕಲ್, ಹೈ ಟೆನ್ಸಿಲ್ ಸ್ಟೀಲ್ ಫ್ರೇಮ್‌ನೊಂದಿಗೆ ಬರುತ್ತದೆ. 24" X 2.1" ನೈಲಾನ್ ಟೈರ್‌ಗಳನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 80mm ಟ್ರಾವೆಲ್ ಫೋರ್ಕ್ ನೀಡಲಾಗಿದೆ. ಆಟೋ ಕಟ್-ಆಫ್‌ನೊಂದಿಗೆ ಅಲಾಯ್ V-ಬ್ರೇಕ್‌ಗಳು, ಡಬಲ್ ವಾಲ್ ಅಲ್ಯೂಮಿನಿಯಂ ಅಲಾಯ್ ರಿಮ್‌ಗಳನ್ನು ಒದಗಿಸಲಾಗಿದೆ.
ಸಿಂಗಲ್ ಸ್ಪೀಡ್ ಡ್ರೈವ್‌ಟ್ರೈನ್ ಒಳಗೊಂಡಿರುವ ಇ-ಸೈಕಲ್ ಇದಕ್ಕೆ ತಕ್ಕಂತೆ 600mm ಹ್ಯಾಂಡಲ್‌ಬಾರ್ ಹೊಂದಿದೆ. ಇಮೋಟೊರಾಡ್ 36V 250W ರಿಯರ್ ಹಬ್ ಮೋಟಾರ್ ಜೊತೆಗೆ 36V 5.2Ah ಲಿ-ಐಯಾನ್ ತೆಗೆದು ಹಾಕಬಹುದಾದ ಬ್ಯಾಟರಿಯೊಂದಿಗೆ ಬರುತ್ತದೆ. ಸವಾರರು ಎಲ್ಲಾ ಮಾಹಿತಿಯನ್ನು ಪಡೆಯಲು ಕ್ಲಸ್ಟರ್ C2 ಡಿಸ್ಪ್ಲೇ ಒದಗಿಸಲಾಗಿದೆ.
3 ಲೆವೆಲ್ಸ್ ಪೆಡಲ್ ಅಸಿಸ್ಟ್‌ನೊಂದಿಗೆ ಗರಿಷ್ಠ ವೇಗವು 17 ಕಿ.ಮೀ/ಗಂ ಇದೆ. ಒಮ್ಮೆ ಚಾರ್ಜ್ ಮಾಡಿದರೆ ಪೆಡಲ್ ಅಸಿಸ್ಟ್‌ನಲ್ಲಿ 22 ಕಿ.ಮೀ ವರೆಗೆ ಹಾಗೂ ಥ್ರೊಟಲ್‌ನಲ್ಲಿ 20 ಕಿಮೀ ವರೆಗೆ ಒಡಿಸಬಹುದು. ಹಾಗೆಯೇ ಚಾರ್ಜಿಂಗ್ ಸಮಯು 2 ರಿಂದ 3 ಗಂಟೆಗಳು ತೆಗೆದುಕೊಳ್ಳುತ್ತದೆ. ಗರಿಷ್ಠ 80 ಕೆ.ಜಿ ವರೆಗೆ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದು, ರೈಡರ್ ಎತ್ತರ ಕನಿಷ್ಠ 4.2 ಅಡಿ, ಗರಿಷ್ಠ 4.9 ಅಡಿ ಇರುವವರು ಓಡಿಸಬಹುದು.
ಫ್ರೇಮ್ ಮೇಲೆ 5 ವರ್ಷಗಳು, ಮೋಟಾರ್ ಶೆಲ್, ಹಬ್ ಮೋಟಾರ್, ಕಂಟ್ರೋಲರ್ ಮೇಲೆ 1 ವರ್ಷ, ಬ್ಯಾಟರಿ ಮೇಲೆ 2 ವರ್ಷ ಹಾಗೂ ಇತರ ಘಟಕಗಳು (ಲೈಟ್‌ಗಳು, ಚಾರ್ಜರ್) ಮೇಲೆ 6 ತಿಂಗಳ ವಾರೆಂಟಿ ಇದೆ. ಗುಣಮಟ್ಟ ಅಥವಾ ಸುರಕ್ಷತೆಯ ಮೇಲೆ ರಾಜಿ ಮಾಡಿಕೊಳ್ಳದ ಬೆಲೆಯಲ್ಲಿ, ಮಕ್ಕಳ ಬೆಳವಣಿಗೆಗೆ ಸಹಕರಿಸುವ ಸೈಕಲ್ ಆಗಿದೆ ಎಂದು ಕಂಪನಿ ಭರವಸೆ ನೀಡಿದೆ.
ಇಮೋಟೊರಾಡ್‌ನ ಸಿಇಒ ಕುನಾಲ್ ಗುಪ್ತಾ ಮಾತನಾಡಿ, "ಯುವ ಸವಾರರಿಗಾಗಿ ಇ-ಸೈಕಲ್ ರಚಿಸಲು ವಿಭಿನ್ನ ಮಟ್ಟದ ಗಮನ ಬೇಕು, ಇದನ್ನು ಗಮನದಲ್ಲಿಟ್ಟುಕೊಂಡು ಡೋಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ನಮ್ಮ ಎಲ್ಲಾ ಸೈಕಲ್‌ಗಳಂತೆಯೇ ಸುರಕ್ಷತೆ, ಸೌಕರ್ಯ ಮತ್ತು ವಿಶ್ವಾಸಾರ್ಹತೆಯ ಉನ್ನತ ಗುಣಮಟ್ಟವನ್ನು ನೀಡುತ್ತದೆ. ಪೋಷಕರಿಗೆ ಅವರ ಮಕ್ಕಳು ಸುರಕ್ಷಿತ ವಾಹನ ಸವಾರಿ ಮಾಡುತ್ತಿದ್ದಾರೆ ಎಂಬ ವಿಶ್ವಾಸವನ್ನು ನೀಡುತ್ತದೆ" ಎಂದು ಹೇಳಿದರು.


Click it and Unblock the Notifications








