ಬೈಕ್ ಓಡಿಸಲು ಹೋಗಿ ನದಿಗೆ ಬಿದ್ದ ಹೆಣ್ಮಗು: ಹುಡುಗರು ಟ್ರೋಲ್ ಮಾಡದೆ ಇನ್ನೇನು ಮಾಡ್ಯಾರು?
ಭಾರತದ ಯುವ ಜನತೆ ಸಾಮಾಜಿಕ ಜಾಲತಾಣಗಳಿಗೆ ದಾಸರಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪೋಸ್ಟ್‌ಗಳಿಗೆ ಅಧಿಕ ಲೈಕ್ಸ್ ಮತ್ತು ವ್ಯೂವ್‌ಗಳು ಬಂದು ಆ ಮೂಲಕವಾಗಿ ಬಹುಬೇಗ ವೈರಲ್ ಆಗಬೇಕು ಎಂಬುವುದು ಎಲ್ಲರ ಉದ್ದೇಶ. ಆದು ಅತಿರೇಕಕ್ಕೆ ಹೋಗುವುದನ್ನು ಸಹ ನಾವು ಕಂಡಿದ್ದೇವೆ.
ಇಲ್ಲೊಂದು ಕಡೆ ಯುವತಿಯೊಬ್ಬಳು ಬೈಕನ್ನು ನದಿಯಲಲ್ಲಿ ಓಡಿಸಲು ಹೋಗಿ ಕೊನೆಗೆ ನದಿಗೇ ಬಿದ್ದಿದ್ದು, ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಯುವತಿ ಜೊತೆ ಹಿಂಬದಿ ಸವಾರ ಸಹ ಇರುವುದನ್ನು ಕಾಣಬಹುದಾಗಿದೆ. ತಮಾಷೆ ಮಾಡಲು ಹೋಗಿ ಹೀಗಾಗಿದೆ ಎಂದು ತಿಳಿದು ಬಂದಿದೆ.

ವಿಡಿಯೋದಲ್ಲಿ ಕಾಣುವಂತೆ, ಯುವತಿ ಜಾವಾ 42 ಬಾಬ್ಬರ್ (Jawa 42 Bobber) ಬೈಕ್‌ನಲ್ಲಿ ಹಿಂಬದಿ ಸವಾರನನ್ನು ಕೂರಿಸಿಕೊಂಡು ನದಿಯನ್ನು ದಾಟಲು ಪ್ರಯತ್ನಿಸಿದ್ದಾಳೆ. ಆದರೆ ನೀರಿನ ಸೆಳೆತಕ್ಕೆ ಸಿಕ್ಕ ಯುವತಿಯು ಆಯಾ ತಪ್ಪಿ ನೀರಿಗೆ ಬೈಕ್ ಜೊತೆಗೆ ಬಿದ್ದಿದ್ದಾಳೆ. ಈ ವೇಳೆ ಹಿಂಬದಿ ಸವಾರ ಬೈಕ್‌ನಿಂದ ಜಿಗಿದು ಬೀಳುವುದನ್ನು ತಪ್ಪಿಸಿಕೊಂಡಿದ್ದಾನೆ. ಇನ್ನು ಯುವತಿ ಹೆಲ್ಮೆಟ್ ಧರಿಸದೇ ಇದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ನಮ್ಮಲ್ಲಿ ಹಲವರು ಜೀವದ ಬೆಲೆಯನ್ನು ಲೆಕ್ಕಿಸದೇ ಈ ರೀತಿಯ ಹುಚ್ಚಾಟಕ್ಕೆ ಮುಂದಾಗುತ್ತಾರೆ. ಇದಕ್ಕೆ ಸಂಭಂಧಿಸಿದ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು. ಹಲವು ಬಾರಿ ಈ ರೀತಿ ಮಾಡುವಾಗ ಆಗುವ ಅವಘಡಗಳಿಂದ ತಪ್ಪಿಸಿಕೊಂಡರೆ, ಕೆಲವು ಬಾರಿ ಈ ರೀತಿಯ ಹುಚ್ಚಾಟಕ್ಕೆ ತಮ್ಮ ಜೀವವನ್ನೇ ಬೆಲೆಯಾಗಿ ನೀಡಬೇಕಾಗುತ್ತದೆ.

ಇನ್ನು ಈ ಘಟನೆಗೆ ಸಂಭಂಧಿಸಿದಂತೆ ವಿಡಿಯೋದಲ್ಲಿ ಇರುವ ಬೈಕ್ ಜಾವಾ 42 ಬಾಬ್ಬರ್ ಎಂದು ತಿಳಿದು ಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿರುವ ಜಾವಾ 42 ಬಾಬರ್ ಲಭ್ಯವಿದ್ದು, ಇದರ ಬಗ್ಗೆ ನೋಡುವುದಾದರೆ, ಈ ಬೈಕಿನಲ್ಲಿ ವಿಶೇಷವಾದ ಬಾಟಲ್ ಗ್ರೀನ್ ಪೇಂಟ್, ಗೋಲ್ಡನ್ ಸ್ಟ್ರೈಪ್ಸ್, ಕಸ್ಟಮೈಸ್ ಮಾಡಿದ ಸೀಟ್ ಮತ್ತು ಹಳದಿ ಬಣ್ಣದ ಹೆಡ್‌ಲೈಟ್ ಅನ್ನು ಒಳಗೊಂಡಿವೆ.
ಜಾವಾ 42 ಬಾಬರ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 334cc, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 29.49 bhp ಪವರ್ ಮತ್ತು 32.7Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜಾವಾ 42 ಬಾಬರ್ ವಿನ್ಯಾಸವು ಸಾಮಾನ್ಯ 42 ಮತ್ತು ಪೆರಾಕ್ ಬಾಬರ್ ಎರಡರ ಅಂಶಗಳನ್ನು ತನ್ನದೇ ಆದ ಕೆಲವು ವಿಶಿಷ್ಟ ವಿನ್ಯಾಸದ ಅಂಶಗಳೊಂದಿಗೆ ಮಿಶ್ರಣ ಮಾಡುತ್ತದೆ. 42 ಬಾಬರ್ ತನ್ನ ಹೆಸರಿಗೆ ಅನುಗುಣವಾಗಿರುತ್ತದೆ ಮತ್ತು ಸರಿಹೊಂದಿಸಬಹುದಾದ ಒಂದೇ ಸೀಟ್ ಸೆಟಪ್‌ನೊಂದಿಗೆ ಬಂದಿದೆ. ಈ ಜಾವಾ 42 ಬಾಬರ್ ಬೈಕಿನಲ್ಲಿ ಸಂಪೂರ್ಣ ಎಲ್ಇಡಿ ಲೈಟಿಂಗ್ ಸೆಟಪ್ ಅನ್ನು ಹೊಂದಿದೆ. ಜೊತೆ ಎಲ್ಸಿಡಿ ಕ್ಲಸ್ಟರ್ ಅನ್ನು ಹೊಂದಿದೆ.
ಈ ಜಾವಾ 42 ಬಾಬರ್ ಮುಂಭಾಗದ ಫೆಂಡರ್ ಅನ್ನು ಸಹ ಹೊಂದಿದೆ, ಈ ಹೊಸ ಬೈಕಿನಲ್ಲಿ ಫ್ಯೂಯಲ್ ಟ್ಯಾಂಕ್, ಡ್ರಾಪ್-ಡೌನ್, ಬಾರ್-ಎಂಡ್, ರಿಯರ್ ವ್ಯೂ ಮಿರರ್‌ಗಳೊಂದಿಗೆ ಹೊಸ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಈ ಹೊಸ 42 ಬಾಬರ್ ತನ್ನ ಹೆಸರನ್ನು 42 ನಿಯೋ-ರೆಟ್ರೋ ರೋಡ್‌ಸ್ಟರ್‌ನಿಂದ ಎರವಲು ಪಡೆದಿದೆ. ಇದರ ಎಂಜಿನ್ ಅನ್ನು ಜಾವಾದ ಇತರ ಬಾಬರ್ ಕೊಡುಗೆ ಪೆರಾಕ್ ಬೈಕಿನಿಂದ ಎರವಲು ಪಡೆದುಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications