Just In
- 11 min ago
ಓಲಾ S1 ಮತ್ತು S1 Pro ನಡುವೆ ಗೊಂದಲವೇ?: ಬೆಲೆ, ಡಿಸೈನ್, ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ
- 14 min ago
24.90 ಕಿ.ಮೀ ಮೈಲೇಜ್ ನೀಡುವ ಆಲ್ಟೋ ಕೆ10 ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
- 1 hr ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 2 hrs ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
Don't Miss!
- Technology
ವಿಶ್ವ ಛಾಯಾಗ್ರಹಣ ದಿನ: ಈ ಸ್ಮಾರ್ಟ್ಫೋನ್ಗಳು ಫೋಟೋಗ್ರಫಿಗೆ ಸೂಕ್ತ ಎನಿಸಲಿವೆ!
- Sports
ಯುಎಇ ಟಿ20 ಲೀಗ್: 14 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ದುಬೈ ಕ್ಯಾಪಿಟಲ್ಸ್
- Lifestyle
ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಕೆಲಸಕ್ಕಂತೂ ಅಲ್ಪ ವಿರಾಮ ನೀಡಲೇಬೇಕು..!
- Movies
ಹೊಸ ಬಿಗ್ಬಾಸ್ಗೆ ನಾಗಾರ್ಜುನ ಪಡೆಯುತ್ತಿರುವ ಸಂಭಾವನೆ ಇಷ್ಟೋಂದಾ?
- Travel
ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ
- News
ಕೃಷ್ಣ ಜನ್ಮಾಷ್ಟಮಿ: ಮುಂಬೈನಲ್ಲಿ ವಿಶ್ವ ದಾಖಲೆ ಬರೆದ ಅತಿ ಎತ್ತರದ ಮಾನವ ಪಿರಮಿಡ್
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
ಸಿಗ್ನಲ್‌ನಲ್ಲಿ ಮಗುವನ್ನು ಬೀಳಿಸಿಕೊಂಡು ಹಾಗೇಹೋದ ಚಾಲಕ: ಮಾನವೀಯತೆ ಮೆರೆದ ಸ್ಥಳೀಯರು
ಟ್ರಾಫಿಕ್ ಸಿಗ್ನಲ್‌ನಲ್ಲಿ ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆಳಗೆ ಬಿದ್ದಿರುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಕಂಡುಬರುವಂತೆ ಅಕ್ಕ-ಪಕ್ಕ ಬರುತ್ತಿದ್ದ ಕಾರಿನ ಚಾಲಕರು ಕೂಡಲೇ ಎಚ್ಚೆತ್ತು ಬಾಲಕಿಯನ್ನು ಅಪಾಯದಿಂದ ರಕ್ಷಿಸಿದ್ದಾರೆ.

ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರಿದಿ ಪ್ರಕಾರ, ಶಾಂಘೈನ ದಕ್ಷಿಣಕ್ಕೆ ಪೂರ್ವ ಚೀನಾದ ನಗರವಾದ ನಿಂಗ್ಬೋದಲ್ಲಿನ ಟ್ರಾಫಿಕ್ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿದೆ. ಹಿಂದಿನ ಸೀಟಿನ ಕಿಟಕಿಯಿಂದ ಹೊರಗೆ ಬಂದಿದ್ದ ಬಾಲಕಿ, ಕಾರು ಚಲಿಸಲು ಪ್ರಾರಂಭಿಸಿದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿರುವುದನ್ನು ವೀಡಿಯೊ ತೋರಿಸುತ್ತದೆ.

ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಎಸ್‌ಸಿಎಂಪಿ ತಿಳಿಸಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಅಲ್ಲಿನ ಟ್ರಾಫಿಕ್ ಜಂಕ್ಷನ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಷ್ಯಗಳು ಸಖತ್ ವೈರಲ್ ಆಗಿವೆ.
Heights of Careless parents.#China - Child falls out of #car window in Ningbo, China. pic.twitter.com/rowxkQL62P
— Siraj Noorani (sirajnoorani) August 3, 2022
ಸಂಕ್ಷಿಪ್ತ ವಿವರಕ್ಕೆ ಹೋಗುವುದಾದರೆ ಕಾರು ರೆಡ್ ಸಿಗ್ನಲ್ ಬಿದ್ದ ಕಾರಣ ಎಲ್ಲರಂತೆ ಗ್ರೀನ್ ಸಿಗ್ನಲ್‌ಗೆ ಕಾಯತ್ತಿರುತ್ತದೆ. ಈ ವೇಳೆ ಬಾಲಕಿ ಹಿಂಬದಿ ಸೀಟಿನ ಕಿಟಕಿಯಿಂದ ಹೊರಗಡೆ ಬಾಗಿದ್ದಳು, ಗ್ರೀನ್ ಸಿಗ್ನಲ್ ಬೀಳುತ್ತಿದ್ದಂತೆ ಕಾರು ಮುಂದಕ್ಕೆ ಚಲಿಸಿದೆ. ನಿಯಂತ್ರಣ ಕಳೆದುಕೊಂಡ ಬಾಲಕಿ ಇದ್ದಕ್ಕಿದ್ದಂತೆ ಕಿಟಕಿಯಿಂದ ಬಿದ್ದು ಜೀಬ್ರಾ ಕ್ರಾಸಿಂಗ್ ಪಟ್ಟಿಗಳ ಮೇಲೆ ಬಿದ್ದಿದ್ದಾಳೆ.

ಈ ಘಟನೆ ವೇಳೆ ಚಾಲಕನಿಗೆ ಅರಿವಿಲ್ಲದಂತೆ ತೋರುತ್ತಿದೆ. ಮಗು ಬಿದ್ದಿರುವುದು ತಿಳಿಯದೇ ಹಾಗೆಯೇ ಹೊರಟು ಹೋಗತ್ತಾನೆ. ಆದರೆ ಅದೃಷ್ಟವಶಾತ್ ಹಿಂದೆ ಬರುತ್ತಿದ್ದ ವಾಹನ ಸವಾರರು ಕೂಡಲೇ ಬ್ರೇಕ್ ಹಾಕಿ ಅಪಾಯವನ್ನು ತಪ್ಪಿಸಿದ್ದಾರೆ. ಕೂಡಲೇ ಬಾಲಕಿಯನ್ನು ಸುರಕ್ಷಿತವಾಗಿ ಕರೆತರಲು ಹೋಗಿದ್ದಾರೆ. ಕಾರುಗಳನ್ನು ನಿಲ್ಲಿಸುವವರೆಗೂ ಆ ಬಾಲಕಿ ಅಳುತ್ತಾ ಅಲ್ಲೇ ಮಲಗಿದ್ದಳು.

ವೀಡಿಯೊದಲ್ಲಿ ಕಂಡುಬರುವಂತೆ ಸ್ಥಳೀಯರಲ್ಲಿ ಒಬ್ಬರು ಹುಡುಗಿಯನ್ನು ತ್ವರಿತವಾಗಿ ತಲುಪಿ ಅವಳನ್ನು ಎತ್ತಿಕೊಂಡು ರಸ್ತೆಯಿಂದ ಹೊರಬಂದಿದ್ದಾರೆ. ಸ್ಥಳೀಯ ಸುದ್ದಿವಾಹಿನಿಗಳ ಪ್ರಕಾರ, ಮಗು ಸುರಕ್ಷಿತವಾಗಿದೆ ಎಂದು ತಿಳಿದ ನಂತರ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಪೋಷಕರಿಗೆ ಮಗುವನ್ನು ಒಪ್ಪಿಸಲಾಗಿದೆ.

ತಂದೆಯ ಕಾರು ಕದ್ದು ರೈಡ್ ಹೋಗಿದ್ದ 12 ವರ್ಷದ ಬಾಲಕ
ಚೀನಾದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿಬಿಟ್ಟಿವೆ. ಇಲ್ಲಿನ ಮಕ್ಕಳು ವಯಸ್ಸಿಗೂ ಮೀರಿದ ಕೆಲಸಗಳು ಮಾಡುವ ಹಲವು ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಇತ್ತೀಚೆಗೆ ಚೀನಾದಲ್ಲಿ 12 ವರ್ಷದ ಬಾಲಕನೋರ್ವ ಬೇಸರವಾಯಿತೆಂದು ತಂದೆಯ ಕಾರು ಕದ್ದು 200 ಕಿ.ಮೀ ಜಾಲಿ ರೈಡ್ ಹೋಗಿದ್ದ.

ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹುಝೌವ್ ಪ್ರದೇಶದ ಬಾಲಕ ಅವರ ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ತಮ್ಮ ತಂದೆಯ ಎಸ್‌ಯುವಿ ಕೀ ಕದ್ದು, ತನ್ನ ಕಿರಿಯ ಸಹೋದರಿಯೊಂದಿಗೆ ಕಾರಿನಲ್ಲಿ ಹೊರಟಿದ್ದ. ಮಕ್ಕಳ ತಂದೆ ಅದೇ ದಿನ ಮಧ್ಯಾಹ್ನ ಮನೆಗೆ ಮರಳಿದ್ದು, ಕಾರು ಮತ್ತು ಮಕ್ಕಳು ಕಾಣೆಯಾಗಿರುವುದು ಗೊತ್ತಾಗಿದೆ. ಗಾಬರಿಗೊಂಡ ಪೋಷಕರು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು.

ಇದಾದ ಬಳಿಕ ಮಕ್ಕಳು ಹೊರಟಿದ್ದ SUV ನೆರೆಯ ಜಿಯಾಂಗ್ಸು ಪ್ರಾಂತ್ಯದ ಹೆದ್ದಾರಿಯಲ್ಲಿ 200 ಕಿ.ಮೀ ದೂರದಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಈ ದೃಷ್ಯಗಳನ್ನು ಸೆರೆ ಹಿಡಿದಿದ್ದ ಸಿಸಿಟಿವಿ ದೃಷ್ಯಗಳ ಆಧಾರದ ಮೇಲೆ ಅಲ್ಲಿನ ಪೊಲೀಸರು ಮಕ್ಕಳನ್ನು ಹಿಡಿಯಲು ಬಂದಾಗ, ಭಯಬಿದ್ದು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ನಂತರ ಅಲ್ಲಿನ ಶಾಲೆಯೊಂದರ ಪಕ್ಕದಲ್ಲಿ ಕಾರ್ ಪಾರ್ಕ್ ಮಾಡಿದ್ದಾರೆ.

ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ಮಕ್ಕಳನ್ನು ವಿಚಾರಣೆ ನಡೆಸಲಾಗಿದೆ. ಪೊಲೀಸ್ ಅಧಿಕಾರಿ ಹುಡುಗನ ವಯಸ್ಸನ್ನು ಕೇಳಿದ್ದು ಬಾಲಕ 2009 ರಲ್ಲಿ ಹುಟ್ಟಿದ್ದೇನೆ, ಈಗ ನನಗೆ 12 ವರ್ಷ ಎಂದು ಉತ್ತರಿಸುತ್ತಿದ್ದಂತೆ ಪೊಲೀಸರು ಸುಸ್ತಾಗಿದ್ದಾರೆ. ಈ ವಯಸ್ಸಿನಲ್ಲೇ ಅಷ್ಟು ದೊಡ್ಡ ಎಸ್‌ಯುವಿಯನ್ನು ಸುಮಾರು 200 ಕಿಲೋಮೀಟರ್ ಓಡಿಸಿರುವುದು ಎಲ್ಲರನ್ನು ದಿಗ್ಬ್ರಮೆಗೊಳಿಸಿದೆ.

ನೀವು ಕೀಯನ್ನು ಕದ್ದಿದ್ದೀರಾ ಅಥವಾ ನಿಮ್ಮ ತಂದೆ ನಿಮಗೆ ಕೊಟ್ಟಿದ್ದಾರಾ? ಎಂದು ಕೇಳಿದಾಗ ನನ್ನ ತಂಗಿ ಅದನ್ನು ತೆಗೆದುಕೊಂಡು ಬಂದಳು. ಬಳಿಕ ನಾನು ಕೀ ಪಡೆದು ಕಾರನ್ನು ಹೊರ ತಂದೆ ಎಂದು ಹೇಳಿದ್ದಾನೆ. ಆದರೆ ಈ ವಯಸ್ಸಿಗೆ ಕಾರನ್ನು ಹೇಗೆ ಕಲಿತೆ ಎಂದಾಗ ಬಾಲಕ ನೀಡಿದ ಉತ್ತರಕ್ಕೆ ಎಂಥವರು ಹುಬ್ಬೇರಿಸುವುದು ಖಚಿತ.

ನನ್ನ ತಂದೆ ಡ್ರೈವಿಂಗ್ ಮಾಡುವಾಗ ನಾನು ಗಮನಿಸಿದ್ದೇನೆ ಮತ್ತು ಡ್ರೈವಿಂಗ್ ಸಿಮ್ಯುಲೇಶನ್ ಆಟವನ್ನು ಆಡಿದ್ದೇನೆ. ಹಾಗಾಗಿಯೇ ನಿಜವಾದ ಕಾರನ್ನು ಓಡಿಸುವ ಹುಚ್ಚು ಹೆಚ್ಚಾಯಿತು ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಕಾಣೆಯಾದ ಕಾರಿನ್ನು ತನ್ನ ಮಗ, ಮಗಳು ಕೊಂಡೊಯ್ದಿದ್ದಾರೆ ಎಂದು ತಿಳಿದಾಗ ತಂದೆ ಆಘಾತಕ್ಕೊಳಗಾಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮುಂದುವರಿಯುತ್ತಿರುವ ತಂತ್ರಜ್ಞಾನಕ್ಕೆ ಮಕ್ಕಳು ಹೆಚ್ಚು ಪ್ರಭಾವಿತರಾಗುತ್ತಿದ್ದಾರೆ. ಇಂದಿನ ಮಕ್ಕಳಿಗೆ ಮೊಬೈಲ್, ಬೈಕ್, ಕಾರುಗಳನ್ನು ಬಳಸಲು ಪೋಷಕರು ಕೂಡ ಕಾರಣವಾಗುತ್ತಿದ್ದಾರೆ. ಅವರಿಗೆ ಇಂತಹ ವಸ್ತುಗಳನ್ನು ಆದಷ್ಟು ದೂರವಿಡುವುದು ಉತ್ತಮ. ಇಲ್ಲದಿದ್ದರೆ ಮೇಲೆ ತಿಳಿಸಿರುವ ಘಟನೆಗಳೇ ಮತ್ತೆ ಮರುಕಳಿಸಬಹುದು.