ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಮಹಿಳೆಯರು ತಮ್ಮ ಕೌಶಲ್ಯದಿಂದ ಪುರುಷರಿಂದ ಸಾಧ್ಯವಾಗದ ಹಲವು ಕಾರ್ಯಗಳನ್ನು ಸಾಧಿಸಿದ್ದಾರೆ.

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಹಲವು ಪ್ರಮುಖ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾಬಲ್ಯವನ್ನು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು. ಈ ಎಲ್ಲಾ ಸಂಗತಿಗಳ ನಡುವೆ ಗಮನಿಸಬೇಕಾದ ಅಂಶವೆಂದರೆ ಕೆಲವು ಮಹಿಳೆಯರ ಚಾಲನಾ ಶೈಲಿ ತುಂಬಾ ಕೆಟ್ಟದಾಗಿದೆ. ಹಾಗೆಯೇ ಎಲ್ಲಾ ಪುರುಷರ ಚಾಲನಾ ಸಾಮರ್ಥ್ಯವು ಪರಿಪಕ್ವವಾಗಿಲ್ಲ.

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಇತ್ತೀಚಿಗೆ ಯೂಟ್ಯೂಬ್'ನಲ್ಲಿ ವೀಡಿಯೊವೊಂದನ್ನು ಅಪ್ ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಆಕ್ಟಿವಾ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವತಿ ಹಾಗೂ ಕೆಟಿಎಂ ಬೈಕ್‌ ಸವಾರನ ನಡುವೆ ಮಾತಿನ ಚಕಮಕಿ ನಡೆಯುವುದನ್ನು ಕಾಣಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಆಕ್ಟಿವಾ ಸ್ಕೂಟರ್‌ನಲ್ಲಿ ರಸ್ತೆಬದಿಯಲ್ಲಿ ನಿಂತಿದ್ದ ಯುವತಿ ಹಿಂದಿನಿಂದ ಬರುತ್ತಿದ್ದ ಕೆಟಿಎಂ ಬೈಕ್‌ ಅನ್ನು ಗಮನಿಸದೆ ಸ್ಕೂಟರ್‌ ತಿರುಗಿಸಿದ್ದಾಳೆ. ಈ ವೇಳೆ ಯುವತಿ ತನ್ನ ಮೊಬೈಲ್'ನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು.

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಇದರಿಂದಾಗಿ ಆಕೆಗೆ ಹಿಂದಿನಿಂದ ಬೈಕ್ ಬರುತ್ತಿರುವುದು ಕಾಣಿಸಿಲ್ಲ. ಹಠಾತ್ತನೇ ಬೈಕ್ ನಿಲ್ಲಿಸುವ ಯುವಕನು ಏನಿದು ಎಂದು ಕೇಳಿದಾಗ ಯುವತಿ ತನ್ನ ಮಧ್ಯದ ಬೆರಳನ್ನು ತೋರಿಸುತ್ತಾಳೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಇದರಿಂದ ಆಕ್ರೋಶಗೊಳ್ಳುವ ಯುವಕನು ಯುವತಿಯೊಂದಿಗೆ ವಾಗ್ವಾದದಲ್ಲಿ ತೊಡಗುತ್ತಾನೆ. ಯುವತಿಯು ಸಹ ಯುವಕನೊಂದಿಗೆ ಮಾತಿನ ಚಕಮಕಿ ನಡೆಸುತ್ತಾಳೆ. ಕೊನೆಗೆ ಯುವಕನು ಪೊಲೀಸ್ ಠಾಣೆಗೆ ಹೋಗೋಣವೆಂದು ಹೇಳುತ್ತಾನೆ.

ನನ್ನ ಹೆಲ್ಮೆಟ್‌ನಲ್ಲಿರುವ ಕ್ಯಾಮೆರಾದಲ್ಲಿ ಇಲ್ಲಿ ನಡೆದ ಎಲ್ಲಾ ಘಟನೆಗಳು ದಾಖಲಾಗಿವೆ ಎಂದು ಯುವಕ ಹೇಳುತ್ತಾನೆ. ಯುವಕನು, ಯುವತಿ ಹೆಲ್ಮೆಟ್ ಧರಿಸದೇ ಇರುವುದನ್ನು, ಮೊಬೈಲ್'ನಲ್ಲಿ ಮಾತನಾಡುತ್ತಿರುವುದನ್ನೆಲ್ಲಾ ಹೇಳುತ್ತಾನೆ. ಇದರಿಂದ ಯುವತಿ ಸುಮ್ಮನಾಗುತ್ತಾಳೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಪಲ್ಸರ್ ಬೈಕ್‌ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ಆಕ್ಟಿವಾ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದ ಇಬ್ಬರು ಯುವತಿಯರಿಗೆಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ.

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಈ ವೀಡಿಯೊದಲ್ಲಿ ಯುವತಿಯರು ಸ್ಕೂಟರ್ ಅನ್ನು ಅಡ್ಡಾದಿಡ್ಡಿ ಚಾಲನೆ ಮಾಡುವುದನ್ನು ಕಾಣಬಹುದು. ಈ ಘಟನೆಯಲ್ಲಿಯೂ ಸಹ ಯುವತಿಯರದೇ ತಪ್ಪು ಎಂಬುದನ್ನು ಕಾಣಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಯುವಕ ಹಾಗೂ ಯುವತಿಯರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಕೊನೆಗೆ ಯುವಕ ನನ್ನ ಹೆಲ್ಮೆಟ್'ನಲ್ಲಿರುವ ಕ್ಯಾಮೆರಾದಲ್ಲಿ ಎಲ್ಲಾ ದೃಶ್ಯಗಳು ರೆಕಾರ್ಡ್ ಆಗಿವೆ ಎಂದು ಹೇಳಿದ ನಂತರ ಯುವತಿಯರು ಸುಮ್ಮನಾಗುವುದನ್ನು ಕಾಣಬಹುದು.

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಮತ್ತೊಂದು ಘಟನೆಯಲ್ಲಿ ಬೈಕ್ ಸವಾರರು ಹಾಗೂ ಕಾರಿನಲ್ಲಿದ್ದ ಯುವಕರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಆಟೋ ಹಿಂದೆ ಸಾಗುತ್ತಿದ್ದ ಪಲ್ಸರ್ ಬೈಕಿಗೆ ಕಾರು ಡಿಕ್ಕಿ ಹೊಡೆಯುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಈ ಘಟನೆಯಲ್ಲಿ, ಕಾರಿನಲ್ಲಿದ್ದ ಯುವಕರು ಬೈಕಿನಲ್ಲಿರುವವರ ಮೇಲೆ ಹಲ್ಲೆಗೆ ಮುಂದಾಗುವುದನ್ನು ಕಾಣಬಹುದು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಾರ್ವಜನಿಕರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದ್ದಾರೆ.

ಈ ಘಟನೆಯಲ್ಲಿಯೂ ಬೈಕಿನಲ್ಲಿದ್ದ ಯುವಕ ನನ್ನ ಹೆಲ್ಮೆಟ್‌ನಲ್ಲಿ ಕ್ಯಾಮೆರಾ ಇದೆ ಎಂದು ಹೇಳಿದ ನಂತರ ಕಾರಿನಲ್ಲಿದ್ದ ಯುವಕರು ಕ್ಷಮೆಯಾಚಿಸಿ ಅಲ್ಲಿಂದ ಹೊರಟು ಹೋಗುವುದನ್ನು ಕಾಣಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬೈಕ್ ಸವಾರನಿಗೆ ಮಧ್ಯದ ಬೆರಳು ತೋರಿಸಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಈ ವೀಡಿಯೊ ಆಧಾರದ ಮೇಲೆ ನಿಮ್ಮ ಮೇಲೆ ಕೇಸ್ ದಾಖಲಿಸುವುದಾಗಿ ಬೈಕ್ ಸವಾರ ಕಾರಿನಲ್ಲಿ ಬಂದವರಿಗೆ ಹೇಳುತ್ತಾನೆ. ಭಾರತದಲ್ಲಿ ಹಲವಾರು ಸಂಚಾರಿ ನಿಯಮಗಳಿದ್ದರೂ ಜನರು ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಂದಾಗಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.

Most Read Articles

Kannada
English summary
Girl on scooter gets into trouble by showing middle finger to biker. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X