ಸೀರೆಯುಟ್ಟ ನಾರಿ ಪವರ್‌ಫುಲ್‌ ಕೆಫೆ ರೇಸರ್‌ನಲ್ಲಿ ಕಸರತ್ತು: ಇಂತಹ ಹುಡುಗಿಯೇ ಬೇಕೆಂದ ಪಡ್ಡೆ ಹುಡುಗರು!

ಭಾರತದಲ್ಲಿ ಮಹಿಳಾ ಬೈಕರ್‌ಗಳು ಕಾಣಲು ಸಿಗುವುದು ಸಾಕಷ್ಟು ಕಷ್ಟ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಕೆಲವೊಂದು ರೈಡಿಂಗ್‌ ಕ್ಲಬ್‌ಗಳ ಜೊತೆ ಸೇರಿಕೊಂಡು ಹುಡುಗಿಯರು ಸಹ ಬೈಕ್‌ ರೈಡ್‌ಗಳನ್ನು ಮಾಡುವುದನ್ನು ನಾವು ಕಾಣಬಹುದು. ಇದೇ ಕಾರಣಕ್ಕಾಗಿ ಎಲ್ಲಾದರೂ ಒಂದು ಕಡೆ ಮಹಿಳೆಯರು ಬೈಕ್‌ ಓಡಿಸುತ್ತಾ ಹೋಗುತ್ತಿದ್ದಾರೆ ಎಂದರೆ ಕೊಂಚ ಹೆಚ್ಚಿನ ಗಮನವನ್ನೇ ಪಡೆಯುತ್ತಾರೆ. ಇಲ್ಲೊಂದು ಕಡೆ ಅದೇ ರೀತಿಯ ಘಟನೆಯೊಂದು ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇಂದಿನ ಲೇಖನದಲ್ಲಿ ನಾವು ಆ ಕುರಿತಾಗಿ ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೆ ಓದಿ.

ಇಲ್ಲೊಂದು ಕಡೆ ಹುಡುಗಿಯೊಬ್ಬಳು ಬೈಕ್‌ ಓಡಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದ ಅತ್ಯಾಕರ್ಷಕ ವಿಷಯವೆಂದರೆ ಈ ಸೀರೆ ಉಟ್ಟುಕೊಂಡು ಕೆಫೆ ರೇಸರ್‌ ಅನ್ನು ಓಡಿಸುತ್ತಿರುವುದು. ಹೌದು, ವಿಡಿಯೋದಲ್ಲಿ ಯುವತಿ ಕೆಂಪು ಸೀರೆಯನ್ನು ಉಟ್ಟಿಕೊಂಡು ರಾಯಲ್‌ ಎನ್‌ಫೀಲ್ಡ್‌ ಕಾಂಟಿನೆಂಟಲ್‌ ಜಿಟಿ 650 ವರ್‌ಫುಲ್ ಕೆಫೆ ರೇಸರ್‌ ಬೈಕ್‌ ಅನ್ನು ಓಡಿಸುತ್ತಿದ್ದಾಳೆ.

Girl Ride Royal Enfield Continental GT 650 In Saree Video Goes Viral

ಜೆಟ್ಟಿ ಬೈಕ್‌ಗರ್ಲ್‌ ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದ್ದು, ಬೈಕ್‌ನಲ್ಲಿ ಈಕೆ ತೋರಿಸುತ್ತಿರುವ ಸ್ಕಿಲ್‌ಗೆ ನೆಟ್ಟಿಗರು ಫಿಧಾ ಆಗಿದ್ದಾರೆ. ಯುವತಿಯ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಖ್ಯೆಯಲ್ಲಿ ಲೈಕ್‌ ಮತ್ತು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಶೇರ್‌ ಸಹ ಆಗುತ್ತಿದೆ.

ಈ ವಿಡಿಯೋದಲ್ಲಿ ಗಮನಿಸಬೇಕಾದ ಪ್ರಮುಖವಾದ ಮತ್ತು ಇತರ ಕೆಲವರಿಗೆ ಮಾದರಿಯಾಗುವ ವಿಷಯವೇನೆಂದರೆ ಈ ಯುವತಿ ಸ್ಯಾರಿಯಲ್ಲಿ ಬೈಕ್‌ ರೈಡ್‌ ಮಾಡುತ್ತಿದ್ದರೂ ಹೆಲ್ಮೆಟ್‌ ಅನ್ನು ಧರಿಸಿದ್ದಾಳೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ಯಾಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಹೆಲ್ಮೆಟ್‌ ಧರಿಸದೆ ಬೈಕ್‌ ಓಡಿಸುವ ವಿಡಿಯೋ ಮಾಡಿ ಶೋ ಆಫ್‌ ಮಾಡುತ್ತಾರೆ.

ಈಗಾಗಲೇ ತಿಳಿಸಿದಂತೆ ಈ ಬೈಕ್‌ ಒಂದು ಪವರ್‌ಫುಲ್‌ ಕೆಫೆ ರೇಸರ್‌ (Royal Enfield Continental GT 650).ಬೈಕ್‌ ಮೋಟಾರ್‌ಸೈಕಲ್‌ಗಳು 270-ಡಿಗ್ರಿ ಫೈರಿಂಗ್ ಆರ್ಡರ್‌ನೊಂದಿಗೆ 648 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿವೆ. ಈ ಎಂಜಿನ್ 47 bhp ಮತ್ತು 52 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಾಂಟಿನೆಂಟಲ್ GT 650 ಹಲವಾರು ಬಣ್ಣಗಳಲ್ಲಿ ಲಭ್ಯವಿದೆ: ಸ್ಲಿಪ್‌ಸ್ಟ್ರೀಮ್ ಬ್ಲೂ, ಅಪೆಕ್ಸ್ ಗ್ರೇ, ಡಕ್ಸ್ ಡಿಲಕ್ಸ್, ರಾಕರ್ ರೆಡ್ ಮತ್ತು ಬ್ರಿಟಿಷ್ ರೇಸಿಂಗ್ ಗ್ರೀನ್. ಭಾರತದಲ್ಲಿ ಇದರ ಬೆಲೆ ₹3.19 ಲಕ್ಷದಿಂದ ₹3.45 ಲಕ್ಷದವರೆಗೆ ಎಕ್ಸ್ ಶೋರೂಂನಲ್ಲಿದೆ. ಈ ಮಾದರಿಯು ಇಂಟರ್‌ಸೆಪ್ಟರ್ 650 ಗಿಂತ ಮೇಲಿದ್ದು, ಇದರ ಬೆಲೆ ₹3.03 ಲಕ್ಷದಿಂದ ₹3.31 ಲಕ್ಷದವರೆಗೆ ಇರುತ್ತದೆ.

ರಾಯಲ್ ಎನ್‌ಫೀಲ್ಡ್ ಎರಡು ಇತರ 650 ಸಿಸಿ ಮೋಟಾರ್‌ಸೈಕಲ್‌ಗಳನ್ನು ಸಹ ನೀಡುತ್ತದೆ. ಶಾಟ್‌ಗನ್ 650 ಮತ್ತು ಸೂಪರ್ ಮೀಟಿಯರ್ 650. ಶಾಟ್‌ಗನ್ 650 ಅನ್ನು ಕಸ್ಟಮೈಸೇಶನ್ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, ಆದರೆ ಸೂಪರ್ ಮೀಟಿಯರ್ 650 ಒಂದು ಹೆದ್ದಾರಿ ಕ್ರೂಸರ್ ಆಗಿದೆ. ಎರಡೂ ಮಾದರಿಗಳು ಕಾಂಟಿನೆಂಟಲ್ GT 650 ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, June 24, 2024, 10:43 [IST]
English summary
Girl ride royal enfield continental gt 650 in saree video goes viral
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+