ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಗೋವಾದ ಅಗ್ನೆಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಡಿಸೈನ್‌ನ ಐವರು ವಿದ್ಯಾರ್ಥಿಗಳು ಸೋಲಾರ್ ಎಲೆಕ್ಟ್ರಿಕ್ ಸೈಕಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಎಲೆಕ್ಟ್ರಿಕ್ ಸೈಕಲ್ ಪೂರ್ತಿಯಾಗಿ ಚಾರ್ಜ್ ಆದ ನಂತರ 30 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ. ಈ ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ನಲ್ಲಿ 20 ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಈ ಬ್ಯಾಟರಿಗಳನ್ನು ಎರಡು ಸೋಲಾರ್ ಪ್ಯಾನೆಲ್‌ಗಳ ಮೂಲಕ ಅಥವಾ ಪವರ್ ಪಾಯಿಂಟ್‌ ಮೂಲಕ ಚಾರ್ಜ್ ಮಾಡಬಹುದು. ಈ ಎಂಜಿನಿಯರಿಂಗ್ ಕಾಲೇಜಿನ ಐವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಒಂದು ವರ್ಷದ ಹಿಂದೆ ತಮ್ಮ ಅಂತಿಮ ಸೆಮಿಸ್ಟರ್ ಪ್ರಾಜೆಕ್ಟ್ ಸಲುವಾಗಿ ಈ ಸೋಲಾರ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಯನ್ನು ಆರಂಭಿಸಿದರು.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಪರಿಸರಕ್ಕೆ ಯಾವುದೇ ಹಾನಿಯಾಗದ ಅತ್ಯಂತ ಅಗ್ಗದ ಸಾರಿಗೆ ಸಾಧನವನ್ನು ಒದಗಿಸುವ ವಾಹನವನ್ನು ಅಭಿವೃದ್ಧಿ ಪಡಿಸಲು ಅವರು ನಿರ್ಧರಿಸಿದ್ದರು. ಇದಕ್ಕಾಗಿ ಅವರು ಸೌರ ಶಕ್ತಿಯಿಂದ ಚಾರ್ಜ್ ಮಾಡಬಹುದಾದ ಎಲೆಕ್ಟ್ರಿಕ್ ಸೈಕಲ್ ಅನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಿದರು.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಈ ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ 18,650 ಆಂಪಿಯರ್‌ಗಳ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಸೈಕಲ್ ಅನ್ನು ಚಾರ್ಜ್ ಮಾಡಲು ಸೈಕಲ್‌ನ ಫ್ರೇಮ್ ನಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಗಿದೆ. ಸೈಕಲ್‌ನ ತೂಕವನ್ನು ಕಡಿಮೆ ಮಾಡಲು ಈ ಸೈಕಲ್‌ನಲ್ಲಿ ಅಲ್ಯೂಮಿನಿಯಂ ಫ್ರೇಮ್‌ ಅಳವಡಿಸಲಾಗಿದೆ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಬ್ಯಾಟರಿಯನ್ನು ಸೇರಿಸಿದರೆ ಈ ಎಲೆಕ್ಟ್ರಿಕ್ ಸೈಕಲ್‌ ಅನ್ನು ಒಟ್ಟು 29 ಕೆ.ಜಿ ತೂಕವನ್ನು ಹೊಂದಿದೆ. ಬ್ಯಾಟರಿ ಅತಿಯಾಗಿ ಚಾರ್ಜಿಂಗ್ ಆಗುವುದನ್ನು ತಡೆಯಲು ಈ ಸೈಕಲ್‌ನಲ್ಲಿ ಅಧಿಕ ಚಾರ್ಜಿಂಗ್ ತಡೆಯುವ ಸಾಧನವನ್ನು ಅಳವಡಿಸಲಾಗಿದೆ. ಈ ಸೈಕಲ್‌ನ ಬ್ಯಾಟರಿಯನ್ನು ಬ್ರಶ್‌ಲೆಸ್ ಡಿಸಿ ಮೋಟರ್‌ಗೆ ಜೋಡಿಸಲಾಗಿದೆ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಈ ಮೋಟರ್ ಅನ್ನು ಸೈಕಲ್‌ನ ಹಿಂದಿನ ಚಕ್ರದಲ್ಲಿ ಅಳವಡಿಸಲಾಗಿದೆ. ಪರಿಸರದಲ್ಲಿ ಲಭ್ಯವಿರುವ ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಬಳಸಿ ಕೊಳ್ಳುವ ಮೂಲಕ ನಾವು ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಈ ಸೋಲಾರ್ ಚಾರ್ಜ್ಡ್ ಸೈಕಲ್ ಅಭಿವೃದ್ಧಿಪಡಿಸಿರುವ ವಿದ್ಯಾರ್ಥಿಗಳು ಹೇಳಿದ್ದಾರೆ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಸೌರ ಶಕ್ತಿ ಹಾಗೂ ಗಾಳಿ ಶಕ್ತಿ ನವೀಕರಿಸಬಹುದಾದ ಶಕ್ತಿಯ ಪ್ರಮುಖ ಮೂಲಗಳಾಗಿವೆ. ಇವು ಪರಿಸರದಲ್ಲಿ ಹೇರಳವಾಗಿ ಲಭ್ಯವಾಗುತ್ತವೆ. ಎಲೆಕ್ಟ್ರಿಕ್ ಸೈಕಲ್ ವ್ಯಾಪ್ತಿಯನ್ನು ಹೆಚ್ಚಿಸಲು ಸೈಕಲ್‌ನ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ. ಸೈಕಲ್‌ನ ತೂಕವನ್ನು ಅರ್ಧದಷ್ಟು ಕಡಿಮೆ ಮಾಡುವ ಮೂಲಕ ಅದರ ವ್ಯಾಪ್ತಿಯನ್ನು ದ್ವಿ ಗುಣಗೊಳಿಸಬಹುದು ಎಂಬುದು ಅವರ ಅಭಿಪ್ರಾಯ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ಅದರಲ್ಲೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಸಲುವಾಗಿ ವಿವಿಧ ರೀತಿಯ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ನಮ್ಮ ಕರ್ನಾಟಕದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಈ ರೀತಿಯ ಹಲವು ವಾಹನಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂಬುದು ವಿಶೇಷ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಕೆಲವು ತಿಂಗಳ ಹಿಂದಷ್ಟೇ ತಮಿಳುನಾಡಿನ ವಿದ್ಯಾರ್ಥಿಯೊಬ್ಬ ಇದೇ ರೀತಿಯ ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅನ್ನು ಅಭಿವೃದ್ಧಿ ಪಡಿಸಿದ್ದ. ಲಾಕ್ ಡೌನ್ ಅವಧಿಯಲ್ಲಿ ಜನರು ವಿವಿಧ ರೀತಿಯ ವಾಹನಗಳನ್ನು ಅಭಿವೃದ್ಧಿಪಡಿಸಿದ್ದರು. ಅದರಲ್ಲಿ ಓಡಿಶಾ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಕೆಲವು ಕಾರ್ಮಿಕರು ಲಾಕ್ ಡೌನ್ ಅವಧಿಯಲ್ಲಿ ಎಲೆಕ್ಟ್ರಿಕ್ ಸೈಕಲ್ ಗಳನ್ನು ಅಭಿವೃದ್ಧಿ ಪಡಿಸಿದ್ದರು.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಕರೋನಾ ಬರುವುದಕ್ಕೂ ಮುನ್ನ ಜನರು ಸೈಕಲ್ ಬಳಕೆಯ ಬಗ್ಗೆ ಅಷ್ಟಾಗಿ ಒಲವು ತೋರಿಸುತ್ತಿರಲಿಲ್ಲ. ಆದರೆ ಕರೋನಾ ವೈರಸ್ ಮಹಾಮಾರಿ ಕಾಣಿಸಿಕೊಂಡ ಬಳಿಕ ಜನರು ಆರೋಗ್ಯದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸೈಕಲ್ ತುಳಿಯುವುದರಿಂದ ಸದೃಢರಾಗಿರಬಹುದು ಎಂಬ ಕಾರಣಕ್ಕೆ ಜನರು ಸೈಕಲ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಕರೋನಾ ಕಾಣಿಸಿಕೊಂಡ ಬಳಿಕ ಸೈಕಲ್ ಗಳ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ ಎಂದು ಸೈಕಲ್ ಮಾರಾಟ ಮಾಡುವವರೇ ಖಚಿತ ಪಡಿಸಿದ್ದಾರೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಸೈಕಲ್ ಉದ್ಯಮವು ಸಹ ಹೊರತಾಗಿಲ್ಲ. ಎಲೆಕ್ಟ್ರಿಕ್ ಸೈಕಲ್ ಗಳಿಗೂ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಈ ಕಾರಣಕ್ಕೆ ಹೀರೋ ಸೇರಿದಂತೆ ಹಲವು ಖ್ಯಾತ ನಾಮ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸೈಕಲ್ ಗಳನ್ನು ಬಿಡುಗಡೆಗೊಳಿಸುತ್ತಿವೆ. ಹೀರೋ ಕಂಪನಿಯು ತನ್ನ ಸೈಕಲ್ ಗಳನ್ನು ಭಾರತದಲ್ಲಿ ಮಾರಾಟ ಮಾಡುವುದರ ಜೊತೆಗೆ ವಿದೇಶಗಳಿಗೂ ರಫ್ತು ಮಾಡುತ್ತಿದೆ. ಕಂಪನಿಯ ಸೈಕಲ್ ಗಳು ಇಂಗ್ಲೆಂಡಿನಲ್ಲಿಯೂ ಬೇಡಿಕೆ ಹೊಂದಿವೆ ಎಂಬುದು ವಿಶೇಷ.

ಸೋಲಾರ್ ಚಾರ್ಜ್ಡ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಭಾರತದಲ್ಲಿ ಗೋಜೀರೋ, ನಹಾಕ್ ಹಾಗೂ ಮೈಸೂರು ಮೂಲದ ಟೂಷೆ ಸೇರಿದಂತೆ ಹಲವು ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಸೈಕಲ್ ಗಳನ್ನು ಮಾರಾಟ ಮಾಡುತ್ತಿವೆ. ಇದರ ಜೊತೆಗೆ ಖ್ಯಾತ ಬೈಕ್ ತಯಾರಕ ಕಂಪನಿಯಾದ ಎಂವಿ ಅಗಸ್ಟಾ ಸಹ ಎಲೆಕ್ಟ್ರಿಕ್ ಸೈಕಲ್ ಉತ್ಪಾದನೆಗೆ ಮುಂದಾಗಿದೆ.

ಗಮನಿಸಿ: ಈ ಲೇಖನದಲ್ಲಿ ಮೊದಲ ಚಿತ್ರವನ್ನು ಹೊರತು ಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Goa engineering students develops solar powered electric bicycle details
Story first published: Monday, August 23, 2021, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X