ವಿಶ್ವದ ಅತ್ಯಂತ ದುಬಾರಿ ಬೈಕ್

ವಿಶ್ವದ ಅತಿ ದುಬಾರಿ ಬೈಕ್ ಎಂದೇ ವಿಶ್ಲೇಷಿಸಬಹುದಾದ ಚಿನ್ನದ ಲೇಪನದ ಬೈಕ್‌ವೊಂದನ್ನು ತುರ್ಕಿಯ ಕೋಟ್ಯಧೀಶ್ವರ ತರ್ಹಾನ್ ಟೆಲ್ಲಿ ಹೊಂದಿದ್ದಾರೆ.

ನೂತನ ದಾಖಲೆಗಳನ್ನು ಸಾಧಿಸುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯುವುದು ಹಲವರ ಹಂಬಲವಾಗಿರುತ್ತದೆ. ಇದರಲ್ಲಿ ಬೈಕ್‌ನಲ್ಲಿ ಸಾಹಸ ಪ್ರದರ್ಶನ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಹಾಗಿರುವಾಗ ವಿಭಿನ್ನ ಚಿಂತನೆಗೆ ಮುಂದಾಗಿರುವ ಈ ತುರ್ಕಿಯ ಮಿಲಿಯೇನರ್ ವಿಶೇಷ ಬೈಕನ್ನು ಸಿದ್ಧಪಡಿಸಿದ್ದಾರೆ.

ಚಿನ್ನ ಜಗತ್ತಿನ ಅತ್ಯಂತ ಬೆಲೆಬಾಳುವ ದುಬಾರಿ ಲೋಹವಾಗಿದೆ. ಅಂತದ್ದರಲ್ಲಿ ಚಿನ್ನದಿಂದಲೇ ತಯಾರಿಸಿರುವ ವಿಶೇಷ ಬೈಕ್ ನೋಡುವ ಬಯಕೆ ನಿಮ್ಮಲ್ಲಿಲ್ಲವೇ? ಇಲ್ಲಿದೆ ನೋಡಿ

ಚಿನ್ನದ ಲೇಪನ

ಚಿನ್ನದ ಲೇಪನ

ವಾಹನ ಪ್ರೇಮಿ ಆಗಿರುವ ತರ್ಹಾನ್ ಟೆಲ್ಲಿ, ಈ ವಿಶ್ವದ ಅತ್ಯಂತ ದುಬಾರಿ ಬೈಕ್ ಸೃಷ್ಟಿಸುವ ಮುಖಾಂತರ ಗಿನ್ನೆಸ್ ಪುಟ ಸೇರುವ ಪ್ರಯತ್ನ ಮಾಡಿದ್ದಾರೆ.

ಪುರಾತನ ಲುಕ್

ಪುರಾತನ ಲುಕ್

ಮೊದಲ ನೋಟದಲ್ಲಿ ಬೈಕ್ ಅತಿ ಪುರಾತನವಾಗಿ ಗೋಚರಿಸುತ್ತಿದೆ.

ಪೌರಾಣಿಕ ಪಾತ್ರ

ಪೌರಾಣಿಕ ಪಾತ್ರ

ಇನ್ನು ಆಸಕ್ತಿದಾಯಕ ವಿಷಯ ಏನೆಂದರೆ ಪ್ರಸ್ತುತ ಬೈಕಿಗೆ ಗ್ರೀಕ್ ಪೌರಾಣಿಕ ಕಥೆಯಲ್ಲಿರುವ 'ಮೆಡುಸ್ಸಾ' ಎಂಬ ಕಥಾಪಾತ್ರದ ವಿನ್ಯಾಸವನ್ನು ಕಲ್ಪಿಸಿಕೊಡಲಾಗಿದೆ.

ಗ್ರೀಕ್ ದೇವರು

ಗ್ರೀಕ್ ದೇವರು

ಇನ್ನು ಎಂಜಿನ್‌ನಲ್ಲಿ ಗ್ರೀಕ್ ದೇವರಾದ ಹರ್ಮಸ್ ಚಿತ್ರಣ ಮಾಡಲಾಗಿದೆ.

ವಿನ್ಯಾಸ

ವಿನ್ಯಾಸ

ವಿಶ್ವದ ಅತ್ಯಂತ ದುಬಾರಿ ಬೈಕ್‌‍ಗೆ ಕ್ಲಾಸಿಕ್ ವಿನ್ಯಾಸ ಕಲ್ಪಿಸಿಕೊಡಲಾಗಿದೆ.

ಎಂಜಿನ್

ಎಂಜಿನ್

ಇದರಲ್ಲಿ 1801 ಸಿಸಿ ರೆವ್ ಟೆಕ್ ವಿಟ್ವಿನ್ ಎಂಜಿನ್ ಆಳವಡಿಸಲಾಗಿದ್ದು, 125 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಇದು ಆರು ಸ್ಪೀಡ್ ಮಾನ್ಯುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

ಭಾರ

ಭಾರ

317 ಕೆ.ಜಿ

ಅವಧಿ

ಅವಧಿ

ಒಂದು ವರ್ಷದ ಅವಧಿಯೊಳಗೆ ಈ ಆಕರ್ಷಕ ಬೈಕ್ ತಯಾರಿಸಲಾಗಿದೆ.

ಪ್ರಸ್ತುತ ದಾಖಲೆ

ಪ್ರಸ್ತುತ ದಾಖಲೆ

ಇದುವರೆಗೆ ವಿಶ್ವದ ಅತ್ಯಂತ ದುಬಾರಿ ಬೈಕ್ ಎಂಬ ಖ್ಯಾತಿಯನ್ನು ಎಂಟಿಟಿ ಟರ್ಬೈನ್ ಬೈಕ್ ಹೊಂದಿತ್ತು. ಇದರ ಬೆಲೆ ಒಂದು ಕೋಟಿ ರು.ಗಳಾಗಿತ್ತು.

ದರ ಮಾಹಿತಿ

ದರ ಮಾಹಿತಿ

ವಿಶ್ವದ ಅತಿ ದುಬಾರಿ ಬೈಕ್ ದರ ಬಗ್ಗೆ ಯಾವುದೇ ಮಾಹಿತಿ ಬರದಿದ್ದರೂ ಮೂಲಗಳ ಪ್ರಕಾರ ಕೋಟಿಗಿಂತಲೂ ಹೆಚ್ಚು ಬೆಲೆಬಾಳುವುದಾಗಿ ತಿಳಿದು ಬಂದಿದೆ.

Article Published On: Tuesday, July 30, 2013, 9:59 [IST]
English summary
you would perhaps try to build the most expensive bike in the world, made from gold and other precious metal. Just what a rich Turkish millionaire, Tarhan Telli did. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+