ಈ ಚಿನ್ನದ ಸೈಕಲ್ ಎದರು ದುಬಾರಿ ಕಾರುಗಳೂ ನಿಲ್ಲೋದಿಲ್ಲ: ಬೆಲೆ ಎಷ್ಟು? ನಿರ್ಮಿಸಿದ್ದು ಇವರೇ!

Even expensive cars can't stand against this golden cycle: how much? | ಒಟ್ಟು 7 ಕೆ.ಜಿ ತೂಕ ಇದರಲ್ಲಿ ಬರೋಬ್ಬರಿ 4 ಕೆ.ಜಿಯಷ್ಟು 24 ಕ್ಯಾರೆಟ್ ಚಿನ್ನ ಬಳಕೆ, ಇದೆಲ್ಲ ಯಾಕೆ ಅಂತೀರಾ? ಜ್ಯುವೆಲ್ಲರಿ ಎಕ್ಸ್‌ಪೋಗಾಗಿ ಸಜ್ಜುಗೊಳಿಸಲಾದ ಸೈಕಲ್ ಇದು. ದುಬೈನಲ್ಲಿ 52ನೇ ವಾಚ್ ಮತ್ತು ಜ್ಯುವೆಲ್ಲರಿ ಎಕ್ಸ್‌ಪೋ ನಡೆದಿದ್ದು, ಎಲ್ಲರ ಗಮನ ಸೆಳೆದ ಚಿನ್ನದ ಸೈಕಲ್ ವಿಶ್ವದಾದ್ಯಂತ ಸದ್ದು ಮಾಡಿದೆ.

ಈ ಗೋಲ್ಡನ್ ಸೈಕಲ್‌ನ ಒಟ್ಟು ತೂಕ 7 ಕೆ.ಜಿ. ಇದರಲ್ಲಿ 4 ಕೆ.ಜಿ 24 ಕ್ಯಾರೆಟ್ ಚಿನ್ನ ಬಳಸಲಾಗಿದೆ. ಹ್ಯಾಂಡಲ್ ಬಾರ್, ವೀಲ್ ಸ್ಟೇಗಳು, ಗೇರ್‌ಗಳು ಮತ್ತು ಚೈನ್‌ಗಳು ಈ ಸೈಕಲ್‌ನಲ್ಲಿ ಚಿನ್ನದಿಂದ ಮಾಡಲ್ಪಟ್ಟಿದೆ. ಗ್ಲಾಸಿ ಫಿನಿಶ್‌ನೊಂದಿಗೆ ಸೈಕಲ್ ಅನ್ನು ಅದ್ದೂರಿಯಾಗಿ ವಿನ್ಯಾಸಗೊಳಿಸಲಾಗಿದೆ. ಈ ಗೋಲ್ಡನ್ ಸೈಕಲ್ ಬೆಲೆ ದುಬೈ ಕರೆನ್ಸಿಯಲ್ಲಿ 15 ಲಕ್ಷ ದಿರ್ಹಮ್ ಎಂದು ವರದಿಯಾಗಿದೆ.

Golden Cycle

ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಇದರ ಮೌಲ್ಯ ಅಕ್ಷರಶಃ ರೂ.3.39 ಕೋಟಿ. ಇನ್ನು ಮುಖ್ಯ ವಿಷಯಕ್ಕೆ ಬಂದರೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮುಖ್ಯ ಕೇಂದ್ರವಾದ ಶಾರ್ಜಾದಲ್ಲಿ 52 ನೇ ವಾಚ್ ಮತ್ತು ಜ್ಯುವೆಲ್ಲರಿ ಎಕ್ಸ್‌ಪೋ ನಡೆಯಿತು. ದುಬೈನಲ್ಲಿರುವ ಅಲ್ ರೊಮೈಸನ್ ಗೋಲ್ಡ್ ಅಂಡ್ ಜ್ಯುವೆಲ್ಲರಿ ಸ್ಟೋರ್ ಈ ಚಿನ್ನದ ಬೈಸಿಕಲ್ ಅನ್ನು ತಯಾರಿಸಿ ಪ್ರದರ್ಶಿಸಿದೆ.

ಈ ಬೈಸಿಕಲ್ ಅನ್ನು ಶುದ್ಧ 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಅಲ್ ರೊಮೈಸನ್ ಚಿನ್ನ ಮತ್ತು ಆಭರಣ ಮಳಿಗೆ ವ್ಯವಸ್ಥಾಪಕರು ಇದನ್ನು ಆಭರಣ ಪ್ರದರ್ಶನದಲ್ಲಿ (Watch And Jewellery Expo In Sharjah) ಪ್ರದರ್ಶಿಸಿದ್ದಾರೆ. ಈ ಬೈಸಿಕಲ್ ನ ಇನ್ನೊಂದು ವಿಶೇಷತೆ ಏನೆಂದರೆ ಇದನ್ನು ಬ್ರಿಟಿಷ್ ರೇಸ್ ಸೈಕಲ್ ನಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 24 ಕ್ಯಾರೆಟ್ ಚಿನ್ನ ಬಳಸಲಾಗಿದೆ.

ಸಾಮಾನ್ಯವಾಗಿ 24 ಕ್ಯಾರೆಟ್ ಚಿನ್ನದಿಂದ ಚಿನ್ನಾಭರಣ ಮಾಡಲು ಸಾಧ್ಯವಿಲ್ಲ. 22 ಕ್ಯಾರೆಟ್ ಚಿನ್ನದಲ್ಲಿ ಮಾತ್ರ ಆಭರಣಗಳನ್ನು ಉತ್ತಮವಾಗಿ ಮಾಡಬಹುದು. ಆದರೆ ಶಾರ್ಜಾದ ಈ ಆಭರಣ ವ್ಯಾಪಾರಿ 24 ಕ್ಯಾರೆಟ್ ಚಿನ್ನದಿಂದ ಸೈಕಲ್ ತಯಾರಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಬೈಸಿಕಲ್‌ನ ಎಲ್ಲಾ ಚಿನ್ನದ ಭಾಗಗಳನ್ನು 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ.

ಇನ್ನೊಂದು ವಿಶೇಷವೆಂದರೆ ಈ ಚಿನ್ನದ ಸೈಕಲ್ ಸಂಪೂರ್ಣವಾಗಿ ಕೈಯಿಂದ ತಯಾರಿಸಲ್ಪಟ್ಟಿದೆ. ಇದಕ್ಕಾಗಿ 20 ನೌಕರರು ಆರು ತಿಂಗಳು ಕೆಲಸ ಮಾಡಿದ್ದಾರೆ. ಕಂಪನಿಯ ಮುಖ್ಯ ಡಿಜಿಟಲ್ ಅಧಿಕಾರಿ ಮೊಹಮ್ಮದ್ ಅಬ್ಬಾಸಿ ಅವರು ಮೊದಲ ಬಾರಿಗೆ ಗೋಲ್ಡನ್ ಸೈಕಲ್ ಅನ್ನು ಬಿಡುಗಡೆ ಮಾಡಿದರು. ಈ ಬೈಸಿಕಲ್ ಅನ್ನು ಪ್ರದರ್ಶನದಲ್ಲಿ ವೀಕ್ಷಿಸಲು ಮಾತ್ರವಲ್ಲದೆ ಅದನ್ನು ಖರೀದಿಸಲು ಬಯಸುವವರು ಇದಕ್ಕೆ ಸ್ಪರ್ಧಿಸಬಹುದು.

ಈ ಬೈಸಿಕಲ್ ಅನ್ನು ಖರೀದಿಸುವವರು ಅದನ್ನು ಮನೆಯಲ್ಲಿ ಶೋಪೀಸ್ ಆಗಿ ಇಟ್ಟುಕೊಳ್ಳುವುದು ಮಾತ್ರವಲ್ಲದೆ ರಸ್ತೆಯಲ್ಲಿ ಸವಾರಿ ಮಾಡಲು ಎಲ್ಲಾ ಸೌಕರ್ಯಗಳೊಂದಿಗೆ ಇದನ್ನು ತಯಾರಿಸಲಾಗಿದೆ. ಅದಕ್ಕಾಗಿಯೇ 7 ಕೆ.ಜಿ ತೂಕವಿರುವ ಒಟ್ಟಾರೆ ಸೈಕಲ್‌ನಲ್ಲಿ ಕೇವಲ 4 ಕೆ.ಜಿ ಚಿನ್ನವನ್ನು ಬಳಸಲಾಗಿದೆ. ಇತರ 3 ಕೆ.ಜಿ.ಯಲ್ಲಿ ಬೈಸಿಕಲ್‌ನ ಸ್ಥಿರತೆಗಾಗಿ ಇತರ ಲೋಹಗಳನ್ನು ಬಳಸಲಾಗಿದೆ.

ಶಾರ್ಜಾದಲ್ಲಿ ನಡೆದ ಈ ಆಭರಣ ಪ್ರದರ್ಶನದಲ್ಲಿ 500 ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಭಾಗವಹಿಸಿದ್ದವು. ಇವರೆಲ್ಲರೂ ತಮ್ಮ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಿದರು. ಆ ಪೈಕಿ ಈ ಗೋಲ್ಡನ್ ಸೈಕಲ್ ಅನೇಕರ ಗಮನ ಸೆಳೆದಿದೆ. ಅನೇಕ ಚಿನ್ನದ ಕಂಪನಿಗಳು ವಿವಿಧ ರೀತಿಯ ಉತ್ಪನ್ನಗಳನ್ನು ಪರಿಚಯಿಸಿವೆ.

ಈ ಬೈಸಿಕಲ್ ಬೆಲೆ ಐಷಾರಾಮಿ ಎಸ್‌ಯುವಿಗಳಾದ ಆಡಿ, ಬಿಎಂಡಬ್ಲ್ಯು, ಬೆಂಝ್ ಕಾರುಗಳ ಬೆಲೆಯನ್ನು ಮೀರಿರುವುದು ಅಚ್ಚರಿ ಮೂಡಿಸಿದೆ. ಸಾಮಾನ್ಯ ಬೈಸಿಕಲ್ ಅನ್ನು ಹೆಚ್ಚಾಗಿ ವಿದ್ಯಾರ್ಥಿಗಳು ಮತ್ತು ಬಡ ಜನರು ಅಗತ್ಯಗಳಿಗೆ ಅನುಗುಣವಾಗಿ ಬಳಸುತ್ತಾರೆ. ಆದರೆ ಈಗ ಇಷ್ಟು ಕೋಟಿ ಬೆಲೆ ಬಾಳುವ ಸೈಕಲ್ ಅನ್ನು ಖರೀದಿಸುವ ಶ್ರೀಮಂತರು ಎಲ್ಲಿ ಸವಾರಿ ಮಾಡ್ತಾರೆ? ಕೇವಲ ಪ್ರದರ್ಶನಕ್ಕೆ ಇಟ್ಟುಕೊಳ್ಳುತ್ತಾರಷ್ಟೆ ಎಂಬುದು ನಮ್ಮ ಅಭಿಪ್ರಾಯ.

Article Published On: Monday, October 9, 2023, 12:17 [IST]
English summary
Golden bycycle watch and jewellery expo sharjah
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+