ಮೈತುಂಬಾ ಬಂಗಾರ ಮಾತ್ರವಲ್ಲ, ಓಡಾಡುವ ವಾಹನವೂ ಬಂಗಾರದ್ದು: ಇವರಿಗೆ ಚಿನ್ನವೆಂದರೆ ಹುಚ್ಚು ಪ್ರೀತಿ!

ಭಾರತದಲ್ಲಿ ಚಿನ್ನವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಣ್ಣ ಸಮಾರಂಭದಿಂದ ಹಿಡಿದು ದೊಡ್ಡ ದೊಡ್ಡ ಮದುವೆಯವರೆಗೂ ಚಿನ್ನವನ್ನು ಉಡುಗೊರೆಯಾಗಿ ಕೊಡುವುದನ್ನು ಕಾಣಬಹುದು. ಮಹಿಳೆಯರು ಮಾತ್ರವಲ್ಲದೇ, ಪುರುಷರಿಗೂ ಭಾರತದಲ್ಲಿ ಚಿನ್ನವೆಂದರೆ ಅಚ್ಚುಮೆಚ್ಚು. ಮೈತುಂಬಾ ಚಿನ್ನವನ್ನು ಹಾಕಿಕೊಂಡ ಹಲವರು ನಮ್ಮ ಮಧ್ಯೆ ಈ ಹಿಂದೆಯೂ ವೈರಲ್‌ ಆಗಿದ್ದಾರೆ.

ಭಾರತದಲ್ಲಿ ಚಿನ್ನವೆಂದರೆ ಅದು ತಮ್ಮ ಆಡಂಬರ ಮತ್ತು ಸಾಮಾಜಿಕ ಅಂತಸ್ತನ್ನು ತೋರಿಸುವುದಕ್ಕಾಗಿ ಬಳಸುತ್ತಾರೆ. ಕೆಲವರ ಚಿನ್ನದ ತೋರ್ಪಡಿಕೆ ಎಲ್ಲಿಯವರೆಗೆ ಇರುತ್ತದೆ ಎಂದರೆ, ತಮ್ಮ ವಾಹನಗಳಿಗೂ ಚಿನ್ನದ ಲೇಪನವನ್ನು ಮಾಡಿಸಿರುತ್ತಾರೆ. ಇಂದಿನ ಈ ಲೇಖನದಲ್ಲಿ ಈ ರೀತಿಯ ಕೆಲವು ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

Golden Color Vehicle Which Owned By Gold Obsessed People In India

ಮರ್ಸಿಡಿಸ್‌ ಬೆಂಝ್‌ನ ಇ ಕ್ಲಾಸ್: ನಮ್ಮ ಮಧ್ಯೆ ಗೋಲ್ಡ್‌ ಮ್ಯಾನ್‌ ಎಂದು ಕರೆಯಲ್ಪಡುವ ಮಹಾರಾಷ್ಟ್ರ ಮೂಲದ ಸನ್ನೀ ವಾಗ್‌ಚುರೆ ಬಗ್ಗೆ ಈ ಹಿಂದೆಯೂ ಕೇಳಿದ್ದೇವೆ. ಇವರು ತಮ್ಮ ಮೈತುಂಬಾ ಚಿನ್ನವನ್ನು ಹಾಕಿಕೊಳ್ಳುವುದು ಮಾತ್ರವಲ್ಲದೇ ತಮ್ಮಲ್ಲಿರುವ ವಾಹನಗಳಿಗೂ ಸಹ ಚಿನ್ನದ ಲೇಪನವನ್ನು ಮಾಡಿದ್ದಾರೆ. ಈತ ಮೂಲತಃ ಪುಣೆ ಸಮೀಪದ ಪಿಂಪ್ರಿ ಚಿಚ್ವಾಡ್‌ ಮೂಲದವರಾಗಿದ್ದು, ಈತನ ಬಳಿ ಮರ್ಸಿಡಿಸ್‌ ಬೆಂಝ್‌ನ ಇ ಕ್ಲಾಸ್‌ ಸೆಡಾನ್‌ ಸಹ ಇದ್ದು ಇದಕ್ಕೂ ಈತ ಚಿನ್ನದ ಬಣ್ಣವನ್ನು ಬಳಿದಿದ್ದಾನೆ.

ಪವರ್‌ಟ್ರೇನ್‌ಗಳ ವಿಷಯಕ್ಕೆ ಬಂದಾಗ, 2024 Mercedes-Benz E-Class LWB ವಿಭಿನ್ನ ಆದ್ಯತೆಗಳು ಮತ್ತು ಮಾರುಕಟ್ಟೆಗಳನ್ನು ಪೂರೈಸಲು ಹಲವಾರು ಆಯ್ಕೆಗಳನ್ನು ನೀಡುತ್ತದೆ. ಚೀನಾದಲ್ಲಿ, LWB ಆವೃತ್ತಿಯು ಆರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಶ್ರೇಣಿಯೊಂದಿಗೆ ಲಭ್ಯವಿದೆ. ಆದಾಗ್ಯೂ, ಭಾರತೀಯ ಮಾರುಕಟ್ಟೆಗೆ, ಪವರ್‌ಟ್ರೇನ್ ಆಯ್ಕೆಗಳ ಕುರಿತು ನಿರ್ಧಿಷ್ಟ ವಿವರಗಳನ್ನು ಇನ್ನೂ ದೃಢೀಕರಿಸಬೇಕಾಗಿದೆ. ಭಾರತೀಯ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ನಿರೀಕ್ಷಿಸಲಾಗದೆ.

Golden Color Vehicle Which Owned By Gold Obsessed People In India

Audi Q7: ಸನ್ನಿ ಬಾಗ್‌ಚುರೆ ಬಳಿ ಇರುವ ಮತ್ತೊಂದು ಕಾರ್‌ ಎಂದರೆ ಅದು Audi Q7 ಎಂಬ ಕಾರು. ಪ್ರಸಿದ್ದ ಕಾರು ನಿರ್ಮಾಣ ಕಂಪನಿಯಾದ ಆಡಿ ಯ ಈ ಕಾರನ್ನು ಸಹ ಈತ ಹೊಂದಿದ್ದು, ಇದಕ್ಕೂ ಸಹ ಗೋಲ್ಡನ್‌ ರಾಪ್‌ ಮಾಡಿಸಿದ್ದಾರೆ. ಈ ಕಾರು ಎರಡು ರೂಪಾಂತರಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ.

ಇದರ ಎಂಜಿನ್‌ ಮತ್ತು ಇತರ ಕಾರ್ಯಗಳನ್ನು ನೋಡುವುದಾದರೆ, ನವೀಕರಿಸಿದ ಆಡಿ ಕ್ಯೂ7 ಎಸ್‍ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಜಾಗ್ವಾರ್

Jaguar XF: ಸನ್ನಿ ಬಾಗ್‌ಚುರೆ ಬಳಿ ಇರುವ ಮತ್ತೊಂದು ಚಿನ್ನದ ಬಣ್ಣದ ಲೇಪನವಿರುವ ಕಾರು ಎಂದರೆ ಅದು ಪ್ರಸಿದ್ದ ಜಾಗ್ವಾರ್ XF. ಈ ಹೊಸ ಜಾಗ್ವಾರ್ ಎಕ್ಸ್ಎಫ್ (Jaguar XF) ಐಷಾರಾಮಿ ಸೆಡಾನ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.71.60 ಲಕ್ಷಗಳಾಗಿದೆ.

ಜಾಗ್ವಾರ್ ಎಕ್ಸ್ಎಫ್ ಸೆಡಾನ್‌ನ ಫೇಸ್‌ಲಿಫ್ಟ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಆರ್-ಡೈನಾಮಿಕ್ ಮತ್ತು ಎಸ್ ಎಂದು ಕರೆಯಲ್ಪಡುವ ಎರಡು ರೂಪಂತರಗಳಲ್ಲಿ ಲಭ್ಯವಿರಲಿದೆ. ಎಕ್ಸ್ಎಫ್ ಸೆಡಾನ್ 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ. ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಐಷಾರಾಮಿ ಸೆಡಾನ್ ಕೇವಲ 6.5 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 21, 2024, 11:35 [IST]
English summary
Golden color vehicle which owned by gold obsessed people in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+