ಪೆಟ್ರೋಲ್‌ಗೆ ಗುಡ್ ಬೈ.. ಮೊನ್ನೆ ಮೊನ್ನೆಯಷ್ಟೇ ವೋಟ್ ಮಾಡಿದ್ದ 18ರ ಯುವ ನಟಿ ಮನೆಗೆ ತಂದ್ರು ಎಲೆಕ್ಟ್ರಿಕ್ ಕಾರು!

ಮಲಯಾಳಂ ಯುವ ನಟಿ ಅನುನಯಾ ಅನೂಪ್ ಅವರು, ಮೀನಾಕ್ಷಿ ಅನೂಪ್ (Meenakshi Anoop) ಎಂಬ ಹೆಸರಿನಿಂದಲೇ ಮನೆ ಮಾತಾಗಿದ್ದಾರೆ. ಅಮರ್ ಅಕ್ಬರ್ ಆಂಥೋನಿ ಹಾಗೂ ಒಪ್ಪಂ ಸಿನಿಮಾದಲ್ಲಿ ಮನೋಜ್ಞವಾಗಿ ನಟಿಸುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದು, ಟಿವಿ ನಿರೂಪಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ.

ಕೇರಳದಲ್ಲಿ ಏಪ್ರಿಲ್ 25ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ್ದ 18ರ ಯುವ ನಟಿ ಮೀನಾಕ್ಷಿ ಅನೂಪ್, ಶುಕ್ರವಾರ ಹೊಚ್ಚ ಹೊಸ ಎಂಜಿ ಕಾಮೆಟ್ ಇವಿಯನ್ನು ಕೊಂಡುಕೊಂಡಿದ್ದಾರೆ. ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸ್ವತಃ ಅವರು ನೂತನ ಎಲೆಕ್ಟ್ರಿಕ್ ಕಾರಿನ ಪಕ್ಕದಲ್ಲಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದು, 'ಪೆಟ್ರೋಲ್.. ಬೈ.. ಡೀಸೆಲ್.. ಬೈ' ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

Good Bye Patrol Actress Meenakshi Anoop Bought MG Comet EV Details

ಈ ಯುವ ನಟಿಗೆ ಎಲೆಕ್ಟ್ರಿಕ್ ಕಾರಿನ ಮೇಲಿರುವ ಪ್ರೀತಿಯನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಸಹ ಮೆಚ್ಚಿದ್ದು, ಶುಭ ಕೋರುತ್ತಿದ್ದಾರೆ. ಮೀನಾಕ್ಷಿ ಅನೂಪ್ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್ 14 ಸಾವಿರಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಎಂಜಿ ಕಾಮೆಟ್ ಇವಿ (MG Comet EV) ರೂ.6.99 ಲಕ್ಷದಿಂದ ರೂ.9.24 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.

ಈ ಕಾರು ಎಕ್ಸಿಕ್ಯೂಟಿವ್, ಎಕ್ಸೈಟ್ ಹಾಗೂ ಎಕ್ಸ್‌ಕ್ಲೂಸಿವ್ ಎಂಬ ಮೂರು ರೂಪಾಂತರಗಳ ಆಯ್ಕೆಯಲ್ಲಿ ದೊರೆಯಲಿದ್ದು, ವಿನ್ಯಾಸದ ದೃಷ್ಟಿಯಿಂದಲೂ ಹೆಚ್ಚು ಅತ್ಯಾಧುನಿಕವಾಗಿದೆ. ಅರೋರಾ ಸಿಲ್ವರ್, ಕ್ಯಾಂಡಿ ವೈಟ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ. ಜೊತೆಗೆ 2-ಡೋರ್ (ಬಾಗಿಲು) ಪಡೆದಿದ್ದು, 4 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ನೂತನ ಎಂಜಿ ಕಾಮೆಟ್ ಇವಿ 17.3 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 42 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 110 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 230 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಕಾಮೆಟ್ ಎಲೆಕ್ಟ್ರಿಕ್ ಕಾರಿನ ಬ್ಯಾಟರಿಯು 3.3 ಕೆಡಬ್ಲ್ಯೂ ಚಾರ್ಜರ್ ಬಳಸಿದಾಗ 0-100% ಚಾರ್ಜ್ ಆಗಲು 7 ಗಂಟೆ ತೆಗೆದುಕೊಳ್ಳುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ 10.25-ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 55ಕ್ಕೂ ಹೆಚ್ಚು ಕನೆಕ್ಟ್ದ್ ಕಾರ್ ಟೆಕ್ ಹಾಗೂ ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಎಂಜಿ ಕಾಮೆಟ್ ಇವಿ ಪುಟ್ಟ ಕಾರಾಗಿದ್ದರೂ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ಡಿಸ್ಕ್ ಬ್ರೇಕ್ಸ್, ಹೋಲ್ಡ್ ಅಸಿಸ್ಟ್‌ ಅನ್ನು ಒಳಗೊಂಡಿದೆ. ಈ ಕಾರಿಗೆ ಟಾಟಾ ಟಿಯಾಗೊ ಇವಿ ಹಾಗೂ ಸಿಟ್ರನ್ ಇಸಿ3 ಕಾರುಗಳು ದೊಡ್ಡ ಪ್ರತಿಸ್ಪರ್ಧಿಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, May 5, 2024, 11:00 [IST]
English summary
Good bye patrol actress meenakshi anoop bought mg comet ev details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+