ಜಾಗತಿಕವಾಗಿ ಈ ಕಾರುಗಳು ಸೂಪರ್ ಹಿಟ್: ಭಾರತದಲ್ಲಿ ಮಾತ್ರ ಅಟ್ಟರ್ ಫ್ಲಾಪ್! ಕಂಪ್ಲೀಟ್ ಲಿಸ್ಟ್ ನಿಮಗಾಗಿ...
ಭಾರತೀಯರ ಟೇಸ್ಟ್ ಹೇಗೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಎಲ್ಲೂ ಓಡದ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಓಡಿದರೆ, ಇನ್ನು ಕೆಲವೊಮ್ಮೆ ಜಾಗತಿಕವಾಗಿ ಸದ್ದು ಮಾಡಿದ ಕಾರುಗಳು ನಮ್ಮ ಮಾರುಕಟ್ಟೆಯಲ್ಲಿ ಓಡುವುದಿಲ್ಲ. ಇಂದಿನ ಲೇಖನದಲ್ಲಿ ನಾವು ಅಂತಹ ಕಾರುಗಳ ಕುರಿತಾಗಿ ನೋಡೋಣ.
ಮಾರುತಿ ಕಿಝಾಶಿ: ಈ ಕಾರಿನ ಬಗ್ಗೆ ಈಗಿನ ತಲೆಮಾರಿಗೆ ಅರಿವೇ ಇರುವುದಿಲ್ಲ ಬಿಡಿ. ಒಂದು ಕಾಲದಲ್ಲಿ ಈ ಕಾರು ಜಾಗತಿಕವಾಗಿ ಸದ್ದು ಮಾಡಿ ಅದೇ ಅಬ್ಬರದಲ್ಲಿ ೨೦೧೧ ನೇ ಇಸವಿಯಲ್ಲಿ ಭಾರತಕ್ಕೂ ಕಾಲಿಟ್ಟಿತ್ತು. ಭಾರೀ ಪರ್ಫಾಮೆನ್ಸ್ ಇದ್ದರೂ, ಅಂದಿನ ಕಾಲದಲ್ಲಿ ಬರೋಬ್ಬರಿ 16 ಲಕ್ಷ ರೂಗಳು ಬೆಲೆ ಬಾಳುತ್ತಿದ್ದರಿಂದ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ತೆರೆ ಮರೆಗೆ ಸರಿಯಿತು.

ಟೊಯೋಟಾ ಯಾರಿಸ್: ಸಖತ್ ಸ್ಟೈಲಿಶ್ ಮತ್ತು ಪ್ರೀಮಿಯಂ ಸೆಗ್ಮೆಂಟ್‌ನ ಸೆಡಾನ್ ಆಗಿದ್ದ ಈ ಟೊಯೋಟಾ ಯಾರಿಸ್ (Toyota Yaris), ಭಾರತೀಯ ಹೆದ್ದಾರಿಗಳಲ್ಲಿ ಅಲ್ಲೊಂದು ಇಲ್ಲೊಂದು ಕಂಡು ಬರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸಿಯಾಜ್, ವೆರ್ನಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದ್ದ ಈ ಕಾರು, ಹೆಚ್ಚಿನ ಬೆಲೆ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿಲ್ಲದೇ ಇದ್ದ ಕಾರಣ ಭಾರತದಲ್ಲಿ ಅಷ್ಟಾಗೊ ಸದ್ದು ಮಾಡಿಲ್ಲ.
ಯಾರಿಸ್ ವಿ ವೇರಿಯೆಂಟ್ ಕಾರುಗಳಲ್ಲಿ ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್ಸ್, ಆರು ಸ್ಪೀಕರ್‍ಗಳುಳ್ಳ ಏಳು ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ರೂಸ್ ಕಂಟ್ರೋಲರ್, ಎಲ್ಇಡಿ ಟೈಲ್‍ಲ್ಯಾಂಪ್ಸ್, ಫಾಲೊ ಮಿ ಫೀಚರ್ ಸೇರಿತ ಆಟೋ ಹೆಡ್‍ಲ್ಯಾಂಪ್‍ಗಳು, 15 ಇಂಚಿನ ಅಲಾಯ್ ಚಕ್ರಗಳು, ಮುಂಭಾಗ ಹಾಗು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‍ಗಳು ಹಾಗು ರೈನ್ ಸೆನ್ಸಿಂಗ್ ವೈಪರ್‍ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿತ್ತು.

ಯಾರಿಸ್‌ನ ಕ್ರಾಸ್‌ಓವರ್ ಮಾಡೆಲ್‌ಗಳನ್ನು ಟೊಯೋಟಾ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಹೊಸ ಟೊಯೊಟಾ ಯಾರಿಸ್ ಕ್ರಾಸ್ ಎಸ್‍ಯುವಿಯ ಇತರ ಬಾಹ್ಯ ಶೈಲಿಯ ಅಂಶಗಳು ದೊಡ್ಡ ಸ್ಕ್ವಾರಿಶ್ ವೀಲ್ ಅರ್ಚ್ ಗಳನ್ನು ಒಳಗೊಂಡಿವೆ, ಇದಕ್ಕೆ ವ್ಯತಿರಿಕ್ತ ಬ್ಲ್ಯಾಕ್ ಕ್ಲಾಡಿಂಗ್ ಮತ್ತು ನೇರವಾದ ರೂಫ್ ಅನ್ನು ಹಿಂಭಾಗದಲ್ಲಿ ಸ್ವಲ್ಪಮಟ್ಟಿಗೆ ಮೊಟಕುಗೊಳಿಸಲಾಗಿದೆ, ಇದು ಸ್ಪೋರ್ಟಿ ವೈಬ್ ಅನ್ನು ನೀಡುತ್ತದೆ. ಇನ್ನು ಈ ಎಸ್‍ಯುವಿ ಹಿಂಭಾಗದಲ್ಲಿ ಅಡ್ಡಲಾಗಿ ಇರಿಸಲಾದ ಟೈಲ್‌ಲೈಟ್‌ಗಳನ್ನು ಹೊಂದಿವೆ.
ಸ್ಕೋಡಾ ಯೆಟಿ: ಭಾರತೀಯ ಮಾರುಕಟ್ಟೆಯಲ್ಲಿ ಫ್ಲಾಪ್ ಆದ ಉತ್ತಮ ಕಾರುಗಳಲ್ಲಿ ಸ್ಕೋಡಾ ಯೆಟಿ ಸಹ ಒಂದು. ಇದರ 2.0 ಲೀಟರ್ ಡೀಸೆಲ್ ಎಂಜಿನ್, 103.52 ಅಶ್ವಶಕ್ತಿ ಉತ್ಪಾದಿಸುತ್ತಿತ್ತು. ಇದರ ಮಗದೊಂದು ಅಡ್ವೆಂಚರ್ ವೆರಿಯಂಟ್ ಗರಿಷ್ಠ 138 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ೨೦೧೪ ಸೆಪ್ಟೆಂಬರ್ 10ರಂದು ಭಾರತಕ್ಕೆ ಕಾಲಿಟ್ಟ ಈ ಕಾರು 15ರಿಂದ 19 ಲಕ್ಷ ರು.ಗಳ ದರಗಳ ರೇಂಜ್‌ನಲ್ಲಿ ಬೆಲೆ ಬಾಳುತ್ತಿತ್ತು.

ಟಾಟಾ ಹೆಕ್ಸಾ: ಟಾಟಾ ಮಾರುಕಟ್ಟೆಗೆ ತಂದ ದೊಡ್ಡ ಎಸ್‌ಯುವಿಗಳಲ್ಲಿ ಪ್ರಮುಖವಾದ ವಾಹನವಾಗಿತ್ತು ಟಾಟಾ ಹೆಕ್ಸಾ. ಮಾರುಕಟ್ಟೆಗೆ ಕಾಳಿಡುವ ಮುನ್ನ ಭಾರೀ ನಿರೀಕ್ಷೆ ಮೂಡಿಸಿದ್ದ ಈ ಕಾರು ಆನಂತರದಲ್ಲಿ ಗ್ರಾಹಕರ ಆಕರ್ಷಣೆಯನ್ನು ಪಡೆದುಕೊಳ್ಳುವಲ್ಲಿ ವಿಫಲವಾಯಿತು ಎನ್ನಬಹುದು. ದೊಡ್ಡ ಗಾತ್ರವಿದ್ದರೂ, ಅತ್ಯಾಧುನಿಕ ಫೀಚರ್‌ಗಳು ಸಾಕಷ್ಟು ಇಲ್ಲದಿದ್ದ ಕಾರಣ ಇದು ಮಾರಿಕಟ್ಟೆಯಲ್ಲಿ ಸದ್ದು ಮಾಡಲಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








