ಮಂತ್ರಾಲಯಕ್ಕೆ ತೆರಳುವವರಿಗೆ ಸಿಹಿಸುದ್ದಿ: ಬೆಂಗಳೂರು - ಕಲಬುರಗಿ ನಡುವೆ ವಿಶೇಷ ರೈಲು.. ವೇಳಾಪಟ್ಟಿ ಏನು?
ನೈರುತ್ಯ ರೈಲ್ವೆ ಇಲಾಖೆಯು (South Western Railway - SWR) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆಗೊಳಿಸಲು ಬೆಂಗಳೂರು (Bengaluru) ಹಾಗೂ ಕಲಬುರಗಿ (Kalaburagi) ಮಧ್ಯೆ ವಿಶೇಷ ರೈಲನ್ನು ಬಿಡುತ್ತಿದೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಬೆಂಗಳೂರು ಮತ್ತು ಕಲಬುರಗಿ ನಡುವೆ ಈ ವಿಶೇಷ ರೈಲು (Special Train) ವಾರಕ್ಕೆ 3 ಬಾರಿ ಸಂಚರಿಸಲಿದೆ. ಮೇ.27 ರಿಂದ ಜೂನ್.27 ರವರೆಗೆ ಸೋಮವಾರ, ಬುಧವಾರ ಹಾಗೂ ಗುರುವಾರ ಮಾತ್ರವೇ ನೂತನ ರೈಲು (ಗಾಡಿ ಸಂಖ್ಯೆ 06261) ಓಡಾಟವನ್ನು ನಡೆಸಲಿದ್ದು, ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ರಾತ್ರಿ 11.50ಕ್ಕೆ ಹೊರಡಲಿದ್ದು, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮಾರ್ಗವಾಗಿ ಮರುದಿನ ಮಧ್ಯಾಹ್ನ 12.30ರ ಸುಮಾರಿಗೆ ಕಲಬುರಗಿಯನ್ನು ತಲುಪುತ್ತದೆ.

ಮೇ.28 ರಿಂದ ಜೂನ್.28 ರವರೆಗೆ ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಕಲಬುರಗಿಯಿಂದ ಈ ವಿಶೇಷ ರೈಲು (ಗಾಡಿ ಸಂಖ್ಯೆ 06262) ಕಾರ್ಯಾಚರಣೆಯನ್ನು ನಡೆಸಲಿದೆ. ಸಂಜೆ 4.50ಕ್ಕೆ ಹೊರಟು ಮರುದಿನ ಬೆಳಗ್ಗೆ 4:45ರ ಸುಮಾರಿಗೆ ಎಸ್ಎಂವಿಟಿ ಬೆಂಗಳೂರು ರೈಲು ನಿಲ್ದಾಣಕ್ಕೆ (SMVT Bengaluru Railway Station) ಬರುತ್ತದೆ.
ನಾಳೆಯಿಂದಲೇ ಓಡಾಟವನ್ನು ಶುರು ಮಾಡುತ್ತಿರುವ ವಿಶೇಷ ರೈಲು ಮಾರ್ಗ ಮಧ್ಯೆ ಹಲವು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಯಲಹಂಕ, ಧರ್ಮಾವರಂ ಜಂಕ್ಷನ್, ಅನಂತಪುರ, ಗುಂತಕಲ್ ಜಂಕ್ಷನ್, ಅದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ ಹಾಗೂ ಶಹಾಬಾದ್‌ನಲ್ಲಿ ನಿಲ್ಲುತ್ತದೆ. ಈ ರೈಲಿನ ವೇಳಾಪಟ್ಟಿ ಸಂಬಂಧ ಮತ್ತಷ್ಟು ವಿವರಗಗಳಿಗೆ ಪ್ರಯಾಣಿಕರು https://enquiry.indianrail.gov.in/mntes/ಗೆ ಭೇಟಿ ನೀಡಬಹುದು.

ಕಲಬುರಗಿ ಮತ್ತು ಎಸ್‌ಎಂವಿಟಿ ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಕೂಡ ಯಶಸ್ವಿಯಾಗಿ ಸಂಚಾರವನ್ನು ನಡೆಸುತ್ತಿದೆ. ಕಲಬುರಗಿಯಿಂದ ಬೆಳಗ್ಗೆ 5.15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 2.40ಕ್ಕೆ ಹೊರಟು ರಾತ್ರಿ 11.30ಕ್ಕೆ ಕಲಬುರಗಿಗೆ ಹಿಂದಿರುಗುತ್ತದೆ. ಯಲಹಂಕ, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್ ಮತ್ತು ರಾಯಚೂರಿನಲ್ಲಿ ನಿಲುಗಡೆಯಾಗುತ್ತದೆ.
ಬೆಂಗಳೂರಿನಿಂದ ಕಲಬುರಗಿಗೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಸಿ ಚೇರ್ ಕಾರ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ರೂ.1,465 ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ ರೂ.2,700 ಟಿಕೆಟ್ ದರವಿದೆ. ಅದೇ ರೀತಿಯಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ಎಸಿ ಚೇರ್ ಕಾರ್‌ನಲ್ಲಿ ರೂ.1,540 ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್‌ನಲ್ಲಿ ರೂ.2765 ಟಿಕೆಟ್ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.

ಇವೆರೆಡು ನಗರಗಳ ನಡುವೆ ಓಡಾಟವನ್ನು ಮಾಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೆಚ್ಚಿನ ಟಿಕೆಟ್ ದರದ ಹೊರತಾಗಿಯೂ ಪ್ರಯಾಣಿಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರ್ಚ್.15 ರಿಂದ ಮೇ.7 ರವರೆಗೆ 21,016 ಮಂದಿ ಸಂಚಾರವನ್ನು ನಡೆಸಿದ್ದಾರೆ. ಏಪ್ರಿಲ್‌ನಲ್ಲಿ 92% ಸೀಟುಗಳು ತುಂಬಿದ್ದವು. ಈ ರೈಲಿನ ಚೇರ್ ಕಾರ್‌ನಲ್ಲಿ 393 ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್‌ನಲ್ಲಿ 38 ಜನರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications