ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಹಲವು ವರ್ಷಗಳು ಕಳೆದಿವೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ದಂಡ ವಿಧಿಸಲಾಗುತ್ತದೆ.

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಎಷ್ಟೇ ನಿಯಮಗಳು ಬಂದರೂ ಪೊಲೀಸರು ಎಷ್ಟೇ ದಂಡ ವಿಧಿಸಿದರೂ ಕೆಲವರು ಹೆಲ್ಮೆಟ್ ಧರಿಸುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನೂ ಕೆಲವರು ಪೊಲೀಸರು ದಂಡ ವಿಧಿಸುವುದರಿಂದ ತಪ್ಪಿಸಿಕೊಳ್ಳಲು ಟೋಪಿಯ ರೀತಿಯಲ್ಲಿ ಕಾಣುವ ಕಳಪೆ ಹೆಲ್ಮೆಟ್ ಧರಿಸುತ್ತಾರೆ.

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಗುಣಮಟ್ಟದ ಹೆಲ್ಮೆಟ್ ಧರಿಸಿದರೆ ಹೇಗೆ ಪ್ರಾಣಾಪಾಯದಿಂದ ಪಾರಾಗಬಹುದು ಎಂಬುದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ವರದಿಯಾಗಿದೆ. ತಲೆಯ ಮೇಲೆ ಬಸ್ ಚಕ್ರ ಹರಿದರೂ ಯುವಕನೊಬ್ಬ ಬದುಕುಳಿದಿದ್ದಾನೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಆತ ಸಣ್ಣಪುಟ್ಟ ಗಾಯಗಳೊಂದಿಗೆ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ. ಅತ್ಯುತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿದ ಕಾರಣದಿಂದಲೇ ಯುವಕನ ಪ್ರಾಣ ಉಳಿದಿದೆ ಎಂಬುದು ಗಮನಾರ್ಹ.

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅರಿಯಲೂರು ಜಿಲ್ಲೆಯ ಸುಂದಕುಡಿ ಪಂಚಾಯತ್ ಮೂಲದ ಸತ್ಯ ಸೀಲನ್ ಎಂಬಾತನೇ ಪವಾಡ ಸದೃಶ ರೀತಿಯಲ್ಲಿ ಪಾರಾದ ಯುವಕ. ಐಟಿ ಉದ್ಯೋಗಿಯಾದ ಆತ ತನ್ನ ದ್ವಿಚಕ್ರ ವಾಹನದಲ್ಲಿ ಹೊರಗೆ ಹೋಗಿದ್ದ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಈ ವೇಳೆ ಅನಿರೀಕ್ಷಿತವಾಗಿ ರಸ್ತೆಯ ಎದುರು ಭಾಗದಲ್ಲಿದ್ದ ಮಿನಿ ಬಸ್‌ ಆತನ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆತನ ಬೈಕ್ ಮಿನಿ ಬಸ್ಸಿನ ಕೆಳಗೆ ಹೋಗಿದೆ. ಸತ್ಯ ಸೀಲನ್ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾನೆ.

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಬಸ್ಸಿನ ಒಂದು ಚಕ್ರ ಬೈಕಿನ ಮೇಲೆ ಹಾಗೂ ಮತ್ತೊಂದು ಚಕ್ರ ಸತ್ಯ ಸೀಲನ್ ತಲೆ ಮೇಲೆ ಹರಿದಿದೆ. ಘಟನೆ ನಡೆದಾಗ ಬಸ್ಸಿನಲ್ಲಿದ್ದ ಪ್ರಯಾಣಿಕರು ಒಂದು ಕ್ಷಣಆಘಾತಕ್ಕೊಳಗಾಗಿದ್ದಾರೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಸತ್ಯ ಸೀಲನ್ ಬಳಸಿದ ಗುಣಮಟ್ಟದ ಹೆಲ್ಮೆಟ್'ನಿಂದಾಗಿ ಆತನ ಪ್ರಾಣ ಉಳಿದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸತ್ಯ ಸೀಲನ್'ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ.

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಸುಂದಕುಡಿಯಲ್ಲಿ ನಡೆದ ಘಟನೆ ಆ ಭಾಗದ ಜನರಲ್ಲಿ ಆಘಾತವನ್ನುಂಟು ಮಾಡಿತ್ತು. ಈ ರೀತಿಯ ಅನಿರೀಕ್ಷಿತ ಘಟನೆಗಳು ಸಂಭವಿಸುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ರಸ್ತೆ ಅಪಘಾತದಲ್ಲಿ ಯುವಕನ ಪ್ರಾಣ ಉಳಿಸಿದ ಗುಣಮಟ್ಟದ ಹೆಲ್ಮೆಟ್

ಭಾರತೀಯ ಮೋಟಾರು ವಾಹನ ಕಾಯ್ದೆಯು ದ್ವಿಚಕ್ರ ವಾಹನ ಸವಾರರಿಗೆ ಮಾತ್ರವಲ್ಲದೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

Most Read Articles

Kannada
English summary
Good quality helmet saves young man's life in accident. Read in Kannada.
Story first published: Thursday, May 6, 2021, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X