ಪೋಷಕರಿಗೆ ಲಕ್ಷುರಿ ಕಾರು ಗಿಫ್ಟ್: ಇಂತಹ ಮಗಳನ್ನು ಪಡೆದವರೇ ಧನ್ಯರು...
ಪೋಷಕರ ಪ್ರೀತಿ - ತ್ಯಾಗಕ್ಕೆ ಯಾವತ್ತೂ ಬೆಲೆ ಕಟ್ಟೋದಕ್ಕೆ ಸಾಧ್ಯವಿಲ್ಲ. ಅವರು ಮಕ್ಕಳಿಂದ ಯಾವುದೇ ಉಡುಗೊರೆ ಬಯಸುವುದಿಲ್ಲ. ಮಕ್ಕಳ ಸಂತೋಷಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡುವ ಅವರಿಗಾಗಿ ನಾವು ಏನು ಕೊಟ್ರೂನು ಕಮ್ಮಿನೇ. ಇತ್ತೀಚೆಗೆ ಗೂಗಲ್ ಇಂಜಿನಿಯರ್ (Google Engineer) ತಮ್ಮ ಪೋಷಕರಿಗೆ ಹೊಸ ಎಂಜಿ ಹೆಕ್ಟರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ತಮ್ಮ ಮಗಳಿಂದ ಈ ಉಡುಗೊರೆಯನ್ನು ಸ್ವೀಕರಿಸಿದ ನಂತರ ಇಬ್ಬರೂ ಪೋಷಕರು ಸಂತೋಷದ ನಗುವನ್ನು ನೋಡಬಹುದು. ಗೂಗಲ್ ಇಂಜಿನಿಯರ್ ತಮ್ಮ ಪೋಷಕರಿಗೆ ಎಂಜಿ ಹೆಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ ವೀಡಿಯೊವನ್ನು ಸ್ಟೋರೀಸ್ ಬೈ ಶೈಲೀ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯು ತನ್ನ ಹೆತ್ತವರನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು MG ಡೀಲರ್‌ಶಿಪ್‌ಗೆ ಕರೆತರುವುದರೊಂದಿಗೆ ವೀಡಿಯೋ ಪ್ರಾರಂಭವಾಗುತ್ತದೆ.

ಅವರ ಆಗಮನದ ನಂತರ, ಮಹಿಳೆ ತನ್ನ ತಂದೆಯ ಕಣ್ಣುಮುಚ್ಚಿ ತೆಗೆಯುತ್ತಾಳೆ. ಮುಂದೆ, ಆಕೆ ತನ್ನ ಪತಿ ಮತ್ತು ಪೋಷಕರೊಂದಿಗೆ ಹೊಸದಾಗಿ ಉಡುಗೊರೆಯಾಗಿ ನೀಡಿದ ಹೆಕ್ಟರ್ ಎಸ್‍ಯುವಿಯ ಕೆಂಪು ಕವರ್ ಅನ್ನು ತೆಗೆದುಕೊಳ್ಳುತ್ತಾಳೆ. ನಂತರ ಅವರು ಕೀಲಿಯನ್ನು ತನ್ನ ಹೆತ್ತವರಿಗೆ ಹಸ್ತಾಂತರಿಸುತ್ತಾರೆ ಮತ್ತು ನಂತರ ಅವರು ಪರಸ್ಪರ ತಬ್ಬಿಕೊಳ್ಳುತ್ತಾರೆ.
ವೀಡಿಯೋದಿಂದ, ಮಹಿಳೆ ತನ್ನ ಪೋಷಕರಿಗೆ ಉಡುಗೊರೆಯಾಗಿ ನೀಡಿರುವುದು ಎಂಜಿ ಹೆಕ್ಟರ್ (MG Hector) ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಂಪನಿಯು ದೇಶದಲ್ಲಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಆದರೆ ಈ ನಿರ್ದಿಷ್ಟ ಕಾರು ಕಪ್ಪು ಬಣ್ಣವನ್ನು ಹೊಂದಿದ್ದು, ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಮಾದರಿ ಆಗಿರುವ ಸಾಧ್ಯತೆ ಇದೆ. ಆದರೆ ಇದರ ಬಗ್ಗೆ ಖಚಿತ ಮಾಹಿತಿ ಇಲ್ಲ.

ಈ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ಮಾದರಿಗೆ ರೂ.21.25 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಎಂಜಿ ಕಂಪನಿಯ ಗ್ಲೋಸ್ಟರ್ ಮತ್ತು ಆಸ್ಟರ್ ಕಾರುಗಳ ನಂತರ, ಹೆಕ್ಟರ್ ಕೂಡ ಸ್ಪೆಷಲ್ ಎಡಿಷನ್‌ನೊಂದಿಗೆ ಬಂದಿದೆ. ಇದರಲ್ಲಿ ನೂತನ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಸ್‌ಯುವಿ ವಿಶೇಷ ಆವೃತ್ತಿಯಾಗಿರುವುದರಿಂದ ಹೊರಭಾಗದ ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.
ಸಂಪೂರ್ಣವಾಗಿ ಕಪ್ಪು (ಬ್ಲ್ಯಾಕ್) ಬಣ್ಣವನ್ನು ಹೊಂದಿರುವ ಈ ಕಾರು, ಅಲ್ಲಲ್ಲಿ ಕೆಂಪು (ರೆಡ್) ಬಣ್ಣವನ್ನು ಒಳಗೊಂಡಿದೆ. ಇದು ಬಿಟ್ಟರೆ, ಬಹುತೇಕ ವಿನ್ಯಾಸ (ಡಿಸೈನ್) ಸಾಮಾನ್ಯ ಹೆಕ್ಟರ್ ಕಾರಿಗೆ ಹೋಲಿಕೆಯಾಗುತ್ತದೆ. ಈ ಎಸ್‍ಯುವಿಯಲ್ಲಿ 18-ಇಂಚಿನ ಆಲ್-ಬ್ಲ್ಯಾಕ್ ಅಲಾಯ್ ವೀಲ್ಸ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್ಸ್, ಟೈಲ್‌ಲೈಟ್ ಅನ್ನು ಹೊಂದಿದೆ.

ಒಳಭಾಗವು ಸಹ ಕಪ್ಪು ಬಣ್ಣದ ಆಯ್ಕೆಯನ್ನು ಪಡೆದಿದ್ದು, ಡ್ಯಾಶ್‌ಬೋರ್ಡ್, ಡೋರ್ ಹ್ಯಾಂಡಲ್ಸ್, ಸ್ಟೀರಿಂಗ್ ವೀಲ್, ಸೆಂಟರ್ ಕನ್ಸೋಲ್ ಹಾಗೂ ಎಸಿ ವೆಂಟ್‌ಗಳು ಹೆಚ್ಚು ಆಕರ್ಷಕವಾಗಿವೆ. ಹೆಡ್‌ರೆಸ್ಟ್ ಬ್ಲ್ಯಾಕ್‌ಸ್ಟಾರ್ಮ್ ಬ್ಯಾಡ್ಜಿಂಗ್ ಅನ್ನು ಹೊಂದಿದ್ದು, ಆಂಬಿಯೆಂಟ್ ಲೈಟಿಂಗ್ ಕೆಂಪು ಬಣ್ಣದಲ್ಲಿವೆ. ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ 2 ಪವರ್‌ಟ್ರೇನ್ ಆಯ್ಕೆಯಲ್ಲಿ ಸಿಗುತ್ತದೆ.
ಇದರ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 141 ಪಿಎಸ್ ಗರಿಷ್ಠ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಮ್ಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. ಈ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ಎಸ್‌ಯುವಿ, 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯೂ ದೊರೆಯಲಿದ್ದು, 168 ಪಿಎಸ್ ಮತ್ತು 350 ಎನ್ಎಂ ಪೀಕ್ ಟಾರ್ಕ್ ಮಾತ್ರ ಹೊರಹಾಕುತ್ತದೆ.
ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ 5, 6 ಅಥವಾ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ಫೀಚರ್ಸ್ ಗಳನ್ನು ಒಳಗೊಂಡಿದೆ.


Click it and Unblock the Notifications








