ಬಿಗ್ ಬಿ ಧ್ವನಿಯೊಂದಿಗೆ ಮತ್ತಷ್ಟು ಹತ್ತಿರವಾಗಲಿದೆ ಗೂಗಲ್ ಮ್ಯಾಪ್‌

ಗೂಗಲ್ ಮ್ಯಾಪ್‌ ದೇಶಾದ್ಯಂತ ಸಾಕಷ್ಟು ಜನಪ್ರಿಯವಾಗಿದ್ದು, ಬಹುತೇಕ ಎಲ್ಲಾ ಕಾರ್ ಹಾಗೂ ಬೈಕ್‌ಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಈ ಮೊದಲು ಗೂಗಲ್ ಮ್ಯಾಪ್‌ಯಲ್ಲಿ ನ್ಯಾವಿಗೇಷನ್ ಆಯ್ಕೆಯನ್ನು ಪ್ರೀಮಿಯಂ ಕಾರುಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಈಗ ಈ ಆಯ್ಕೆಯನ್ನು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗುತ್ತಿದೆ.

ಬಿಗ್ ಬಿ ಧ್ವನಿಯೊಂದಿಗೆ ಮತ್ತಷ್ಟು ಹತ್ತಿರವಾಗಲಿದೆ ಗೂಗಲ್ ಮ್ಯಾಪ್‌

ತಮ್ಮ ಮ್ಯಾಪ್‌‌ನಲ್ಲಿರುವ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೌಲಭ್ಯಕ್ಕೆ ಧ್ವನಿ ನೀಡುವಂತೆ ಗೂಗಲ್ ಇಂಡಿಯಾ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಕೇಳಿಕೊಂಡಿದೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಇಬ್ಬರ ನಡುವೆ ಯಾವುದೇ ಒಪ್ಪಂದವಾಗಿಲ್ಲ.

ಬಿಗ್ ಬಿ ಧ್ವನಿಯೊಂದಿಗೆ ಮತ್ತಷ್ಟು ಹತ್ತಿರವಾಗಲಿದೆ ಗೂಗಲ್ ಮ್ಯಾಪ್‌

ಅಮಿತಾಬ್ ಬಚ್ಚನ್‌ರವರ ಧ್ವನಿ ದೇಶದ್ಯಾಂತ ಚಿರಪರಿಚಿತವಾಗಿದ್ದು, ತಮ್ಮ ಧ್ವನಿಯ ಮೂಲಕ ಗೂಗಲ್ ಮ್ಯಾಪ್ ಅನ್ನು ದೇಶದ ಜನರ ಬಳಿಗೆ ಕೊಂಡೊಯ್ಯುವಂತೆ ಗೂಗಲ್ ಇಂಡಿಯಾ ಕೇಳಿಕೊಂಡಿದೆ. ಇದುವರೆಗೆ ಅಮಿತಾಬ್ ಬಚ್ಚನ್‌ರವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಬಿಗ್ ಬಿ ಧ್ವನಿಯೊಂದಿಗೆ ಮತ್ತಷ್ಟು ಹತ್ತಿರವಾಗಲಿದೆ ಗೂಗಲ್ ಮ್ಯಾಪ್‌

ದೇಶಾದ್ಯಂತ ಸಾಮಾಜಿಕ ಅಂತರವನ್ನು ಅನುಸರಿಸಲಾಗುತ್ತಿದ್ದು, ಅಮಿತಾಬ್ ಬಚ್ಚನ್‌ರವರು ಮನೆಯಿಂದಲೇ ಗೂಗಲ್ ಮ್ಯಾಪ್‌‌ಗೆ ಧ್ವನಿ ನೀಡುವ ಸಾಧ್ಯತೆಗಳಿವೆ. ಈ ಮೂಲಕ ಭಾರತೀಯರು ಗೂಗಲ್ ಮ್ಯಾಪ್‌ನಲ್ಲಿ ಅಮಿತಾಬ್‌ರವರ ಧ್ವನಿಯನ್ನು ಕೇಳಬಹುದು.

ಬಿಗ್ ಬಿ ಧ್ವನಿಯೊಂದಿಗೆ ಮತ್ತಷ್ಟು ಹತ್ತಿರವಾಗಲಿದೆ ಗೂಗಲ್ ಮ್ಯಾಪ್‌

ಸದ್ಯಕ್ಕೆ ಗೂಗಲ್ ಮ್ಯಾಪ್‌ ನ್ಯಾವಿಗೇಷನ್‌ನಲ್ಲಿ ನ್ಯೂಯಾರ್ಕ್ ನಿವಾಸಿ ಕರೆನ್ ಜಾಕೋಬ್ಸನ್ ಅವರ ಧ್ವನಿಯನ್ನು ಬಳಸಲಾಗುತ್ತಿದೆ. ಅಮಿತಾಬ್ ಬಚ್ಚನ್ ಅವರ ಧ್ವನಿ ದೇಶದ ಅತ್ಯಂತ ಜನಪ್ರಿಯ ಮಧ್ಯಮ ಧ್ವನಿಯಾಗಿದೆ. ಈ ಕಾರಣಕ್ಕೆ ಗೂಗಲ್ ಮ್ಯಾಪ್‌ಗೆ ಅವರದು ಸೂಕ್ತವಾದ ಧ್ವನಿಯಾಗಲಿದೆ ಎಂದು ಗೂಗಲ್ ಇಂಡಿಯಾ ಹೇಳಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಬಿಗ್ ಬಿ ಧ್ವನಿಯೊಂದಿಗೆ ಮತ್ತಷ್ಟು ಹತ್ತಿರವಾಗಲಿದೆ ಗೂಗಲ್ ಮ್ಯಾಪ್‌

ದೇಶಾದ್ಯಂತ ಗೂಗಲ್ ಮ್ಯಾಪ್‌ ಅನ್ನು ಬಳಸಲಾಗುತ್ತಿದ್ದು, ಸಾಮಾನ್ಯ ಜನರು ಸಹ ಬಳಸುತ್ತಿದ್ದಾರೆ. ಸ್ಥಳೀಯ ಧ್ವನಿಯಿಂದ ಇದನ್ನು ಮತ್ತಷ್ಟು ಜನಪ್ರಿಯಗೊಳಿಸಲು ಗೂಗಲ್ ಮುಂದಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ಗೂಗಲ್ ಮ್ಯಾಪ್‌ನಲ್ಲಿ ಅಮಿತಾಬ್ ಬಚ್ಚನ್‌ರವರ ಧ್ವನಿಯನ್ನು ಕೇಳಬಹುದು.

ಬಿಗ್ ಬಿ ಧ್ವನಿಯೊಂದಿಗೆ ಮತ್ತಷ್ಟು ಹತ್ತಿರವಾಗಲಿದೆ ಗೂಗಲ್ ಮ್ಯಾಪ್‌

ಕಳೆದ ವರ್ಷದ ಜೂನ್‌ನಲ್ಲಿ ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ ಅನ್ನು ಪರಿಚಯಿಸಲಾಗಿತ್ತು. ಈ ಫೀಚರ್ ಸಂಚಾರ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಲು ಬೇಕಾದ ಅಂದಾಜು ಸಮಯದ ಬಗ್ಗೆ ಮಾಹಿತಿ ನೀಡುತ್ತದೆ. ಈ ಫೀಚರ್ ಅನ್ನು ಕೆಲವು ನಗರಗಳಲ್ಲಿ ಮಾತ್ರ ಪರಿಚಯಿಸಲಾಗಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬಿಗ್ ಬಿ ಧ್ವನಿಯೊಂದಿಗೆ ಮತ್ತಷ್ಟು ಹತ್ತಿರವಾಗಲಿದೆ ಗೂಗಲ್ ಮ್ಯಾಪ್‌

ಗೂಗಲ್ ಮ್ಯಾಪ್‌ನ ಈ ಫೀಚರ್ ಪ್ರಯಾಣಿಕರು ಟ್ರಾಫಿಕ್ ದಟ್ಟಣೆಗೆ ಅನುಗುಣವಾಗಿ ಪ್ರಯಾಣಿಸಲು ತೆಗೆದುಕೊಂಡ ಸಮಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ಫೀಚರ್ ಅನ್ನು ಸದ್ಯಕ್ಕೆ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಪುಣೆ, ಚೆನ್ನೈ, ಲಕ್ನೋ, ಮೈಸೂರು, ಕೊಯಮತ್ತೂರು ಹಾಗೂ ಸೂರತ್‌ಗಳಿಗೆ ವಿಸ್ತರಿಸಲಾಗಿದೆ.

Most Read Articles

Kannada
English summary
Google Maps India could use Amitabh Bachchan voice for navigation. Read in Kannada.
Story first published: Tuesday, June 9, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X