ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಅದರಲ್ಲೂ ದೆಹಲಿ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್ 19 ವೈರಸ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಕಳೆದ ಕೆಲವು ದಿನಗಳಿಂದ ವಿಪರೀತವಾಗಿ ಏರಿಕೆಯಾಗುತ್ತಿದೆ.

ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ಕೋವಿಡ್ 19 ಹರಡುವುದನ್ನು ತಡೆಯಲು ಹಲವು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಜನರು ಕಡ್ಡಾಯವಾಗಿ ಫೇಸ್‌ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಫೇಸ್‌ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸಲಾಗುತ್ತಿದೆ. ಫೇಸ್‌ಮಾಸ್ಕ್ ಧರಿಸದೇ ಬಸ್ ಚಾಲನೆ ಮಾಡುತ್ತಿದ್ದ ಸರ್ಕಾರಿ ಬಸ್ ಚಾಲಕನಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಂಡ ವಿಧಿಸಿರುವ ಬಗ್ಗೆ ವರದಿಯಾಗಿದೆ.

ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ತಮಿಳುನಾಡಿನ ಮಧುರೈ ಅರಪ್ಪಲಾಯಂ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಸರ್ಕಾರಿ ಬಸ್ ಚಾಲಕನೊಬ್ಬ ಫೇಸ್‌ಮಾಸ್ಕ್ ಧರಿಸದೇ ಇರುವುದು ತಿಳಿದುಬಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ಈ ಹಿನ್ನೆಲೆಯಲ್ಲಿ ಆತನಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ರೂ.200 ದಂಡ ವಿಧಿಸಿದ್ದಾರೆ. ಈ ಬಗ್ಗೆ ನ್ಯೂಸ್ 7 ತಮಿಳು ವರದಿ ಮಾಡಿದೆ. ತಮಿಳುನಾಡಿನಾದ್ಯಂತ ಫೇಸ್‌ಮಾಸ್ಕ್ ಧರಿಸದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ಅಧಿಕಾರಿಗಳು ಬಸ್ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳಲ್ಲಿ ತಪಾಸಣೆ ನಡೆಸಿ ದಂಡ ವಿಧಿಸುತ್ತಿದ್ದಾರೆ. ಜನರು ಮನೆಯಿಂದ ಹೊರ ಬರುವ ಮುನ್ನ ಫೇಸ್‌ಮಾಸ್ಕ್ ಧರಿಸುವುದು ಒಳ್ಳೆಯದು. ಇದು ಕರೋನಾ ವೈರಸ್‌ನಿಂದ ಮಾತ್ರವಲ್ಲದೆ ಅಧಿಕಾರಿಗಳ ಕ್ರಮದಿಂದಲೂ ನಮ್ಮನ್ನು ಕಾಪಾಡುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ಫೇಸ್‌ಮಾಸ್ಕ್ ಧರಿಸದೇ ಪೆಟ್ರೋಲ್ ಬಂಕ್'ಗಳಿಗೆ ಬರುವವರಿಗೆ ಪೆಟ್ರೋಲ್ ಮಾರಾಟ ಮಾಡುವುದಿಲ್ಲವೆಂದು ತಮಿಳುನಾಡಿನ ಪೆಟ್ರೋಲಿಯಂ ಮಾರಾಟಗಾರರ ಸಂಘವು ಕೆಲವು ದಿನಗಳ ಹಿಂದಷ್ಟೇ ಘೋಷಿಸಿತ್ತು. ಪೆಟ್ರೋಲಿಯಂ ಮಾರಾಟಗಾರರ ಈ ಕ್ರಮಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಫೇಸ್‌ಮಾಸ್ಕ್'ಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಕೆಲವರು ಫೇಸ್‌ಮಾಸ್ಕ್ ಧರಿಸಲು ಅಸಡ್ಡೆ ತೋರುತ್ತಿದ್ದಾರೆ. ಇದು ಅವರಿಗೆ ಮಾತ್ರವಲ್ಲದೆ ಇತರರಿಗೂ ಸಮಸ್ಯೆಗಳನ್ನು ತಂದೊಡ್ಡುತ್ತವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ಈ ಕಾರಣಕ್ಕೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಫೇಸ್‌ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ದೆಹಲಿ ಹೈಕೋರ್ಟ್ ಕೆಲವು ದಿನಗಳ ಹಿಂದಷ್ಟೇ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರು ಸಹ ಕಡ್ಡಾಯವಾಗಿ ಫೇಸ್‌ಮಾಸ್ಕ್ ಧರಿಸುವಂತೆ ಸೂಚನೆ ನೀಡಿದೆ.

ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ದಂಡ ತೆತ್ತ ಸರ್ಕಾರಿ ಬಸ್ ಚಾಲಕ

ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವ ವೇಳೆ ಫೇಸ್‌ಮಾಸ್ಕ್ ಧರಿಸದೇ ಇದ್ದ ಕಾರಣಕ್ಕೆ ದಂಡ ವಿಧಿಸಲಾಗಿದ್ದನ್ನು ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಈ ಆದೇಶ ನೀಡಿದೆ. ದೆಹಲಿ ಹೈಕೋರ್ಟ್ ವಿಚಾರಣೆ ವೇಳೆ ಫೇಸ್‌ಮಾಸ್ಕ್ ಧರಿಸುವ ಅಗತ್ಯತೆ ಬಗ್ಗೆ ಹೇಳಿದೆ.

Most Read Articles

Kannada
English summary
Government bus driver fined for not wearing mask in Tamilnadu. Read in Kannada.
Story first published: Monday, April 12, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X