ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಸಾಮಾನ್ಯವಾಗಿ ಪ್ರವಾಸಿ ತಾಣಗಳಲ್ಲಿರುವ ಲಾಡ್ಜ್ ಗಳು ಬೇರೆ ಸ್ಥಳಗಳಿಗಿಂತ ಹೆಚ್ಚು ಶುಲ್ಕವನ್ನು ವಿಧಿಸುತ್ತವೆ. ಈ ಕಾರಣಕ್ಕೆ ಕಡಿಮೆ ಖರ್ಚಿನಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಬಯಸುವವರು, ಉಳಿದುಕೊಳ್ಳಲು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಇಂತಹ ಜನರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೇರಳ ರಾಜ್ಯದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಮುನ್ನಾರ್ ಸಹ ಒಂದು. ಮುನ್ನಾರ್ ಗೆ ಭಾರತದಿಂದ ಮಾತ್ರವಲ್ಲದೆ ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅಲ್ಲಿರುವ ಲಾಡ್ಜ್ ಗಳಲ್ಲಿ ಭಾರೀ ಪ್ರಮಾಣದ ಶುಲ್ಕ ವಿಧಿಸುವ ಕಾರಣಕ್ಕೆ ಮಧ್ಯಮ ವರ್ಗದ ಜನರು ಉಳಿದುಕೊಳ್ಳುವುದಕ್ಕೆ ತೊಂದರೆಯಾಗುತ್ತದೆ.

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಈ ಸಮಸ್ಯೆಯನ್ನು ಪರಿಹರಿಸಲು ಮುನ್ನಾರ್‌ನಲ್ಲಿ ಲಾಡ್ಜ್ ಬಸ್ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಹೆಸರಿಗೆ ತಕ್ಕಂತೆ ಬಸ್ ಅನ್ನು ಲಾಡ್ಜ್ ಆಗಿ ಬದಲಿಸಲಾಗಿದೆ. ಕೇರಳದ ರಸ್ತೆ ಸಾರಿಗೆ ನಿಗಮವು ಇದಕ್ಕಾಗಿ ವ್ಯವಸ್ಥೆ ಮಾಡಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಲಾಡ್ಜ್ ಗಳಲ್ಲಿ ಉಳಿಯಲು ಸಾಧ್ಯವಾಗದವರು ಈ ಸೌಲಭ್ಯವನ್ನು ಪಡೆಯಬಹುದು. ಈ ಸೇವೆಯನ್ನು ನೀಡಲು ಬಹಳ ಕಡಿಮೆ ಶುಲ್ಕ ವಿಧಿಸಲಾಗುತ್ತದೆ. ಇವುಗಳು ಸಾಮಾನ್ಯ ಬಸ್‌ಗಳಲ್ಲ. ಬದಲಿಗೆ ಸ್ಲೀಪರ್ ಬಸ್ ಗಳು.

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಇದರಿಂದಾಗಿ ಪ್ರವಾಸಿಗರು ಈ ಬಸ್ ಗಳಲ್ಲಿ ಮಲಗಲು ಸಾಧ್ಯವಾಗಲಿದೆ. ಈ ಬಸ್‌ಗಳಲ್ಲಿ ಸೆಲ್ ಫೋನ್ ಚಾರ್ಜ್ ಮಾಡುವ ಸೌಲಭ್ಯವನ್ನೂ ಸಹ ನೀಡಲಾಗಿದೆ. ಹೊರಗಿನಿಂದ ಆಹಾರವನ್ನು ತಂದು ಈ ಬಸ್‌ನಲ್ಲಿ ಕುಳಿತು ತಿನ್ನಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಇದಕ್ಕೆ ಅನುಗುಣವಾಗಿ ಟೇಬಲ್, ಕುಡಿಯುವ ನೀರು ಹಾಗೂ ಕೈ ತೊಳೆಯುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಸ್‌ನಲ್ಲಿ ಎಸಿ ಸೌಲಭ್ಯವನ್ನು ಸಹ ನೀಡಲಾಗಿದೆ. ಮುನ್ನಾರ್‌ನಲ್ಲಿನ ಹವಾಮಾನಕ್ಕೆ ಎಸಿ ಅಗತ್ಯವಿಲ್ಲದಿದ್ದರೂ ಈ ಫೀಚರ್ ಅನ್ನು ನೀಡಲಾಗಿದೆ.

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಈ ಬಸ್‌ನಲ್ಲಿ ಒಂದು ಬಾರಿಗೆ ಗರಿಷ್ಠ 16 ಜನರು ತಂಗಬಹುದು. ಸದ್ಯಕ್ಕೆ 2 ಎಸಿ ಬಸ್ಸುಗಳು ಈ ಸೇವೆಯನ್ನು ನೀಡುತ್ತಿವೆ. ಎರಡೂ ಬಸ್ಸುಗಳು ತಲಾ 16 ಹಾಸಿಗೆಗಳನ್ನು ಹೊಂದಿವೆ. ಈ ಸೇವೆಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ರಜಾ ದಿನಗಳಲ್ಲಿ ಈ ಬಸ್‌ಗಳಲ್ಲಿರುವ ಎಲ್ಲಾ ಹಾಸಿಗೆಗಳು ಭರ್ತಿಯಾಗಿವೆ ಎಂದು ವರದಿಗಳಾಗಿವೆ. ಈ ಕಾರಣಕ್ಕೆ ಕೇರಳ ರಸ್ತೆ ಸಾರಿಗೆ ನಿಗಮವು ಮತ್ತಷ್ಟು ಬಸ್ಸುಗಳನ್ನು ಈ ಸೇವೆಗೆ ನಿಯೋಜಿಸುವ ನಿರೀಕ್ಷೆಗಳಿವೆ.

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಈ 2 ಲಾಡ್ಜ್ ಬಸ್‌ಗಳನ್ನು ಮುನ್ನಾರ್‌ನ ಡಿಪೋದಲ್ಲಿ ನಿಲ್ಲಿಸಲಾಗುವುದು. ಪ್ರವಾಸಿಗರು ಅಲ್ಲಿಗೆ ತೆರಳಿ ಈ ಸೇವೆಯನ್ನು ಪಡೆಯಬಹುದು. ಈ ಬಸ್‌ಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ. ಆದರೆ ಡಿಪೋದಲ್ಲಿನ ಶೌಚಾಲಯಗಳನ್ನು ಬಳಸಿಕೊಳ್ಳಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಪ್ರವಾಸಿಗರ ಲಗೇಜ್ ಗಳನ್ನು ಸುರಕ್ಷಿತವಾಗಿಡಲು ಈ ಬಸ್‌ಗಳಲ್ಲಿ ಸೌಲಭ್ಯಗಳಿವೆ. ಈ ಬಸ್‌ನಲ್ಲಿ ವ್ಯಕ್ತಿಯೊಬ್ಬರಿಗೆ ದಿನಕ್ಕೆ ರೂ.100 ಶುಲ್ಕ ವಿಧಿಸಲಾಗುತ್ತದೆ. ಐದು ಜನರ ಕುಟುಂಬಕ್ಕೆ ರೂ.500ಗಳ ಶುಲ್ಕ ವಿಧಿಸಲಾಗುತ್ತದೆ.

ಕಡಿಮೆ ಬೆಲೆಯಲ್ಲಿ ಲಾಡ್ಜಿಂಗ್ ಸೇವೆಯನ್ನು ನೀಡಲಿವೆ ಈ ಬಸ್ಸುಗಳು

ಹೋಟೆಲ್‌ಗಳಲ್ಲಿ ತಂಗಲು ಇದಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಕಡಿಮೆ ವೆಚ್ಚದಲ್ಲಿ ಮುನ್ನಾರ್‌ನಲ್ಲಿ ತಂಗಲು ಬಯಸುವವರಿಗೆ ಈ ಯೋಜನೆಯು ವರದಾನವಾಗುವುದರಲ್ಲಿ ಸಂದೇಹವಿಲ್ಲ. ಇತರ ರಾಜ್ಯಗಳ ಸಾರಿಗೆ ಸಂಸ್ಥೆಗಳು ಸಹ ಈ ರೀತಿಯ ಸೇವೆಯನ್ನು ನೀಡಬಹುದು.

Most Read Articles

Kannada
English summary
Government buses offers low cost lodging facility in Munnar. Read in Kannada.
Story first published: Monday, December 7, 2020, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X