ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸೌಲಭ್ಯ ಹೊಂದಿರುವ ಈ ಬಸ್ಸುಗಳು

ಕರೋನಾ ವೈರಸ್‌ನ ಎರಡನೇ ಅಲೆ ದೇಶಾದ್ಯಂತ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ದೇಶಾದ್ಯಂತವಿರುವ ಬಹುತೇಕ ಎಲ್ಲಾ ಆಸ್ಪತ್ರೆಗಳು ಜನರಿಂದ ಕಿಕ್ಕಿರಿದು ತುಂಬಿವೆ. ಇದರಿಂದ ಬೆಡ್'ಗಳ ಕೊರತೆ ಎದುರಾಗಿದೆ.

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಕರೋನಾ ವೈರಸ್ ಎರಡನೇ ಅಲೆಯಲ್ಲಿ ಜನರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದ ಸೋಂಕಿತರಿಗೆ ಆಕ್ಸಿಜನ್ ಅವಶ್ಯಕತೆ ಎದುರಾಗುತ್ತಿದೆ. ಆದರೆ ದೇಶಾದ್ಯಂತ ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಆಕ್ಸಿಜನ್ ಕೊರತೆ ಉಂಟಾಗಿದೆ.

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಸಕಾಲಕ್ಕೆ ಆಕ್ಸಿಜನ್ ದೊರಕದ ಕಾರಣ ಇದುವರೆಗೂ ಸಹಸ್ರಾರು ಜನ ಸಾವನ್ನಪ್ಪಿದ್ದಾರೆ. ಬೆಡ್'ಗಳ ಕೊರತೆ ಎದುರಾಗಿರುವುದರಿಂದ ಚಿಕಿತ್ಸೆಗೆ ಬರುವವರು ಆಂಬ್ಯುಲೆನ್ಸ್‌ನಲ್ಲಿಯೇ ಗಂಟೆ ಗಟ್ಟಲೇ ಕಾಯಬೇಕಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಕರೋನಾ ವೈರಸ್'ನಿಂದ ಹೆಚ್ಚು ಬಾಧಿತವಾಗಿರುವ ರಾಜ್ಯಗಳಲ್ಲಿ ತಮಿಳುನಾಡು ಸಹ ಸೇರಿದೆ. ತಮಿಳುನಾಡಿನಲ್ಲಿ ಪ್ರತಿದಿನ ಸರಾಸರಿ 3,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಇದರಲ್ಲಿ ಬಹುತೇಕ ಜನರು ಬಡವರಾಗಿರುವುದರಿಂದ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿವೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಸೋಂಕಿತರಿಗೆ ನೆರವಾಗಲು ಸರ್ಕಾರ ಹಾಗೂ ಕೆಲವು ಖಾಸಗಿ ಕಂಪನಿಗಳು ವಿವಿಧ ಕ್ರಮಗಳನ್ನು ಕೈಗೊಂಡಿವೆ. ಕರೋನಾ ವೈರಸ್‌ನಿಂದ ಹೆಚ್ಚು ತತ್ತರಿಸಿರುವ ಕೊಯಮತ್ತೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಖಾಸಗಿ ಕಂಪನಿಗಳು ಆಕ್ಸಿಜನ್ ಹೊಂದಿರುವ ಎರಡು ಬಸ್‌ಗಳನ್ನು ನೀಡಿವೆ.

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಕೆಜಿಐಎಸ್ಎಲ್ ಹಾಗೂ ಸೆವಾ ಕೇಸ್ ಎಂಬ ಕಂಪನಿಗಳು ಆಕ್ಸಿಜನ್ ಹೊಂದಿರುವ ಈ ಬಸ್ಸುಗಳನ್ನು ನೀಡಿವೆ. ಆಕ್ಸಿಜನ್ ಅಗತ್ಯವಿರುವ ಕರೋನಾ ಸೋಂಕಿತರಿಗೆ ಈ ಬಸ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಈ ಬಸ್ಸುಗಳು ತಲಾ 12 ಸೀಟುಗಳನ್ನು ಹೊಂದಿದ್ದು, ಆಕ್ಸಿಜನ್ ಸಿಲಿಂಡರ್‌ಗಳನ್ನು ಹೊಂದಿವೆ. ಪ್ರತಿ ಬಸ್‌ನಲ್ಲಿ 7 ಕ್ಯೂಬಿಕ್ ಮೀಟರ್ ಸಾಮರ್ಥ್ಯ ಹೊಂದಿರುವ ತಲಾ 6 ಸಿಲಿಂಡರ್‌ಗಳನ್ನು ಇಡಲಾಗಿದೆ.

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಈ ಎರಡು ಬಸ್‌ಗಳಿಂದ ಒಟ್ಟು 24 ರೋಗಿಗಳು ಪ್ರಯೋಜನ ಪಡೆಯಬಹುದು. ಈ ಬಸ್‌ಗಳಲ್ಲಿ ದಿನಕ್ಕೆ 24 ರೋಗಿಗಳಿಗೆ ಅಗತ್ಯವಾದ ಆಕ್ಸಿಜನ್ ಸದಾ ಕಾಲ ಲಭ್ಯವಿರುತ್ತದೆ ಎಂದು ವರದಿಯಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವವರಿಗೆ ವರದಾನವಾಗಲಿವೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಈ ಬಸ್ಸುಗಳು

ಕೊಯಮತ್ತೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವವರಿಗೆ ಈ ಎರಡು ಬಸ್ಸುಗಳು ವರದಾನವಾಗಿವೆ. ಕರ್ನಾಟಕದಲ್ಲಿಯೂ ಇತ್ತೀಚಿಗೆ ಈ ರೀತಿಯ ಬಸ್ಸುಗಳಿಗೆ ಚಾಲನೆ ನೀಡಲಾಗಿದೆ.

Most Read Articles

Kannada
English summary
Government hospital in Coimbatore gets two buses with oxygen facility. Read in Kannada.
Story first published: Wednesday, May 19, 2021, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X