ನೈಜತೆಗೆ ಹತ್ತಿರವಾದ ಹುಲ್ಲುಹಾಸಿನ ಕಾರು

Written By:

ಜಾಗತಿಕ ತಾಪಮಾನದ ಪ್ರಭಾವದಿಂದಾಗಿ ಪರಿಸರದಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ಮಾನವ ತನ್ನ ಅವಶ್ಯಕತೆಗಳಿಗೆ ಅನುಗುಣವಾಗಿ ತಿಳಿದೋ ತಿಳಿಯದೆಯೋ ಪರಿಸರವನ್ನು ದುರ್ಬಳಕೆ ಮಾಡುತ್ತಿದ್ದಾನೆ. ವಾಹನಗಳಿಂದ ಹೊರಬರುವ ಕಾರ್ಬನ್ ಡೈಓಕ್ಸೈಡ್ ಮಾಲಿನ್ಯವು ವಾತಾವರಣದಲ್ಲಿ ಅತಿ ಹೆಚ್ಚಿನ ದುಷ್ಫರಿಣಾಮವನ್ನುಂಟು ಮಾಡುತ್ತಿದೆ. ವಿಪರ್ಯಾಸವೆಂದರೆ ಇಂಧನ ಚಾಲಿತ ವಾಹನಗಳ ಬಳಕೆಯಲ್ಲೇನು ಕಡಿಮೆಯಾಗಿಲ್ಲ.

Also Read: ನನಸಾಗದೇ ಉಳಿದ ಸ್ಟೀವ್ ಜಾಬ್ಸ್ ಕನಸು!

ಹಾಗಿದ್ದರೂ ಸುಸ್ಥಿರ ಪರಿಸರ ಸಂರಕ್ಷಣೆಗಾಗಿ ಹೊಸ ಹೊಸ ತಂತ್ರಗಾರಿಕೆಯ ನಿರಂತರ ಅಧ್ಯಯನ ಮುಂದುವರಿದಿರಿ. ಎಲೆಕ್ಟ್ರಿಕ್ ವಾಹನಗಳು ಇದೆಕ್ಕೊಂದು ಇದಕ್ಕೊಂದು ಅತ್ಯುತ್ತಮ ಮಾರ್ಗೋಪಾಯವಾಗಿದೆ. ಆದರೆ ನಾವಿಂದು ಪರಿಚಯಿಸುವ ಸಂಸ್ಥೆಯು ಇನ್ನು ಒಂದು ಹೆಜ್ಜೆ ಮುಂದಿಟ್ಟಿದ್ದು, ಹಸಿರು ತ್ವಚ್ಛೆಯ ಕಾರನ್ನು ಸೃಷ್ಟಿ ಮಾಡಿದೆ. ಇದರಿಂದಾಗುವ ಲಾಭವೇನು ಗೊತ್ತಾ? ಇದಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
ನೈಜತೆಗೆ ಹತ್ತಿರವಾದ ಹುಲ್ಲುಹಾಸಿನ ಕಾರು

ಸ್ಟುಟ್‌ಗಾರ್ಟ್ ತಳಹದಿಯ ಮೂವಲ್ ಲ್ಯಾಬ್ ಎಂಬ ಸಂಸ್ಥೆಯೇ ಈ ವಿಶಿಷ್ಟ ಗ್ರೀನ್ ಸ್ಕಿನ್ ಸ್ಮಾರ್ಟ್ ಫಾರ್ ಟು ಯೋಜನೆಯೊಂದಿಗೆ ಮುಂದೆ ಬಂದಿದೆ. ಪರಿಸರದ ಸಂರಕ್ಷಣೆಗಾಗಿ ಬದಲಿ ವ್ಯವಸ್ಥೆಯನ್ನು ಹುಕುಡುವಾಗ ಇದು ನೈಜತೆಗೆ ಹತ್ತಿರವಾಗಿ ಕಂಡುಬರುತ್ತದೆ.

ನೈಜತೆಗೆ ಹತ್ತಿರವಾದ ಹುಲ್ಲುಹಾಸಿನ ಕಾರು

ಇಲ್ಲಿ ಸ್ಮಾರ್ಟ್ ಫಾರ್ ಟು ಕಾರಿನ ಹೊರಮೈಯಲ್ಲಿ ಸಂಪೂರ್ಣ ಹುಲ್ಲುಹಾಸಲಾಗಿದೆ. ಇದಕ್ಕೆ ನೀರು ಸಿಂಪಡನೆ ಹಾಗೂ ಸೂರ್ಯ ರಶ್ಮಿಗಳು ಬಿದ್ದಾಗ ಉಸಿರಾಡಲು ಆಮ್ಲಜನಕ ಉತ್ಪಾದನೆಯಾಗುತ್ತದೆ.

ನೈಜತೆಗೆ ಹತ್ತಿರವಾದ ಹುಲ್ಲುಹಾಸಿನ ಕಾರು

ವಾಸ್ತವಾಂಶಕ್ಕೆ ಹತ್ತಿರವಾಗಿರುವ ಯೋಜನೆಯನ್ನು ಈ ಮೊದಲು ಯಾಕೆ ಏಕೆ ಯಾರೂ ಯೋಚಿಸಿಲ್ಲ? ನಿಜಾಂಶವೆಂದರೆ ಬೃಹತ್ತಾದ ಕಟ್ಟಡಗಳಲ್ಲಿ ಇದಕ್ಕೆ ಸಮಾನವಾದ ಯೋಜನೆಗಳು ಈಗಾಗಲೇ ಜಾರಿಯಾಲಿದ್ದು, ಹೆಚ್ಚು ಪ್ರಾಯೋಗಿಕವೆನಿಸಿದೆ.

ನೈಜತೆಗೆ ಹತ್ತಿರವಾದ ಹುಲ್ಲುಹಾಸಿನ ಕಾರು

ಮೂವಲ್ ಲ್ಯಾಬ್ ವಿವರಣೆ ನೀಡುವ ಪ್ರಕಾರ, "ಗ್ರಿನ್ ಸ್ಕಿನ್ ಕಾರುಗಳು ವರ್ಷಂಪ್ರತಿ ವಾಯು ವಲಯದಿಂದ ಏಳು ಕೆ.ಜಿಗಳಷ್ಟು ಕಾರ್ಬನ್ ಡೈಓಕ್ಸೈಡ್ ಮಾಲಿನ್ಯವನ್ನು ಹೊರ ಹಾಕಲಿದೆ." ತಾರತಮ್ಯೇನ ಇದು ಕಡಿಮೆ ಅನಿಸಿದರೂ ಎಲೆಕ್ಟ್ರಿಕ್ ವಾಹನಗಳಲ್ಲಿ ಇದರ ಬಳಕೆ ಹೆಚ್ಚು ಹೊಂದಿಕೆಯಾಗಲಿದೆ.

ನೈಜತೆಗೆ ಹತ್ತಿರವಾದ ಹುಲ್ಲುಹಾಸಿನ ಕಾರು

ನಿಸ್ಸಂಶಯವಾಗಿಯೂ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಾದ ಕಾಲ ಹತ್ತಿರ ಬಂದಿದೆ. ಆದರೆ ವಾಹನ ಪ್ರೇಮಿಗಳು ಇದನ್ನು ಎಷ್ಟರ ಮಟ್ಟಿಗೆ ಸ್ವಾಗತ ಮಾಡಲಿದ್ದಾರೆ ಎಂಬುದು ಚಿಂತೆಯ ವಿಷಯವಾಗಿದೆ. ಈ ಬಗ್ಗೆ ನಿಮ್ಮಲ್ಲಿ ಮೂಡುವ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

English summary
Greenskin car potential for greening the city
Story first published: Tuesday, December 1, 2015, 9:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark