ಕೊನೆಯ ಕ್ಷಣದಲ್ಲಿ ಮದುವೆ ರದ್ದು... ಕ್ರೆಟಾ ಬೇಕೆಂದು ವರನ ಹಠ! ನೊಂದ ವಧು ಹೇಳಿದ್ದೇನು?

ಭಾರತದಲ್ಲಿ ವರದಕ್ಷಿಣೆ ಕೊಡುವುದು ಅಥವಾ ಸ್ವೀಕರಿಸುವುದು ಕಾನೂನುಬಾಹಿರ, ಆದರೂ ಜನ ಉಡುಗೊರೆ ನೆಪದಲ್ಲಿ ವರದಕ್ಷಿಣೆ ಆಚಾರವನ್ನು ಮುಂದುವರಿಸುತ್ತಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಾಚಿಕೆಗೇಡಿನ ಘಟನೆಯೊಂದು ನಡೆದಿದೆ. ವರನೊಬ್ಬ ಹ್ಯುಂಡೈ ಕ್ರೆಟಾವನ್ನು ವರದಕ್ಷಿಣೆಯಾಗಿ ಕೇಳಿದ್ದು, ವಧುವಿನ ಕುಟುಂಬ ಮಾರುತಿ ಸುಜುಕಿ ವ್ಯಾಗನ್-ಆರ್ ನೀಡಿದ ಕಾರಣ ಮದುವೆ ನಿಲ್ಲಿಸಲಾಗಿದೆ.

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಈ ಘಟನೆ ನಡೆದಿದ್ದು, ವರನನ್ನು ಅಮೀರ್ ಆಲಂ ಎಂದು ಗುರುತಿಸಲಾಗಿದೆ. ವಧುವಿನ ಕುಟುಂಬವು ವರನಿಗೆ ಮಾರುತಿ ಸುಜುಕಿ ವ್ಯಾಗನ್ - ಆರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ವರನ ಕುಟುಂಬ ಹ್ಯುಂಡೈ ಕ್ರೆಟಾ ಬೇಕಿಂದು ಒತ್ತಾಯಿಸಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ವಧುವಿನ ಮನೆಗೆ ಮದುವೆ ಮೆರವಣಿಗೆ ಮೂಲಕ ಭೇಟಿ ನೀಡುವುದನ್ನು ನಿಲ್ಲಿಸಿ, ಕೊನೆಯ ಕ್ಷಣದಲ್ಲಿ ಮದುವೆಯನ್ನು ರದ್ದುಗೊಳಿಸಿದ್ದಾರೆ. ಮದುವೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡ ಬಳಿಕ, ಕಾರಿನ ಕಾರಣದಿಂದಾಗಿ ವರನು ಮದುವೆಯನ್ನು ರದ್ದುಗೊಳಿಸಿದ್ದಾನೆ ಎಂದು ತಿಳಿದು ವಧುವಿನ ಕಡೆಯವರು ಆಘಾತಕ್ಕೊಳಗಾಗಿದ್ದಾರೆ.

groom-cancels-marriage-for-giving-maruti-wagon-r-instead-of-hyundai-creta

ವರನ ವಿರುದ್ಧ ಕೇಸ್: ವರನು ದೊಡ್ಡ ಕಾರನ್ನು ಒತ್ತಾಯಿಸಿ, ಉಡುಗೊರೆ (ವರದಕ್ಷಿಣೆ) ಸಿಗದಿದ್ದಾಗ ಮದುವೆಯನ್ನು ರದ್ದುಗೊಳಿಸಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಬಗ್ಗೆ ನಿಖರವಾದ ವಿವರಗಳು ಹೊರಬಿದ್ದಿಲ್ಲ. ಉತ್ತರ ಪ್ರದೇಶದ ಹಲವೆಡೆ ಇದು ಸಾಮಾನ್ಯ ದೃಶ್ಯವಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ವಧುವಿನ ಕುಟುಂಬಕ್ಕೆ ಮದುವೆ ರದ್ದು ಮಾಡಿರುವ ಬಗ್ಗೆ ಕೊನೆಯ ಕ್ಷಣದಲ್ಲಿ ಮಾತ್ರ ತಿಳಿದಿದೆ. ಕೇವಲ ಕಾರು ನೀಡದ ಕಾರಣದಿಂದಾಗಿ ವರನು ಮದುವೆಯನ್ನು ರದ್ದುಗೊಳಿಸಿದ್ದಾನೆ. ಕಳೆದ ಎರಡು ದಿನಗಳಿಂದ ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ, ಮದುವೆಯಾಗಬೇಕಿದ್ದ ಯುವತಿ ತಮ್ಮ ದುಃಖವನ್ನು ಹೇಳಿಕೊಂಡಿದ್ದಾರೆ.

groom-cancels-marriage-for-giving-maruti-wagon-r-instead-of-hyundai-creta

ಮದುವೆಯಾಗಬೇಕ್ಕಿದ್ದ ಯುವತಿಯು ಕಣ್ಣೀರಿಡುತ್ತಾ ಇಡೀ ವಿಷಯವನ್ನು ವಿವರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ತನ್ನ ಕುಟುಂಬವನ್ನು ಯಾವುದೇ ಕಾರಣವಿಲ್ಲದೆ ನರಳುವಂತೆ ಮಾಡಲಾಗಿದೆ, ಮದುವೆಯನ್ನು ರದ್ದುಗೊಳಿಸಿದ ವ್ಯಕ್ತಿಯು ತನ್ನ ಕೃತ್ಯಗಳಿಗಾಗಿ ಪರಿಣಾಮಗಳನ್ನು ಎದುರಿಸಬೇಕು ಎಂದು ಯುವತಿ ಹೇಳಿದ್ದಾರೆ. ವರದಿಗಳ ಪ್ರಕಾರ, ಗ್ರಾಮಸ್ಥರು ಈಗಾಗಲೇ ಉಡುಗೊರೆಯನ್ನು ಪಡೆಯದ ಕಾರಣ ಮದುವೆಯನ್ನು ರದ್ದುಗೊಳಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ವಿಷಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದ್ದು, ಸದ್ಯ ವರ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಪರ ಧ್ವನಿ ಎತ್ತಲಾಗಿದ್ದು, ಕಾರಣರಾದವರನ್ನು ಶಿಕ್ಷಿಸಲು ಒತ್ತಾಯಿಸುತ್ತಿದ್ದಾರೆ.

ಕಾನೂನುಬದ್ಧವೇ?: ವರದಕ್ಷಿಣೆ ಪಡೆಯುವುದು ಅಥವಾ ನೀಡುವುದು ವರದಕ್ಷಿಣೆ ನಿಷೇಧ ಕಾಯ್ದೆ 1961ರ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ವಧು ಮತ್ತು ವರನ ಕುಟುಂಬಗಳ ನಡುವೆ ಉಡುಗೊರೆ ನೀಡುವುದು ಕಾನೂನುಬಾಹಿರವಲ್ಲ. ಆದರೆ, ನೇರವಾಗಿ ಅಥವಾ ಪರೋಕ್ಷವಾಗಿ ವರದಕ್ಷಿಣೆ ಕೇಳುವುದು ಕಾನೂನುಬಾಹಿರ. ಇದು ಸಾಭೀತಾದರೆ ಶಿಕ್ಷೆಯಾಗಿ ಆರು ತಿಂಗಳು ಜೈಲು ಸೇರಬಹುದು ಅಥವಾ ಶಿಕ್ಷೆಯನ್ನು 2 ವರ್ಷಗಳವರೆಗೆ ವಿಸ್ತರಿಸಬಹುದು.

ಮೊದಲೇ ಹೇಳಿದಂತೆ ಭಾರತದಲ್ಲಿ ವರದಕ್ಷಿಣೆ ಪದ್ಧತಿಯನ್ನು 1961 ರಲ್ಲೇ ಕಾನೂನುಬಾಹಿರಗೊಳಿಸಲಾಯಿತು. ಇದು ಶಿಕ್ಷಾರ್ಹ ಅಪರಾದವಾಗಿದ್ದರೂ, ಉಡುಗೊರೆಗಳ ನೆಪದಲ್ಲಿ ಇಂದಿಗೂ ಆಚರಣೆಯಲ್ಲಿದೆ. ಈ ಹಿಂದೆಯೂ ವರದಕ್ಷಿಣೆ ನೀಡದ ಯುವತಿಯರನ್ನು ಮದುವೆಯ ನಂತರ ಗಂಡಿನ ಕಡೆಯವರು ತುಂಬಾ ಕೆಟ್ಟದಾಗಿ ನಡೆಸಿಕೊಂಡ ಉದಾಹರಣೆಗಳಿವೆ. ಹಾಗೆಯೇ ಕಾರಣರಾದವರನ್ನು ಶಿಕ್ಷಿಸಿದ ಸಂಧರ್ಭಗಳು ಕೂಡ ಇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, May 8, 2024, 16:47 [IST]
English summary
Groom cancels marriage for giving maruti wagon r instead of hyundai creta
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+