ರಸ್ತೆಯಲ್ಲಿ ದುಡ್ಡಿನ ಸುರಿಮಳೆಗೈದ ಮದುಮಗ ಮತ್ತು ಗ್ಯಾಂಗ್: ಈ ರೀತಿ ಮದುವೆ ಭಾರತದಲ್ಲಿ ಮಾತ್ರ ಸಾಧ್ಯ!
ಭಾರತೀಯರು ದುಬಾರಿ ಮದುವೆ ಸಮಾರಂಭಗಳಿಗೆ ಹೆಸರುವಾಸಿ. ನಮ್ಮಲ್ಲಿ ಹಲವರು, ಹಲವರು ತಮ್ಮ ಕೈಯಲ್ಲಿರುವ ಸಂಪಾದನೆಯನ್ನೆಲ್ಲಾ ಉಪಯೋಗಿಸಿಕೊಂಡು ತಮ್ಮ ಮಗಳ ಅಥವಾ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿರುವುದನ್ನು ನೋಡಿದ್ದೇವೆ. ಕೆಲವೊಮ್ಮೆ ಹಲವಾರಿ ದಿನಗಳ ವರೆಗೂ ನಡೆಯುತ್ತದೆ. ಈ ಸಂಧರ್ಭದಲ್ಲಿ ಹಲವರು ಅನೇಕ ಮೂರ್ಖತನಗಳನ್ನು ತೋರುತ್ತಾರೆ.
ಇದೇ ರೀತಿಯ ಘಟನೆಯೊಂದು ಸದ್ಯಕ್ಕೆ ವರದಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಒಳಗಾಗುತ್ತಿದೆ. ತನ್ನ ದುಬಾರಿ ಕಾರಿನಲ್ಲಿ ಬರುತ್ತಿದ್ದ ವರ, ಹೆದ್ದಾರಿಯಲ್ಲಿ ಕಾರಿನ ಸನ್‌ರೂಫ್ ತೆಗೆದು ನೋಟುಗಳನ್ನು ಗಾಳಿಯಲ್ಲಿ ಹರಿಬಿಟ್ಟ ಘಟನೆ ನಡೆದಿದೆ. ಈ ರೀತಿಯಾಗಿ ಶೋ ಆಫ್ ಮಾಡಿದ ಘಟನೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈ ಮೇಲೆ ತಿಳಿಸದಂತೆ ನೆಟ್ಟಿಗರಿಂದ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.

ವರದಿಗಳ ಪ್ರಕಾರ ಘಟನೆಯು ದೆಹಲಿ ಗಾಝಿಯಾಬಾದ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದ್ದು, ವಿಡಿಯೋದಲ್ಲಿ ಕಾಣುವಂತೆ ವರ ಮತ್ತು ಆತನ ಗೆಳೆಯರು ಮದುವೆ ಮುಗಿಸಿಕೊಂಡು ದುಬಾರಿ ಕಾರುಗಳಲ್ಲಿ ಹೆದ್ದಾರಿಯಲ್ಲಿ ಹೋಗುತ್ತಿದ್ದಾರೆ. ಈ ವೇಳೆ ಆತ ಮತ್ತು ಆತನ ಗೆಳೆಯರು ತಮ್ಮ ಐಷಾರಾಮಿ ಕಾರಿನ ಸನ್‌ರೂಫ್‌ಗಳನ್ನು ಓಪನ್ ಮಾಡಿ ನೋಡುಗಳನ್ನು ರಸ್ತೆಗಳಲ್ಲಿ ಎಸೆದು ತಮ್ಮ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.
ಇನ್ನು ವಿಡಿಯೋದಲ್ಲಿ ಕಾಣುವ ಪ್ರಕಾರ ಹೆದ್ದಾರಿಯಲ್ಲಿ ಮದುವೆ ಮನೆಯವರದ್ದೇ ಆದ ಹಲವಾರು ಐಷಾರಾಮಿ ಕಾರುಗಳು ಈ ರೀತಿ ತಮ್ಮ ಸಂತಸವನ್ನು ನೋಟಿನ ಮಳೆಗೆರೆಯುವ ಮೂಲಕ ಹಂಚುತ್ತಾ ಬರುತ್ತಿದ್ದಾರೆ. ಇದರಲ್ಲು ಆಡಿ, ಎಂಜಿ, ಬೆನ್ಸ್ ಮತ್ತು ಇತರ ಕಂಪನಿಯ ಕಾರುಗಳನ್ನು ನೋಡಬಹುದಾಗಿದೆ. ಪ್ರಮುಖವಾಗಿ ಜಾಗುವಾರ್ ಹೆಚ್ ಎಫ್ ಸೆಡಾನ್, ಆಡಿ ಎ೪ ಮತ್ತು ಒಂದೆರಡು ಮಹೀಂದ್ರಾ ಸ್ಕಾರ್ಪಿಯೋ ಜೊತೆಗೆ ಎಂಜಿ ಹೆಕ್ಟರ್ ಕಾರುಗಳಿವೆ.
ಮದುವೆ ವರ ದುಬಾರಿ ಮರ್ಸಿಡಿಸ್ ಬೆಂಝ್ಸ್ ಸಿ-ಕ್ಲಾಸ್ ಕನ್ವರ್ಟಬಲ್ ಸ್ಪೋರ್ಟ್ಸ್ ಕಾರಿನಲ್ಲಿ ನಿಂತುಕೊಂಡು ಹೋಗುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಕಪ್ಪು ಬಣ್ಣದ ಈ ಕಾರಿನಲ್ಲಿ ಯುವಕ ನಿಂತುಕೊಂಡು ಹಾರಗಳನ್ನು ಧರಿಸಿದ್ದು, ಹಣವನ್ನು ಎಸೆಯುತ್ತಾ ತನ್ನ ಸ್ನೇಹಿತರೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾನೆ. ಈ ರೀತಿಯಾದ ಘಟನೆಗಳು ಆಗಾಗ ನಮ್ಮ ಮಧ್ಯೆ ಮರುಕಳಿಸುತ್ತಲೇ ಇವೆ.
ಈ ಹಿಂದೆ ಜೈಪುರದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಇಲ್ಲಿನ ವೆಸ್ಟ್‌ಸೈಡ್ ಗೌರವ್ ಟವರ್ ಮುಂದೆ ಕಾರಿನ ಮೇಲೆ ಪ್ರಖ್ಯಾತ ವೆಬ್ ಸೀರೀಸ್‌ನ ಬಟ್ಟೆಯನ್ನು ಹಾಕಿಕೊಂಡು ಈ ರೀತಿ ಹಣವನ್ನು ಎಸೆಯುತ್ತಿರುವುದನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯೂವ್ಸ್‌ಗಳನ್ನು ಪಡೆಯುವುದಕ್ಕಾಗಿ ಇಂದಿನ ಯುವ ಜನತೆ ಈ ರೀತಿಯ ಅಡ್ಡದಾರಿಗಳನ್ನು ಹಿಡಿಯುತ್ತಿದ್ದಾರೆ.

ಆ ಜೈಪುರದ ವಿಡಿಯೋದಲ್ಲಿ ಕಾರಿನ ಮೇಲಿದ್ದ ವ್ಯಕ್ತಿ ತನ್ನ ಸುತ್ತ ಮುತ್ತಲಿದ್ದ ಜನರನ್ನು ಕರೆದು ೧೦ ಮತ್ತು ೨೦ ರೂಪಾಯಿಗಳನ್ನು ಜನರ ಮೇಲೆ ಎಸೆಯುತ್ತಿರುವದನ್ನು ಕಾಣಬಹುದು. ಇದನ್ನು ನೋಡಿದ ಸಾರ್ವಜನಿಕರು ಕೂಡಲೇ ಪೊಲೀಸರನ್ನು ಕರೆದು ದೂರು ನೀಡಿದ್ದರು. ಕೂಡಲೇ ಪೊಲೀಸರು ಈತನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಭಾರತೀಯ ಯುವ ಜನತೆ ಇತ್ತೀಚೆಗೆ ಈ ರೀತಿಯಾದ ಮೂರ್ಖತನದ ಪರಮಾವಧಿಯ ವರ್ತನೆಗಳನ್ನು ತೋರುತ್ತಿದ್ದಾರೆ. ಈ ರೀತಿಯಾದ ಘಟನೆಗಳಿಂದ ಯಾರೋ ಮಾಡಿರುವ ತಪ್ಪಿಗೆ ಯಾರೋ ದಂಡ ತೆರುವಂತಾಗಿದೆ. ಹಾಗಾಗಿ ಸಾರ್ವಜನಿಕರು ಮತ್ತು ಪೊಲೀಸರು ಈ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಂಡರೆ ಈ ರೀತಿಯಾದ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಬಹುದು ಎಂಬುವುದು ಎಲ್ಲರ ಅಭಿಪ್ರಾಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications