ಮದುವೆ ಮಂಟಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಮದುವೆ ಎಂದರೆ ಅದು ಕೇವಲ ನವ ವಧು-ವರರಿಗೆ ಮಾತ್ರವಲ್ಲದೇ, ಅವರಿಬ್ಬರ ಕುಟುಂಬಕ್ಕು ಒಂದು ಹಬ್ಬವಿದ್ದಂತೆ. ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮತ್ತು ಜೀವನದಲ್ಲಿ ಒಮ್ಮೆ ಮಾತ್ರ ಆಗುವ ಮದುವೆ ಸಮಾರಂಭಕ್ಕೆ ಸಾಲ ಮಾಡಿಯಾದ್ರು ಸಹ ಅದ್ದೂರಿಯಾಗಿ ಮದುವೆ ಮಾದುವುದನ್ನ ನಾವು ಕಣ್ಣಾರೆ ನೋಡಿದ್ದೇವೆ. ಆದ್ರೆ ಇಲ್ಲಿ ಒಬ್ಬ ವರ ಮಾತ್ರ ತನ್ನ ಮದುವೆ ಮಂಟಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟಿರೋದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಮದುವೆಯ ಆಮಂತ್ರಣಕ್ಕಾಗಿಯೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಹಾಗೆಯೆ ಕೆಲವರು ತಮ್ಮ ಪ್ರತಿಷ್ಟೆಗೆ ತಕ್ಕಹಾಗೆ ತಮ್ಮ ಮಕ್ಕಳ ಮದುವೆಯನ್ನ ನಡೆಸಿಕೊಡುತ್ತಾರೆ. ಈ ವೇಳೆ ಸಾಮಾನ್ಯವಾಗಿ ಬಹುತೇಕರು ನವ ಜೋಡಿಯನ್ನ ಮೆರವಣಿಗೆ ಮಾಡಲು ದುಬಾರಿ ಕಾರುಗಳು ಮತ್ತು ಸಾರೊಟಗಳನ್ನು ಬಳಕೆ ಮಾಡುವುದು ಕಾಮನ್. ಆದ್ರೆ ಇಲ್ಲೊಬ್ಬ ವರ ಮದುವೆ ಛತ್ರಕ್ಕೆ ಬರಲು ರೋಡ್ ರೋಲರ್ ಬಳಕೆ ಮಾಡಿರುವುದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಹೌದು, ನೀವು ಕೇಳುತ್ತಿರುವುದು ನಿಜ. ಸಾಮಾನ್ಯವಾಗಿ ದೇಶದ್ಲಲಿನ ಹಲವಾರು ಸಾಂಪ್ರದಾಯದಲ್ಲಿ ನವ ವರನು ಮಧುವೆ ಮಂಟಪಕ್ಕೆ ಆನೆ, ಕುದುರೆ ಮತ್ತು ಇನ್ನಿತರೆ ಐಷಾರಾಮಿ ಕಾರುಗಳಲ್ಲಿ ಮೆರೆವಣಿಗೆಯ ಮುಖಾಂತರ ಆಗಮಿಸಿರುವುದನ್ನು ನೀವು ಕಂಡಿದ್ದೀರಿ, ಆದರೆ ಹೀಗೂ ಕೂಡಾ ಮದುವೆ ಮಂಟಪಕ್ಕೆ ಆಗಮಿಸುತ್ತಾರೆಯೆ ಎಂಬ ಅನುಮಾನ ನಿಮ್ಮಲ್ಲಿ ಬರಬಹುದು.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಬಹಳ ಚಂದವಾಗಿ ಅಲಂಕರಿಸಿದ ರೋಡ್ ರೋಲರ್ ಮೂಲಕ ನವ ವರ ಪ್ರಯಾಣಿಸಿದ್ದಾರೆ. ತನ್ನ ಮದುವೆಗೆ ಹಳೆ ವಿಂಟೇಜ್ ಕಾರಿನಲ್ಲಿ ಪ್ರಯಾಣಿಸಬೇಕು ಅನ್ನೋ ಕನಸು ಕಂಡಿದ್ದ. ಸದ್ಯ ಮದುವೆಗಳಲ್ಲಿ ವಿಂಟೇಜ್ ಕಾರುಗಳನ್ನ ಬಹುತೇಕರು ಬಳಸುತ್ತಾರೆ. ಹೀಗಾಗಿ ರೋಡ್ ರೋಲರ್ ಮೂಲಕ ವಿಶಿಷ್ಠವಾಗಿ ತನ್ನ ಕನಸನ್ನ ನನಸಾಗಿಸಿಕೊಂಡಿದ್ದಾನೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಮದುವೆ ಆರತಕ್ಷತೆಯಲ್ಲೂ ವಿಶೇಷತೆ ಮೆರೆದಿದ್ದಾನೆ. ರಿಸೆಪ್ಷನ್‍ನಲ್ಲಿ ಮ್ಯೂಸಿಕ್ ಬಳಸೋ ಬದಲು ಬೀದಿ ಬದಿಯ ಹಾಡುಗಾರ, ಕೊಳಲು ವಾದಕರನ್ನ ಕರೆಸಿದ್ದಾರೆ. ಇಷ್ಟೇ ಅಲ್ಲ, ಇನ್ನು ಇತರರ ಮದುವೆ ಸಮಾರಂಭಕ್ಕೆ ನೂತನ ಜೋಡಿ ಜೆಸಿಬಿ(ಬುಲ್ಡೋಜರ್)ನಲ್ಲಿ ತೆರಳೋ ಯೋಜನೆ ಹಾಕಿಕೊಂಡಿದೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ನೋಡಲು ಸಡನ್ ಆಗಿ ಇದ್ಯಾವುದೇ ದೇವರ ಮೆರವಣಿಗೆಯೆ ಎಂಬ ಪ್ರಶ್ನೆ ಹಲವರಿಗೆ ಬಂದಿದೆ. ಈ ಘಟನೆಯು ಭಾನುವಾರ (03-02-2019) ರಂದು ಪಶ್ಚಿಮ ಬಂಗಾಳದ ಕೃಷ್ಣನಗರ್ ರಸ್ತೆಗಳಲ್ಲಿ ಆದ್ದೂರಿಯಾಗಿ ರೋಡ್ ರೋಲರ್‍‍ನಲ್ಲಿ ಬಂದಿದ್ದಾನೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಅರುಂಧತಿ ಮತ್ತು ಅರ್ಕೊ ಸುಮಾರು 13 ವರ್ಷಗಳ ಕಾಲ ಪ್ರೀತಿಯಲ್ಲಿದ್ದರು, ಮೊದಲಿನಿಂದಲೇ ಅವರಿಬ್ಬರು ತಮ್ಮ ಮದುವೆ ಸಮಾರಂಭದಲ್ಲಿ ರೋಡ್ ರೋಲರ್‍‍ನಲ್ಲಿ ಬಳಸಿ ಮಂಟಪಕ್ಕೆ ಬರಬೇಕು ಎಂಬ ಪ್ಲ್ಯಾನ್ ಮಾಡಿಕೊಂಡಿದ್ದರಂತೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಸಮಾಜ ಸೇವೆಗೂ ಸೈ

ಪ್ಲಾಸ್ಟಿಕ್ ತ್ಯಾಜ್ಯವನ್ನು ತಗ್ಗಿಸಲು ಮತ್ತು ಎಲ್ಲಾ ಪ್ಯಾಕೇಜಿಂಗ್‍ಗಳನ್ನು ಕಾಗದದ ಚೀಲಗಳೊಂದಿಗೆ ಬದಲಿಸಲು ಈ ದಂಪತಿಗಳು ಪ್ರಯತ್ನ ಮಾಡಿದರು. ಬಹು ಕಾರು ಬಾಡಿಗೆಗಳ ಹೊರೆ ಕಡಿಮೆ ಮಾಡಲು ಮತ್ತು ಅಸ್ತವ್ಯಸ್ತತೆಗೆ ಸೇರಿಸುವುದಕ್ಕಾಗಿ, ಎಲ್ಲಾ ವರನ ಸಂಬಂಧಿಕರನ್ನು ಮಿನಿಬಸ್‍ಗಳಲ್ಲಿ ಕರೆಸಿಕೊಂಡಿದ್ದಾರೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಸರಳತೆಯ ವಿಷಯದ ಅನುಸಾರ, ಮರುದಿನ ಆಚರಣೆಯಲ್ಲಿ ಸಂಗೀತವನ್ನು ಹೊಡೆಯುವ ಬದಲು, ದಂಪತಿಗಳು ಬೀದಿ ಸಂಗೀತಗಾರನನ್ನು ಆರಿಸಿಕೊಂಡರು. ಫ್ಲೂಟಿಸ್ಟ್ ಗಳು (ಕೊಳಲು ಊದುವವರು) ಮಂಟಪಕ್ಕೆ ಆಗಮಿಸುವವರನ್ನು ಸ್ವಾಗತಿಸಿದ್ದಾರೆ. ವರನ ಯೋಗ್ಯವಾದ ಕಾರನ್ನು ನೇಮಿಸುವ ವೆಚ್ಚಕ್ಕೆ ವಿರುದ್ಧವಾಗಿ, ಹಳೆಯ ರಸ್ತೆ ರೋಲರ್ ಬಾಡಿಗೆ ದೊಡ್ಡ ವೆಚ್ಚದ ಉಳಿತಾಯವೆಂದು ಸಾಬೀತಾಯ್ತು.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಮದುವೆ ಮನೆಗಳಲ್ಲಿ ನವದಂಪತಿಗಳಿಗೆ ಶುಭ ಹಾರೈಸುವಾಗ ಏನಾದ್ರು ಗಿಫ್ಟ್ ಕೊಡುವುದು ಕಾಮನ್. ಕೆಲವರು ದುಬಾರಿ ಗಿಫ್ಟ್ ನೀಡಿದ್ರೆ ಇನ್ನು ಕೆಲವರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಣ್ಣಪುಟ್ಟ ಗಿಫ್ಟ್ ನೀಡಿ ವಿಶ್ ಮಾಡುವುದನ್ನು ನಾವೆಲ್ಲಾ ನೋಡಿಯೇ ಇರುತ್ತೆವೆ. ಆದ್ರೆ ಇಲ್ಲೊಂದು ಮದುವೆ ಮನೆಯಲ್ಲಿ ನವದಂಪತಿಗೆ ನೀಡಿರುವ ಸ್ಪೆಷಲ್ ಗಿಫ್ಟ್‌ವೊಂದು ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಹೌದು, ತಮಿಳುನಾಡಿನ ಕಡಲೂರಿನಲ್ಲಿ ನಡೆದ ಮದುವೆ ಮನೆಯೊಂದರಲ್ಲಿ ನವದಂಪತಿಗಳಿಗೆ ಅವರ ಗೆಳೆಯರು ನೀಡಿರುವ ಸ್ಪೆಷಲ್ ಗಿಫ್ಟ್‌ವೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಪೆಟ್ರೋಲ್ ತುಂಬಿರುವ ಕ್ಯಾನ್ ಅನ್ನು ಗಿಫ್ಟ್ ಆಗಿ ನೀಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ಮೊದಲೇ ಬೆಲೆ ಏರಿಕೆಯಿಂದ ದೇಶದ ಜನತೆ ರೋಷಿ ಹೋಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹಿಡಿತಕ್ಕೆ ಸಿಗದಿರುವುದು ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇದರಿಂದಾಗಿ ವಧು-ವರರಿಗೆ ನೀಡಿದ ಪೆಟ್ರೋಲ್ ಗಿಫ್ಟ್ ಸುದ್ದಿಯು ಮತ್ತಷ್ಟು ಚರ್ಚೆಯಾಗುವಂತೆ ಮಾಡಿದೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ತಮಿಳುನಾಡಿನ ಕಡಲೂರು ಜಿಲ್ಲೆಯ ಕುಮಾಚ್ಚಿ ಗ್ರಾಮದಲ್ಲಿ ಇಂತದೊಂದು ವಿಶೇಷ ಘಟನೆ ನಡೆದಿದ್ದು, ಎಲ್ಚೆಂಜಿಯನ್ ಮತ್ತು ಕಣಿಮೊಝಿ ವಿವಾಹ ಸಮಾರಂಭದಲ್ಲಿ ಸ್ನೇಹಿತರು 5 ಲೀಟರ್ ಪೆಟ್ರೋಲ್‍ ಕ್ಯಾನ್ ಅನ್ನು ಉಡುಗೊರೆಯಾಗಿ ನೀಡಿ ನೆರೆದಿದ್ದ ಸಂಬಂಧಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಮದುವೆ ಮಟಂಪಕ್ಕೆ ಡಿಫರೆಂಟ್ ಆಗಿ ಎಂಟ್ರಿ ಕೊಟ್ಟ ನವ ಜೋಡಿ

ವೇದಿಕೆಯ ಮೇಲೆ ನಿಂತಿದ್ದ ವಧು-ವರಿಗೆ ಅತಿಥಿಗಳು ಶುಭಾಶಯವನ್ನು ತಿಳಿಸುತ್ತಿದ್ದರು. ಈ ವೇಳೆ ಅವರ ಸ್ನೇಹಿತರು ಒಟ್ಟಾಗಿ ಬಂದು 5 ಲೀಟರ್ ನ ಪೆಟ್ರೋಲ್ ಕ್ಯಾನೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಸ್ನೇಹಿತರು ಗಿಫ್ಟ್ ಕೊಟ್ಟಾಗ ನಗುತ್ತಲೇ ವಧು-ವರ ಸ್ವೀಕರಿಸಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಭಾರತ್ ಬಂದ್ ನಡೆಸಿದ್ದರೂ ಕೂಡಾ ಏನೂ ಪ್ರಯೋಜನವಾಗಿಲ್ಲ. ತೈಲ ಬೆಲೆ ಏರುತ್ತಲ್ಲೇ ಇದ್ದು, ಗ್ರಾಹಕರ ಜೇಬು ಸುಡುತ್ತಿದೆ. ಇಂತಹ ದುಬಾರಿ ದುನಿಯಾದಲ್ಲಿ ವಿವಾಹವಾಗುತ್ತಿರುವ ಜೋಡಿಗೆ ಪೆಟ್ರೋಲ್ ಗಿಫ್ಟ್ ನೀಡಿ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಲಾಗಿಯೆಂತೆ.

Image Source: Rushlane

Most Read Articles

Kannada
English summary
Groom Trsavlled Convention Center In Road Roller For His Wedding. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more