ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ತಮಿಳುನಾಡಿನಲ್ಲಿ ನಟ ಅಜಿತ್ ರವರ ಜೊತೆಗೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಹ ಅಭಿಮಾನಿಗಳು ತಲಾ ಎಂದು ಸಂಭೋಧಿಸುತ್ತಾರೆ. ಎಂ.ಎಸ್ ಧೋನಿರವರು ತಮಿಳುನಾಡಿನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಮಹೇಂದ್ರ ಸಿಂಗ್ ಧೋನಿರವರ ಜನಪ್ರಿಯತೆ ಕಡಿಮೆಯಾಗಿಲ್ಲ. ಈಗ ಜನಪ್ರಿಯ ಆಯಿಲ್ ತಯಾರಕ ಕಂಪನಿಯಾದ ಗಲ್ಫ್ ಎಂಎಸ್ ಧೋನಿರವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ. ಕಂಪನಿಯು ಧೋನಿ ಹೆಸರಿನ ವಿಶೇಷ ಆಯಿಲ್ ಪ್ಯಾಕ್ ಅನ್ನು ಮಾರಾಟಕ್ಕೆ ಬಿಡುಗಡೆಗೊಳಿಸಿದೆ.

ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ಧೋನಿರವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಲೇ ಈ ಆಯಿಲ್ ಪ್ಯಾಕ್ ಬಿಡುಗಡೆಗೊಳಿಸಿರುವುದು ವಿಶೇಷ. ಅಂದ ಹಾಗೆ ಎಂ.ಎಸ್.ಧೋನಿ ಭಾರತದಲ್ಲಿ ಗಲ್ಫ್ ಆಯಿಲ್ ಕಂಪನಿಯ ರಾಯಭಾರಿಯೂ ಹೌದು. ಅವರು ಕಂಪನಿಯ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ಈಗ ಧೋನಿರವರ ಫೋಟೋ ಹೊಂದಿರುವ ಈ ವಿಶೇಷ ಆಯಿಲ್ ಪ್ಯಾಕ್ ಮಾರಾಟವನ್ನು ಆರಂಭಿಸಿಲಾಗಿದೆ. ಈ ವಿಶೇಷ ಆಯಿಲ್ ಪ್ಯಾಕ್ ಅನ್ನು ಮುಂದಿನ ಎರಡು ತಿಂಗಳು ಮಾತ್ರ ಮಾರಾಟ ಮಾಡಲು ಗಲ್ಫ್ ಕಂಪನಿಯು ನಿರ್ಧರಿಸಿದೆ.

ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ಈಗ ಬಿಡುಗಡೆಯಾಗಿರುವ ಮಾಹಿತಿಯಿಂದ ಈ ವಿಷಯವು ದೃಢಪಟ್ಟಿದೆ. ಈ ವಿಶೇಷ ಆಯಿಲ್ ಪ್ಯಾಕ್ ಅನ್ನು ದೇಶಾದ್ಯಂತವಿರುವ ಗಲ್ಫ್ ಕಂಪನಿಯ ಡೀಲರ್ ಹಾಗೂ ಕೆಲವು ವಾಹನ ಬಿಡಿಭಾಗಗಳ ವಿತರಕರ ಮೂಲಕ ಮಾರಾಟ ಮಾಡಲಾಗುವುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ಈ ಆಯಿಲ್ ಪ್ಯಾಕ್ ವಾಹನದ ಎಂಜಿನ್ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಆಯಿಲ್ ದ್ವಿಚಕ್ರ ವಾಹನಗಳ ಪಿಕ್-ಅಪ್ ಹಾಗೂ ಚುರುಕುತನವನ್ನು ಸುಧಾರಿಸುತ್ತದೆ.

ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ಗಲ್ಫ್ ಕಂಪನಿಯು ದ್ವಿಚಕ್ರ ವಾಹನಗಳ ಆಯಿಲ್ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಈ ವಿಶೇಷ ಆವೃತ್ತಿಯ ಆಯಿಲ್ ಪ್ಯಾಕ್ ಅನ್ನು ದ್ವಿಚಕ್ರ ವಾಹನಗಳಿಗಾಗಿ ಮಾತ್ರ ಬಿಡುಗಡೆಗೊಳಿಸಲಾಗಿದೆ. ಈ ಆಯಿಲ್ ಪ್ಯಾಕ್ ಧೋನಿ ಅಭಿಮಾನಿಗಳನ್ನು ತನ್ನತ್ತ ಆಕರ್ಷಿಸುವ ನಿರೀಕ್ಷೆಗಳಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ಕಂಪನಿಯು ಈ ಆಯಿಲ್ ಪ್ಯಾಕ್'ನ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ವಿಶೇಷ ಆವೃತ್ತಿಯ ಆಯಿಲ್ ಪ್ಯಾಕ್ ಸಾಮಾನ್ಯ ಆಯಿಲ್ ಪ್ಯಾಕ್ ನಷ್ಟೇ ಬೆಲೆಯನ್ನು ಹೊಂದಿರುವ ಸಾಧ್ಯತೆಗಳಿವೆ.

ಟೀಂ ಇಂಡಿಯಾ ಮಾಜಿ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ ಆಯಿಲ್ ತಯಾರಕ ಕಂಪನಿ

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜೊತೆಗೆ ವಾಹನಗಳ ಬಗ್ಗೆಯೂ ಕ್ರೇಜ್ ಹೊಂದಿದ್ದಾರೆ. ಅವರು ಕೆಲವು ಅಪರೂಪದ ಹಾಗೂ ದುಬಾರಿ ಬೆಲೆಯ ವಾಹನಗಳನ್ನು ಹೊಂದಿದ್ದಾರೆ. ಧೋನಿ ಯಮಹಾ ಆರ್‌ಟಿ 350 ಬೈಕಿನಂತಹ ವಿಶೇಷ ವಾಹನಗಳನ್ನು ಸಹ ಹೊಂದಿದ್ದಾರೆ.

Most Read Articles

Kannada
English summary
Gulf oil company pays special tribute to MS Dhoni. Read in Kannada.
Story first published: Monday, January 11, 2021, 14:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X