ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ಮೊದಲಿನಿಂದಲೂ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ಎತ್ತಿದ ಕೈ. ಒರಿಜಿನಲ್ ವಸ್ತುಗಳು ಥೇಟ್ ಅದೇ ರೀತಿ ಉತ್ಪಾದಿಸುವುದರಲ್ಲಿ ಅವರು ನಿಸ್ಸಿಮರು. ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ಕದ್ದು ಹೊಸ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಾರೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ಕದ್ದು ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಕುತಂತ್ರ ಬುದ್ದಿಯನ್ನು ಇನ್ನು ಬಿಟ್ಟಿಲ್ಲ. ಚೀನಾ ಜನಪ್ರಿಯ ಮಾದರಿಗಳ ಡಿಸೈನ್ ಕದ್ದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎನ್ನಬಹುದು.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇದಕ್ಕೆ ಮತ್ತೊಂದು ಉದಾಹರಣೆ, ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯೊಂದು ಜನಪ್ರಿಯ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಅನ್ನು ಕಾಪಿ ಮಾಡಿ ಅದೇ ರೀತಿ ಹೊಸ ಬೈಕನ್ನು ತಯಾರಿಸಿದ್ದಾರೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಹೊಸ ಬೈಕಿಗೆ ಹ್ಯಾನ್ವೇ ಜಿ30 ಎಂಬ ಹೆಸರನ್ನು ನೀಡಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮಾದರಿಯ ಕಾಪಿ ಕ್ಯಾಟ್ ಆದ ಹ್ಯಾನ್ವೇ ಜಿ30 ಬೈಕ್ ಜಿ30 ಸ್ಟ್ಯಾಂಡರ್ಡ್ ಮತ್ತು ಜಿ30-ಎಕ್ಸ್ ಎಂಬ ಎರಡು ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಹ್ಯಾನ್ವೇ ಜಿ30 ಬೈಕಿನಲ್ಲಿ 249.2 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 26 ಬಿಹೆಚ್‌ಪಿ ಪವರ್ ಮತ್ತು 7500 ಆರ್‌ಪಿಎಂನಲ್ಲಿ 22 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ಈ ಬೈಕ್ 32.2 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಮತ್ತು 128 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಟ್ಯೂಬ್‌ಲೆಸ್ ಟೈರ್‌ಗಳು, ಪ್ಯಾನಿಯರ್‌ಗಳು ಮತ್ತು ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೀಲ್ ಮತ್ತು ವೈರ್ ಸ್ಪೋಕ್ ವ್ಹೀಲ್ ಅನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಹ್ಯಾನ್ವೇ ಜಿ30 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ 120 ಎಂಎಂ ಟ್ರ್ಯಾವೆಲ್ ನೊಂದಿ 35 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು 42 ಎಂಎಂ ಟ್ರ್ಯಾವೆಲ್ ನೊಂದಿಗೆ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ಈ ಬೈಕಿನ ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ರಾಯಲ್ ಎನ್‌ಫೀಲ್ಡ್ ತನ್ನ 2021ರ ಹಿಮಾಲಯನ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಬೆಲೆಯು ಚೆನ್ನೈ ಎಕ್ಸ್ ಶೋರೂಂ ಪ್ರಕಾರ ರೂ.2.01 ಲಕ್ಷಗಳಾಗಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಹೊಸ ಹಿಮಾಲಯನ್ ಬೈಕ್ ಅದರ ಹಿಂದಿನ ಮಾದರಿಗಳಂತೆಯೇ ಅದೇ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಮುಂದಕ್ಕೆ ಸಾಗಿಸಿದ್ದು, ಆದರೆ ಕೆಲವು ಸಣ್ಣ ನವೀಕರಣಗಳಿವೆ. ಇವುಗಳಲ್ಲಿ ನವೀಕರಿಸಿದ ಸೀಟ್ ಸೇರಿವೆ. ಇದು ಈಗ ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ. ವಿಶೇಷವಾಗಿ ಲಾಂಗ್ ರೈಡ್ ತೆರಳುವಾಗ ಇದು ಹೆಚ್ಚು ಸಹಕಾರಿಯಾಗಿರುತ್ತದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ನವೀಕರಿಸಿದ ಹಿಂಭಾಗದ ಕ್ಯಾರಿಯರ್ ಮತ್ತು ಮುಂಭಾಗ ಮೆಟಲ್ ಫ್ರೇಮ್ ಮತ್ತು ಹೊಸ ವಿಂಡ್‌ಸ್ಕ್ರೀನ್ ಸೇರ್ಪಡೆಯಾಗಿದೆ. 2021ರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ 'ಟ್ರಿಪ್ಪರ್ ನ್ಯಾವಿಗೇಷನ್' ಅನ್ನು ಸಹ ಒಳಗೊಂಡಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಹೊಸ ಸರಳ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಪಾಡ್ ಅನ್ನು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಅಳವಡಿಸಲಾಗಿದೆ. ಈ ಹೊಸ ಫೀಚರ್ ಗಳನ್ನು ಚೀನಾದ ಕಾಪಿ ಕ್ಯಾಟ್ ಬೈಕ್ ಹೊಂದಿಲ್ಲ, ಆದರೆ ಮುಂದಿನ ದಿನಗಳಲ್ಲಿ ಈ ಫೀಚರ್ ಗಳನ್ನು ನೀಡಿ ಅಪ್ಡೇಟ್ ಮಾಡಿದ್ದರು ಅಚ್ಚರಿ ಪಡಬೇಕಾಗಿಲ್ಲ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

2021ರ ಹಿಮಾಲಯನ್ ಬೈಕಿನಲ್ಲಿ ಅದೇ 411ಸಿಸಿ ಸಿಂಗಲ್-ಸಿಲಿಂಡರ್ ಎಸ್‌ಒಹೆಚ್‌ಸಿ ಏರ್-ಕೂಲ್ಡ್ ಎಂಜಿನ್ ಅನ್ನು ಆಳವಡಿಸಲಾಗಿದೆ. ಈ ಎಂಜಿನ್ 24.3 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಆದರೆ ಕಾಪಿ ಕ್ಯಾಟ್ ಹ್ಯಾನ್ವೇ ಜಿ30 ಬೈಕಿನಲ್ಲಿ 249.2 ಸಿಸಿ ಎಂಜಿನ್ ಅನ್ನು ನೀಡಿದ್ದಾರೆ.

Most Read Articles

Kannada
English summary
Royal Enfield Himalayan Copycat Chinese Version. Read In Kannada.
Story first published: Saturday, March 20, 2021, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X