ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಹೊಡಿ ಬಡಿ ಆಟಕ್ಕೆ ಹೆಸರುವಾಸಿಯಾದ ಅವರು ಭಾರತ ತಂಡಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ. ಅವರ ತಂದೆ ಹಿಮಾಂಶು ಪಾಂಡ್ಯ ಜನವರಿ 16ರಂದು ಹೃದಯಾಘಾತದಿಂದ ನಿಧನರಾದರು.

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಅವರ ಸಾವಿನಿಂದ ಅವರ ಕುಟುಂಬವು ಈವರೆಗೆ ಚೇತರಿಸಿಕೊಂಡಿಲ್ಲ. ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂದೆಯ ಬಗ್ಗೆ ಮಾಡಿರುವ ಪೋಸ್ಟ್'ಗಳೇ ಇದಕ್ಕೆ ಸಾಕ್ಷಿ. ಇತ್ತೀಚಿನ ಟ್ವಿಟರ್ ಪೋಸ್ಟ್'ನಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ತಂದೆಗೆ ಜೀಪ್ ಕಂಪಾಸ್ ಕಾರನ್ನು ಅಚ್ಚರಿಯ ಉಡುಗೊರೆಯಾಗಿ ನೀಡುವ ವೀಡಿಯೊವನ್ನು ಶೇರ್ ಮಾಡಿದ್ದಾರೆ.

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಇದರ ಜೊತೆಗೆ ಹಲವು ಫೋಟೋ ಹಾಗೂ ಕೆಲವು ವೀಡಿಯೊಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರ ತಂದೆಯನ್ನು ಸ್ಮರಿಸುತ್ತಿದ್ದಾರೆ. ನೀವು ಇಲ್ಲಿಲ್ಲ ಎಂಬುದು ನನಗೆ ನೋವುಂಟು ಮಾಡಿದೆ. ಕ್ಯಾಂಡಿಯನ್ನು ನೋಡಿದ ಪುಟ್ಟ ಮಗು ಸಂತೋಷಪಡುತ್ತಿದ್ದ ರೀತಿಯಲ್ಲಿದ್ದ ನಿಮ್ಮ ಈ ನಗು ನೋಡಿದರೆ ಖುಷಿಯಾಗುತ್ತದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಅವರ ಈ ಪೋಸ್ಟ್ ಅವರ ಅಭಿಮಾನಿಗಳಿಗೂ ಸಹ ದುಃಖವನ್ನುಂಟುಮಾಡಿದೆ. ಹಾರ್ದಿಕ್ ಪಾಂಡ್ಯ ಜೀಪ್‌ನ ಸೀಮಿತ ಆವೃತ್ತಿಯಾದ ಕಂಪಾಸ್ ಕಾರನ್ನು ತಮ್ಮ ತಂದೆಗೆ ಉಡುಗೊರೆಯಾಗಿ ನೀಡಿದ್ದರು.

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಡೆಲಿವರಿ ಕೇಂದ್ರದ ಉದ್ಯೋಗಿ ಈ ಬಗ್ಗೆ ವಿವರಿಸುತ್ತಿರುವುದನ್ನು ವೀಡಿಯೊದಲ್ಲಿ ಕೇಳಬಹುದು. ಜೀಪ್ ಕಂಪಾಸ್‌ನ ಈ ಆವೃತ್ತಿಯು ಸದ್ಯಕ್ಕೆ ಮಾರಾಟವಾಗುತ್ತಿಲ್ಲ ಎಂಬುದು ಗಮನಾರ್ಹ. ಈಗ ಹೊಸ ತಲೆಮಾರಿನ ಕಂಪಾಸ್ ಕ್ಯಾರಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಜೀಪ್ ಕಂಪನಿಯು ಹೊಸ ತಲೆಮಾರಿನ ಕಂಪಾಸ್ ಕಾರ್ ಅನ್ನು ಜನವರಿ 27ರಂದು ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಕಾರಿನ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ಗಳನ್ನು ಅಪ್ ಡೇಟ್ ಮಾಡಲಾಗಿದೆ. ಹೊಸ ಮಾದರಿಯ ಕಂಪಾಸ್ ಹಳೆಯ ಮಾದರಿಗಿಂತ ಹೆಚ್ಚಿನ ಫೀಚರ್'ಗಳನ್ನು ಹೊಂದಿದೆ.

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಈ ಹೊಸ ಕಾರಿನಲ್ಲಿ ಎಲ್ಇಡಿ ಹೆಡ್ ಲೈಟ್, ಸ್ಲೀಕ್ ಆದ ಹೆಡ್ ಲ್ಯಾಂಪ್, 7 ಪ್ಯಾನಲ್-ಮೌಂಟೆಡ್ ಗ್ರಿಲ್ ಹಾಗೂ ಹೆಚ್ಚು ಸ್ಪೇಸ್ ನೀಡಲಾಗಿದೆ. ಜೊತೆಗೆ ಕಾರಿನಇಂಟಿರಿಯರ್ ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಈ ಕಾರಿನ ಇಂಟಿರಿಯರ್'ನಲ್ಲಿ 10.1-ಇಂಚಿನ ಎಫ್‌ಸಿಎ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ನೀಡಲಾಗಿದೆ. ಈ ಸಿಸ್ಟಂ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋವನ್ನು ಹೊಂದಿದೆ.

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಇದರ ಜೊತೆಗೆ 3 ಸ್ಪೋಕ್'ನ ಸ್ಟೀಯರಿಂಗ್ ವ್ಹೀಲ್ ನೀಡಲಾಗಿದೆ. ಈ ಎಲ್ಲಾ ಬದಲಾವಣೆಗಳು ಈ ಹೊಸ ಕಾರಿನ ಆಕರ್ಷಣೆಯನ್ನು ಹೆಚ್ಚಿಸಿವೆ. ಜೀಪ್ ಕಂಪನಿಯು ಈ ಕಾರಿನಲ್ಲಿರುವ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಈ ಕಾರ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. 2.0 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ 167 ಬಿಹೆಚ್'ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 1.4-ಲೀಟರ್ ಮಲ್ಟಿಇರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 160 ಬಿಹೆಚ್'ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡೀಸೆಲ್ ಎಂಜಿನ್'ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ 6-ಸ್ಪೀಡ್ ಡಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್ ಬಾಕ್ಸ್ ಜೋಡಿಸಲಾಗುತ್ತದೆ. ಪೆಟ್ರೋಲ್ ಎಂಜಿನ್'ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಥವಾ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಜೋಡಿಸಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವೀಡಿಯೊ ಮೂಲಕ ತಂದೆಯನ್ನು ಸ್ಮರಿಸಿದ ಹಾರ್ದಿಕ್ ಪಾಂಡ್ಯ

ಈ ಕಾರಿನ ಎಂಟ್ರಿ ಲೆವೆಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.16.99 ಲಕ್ಷಗಳಿಂದ ಆರಂಭವಾಗುತ್ತದೆ. ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.28.29 ಲಕ್ಷಗಳಾಗಿದೆ.

Most Read Articles

Kannada
English summary
Hardik Pandya remembers his father through video. Read in Kannada.
Story first published: Thursday, February 4, 2021, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X